ಎಡಿಟೋರಿಯಲ್

‘ಸರ್ಕಾರ ಮೈಸೂರಿನಲ್ಲೇ ಚಿತ್ರನಗರಿ ನಿರ್ಮಿಸಲಿ, ಯಾರೂ ಅಡ್ಡಿಪಡಿಸದಿರಲಿ’

ಎರಡು ವಾರಗಳ ಹಿಂದೆ ಈ ಅಂಕಣದಲ್ಲಿ ‘ಹೊಸ ಸರ್ಕಾರದಿಂದ ಕಾಯಕಲ್ಪದ ನಿರೀಕ್ಷೆಯಲ್ಲಿ ಕನ್ನಡ ಚಿತ್ರೋದ್ಯಮ’ ಶೀರ್ಷಿಕೆಯಲ್ಲಿ ಚಿತ್ರನಗರಿಗಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಳೆದ ಅವಽಯಲ್ಲಿ ಮೈಸೂರಿನ ಇಮ್ಮಾವಿನಲ್ಲಿ 110 ಎಕರೆ ಜಮೀನನ್ನು 2015ರಲ್ಲೇ ಕಾಯ್ದಿರಿಸಿದ್ದುಅವರ ಅವಧಿ ಪೂರ್ಣಗೊಳ್ಳುವ ಮೊದಲೇ ಅಲ್ಲಿ ಅಡಿಗಲ್ಲು ಹಾಕುವ ಪ್ರಯತ್ನ ನಡೆದದ್ದುಅಂಬರೀಶ್ ಹುಟ್ಟುಹಬ್ಬದ ವೇಳೆ ‘ಅಂತ’ ಚಿತ್ರದ ಮರುಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಚಿತ್ರನಗರಿಯ ಕುರಿತ ಪ್ರಸ್ತಾಪಹಿಂದಿನ ಸರ್ಕಾರವನ್ನು ಒತ್ತಾಯಿಸಿದ್ದು ಇವೇ ಮೊದಲಾದ ವಿಷಯಗಳನ್ನು ಹೇಳಲಾಗಿತ್ತು.

ಈ ಹಿಂದೆ ಹೇಳಿದ ಹಾಗೆ ಚಿತ್ರನಗರಿಯ ಯೋಜನೆಗೆ 50 ವರ್ಷಗಳಿಗೂ ಹೆಚ್ಚು ಇತಿಹಾಸ ಇದೆ. 1972ರಲ್ಲೇ ಬೆಂಗಳೂರಿನ ಹೆಸರಘಟ್ಟದಲ್ಲಿ ಇದಕ್ಕಾಗಿಯೇ ಜಾಗ ಕಾದಿರಿಸಲಾಗಿತ್ತುಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಚಿತ್ರನಗರಿಗೆ ಅಡಿಗಲ್ಲು ಹಾಕಿದ್ದರುಮೂರು ಹಂತಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ನೀಲಿನಕ್ಷೆಯೂ ಸಿದ್ಧವಾಗಿತ್ತುಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆಯಲ್ಲಿ ಇದು ಕಾರ್ಯಸಾಧ್ಯವಾಗಬೇಕಿತ್ತು.

ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮವನ್ನು ಮೊದಲು ಸ್ಥಾಪಿಸಿದ ರಾಜ್ಯ ಕರ್ನಾಟಕಚಿತ್ರನಗರಿ ಯೋಜನೆಯನ್ನು ಕೈಗೆತ್ತಿಕೊಂಡದ್ದೂ ಕರ್ನಾಟಕದಲ್ಲೇ ಮೊದಲುಕರ್ನಾಟಕದಲ್ಲಿ ನಿಗಮ ಈಗಿಲ್ಲಅದು ಲಾಭದಾಯಕ ಸಂಸ್ಥೆ ಅಲ್ಲ ಎನ್ನುವ ಶಿಫಾರಸ್ಸಿನ ಮೇಲೆ ಅದನ್ನು ಮುಚ್ಚಲಾಯಿತುಚಿತ್ರನಗರಿ ಸ್ಥಾಪನೆಯೂ ಆಗಲಿಲ್ಲಚಿತ್ರನಗರಿಯ ಕುರಿತ ಸುದ್ದಿಗಳೇನೂ ಕಡಿಮೆ ಆಗಲಿಲ್ಲದೇಶದ ಉಳಿದ ಬಹುತೇಕ ರಾಜ್ಯಗಳಲ್ಲಿ ಚಿತ್ರನಗರಿಗಳಿವೆಅವು ಆಯಾ ರಾಜ್ಯಗಳ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿವೆಬಹುತೇಕ ರಾಜ್ಯಗಳು ತಮ್ಮ ಚಲನಚಿತ್ರ ಪ್ರವಾಸೋದ್ಯಮ ನೀತಿಯ ಮೂಲಕ ಅಲ್ಲಿ ಚಿತ್ರೀಕರಿಸುವ ಚಿತ್ರಗಳಿಗೆ ಸಹಾಯಧನವನ್ನು ಕೋಟಿಗಳಲ್ಲಿ ನೀಡುತ್ತಿವೆಅದು ಅಲ್ಲಿನ ಭಾಷೆಯ ಚಿತ್ರಗಳಿಗೆ ಮಾತ್ರವಲ್ಲಭಾರತದ ಎಲ್ಲ ಭಾಷೆಯ ಚಿತ್ರಗಳಿಗೂ.

ಕರ್ನಾಟಕದಲ್ಲೂ ಚಲನಚಿತ್ರ ಪ್ರವಾಸೋದ್ಯಮ ನೀತಿ ಜಾರಿಯಲ್ಲಿದೆಅದು ಕಡತದಲ್ಲಿ ಮಾತ್ರ ಇದ್ದಂತಿದೆಅದಕ್ಕೆ ಸಂಬಂಧಿಸಿದ ಯಾವುದೇ ವಿವರ ಜಾಲತಾಣದಲ್ಲಿ ಲಭ್ಯ ಇದ್ದಂತಿಲ್ಲಎರಡು ಚಿತ್ರಗಳಿಗೆ ತಲಾ ಎರಡೂವರೆ ಕೋಟಿ ರೂಹಾಗೂ ಐದು ಚಿತ್ರಗಳಿಗೆ ತಲಾ ಒಂದು ಕೋಟಿ ರೂ.ಗಳಂತೆ ಈ ನೀತಿಯನ್ವಯ ಸಹಾಯಧನವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ನೀಡುತ್ತದೆ ಎಂದಿತ್ತುಅದರ ವಿವರಗಳು ಯಾವುವೂ ಲಭ್ಯ ಇಲ್ಲ.

ಅದಷ್ಟೇ ಅಲ್ಲಎಸ್.ವಿ.ರಾಜೇಂದ್ರ ಸಿಂಗ್ (ಬಾಬುಅವರು ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿಸಾಹಿತ್ಯಕೃತಿಗಳನ್ನು ಆಧರಿಸಿ ತಯಾರಾಗುವ ಚಿತ್ರಗಳಿಗೆ ವಿಶೇಷ ಸಹಾಯಧನ ಯೋಜನೆಯ ಪ್ರಸ್ತಾಪ ಮಾಡಲಾಗಿತ್ತುಅಕಾಡೆಮಿಯ ‘ಜೇನುಗೂಡು’ ಕಥಾಕಣಜದಿಂದ ಆರಿಸಿದ ಕೃತಿಗಳನ್ನು ಚಿತ್ರಿಸಿದರೆಅವುಗಳಿಗೆ 25 ಲಕ್ಷ ರೂಸಹಾಯಧನ ಮತ್ತು ಅವುಗಳ ಲೇಖಕರಿಗೆ ಐದು ಲಕ್ಷ ರೂ.ಗಳನ್ನು ನೀಡುವ ಪ್ರಸ್ತಾಪವನ್ನು ಸರ್ಕಾರವೂ ಒಪ್ಪಿತ್ತುಆದರೆ ಯಾವುದೂ ಈಡೇರಲಿಲ್ಲಸಹಾಯಧನವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಆಯ್ಕೆಯೂ ಕಳೆದ ನಾಲ್ಕು ವರ್ಷಗಳಿಂದ ಆಗಿಲ್ಲ. 2018ರ ಸಾಲಿನದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ.

