ಮಹಾಪುರುಷರ ಪ್ರತಿಮೆ ಅನಾವರಣಕ್ಕೆ ಯಾರೂ ಅಡ್ಡಬರುವುದಿಲ್ಲ. ಆದರೆ ಓಟಿನ ರಾಜಕಾರಣವನ್ನು ಆಧರಿಸಿದ ಪ್ರತಿಮೆ ಆನಾವರಣ ನಿರೀಕ್ಷಿತ ಫಲ ನೀಡುವುದಿಲ್ಲ!
ಡಾ.ಬಿ.ಪಿ.ಮಹೇಶ ಚಂದ್ರ ಗುರು
ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ಪ್ರಜೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯವಶ್ಯಕ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಭಾರತೀಯರ ಬದುಕು ಹಸನಾಗುತ್ತದೆಂಬ ಸತ್ಯದರ್ಶನ ನಮ್ಮನ್ನು ಆಳುವವರಿಗೆ ಶೀಘ್ರದಲ್ಲೇ ಆಗಬೇಕು. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಕನಿಷ್ಟ ಅಗತ್ಯತೆಗಳ ಪೂರೈಕೆ ಮತ್ತು ದುರ್ಬಲ ವರ್ಗಗಳ ಒಳಗೊಳ್ಳುವ ಅಭಿವೃದ್ಧಿಯಿಂದ ಮಾತ್ರ ರಾಮರಾಜ್ಯ ನಿರ್ಮಿಸಬಹುದೇ ಹೊರತು ರಾಮಮಂದಿರ ನಿರ್ಮಾಣದಿಂದಲ್ಲ ಎಂಬ ಸತ್ಯವನ್ನು ಇಂದು ನಮ್ಮನ್ನಾಳುತ್ತಿರುವ ರ್ಆಎಸ್‌ಎಸ್ ಪ್ರಾಯೋಜಿತ ಸರ್ಕಾರಿ ಬಾಂಧವರು ಮನಗಾಣಬೇಕು.
ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಿಸಿರುವ ೧೦೮ಅಡಿ ಎತ್ತರದ ೬೪ ಕೋಟಿ ರೂ. ಮೌಲ್ಯದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ಪ್ರತಿಮೆ ಅನಾವರಣ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುಸಜ್ಜಿತ ೨ನೇ ಟರ್ಮಿನಲ್ ಲೋಕಾರ್ಪಣೆ, ಮೈಸೂರು – ಬೆಂಗಳೂರು – ಚೆನ್ನೈ ನಡುವಿನ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಮತ್ತು ಭಾರತ್ ಗೌರವ್ ದರ್ಶನ ರೈಲಿನ ಉದ್ಘಾಟನೆ ಸೇರಿದಂತೆ ಕೆಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಡಿನ ಜನರ ಗಮನ ಸೆಳೆದರು.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಬಹಳ ಹಿಂದೆಯೇ ಮುನ್ನುಡಿ ಬರೆದ ಅಪೂರ್ವ ಆಡಳಿತಗಾರ ಮತ್ತು ಅಭಿವೃದ್ಧಿಶಿಲ್ಪಿ ಎಂಬುದು ಹೆಮ್ಮೆಯ ಸಂಗತಿ. ಮೋದಿಯವರು ಪ್ರಗತಿ ಪ್ರತಿಮೆಯನ್ನು ಅನಾವರಣಗೊಳಿಸುವುದರ ಹಿಂದೆ ಇರುವ ರಾಜಕೀಯ ಲೆಕ್ಕಾಚಾರಗಳನ್ನು ನಾಡಿನ ಜನತೆ ಅರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಒಕ್ಕಲಿಗರ ಮತದ ಮೇಲೆ ಕಣ್ಣಿಟ್ಟು ಈ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ಮೋದಿಯವರಿಗೆ ಹೆಚ್ಚಿನ ಭ್ರಮನಿರಸನ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ.
ಬಹುತೇಕ ಒಕ್ಕಲಿಗರು ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಬೆಂಬಲ ನೀಡುವುದು ಖಚಿತ. ಇನ್ನೊಂದೆಡೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯೆಂದು ಘೋಷಿಸಿ ಒಕ್ಕಲಿಗರ ಮತ ಸೆಳೆಯುವಲ್ಲಿ ಭಾರತೀಯ ಜನತಾಪಕ್ಷ ಖಂಡಿತ ಯಶಸ್ಸು ಗಳಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಂದರನ್ನು ಮುಖ್ಯಮಂತ್ರಿ ಮಾಡಿದಂತೆ ಕರ್ನಾಟಕದ ರಾಜಕಾರಣವನ್ನು ಧರ್ಮ ಕಾರಣವನ್ನಾಗಿ ಪರಿವರ್ತಿಸುವುದಕ್ಕೆ ಬುದ್ಧ, ಬಸವ, ಅಂಬೇಡ್ಕರ್, ದೇವರಾಜ ಅರಸ್, ರಾಮಕೃಷ್ಣ ಹೆಗ್ಗಡೆ, ಕುವೆಂಪು ಮೊದಲಾದ ದಾರ್ಶನಿಕರು ಮತ್ತು ಬೆಂಬಲಿಗರು ಅವಕಾಶ ನೀಡುವುದಿಲ್ಲ.
