ಎಡಿಟೋರಿಯಲ್

ಕಂಡದ್ದಕ್ಕೆ ಜೋತು ಬೀಳುವುದು ಮನಸ್ಸಿನ ಗುಣ

ಮನುಷ್ಯ ಸೋಲದಂಗೆ, ಜಾರದಂಗೆ ಇರಬೇಕು 

ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹಿಂದೆ ಒಂದು ಕಾರ್ಯಕ್ರಮದಲ್ಲಿ ನೀಡಿದ ಪ್ರವಚನದಲ್ಲಿ ಮನಸ್ಸನ್ನು ಹೇಗೆ ಹಗುರವಾಗಿಟ್ಟುಕೊಳ್ಳಬೇಕು, ಒಂದು ಉತ್ತಮ ಜೀವನ ನಡೆಸಲು ಮನಸ್ಸು ಯಾವುದಕ್ಕೆ ಸೋಲಬಾರದು ಎಂಬುದರ ಕುರಿತು ಜೀವನಕ್ಕೆ ಒಂದು ಸಂದೇಶವನ್ನು ನೀಡಿದ್ದಾರೆ.

ಈ ಜಗದಲ್ಲಿ ನಾವೆಲ್ಲರೂ ಸೋಲುವವರಾಗಿಬಿಟ್ಟಿದ್ದೀವಿ. ಈಗ ಎಲ್ಲೆಡೆ ಲಂಚ, ದುಡಿದಾಗ ಲಕ್ಷ ರೂಪಾಯಿ ಬರುತ್ತದೆ, ಅದು ಮಹತ್ವದ್ದಲ್ಲ. ಆದರೆ 10ರೂ.ಗೆ ಕೈ ಒಡ್ಡುತ್ತೀವಲ್ಲ ಏನಿದು? ಸೋಲು, ಎಲ್ಲಾ ಇದ್ದು ಮನಸ್ಸು ಅಲ್ಲಿ ಸೋಲುತ್ತದೆ. ಇದೇ ಜೀವನದ ವೈಶಿಷ್ಟ್ಯ. ಜೀವನಕ್ಕೆ ನಮಗೇನು ಕೊರತೆ ಇದೆ ಹೇಳಿ, ಇಷ್ಟೆಲ್ಲ ಇದ್ದರೂ ಸಹಿತ ಮನಸ್ಸು ನಿತ್ಯ ಸೋಲುತ್ತದೆ. ಮುಂಬೈ- ದಿಲ್ಲಿಯವರಿಗೇನು ಕೊರತೆ? ಎಂತಹ ಕಟ್ಟಡಗಳಿವೆ, ಎಂತಹ ವೈಭವ ಜೀವನ ಇದೆ, ಆದರೆ ಅಲ್ಲಿನವರ ಮನಸ್ಸು ಕೂಡ ಒಂದಿಷ್ಟು ವಸ್ತುಗಳಿಗೆ ಸೋತು ಹೋಗುತ್ತದೆ. ಇಂತಹ ದುರ್ಬಲ ಮನಸ್ಸು ಶಾಂತಿ ಹೇಗೆ ಪಡೆಯುವುದು? ವಿಶ್ವದ ಜ್ಞಾನ ಉಂಟಾಗುವುದು ಹೇಗೆ? ಇಲ್ಲಿ ನಾವೆಲ್ಲ ಸೋತವರೇ…,
ಒಂದು ಘಟನೆ, ನಮ್ಮವರೇ ಅಮೆರಿಕಕ್ಕೆ ಹೋಗಿದ್ದರು. ಕೋಟ್ಯಾಧೀಶರು ಅವರು, ಸಾಕ್ಸ್ (ಕಾಲುಚೀಲ) ಖರೀದಿಸಲು ಒಂದು ಅಂಗಡಿಗೆ ಹೋಗಿ ಅಲ್ಲಿ ಯಾರಿಗೂ ಕಾಣದ ಹಾಗೆ ನಾಲ್ಕು ಸಾಕ್ಸ್ ಎತ್ತಿ ಜೇಬಿಗೆ ಹಾಕಿಕೊಂಡ. ಆದರೆ ಅದು ಅಲ್ಲಿದ್ದ ಕ್ಯಾಮೆರಾ ಕಣ್ಣಿಗೆ ಬಿತ್ತು. ಕೊನೆಗೇನಾಯಿತು. ಮಾಲೀಕನಿಗೆ ಸಿಕ್ಕಿಬಿದ್ದ ಮರ್ಯಾದೆ ಹೋಯಿತು. ನಮ್ಮ ಮನಸ್ಸು ಹಂಗಾ ಮಾಡ್ತಾದ, ‘ತಾನು ಎಷ್ಟೇ ಚಲೋ ಇದ್ರು ಸಹಿತ ಇನ್ನೊಬ್ಬರ ಮೇಲೆ ಕಣ್ಣು ಬಿಡ್ತಾನೆ ಮನುಷ್ಯ’. ಇನ್ನೊಬ್ಬರ ಮನಿ ಮ್ಯಾಲೆ ಕಣ್ಣ ಬಿಡ್ತಾನಾ ಏಕೆ? ಏಕೆಂದರೇ ಆತನ ಮನಸ್ಸು ಸೋಲ್ತದೆ. ‘ಸೋಲುವ ಮನಸ್ಸಾ ಕಟ್ಟಿಕೊಂಡು ಜೀವನ ಸಾಗಿಸೋದು ಹೇಗೆ?’.
ಒಬ್ಬ ಮನುಷ್ಯ ಆತ ಊರಲ್ಲಿ ಚೆನ್ನಾಗಿ ಬಾಳಿಕೊಂಡಿದ್ದವ, ಏನೂ ಕೊರತೆ ಇಲ್ಲದೆ ಆರಾಮಿದ್ದ. ಒಂದು ಸಲ ಹೊಲದಲ್ಲಿ ಒಂದು ಹಂಡೆ ಸಿಕ್ಕಿತು. ಅದರಾಗ ಒಂದು ಸಾವಿರ ಬಂಗಾರದ ನಾಣ್ಯಗಳಿದ್ದವು. ಅದು ಊರಾಗೆಲ್ಲ ಸುದ್ದಿ ಹರಡಿತು. ಎಲ್ಲಾರೂ ನೋಡಲಿಕ್ಕೆ ಬಂದರು. ಊರೆಲ್ಲ ನೋಡಿತ್ತು, ಎಲ್ಲಾರೂ ಅನ್ನೋರು ‘ಏನಪ್ಪ ನೀನು ಲಕ್ಷಾಧೀಶ ಆಗೋದೆ’.
ಊರಿನವರೆಲ್ಲ ಮುಂದೆ ಲಕ್ಷಾಧೀಶ ಅಂತ ಕರೆದ ಮೇಲೆ ಅವನು ಸಹ ಲಕ್ಷಾಧೀಶರಂತೆ ಬದುಕಬೇಕಲ್ಲ? ದುಬಾರಿ ಬಟ್ಟೆ ತೊಡೋದು, ಮಜಾ ಮಾಡೋದು ಶುರು ಮಾಡಿದ, ಅದಕ್ಕೆ ರೊಕ್ಕ ಬೇಕಲ್ಲ. ಸಮಸ್ಯೆ ಇಲ್ಲಿಂದ ಶುರುವಾಯಿತು. ಅವನಿಗೆ ಸಿಕ್ಕ ಹಂಡೆ ಚಿನ್ನದ ನಾಣ್ಯದಲ್ಲಿ ಆತ ಖರ್ಚು ಮಾಡಂಗಿಲ್ಲ. ಮಾಡಿದರೆ ಲಕ್ಷಾಧೀಶ ಎನ್ನುವವರು ಇಲ್ಲದಂತಾಗುತ್ತದೆ. ಲಕ್ಷಾಧೀಶ ಎಂದು ಹೊಲಕ್ಕೆ ಹೋಗೋದು ಬಿಟ್ಟ, ಊರಾಗೆಲ್ಲ ಸಾಹುಕಾರ ಎಂದು ವರ್ಣಿಸಿದ್ದರು, ಅವರನೆಲ್ಲ ಉಪಚರಿಸಲು ಶುರು ಮಾಡಿದ್ದ. ಆದರೆ ಸಿಕ್ಕಿದ್ದು ಮಾತ್ರ ಮನೆಯಲ್ಲಿ ಸುಮ್ಮನಿತ್ತು.