ಇದೀಗ ಚಿತ್ರನಗರಿ ಯೋಜನೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆಮೈಸೂರಿನಲ್ಲೇ ಚಿತ್ರನಗರಿ ಆಗಬೇಕು ಎನ್ನುವ ವಿಷಯಈಗಾಗಲೇ ಅದಕ್ಕಾಗಿ ಮೀಸಲಿಟ್ಟ ಜಾಗದಲ್ಲೇ ಸರ್ಕಾರ ಚಿತ್ರನಗರಿ ಸ್ಥಾಪಿಸಬೇಕು ಎನ್ನುವ ಒತ್ತಾಯಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಒತ್ತಾಯವನ್ನು ಮಾಡಲಿದ್ದೇವೆಎನ್ನುವುದನ್ನು ಹೇಳಲು ಪತ್ರಿಕಾಗೋಷ್ಠಿಯೊಂದನ್ನು ಮೊನ್ನೆ ಕರೆಯಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಎಸ್.ವಿರಾಜೇಂದ್ರ ಸಿಂಗ್ (ಬಾಬು), ಪಿ.ಶೇಷಾದ್ರಿಲಿಂಗದೇವರುಕೃಷ್ಣೇಗೌಡಸಂಕಲನಕಾರ ಕೆಂಪರಾಜ್ ಮುಂತಾದವರಿದ್ದರುಅವರು ಗಂಧದಗುಡಿ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ ಪದಾಽಕಾರಿಗಳು ಕೂಡಮೈಸೂರಿನಲ್ಲಿ ಸ್ಥಾಪನೆ ಆಗಬೇಕು ಎನ್ನುವ ಚಿತ್ರನಗರಿಯ ಪಕ್ಕದಲ್ಲೇ ಈ ಸಂಘ ಚಿತ್ರೋದ್ಯಮದ ಮಂದಿಗೆ ಸೂರಿಗಾಗಿ ಜಾಗವನ್ನೂ ಈಗಾಗಲೇ ಗುರು ತಿಸಿದ್ದುಸರ್ಕಾರದ ಮುಂದೆ ಈ ಪ್ರಸ್ತಾಪವನ್ನೂ ಇಟ್ಟಿದೆ.

ಮೈಸೂರಿನಲ್ಲಿ ಚಿತ್ರನಗರಿ ಆಗಬೇಕು ಎನ್ನುವುದು ಬಹುಜನರ ಬೇಡಿಕೆರಾಜ್‌ಕುಮಾರ್ವಿಷ್ಣುವರ್ಧನ್ಅಂಬರೀಶ್ದರ್ಶನ್ಯಶ್ ಸೇರಿದಂತೆ ಬಹಳಷ್ಟು ಮಂದಿ ಮೈಸೂರು ಮೂಲದವರುಮಾತ್ರವಲ್ಲಮೈಸೂರಿನ ಸುತ್ತಮುತ್ತ ನೂರಕ್ಕೂ ಹೆಚ್ಚು ಪ್ರಾಕೃತಿಕ ಚಿತ್ರೀಕರಣ ತಾಣಗಳಿವೆಈಗ ಚಿತ್ರನಗರಿಗಾಗಿ ಕಾದಿರಿಸಿದ ಜಾಗವಿಮಾನ ನಿಲ್ದಾಣದ ಬಳಿ ಇದೆಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಇದೆಚಿತ್ರನಗರಿಗೆ ಪ್ರಶಸ್ತ ಜಾಗ ಎಂದು ಬಾಬು ಅವರು ಹೇಳಿದರುಅಷ್ಟೇ ಅಲ್ಲಅದರ ಬಳಿಯಲ್ಲಿ ಗಂಧದ ಗುಡಿ ಗೃಹ ನಿರ್ಮಾಣ ಸಂಘಕ್ಕೆಅದು ಗುರುತಿಸಿರುವ ಸುಮಾರು 230 ಎಕರೆ ಸರ್ಕಾರಿ ಜಮೀನನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎನ್ನುವ ಬೇಡಿಕೆಯ ಕುರಿತೂ ಪ್ರಸ್ತಾಪವಿತ್ತು.

ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆಗೆ ಒತ್ತಾಯ ಮಾಡುವ ಮೊದಲು ಈ ಪತ್ರಿಕಾಗೋಷ್ಠಿಯನ್ನು ಕರೆದಿರುವುದರ ಉದ್ದೇಶ ಬೇರೆಯೇ ಇತ್ತುಅದರ ಪ್ರಸ್ತಾಪವೂ ಅಲ್ಲಿ ಆಯಿತುಸರ್ಕಾರ ಚಿತ್ರನಗರಿ ಸ್ಥಾಪನೆಗೆ ಗುರುತಿಸಿರುವ ಜಾಗವನ್ನು ತಮಗೇ ಕೊಡಿ ಎಂದು ಕಳೆದ ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋದ ತಂಡದಲ್ಲಿದ್ದ ಪ್ರಮುಖ ನಿರ್ಮಾಪಕರೊಬ್ಬರು ಕೋರಿರುವುದುಅವರ ಜೊತೆಗೆ ಸಚಿವರೊಬ್ಬರು ಕೈಜೋಡಿಸಿರುವುದು ಇದಕ್ಕೆ ಕಾರಣ.

