BREAKING NEWS

ದೆಹಿಲಿ-ಲಡಾಖ್‌ನ ಲೇಹ್‌ ಗೆ ನೇರ ಬಸ್‌: ಜೂ.15ರಿಂದ ಆರಂಭ

ಹಿಮಚ್ಛಾದಿತ ಲೇಹ್‌ ಸೌಂದರ್ಯವನ್ನು ಸವಿಯುವುದು ಪ್ರವಾಸಿಗರಿಗೆ ಇನ್ನು ಸುಲಭ. ಈ ಹಿಂದೆ ಕಿರಿದಾದ ರಸ್ತೆಗಳಲ್ಲಿ ಸಾಗುತ್ತಿದ್ದ ಪ್ರವಾಸಿಗರು, ಇನ್ನು ಮುಂದೆ ಯಾವುದೇ ಭಯವಿಲ್ಲದೇ ಬಸ್‌ನಲ್ಲಿ ಸುರಕ್ಷಿತವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಾ ದೆಹಲಿಯಿಂದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ ತಲುಪಬಹುದು.

ಜೂ.15ರಂದು ಬಸ್‌ ಸೇವೆ ಆರಂಭ
ಹಿಮಾಚಲ ರಸ್ತೆ ಸಾರಿಗೆ ನಿಗಮ(ಎಚ್‌ಆರ್‌ಟಿಸಿ)ವು ದೆಹಲಿಯಿಂದ ಲೇಹ್‌ಗೆ ಜೂ.15ರಿಂದ ಬಸ್‌ ಸೇವೆ ಆರಂಭಿಸಲಿದೆ. ಈ ಹಿಂದೆ ಪ್ರವಾಸಿಗರು ದೆಹಲಿ ತಲುಪಿ, ಅಲ್ಲಿಂದ ವಿಮಾನದ ಮೂಲಕ ಅಥವಾ ಟ್ಯಾಕ್ಸಿ ಅಥವಾ ಕಾರಿನ ಮೂಲಕ ಕಿರಿದಾದ ರಸ್ತೆಯಲ್ಲಿ ಲೇಹ್‌ ತಲುಪಬೇಕಿತ್ತು. ಕೆಲವರು ಬುಲೆಟ್‌ ರೀತಿಯ ಬೈಕ್‌ಗಳಲ್ಲೂ ಹೋಗುತ್ತಿದ್ದರು. ಈಗ ಮೊಟ್ಟ ಮೊದಲ ಬಾರಿಗೆ ದೆಹಲಿಯಿಂದ ಲೇಹ್‌ಗೆ ನೇರ ಬಸ್‌ ಸೇವೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ವಿಸ್ತರಿಸಲಾಗಿದೆ.

ಮನಮೋಹಕ ಪ್ರಕೃತಿ ಸವಿಯುವ ಅವಕಾಶ
ಈ ಬಸ್‌ ಮಾರ್ಗವು ಮನಾಲಿ-ಲೇಹ್‌ ಹೆದ್ದಾರಿ ಮೂಲಕ ಸಾಗಲಿದೆ. ಈ ಮಾರ್ಗದಲ್ಲಿ ಪ್ರಕೃತಿ ಮನಮೋಹಕವಾಗಿದ್ದು, ನೋಡುಗರಿಗೆ ರಸಾನುಭವ ಉಣಿಸಲಿದೆ. ಹಿಮಾಲಯ ಪರ್ವತ ಶ್ರೇಣಿಗಳ ಮೂಲಕ ಹಾದುಹಾಗುವ ಈ ಮಾರ್ಗವು, ಬರಲಚಾ ಪಾಸ್‌, ನಕೀಲ ಪಾಸ್‌, ತಗ್ಲಾಂಗ್‌ ಲಾ ಪಾಸ್‌ ಸೇರಿದಂತೆ ಅನೇಕ ಮಾರ್ಗಗಳ ಮೂಲಕ ಸಾಗಲಿದೆ. ತಗ್ಲಾಂಗ್‌ ಲಾ ಪಾಸ್‌ ಸಮುದ್ರ ಮಟ್ಟದಿಂದ 17,582 ಅಡಿ ಎತ್ತರದಲ್ಲಿದೆ.

ಪ್ರಯಾಣದ ಸಮಯ
ಪ್ರತಿ ದಿನ ಮಧ್ಯಾಹ್ನ 3.30ಕ್ಕೆ ದೆಹಲಿ ಅಂತಾರಾಜ್ಯ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌, ಮಾರ್ಗಮಧ್ಯೆ ಕಿಲಾಂಗ್‌ನಲ್ಲಿ ಹಾಲ್ಟ್ ಆಗಲಿದ್ದು, ಮಾರನೇ ದಿನ ಸಂಜೆ 6 ಗಂಟೆಗೆ ಲೇಹ್‌ ತಲುಪಲಿದೆ. ಸುಖಾಸನಗಳು, ಹವಾನಿಯಂತ್ರಿತ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯೂ ಬಸ್‌ನಲ್ಲಿರಲಿವೆ.
……………….

ಬಸ್‌ ಟಿಕೆಟ್‌ ದರವೆಷ್ಟು?– 1,500 ರೂ.
ದೆಹಲಿಯಿಂದ ಲೇಹ್‌ಗೆ ಇರುವ ದೂರ– 1,072 ಕಿ.ಮೀ.
ತಗ್ಲಾಂಗ್‌ ಲಾ ಪಾಸ್‌ ಎಷ್ಟು ಎತ್ತರದಲ್ಲಿದೆ?- 17,582 ಅಡಿ

andolanait

Recent Posts

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

3 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026: ಗಜಪಯಣಕ್ಕೆ ವಿದ್ಯುಕ್ತ ಚಾಲನೆ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…

5 hours ago

ಓದುಗರ ಪತ್ರ: ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆಯೇ ಮದ್ದು

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…

6 hours ago

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…

6 hours ago

ಓದುಗರ ಪತ್ರ: ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣವಾಗಲಿ

ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ…

6 hours ago

ಮಳೆ ಕೊರತೆಯ ನಡುವೆಯೂ ಕೃಷಿಗೆ ಆತಂಕವಿಲ್ಲ

ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…

10 hours ago