ಆತ ಹಾಸಿಗೆ ಹಿಡಿದ ಆದ್ರೆ ಸಿಕ್ಕಿದ್ದು ಖರ್ಚು ಮಾಡಾಂಗಿಲ್ಲ್ಲ. ಬಡತನ ಬಂತು ಆದ್ರೂ ಅದನ್ನ ಖರ್ಚು ಮಾಡಾಂಗಿಲ್ಲ. ಖರ್ಚಾದರೆ ಜನ ಮರ್ಯಾದೆ ಕೊಡಲ್ಲ ಅಂತ ಅವಾ, ಖರ್ಚು ಮಾಡದಿದ್ದರೇ ಜೀವನ ಹೊಂಟದಲ್ಲ ಎಂದು ಮನೆಯವರು. ಇದರ್ಯಾಗ ಸಿಕ್ಕಾಕೊಂಡಿದ್ದ ಆತ ಇನ್ನೂ ನಿರ್ಧಾರ ಮಾಡಿಲ್ಲ. ಇದೇ ಮನುಷ್ಯನ ದುರ್ಬಲ ಮನಸ್ಸು. ಇಂತಹದ್ದರಲ್ಲೇ ನಾವು ಇಂದು ಸಿಕ್ಕಿಕೊಂಡಿರುವುದು. ಮನಸ್ಸು ಸಬಲವಿತ್ತು ಎಂದರೆ ಈ ಸಮಸ್ಯೆ ಬರುವುದಿಲ್ಲ ಮನುಷ್ಯ ಆನಂದವಾಗಿರುತ್ತಾನೆ. ಸಬಲ ಮನಸ್ಸಿಗೆ ಏನು ಇದ್ದರೇನು ಇಲ್ಲದಿದ್ದರೇನು ಆನಂದದಿಂದ ಇರುವುದನ್ನು ಬಯಸುತ್ತದೆ.
ಈಗ ನಮ್ಮ ಪರಿಸ್ಥಿತಿಯೂ ಹಾಗೆೆಯೇ ಇದೆ. ಪರದೇಶದಲ್ಲಿದೆುಂಲ್ಲ ಕಪ್ಪುಹಣ ಅಂತ ಅದನ್ನು ತರುವಂತಿಲ್ಲ. ಆದರೆ ಅದು ಹಾಗೇ ಇರೋದು. ಅದರಂಗೆ ನಾವು ಲಕ್ಷಾಧೀಶ, ಕೋಟ್ಯಾಧೀಶ ಎನ್ನಬಹುದು. ಆದರೆ ಹಣ ಮಾತ್ರ ಅಲ್ಲಿ ಸ್ವಿಡ್ಜರ್‌ಲ್ಯಾಂಡಿನವರು ಅನುಭವಿಸುವರು.
ಮನುಷ್ಯನಲ್ಲಿ ಸೋತ ಮನಸ್ಸು, ಸಮಾಧಾನದ ಮನಸ್ಸು ಎರಡನ್ನೂ ಕಾಣಬಹುದು. ಆದರೆ ಮನುಷ್ಯ ಸಮಾಧಾನದ ಮನಸ್ಸನ್ನು ಇಟ್ಟಿಕೊಳ್ಳಬೇಕಾದರೆ ದುರ್ಬಲವಾಗಬಾರದು, ಸೋಲುಬಾರದು. ಎಷ್ಟೋ ಸಲ ಮನುಷ್ಯ ಕಣ್ಣಿನ ರೂಪಕ್ಕೆ ಸೋಲುತ್ತಾನೆ. ನೋಡುವ ರೂಪ ಚಂದದೆ ಎಂದು ಸೋಲುತ್ತೇವೆ. ಆ ಚಂದಿದ್ದವರೇ ಮನಸ್ಸನ್ನು ಮುಗಿಸಿ ಹೋಗುತ್ತಾರೆ. ಜಗತ್ತಿನಲ್ಲಿ ರೂಪಕ್ಕೆ ಸೋಲುವವರಿದ್ದಾರೆ, ಶಬ್ದದ ಹೊಗಳಿಕೆಗೆ ಸೋಲುವವರಿದ್ದಾರೆ, ತಿನ್ನಕ್ಕೂ ಸೋಲುವವರಿದ್ದಾರೆ. ಹೀಗೆ ಸೋಲುವುದು ಬಹಳವಿದೆ ಜಗದಲ್ಲಿ. ಆದ್ದರಿಂದ ಮನುಷ್ಯ ಸೋಲದಂಗೆ, ಜಾರದಂಗೆ ಇರಬೇಕಾಗುತ್ತದೆ.