ಬಾಬು ಮತ್ತು ಅಲ್ಲಿದ್ದ ಇತರರು ಸರ್ಕಾರವೇ ಚಿತ್ರನಗರಿ ಸ್ಥಾಪಿಸಲಿ ಎಂದು ಒತ್ತಾಯಿಸುತ್ತಿದ್ದಾರೆಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅವರು ಮಂಡಿಸಿದ್ದ ಮುಂಗಡಪತ್ರದಲ್ಲಿ ಮೈಸೂರಿನಲ್ಲಿ ಚಿತ್ರನಗರಿಗಾಗಿ ೫೦೦ ಕೋಟಿ ರೂಪಾಯಿಗಳನ್ನು ಕಾದಿರಿಸಲಾಗಿತ್ತುಖಾಸಗಿಯವರ ಸಹಯೋಗದೊಂದಿಗೆ ಚಿತ್ರನಗರಿ ಸ್ಥಾಪನೆ ಆಗಲಿದೆ ಎಂದು ಅಲ್ಲಿ ಪ್ರಸ್ತಾಪಿಸಿದ್ದಾಗಿ ಹೇಳಲಾಗುತ್ತಿದೆ.

ತಮ್ಮ ಜೊತೆಗಿದ್ದಚಿತ್ರನಗರಿಯ ಕುರಿತಂತೆ ಆಸಕ್ತಿ ಹೊಂದಿರುವ ನಿರ್ಮಾಪಕರ ಹೆಸರು ಹೇಳದೆಯೇಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬು ಅವರುಖಾಸಗಿಯವರು ಚಿತ್ರನಗರಿ ಸ್ಥಾಪಿಸುವುದಾದರೆ ಸ್ಥಾಪಿಸಲಿಆದರೆ ಇದಕ್ಕೆ ಅಡ್ಡಿಪಡಿಸುವುದು ಬೇಡಕರ್ನಾಟಕದಲ್ಲಿ ಒಂದೇ ಚಿತ್ರನಗರಿ ಇರಬೇಕು ಎಂದೇನೂ ಇಲ್ಲ ಎಂದರು.

ಚಿತ್ರನಗರಿ ಯೋಜನೆಯ ಒತ್ತಾಯದ ಜೊತೆಜೊತೆಯಲ್ಲೇ ಇಡಲಿರುವ ಗೃಹ ನಿರ್ಮಾಣ ಸಂಘದ ಬೇಡಿಕೆ ಅದಕ್ಕೆ ಪೂರಕವಾಗಲಿದೆಯೇ ಎನ್ನುವು ದನ್ನು ಮುಂದಿನ ದಿನಗಳು ಹೇಳಲಿವೆಸಂಘದಲ್ಲಿ ಪ್ರಶಸ್ತಿ ವಿಜೇತ ನಿರ್ಮಾಪಕನಿರ್ದೇಶಕರಿದ್ದಾರೆಈಗಾಗಲೇ ಕೃಷ್ಣೇಗೌಡರ ಪ್ರಕಾರ ಸುಮಾರು 630ಕ್ಕೂ ಹೆಚ್ಚು ಮಂದಿ ಸದಸ್ಯರು ಈ ಸಂಘದ ಸದಸ್ಯರಾಗಿದ್ದಾರೆನಿಯಮಾನು ಸಾರವೇ ಇದು ಕೆಲಸ ಮಾಡುತ್ತಿದೆ ಎನ್ನುವುದು ಅವರ ಅಂಬೋಣ.

ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ತಿಂಗಳ 7ನೇ ತಾರೀಕಿನಂದು ಈ ಸಾಲಿನ ಮುಂಗಡಪತ್ರ ಮಂಡಿಸಲಿದ್ದಾರೆಚುನಾವಣೆಯ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಆಗುವ ವೆಚ್ಚವನ್ನು ಸರಿದೂಗಿಸಲು ಇತರ ವೆಚ್ಚಗಳಲ್ಲಿ ಸಾಕಷ್ಟು ಕಡಿತದ ಸಾಧ್ಯತೆ ಹೆಚ್ಚು ಎನ್ನಲಾಗಿದ್ದುಸಿನಿಮಾ ಕ್ಷೇತ್ರದ ಬೇಡಿಕೆಗಳಲ್ಲಿ ಯಾವುದು ಈಡೇರುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಮಾರ್ಚ್ 22’ ಚಿತ್ರದಲ್ಲಿ ಅತಿಥಿಯಾಗಿ ಹಾಡೊಂದರಲ್ಲಿ ಕಾಣಿಸಿಕೊಂಡ ಉದ್ಯಮಿ ಬಿ.ಆರ್.ಶೆಟ್ಟಿಯವರು, ?ಸರ್ಕಾರ 50 ಎಕರೆ ಜಾಗ ಕೊಟ್ಟರೆ ಅಲ್ಲಿ ಚಿತ್ರನಗರಿ ನಿರ್ಮಿಸುತ್ತೇನೆಉಚಿತವಾಗಿ ಬೇಡ’ ಎಂದಿದ್ದರುಕಂಠೀರವ ಸ್ಟುಡಿಯೊದಲ್ಲಿ ಹಾಡಿನ ಚಿತ್ರೀಕರಣ ನಡೆದಿತ್ತುಅಲ್ಲಿನ ವಾತಾವರಣ ನೋಡಿ ಅವರ ಈ ಮಾತುಗಳಿದ್ದವು.