ಮಹಾಪುರುಷರ ಪ್ರತಿಮೆ ಅನಾವರಣಕ್ಕೆ ಯಾರೂ ಅಡ್ಡಬರುವುದಿಲ್ಲ. ಆದರೆ ಓಟಿನ ರಾಜಕಾರಣವನ್ನು ಆಧರಿಸಿದ ಪ್ರತಿಮೆ ಆನಾವರಣ ನಿರೀಕ್ಷಿತ ಫಲ ನೀಡುವುದಿಲ್ಲ. ಬಡತನ ಮುಕ್ತ ಭಾರತ, ನಿರುದ್ಯೋಗ ಮುಕ್ತ ಭಾರತ, ಹಸಿವು ಮುಕ್ತ ಭಾರತ, ಅನಾರೋಗ್ಯ ಮುಕ್ತ ಭಾರತ, ಹಿಂದುತ್ವ ಮುಕ್ತ ಭಾರತ, ಶೋಷಣಾ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಜಿಯವರ ಕೊಡುಗೆ ನಗಣ್ಯವೆಂದೇ ಹೇಳಬಹುದು. ಮೋದಿ ಸರ್ಕಾರದ ಬಹಳಷ್ಟು ಅಭಿವೃದ್ಧಿ ಯೋಜನೆಗಳು ಬಡವರ ಕಣ್ಣೀರು ಒರೆಸುವಲ್ಲಿ ವಿಫಲವಾಗಿವೆ.
ಸುಳ್ಳು ಭರವಸೆಗಳ ಮೂಲಕ ದೇಶ ಬಾಂಧವರನ್ನು ದಾರಿತಪ್ಪಿಸುವುದನ್ನು ಮೋದಿಜಿ ನಿರಂತರವಾಗಿ ಮುಂದುವರೆಸಲು ಸಾಧ್ಯವಿಲ್ಲ.
ಶ್ರೀಮಂತರ ಅಭಿವೃದ್ಧಿ ಮತ್ತು ಶ್ರೀಮಂತರ ಸಹವಾಸದಿಂದ ಮೋದಿಜಿ ಪ್ರಬುದ್ಧ ಭಾರತ ನಿರ್ಮಿಸುವುದು ಮತ್ತು ವಿಶ್ವಗುರುವಾಗುವುದು ಸಾಧ್ಯವಿಲ್ಲ. ಇಂದು ಭಾರತದ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮೊದಲಾದ ಅಂಚಿಗೆ ನೂಕಲ್ಪಟ್ಟ ಜನವರ್ಗಗಳನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಮತ್ತು ಅಭಿವೃದ್ಧಿಪಥದಲ್ಲಿ ಸಾಂವಿಧಾನಿಕ ಆಶಯಗಳಿಗೆ ಅನುಗುಣವಾಗಿ ಮುನ್ನಡೆಸುವ ಉದಾತ್ತ ಗುಣ ಮತ್ತು ಸಾಮಥ್ರ್ಯಗಳನ್ನು ನರೇಂದ್ರಮೋದಿಯವರು ಬೆಳೆಸಿಕೊಳ್ಳಬೇಕು.
ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ಪ್ರಜೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯವಶ್ಯಕ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯಿಂದಲೇ ಭಾರತೀಯರ ಬದುಕು ಹಸನಾಗುತ್ತದೆಂಬ ಸತ್ಯದರ್ಶನ ನಮ್ಮನ್ನು ಆಳುವವರಿಗೆ ಶೀಘ್ರದಲ್ಲೇ ಆಗಬೇಕು. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಕನಿಷ್ಟ ಅಗತ್ಯತೆಗಳ ಪೂರೈಕೆ ಮತ್ತು ದುರ್ಬಲ ವರ್ಗಗಳ ಒಳಗೊಳ್ಳುವ ಅಭಿವೃದ್ಧಿಯಿಂದ ಮಾತ್ರ ರಾಮರಾಜ್ಯ ನಿರ್ಮಿಸಬಹುದೇ ಹೊರತು ರಾಮಮಂದಿರ ನಿರ್ಮಾಣದಿಂದಲ್ಲ ಎಂಬ ಸತ್ಯವನ್ನು ಇಂದು ನಮ್ಮನ್ನಾಳುತ್ತಿರುವ ರ್ಆಎಸ್‌ಎಸ್ ಪ್ರಾಯೋಜಿತ ಸರ್ಕಾರಿ ಬಾಂಧವರು ಮನಗಾಣಬೇಕು. ಹಿಂದುತ್ವದಿಂದ ಭಾರತದ ಉದ್ಧಾರ ಸಾಧ್ಯವಿಲ್ಲ. ಬಹುತ್ವ, ಧರ್ಮ ನಿರಪೇಕ್ಷತೆ, ಸಾಮಾಜಿಕ ಪ್ರಜಾಸತ್ತೆ, ಆರ್ಥಿಕ ಸಮಾನತೆ, ಸುಸ್ಥಿರ ಅಭಿವೃದ್ಧಿ ಮೊದಲಾದವುಗಳಿಂದ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಗತಿಶೀಲ ರಾಜ್ಯಧರ್ಮ ಅನಾವರಣ ಪ್ರಧಾನಿಯ ಪರಮ ಕರ್ತವ್ಯ ಎಂಬುದನ್ನು ಪ್ರಜ್ಞಾವಂತ ಪ್ರಜೆಗಳು ಮನವರಿಕೆ ಮಾಡಿಕೊಡಬೇಕು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…