ನಟನಿರ್ಮಾಪಕಪ್ರದರ್ಶಕಸ್ಟುಡಿಯೊ ಮಾಲೀಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿಗಳೂ ಆಗಿರುವ ರಾಕ್‌ಲೈನ್ ವೆಂಕಟೇಶ್ ಅವರು ಸರ್ಕಾರ ಜಾಗ ನೀಡಿದರೆ ತಾವು ಚಿತ್ರನಗರಿ ಸ್ಥಾಪಿಸುವ ಕುರಿತಂತೆ ನಿರ್ಧರಿಸಿದಂತಿದೆಈಗಾಗಲೇಅವರ ಸ್ಟುಡಿಯೊ ಬೆಂಗಳೂರಿನಲ್ಲಿ ಇದೆ.

ಹ್ಞಾಂಮೈಸೂರಿನಲ್ಲಿ ಚಿತ್ರನಗರಿಯ ನಿರ್ಮಾಣವನ್ನು ಮಾಡುವುದಾ ಗಿಯೂ ಅದಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡುವುದಾ ಗಿಯೂಭಾಜಪ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತುಚಿತ್ರನಗರಿಗೆ ರಾಜ್‌ಕುಮಾರ್ ಅವರ ಹೆಸರನ್ನು ಇಡಬೇಕು ಎಂದು ಒತ್ತಾಯವಿತ್ತುಮೊನ್ನೆ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಬಾಬು ಅವರು ಚಿತ್ರನಗರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಬೇಕುಅವರು ಕರ್ನಾಟಕದಲ್ಲಿ ಸಿನಿಮಾ ಪರಂಪರೆಗೆ ನಾಂದಿ ಹಾಡಿದ ಮೊದಲಿಗರುಅವರು 1920ರ ದಶಕದ ಆರಂಭದಲ್ಲಿಯೇ ಕ್ಯಾಮೆರಾ ತರಿಸಿತಜ್ಞರನ್ನು ಕರೆಸಿನಾಟಕವೊಂದನ್ನು ಚಿತ್ರಿಸಿದ್ದರು ಎಂದು ಹೇಳಿದರು.

 

ಮೊದಲು ಚಿತ್ರನಗರಿ ಆಗಲಿಆ ಮೇಲೆ ಹೆಸರು ಅಲ್ಲವೇ?

andolanait

Recent Posts

ಗ್ರಾಮ ಪಂಚಾಯ್ತಿ ಚುನಾವಣೆ : ಸಿದ್ಧತೆಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸರ್ಕಾರ

ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…

1 hour ago

ಗ್ರಾಮ ಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ್ದು ಗಾಂಧಿಜೀ : ಸಿಎಂ

ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…

1 hour ago

ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ಚಾಕು ಇರಿತ ; ವಧು ಮಾಜಿ ಲವರ್‌ನಿಂದ ಕೃತ್ಯ ಶಂಕೆ

ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…

3 hours ago

ಚಿರತೆ ದಾಳಿ : ರೈತನಿಗೆ ಗಾಯ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…

4 hours ago

ಮಹಾತ್ಮ ಗಾಂಧಿ ಪುಣ್ಯತಿಥಿ | ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ನಮನ

ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…

4 hours ago

ಡ್ರಗ್ಸ್‌ ಗುಮಾನಿ | ಎನ್‌ಸಿಬಿ ಅಧಿಕಾರಿಗಳ ದಾಳಿ ಫಾಲೋಅಪ್‌ ಅಷ್ಟೇ : ಗೃಹ ಸಚಿವ

ಮೈಸೂರು : ಮೈಸೂರಿನಲ್ಲಿ ಡ್ರಗ್ಸ್‌ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್‌.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್‌…

5 hours ago