ಹಾಗೇ ಸೋಲದಂಗೆ ಇದ್ದ ಎಂದರೆ ಅವನ ಮನಸ್ಸು ಸಶಕ್ತ ಅಂತ ಕರೀತೀವಿ. ಇಂತಹ ಸಶಕ್ತ ಮನಸ್ಸಿನವನಿಗೆ ಮಾತ್ರ ಶಾಂತಿ ಸಿಗುತ್ತದೆ. ಸಶಕ್ತ ಮನಸ್ಸು, ಯೋಗಸ್ತ ಮನಸ್ಸು ಏಕೆ ಶಾಂತವಾಗಿರುತ್ತದೆ ಎಂದರೆ ಅಲ್ಲಿ ಜ್ಞಾನ ಹೊಳೆಯುತ್ತದೆ. ಜ್ಞಾನ ಉಂಟಾದರೆ ಅಮೃತತ್ವ ಸಿದ್ಧಿಸುತ್ತದೆ. ಅದಕ್ಕಾಗಿ ನಮ್ಮ ಮನಸ್ಸು ಸಬಲವಾಗಿರಬೇಕು. ಅಂದರೆ ನೋಡಿದ್ದೆಲ್ಲ ಬೇಕು ಎಂದು ಹೋಗಬಾರದು ಅಷ್ಟೇ. ನೋಡಿದ್ದೆಲ್ಲ ಬೇಕು ಎಂದುಕೊಳ್ಳುತ್ತಾ ಹೋದರೆ ಸೋಲುತ್ತೇವೆ. ಎಲ್ಲವೂ ಬೇಕು ಬೇಕು ಎಂದರೆ ಗತಿ ಹೇಗೆ? ನೋಡಬೇಕು, ಸಂತೋಷಪಡಬೇಕು ಮನುಷ್ಯ ಹಾಗೆ ಮನಸ್ಸನ್ನು ಗಟ್ಟಿಗೊಳಿಸಲು ಆತ್ಮದ ಸ್ಥೈರ್ಯವನ್ನು ಪಡೆದು ಮನಸ್ಸನ್ನು ಶುದ್ಧಗೊಳಿಸಿದಾಗ ಸಶಕ್ತ ಮನಸ್ಸಾಗುತ್ತದೆ.
ಕಂಡದ್ದಕ್ಕೆ ಜೋತು ಬೀಳುವುದು ಮನಸ್ಸಿನ ಗುಣ. ಅದು ಮನಸ್ಸಿನ ಕಸ. ಆದ್ದರಿಂದ ಮನಸ್ಸಿನಲ್ಲಿರುವಂತಹ ಹೊಲಸನ್ನು ತೆಗೆದು ಸ್ವಚ್ಛ ಮಾಡಿ ತನ್ನಷ್ಟಕ್ಕೆ ತಾನು ಆನಂದವಾಗಿರುವುದು ಮನಸ್ಸಿನ ಸಬಲತೆ. ಅದು ಸ್ವಚ್ಛತಾ. ಇಂತಹ ಸ್ವಚ್ಛ ಮನಸ್ಸು ಇರಬೇಕು.
ಬಸವಣ್ಣನವರು ಹೇಳುತ್ತಾರೆ
‘ಅಂತರಂಗ ಶುದ್ಧಿಯೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನ ಒಲಿಸುವ ಪರಿ’
ನಾವು ಆತ್ಮ ಜ್ಞಾನಿಗಳಾಗಬೇಕಾದರೆ ಒಳಗೆ, ಹೊರಗೆ ಸ್ವಚ್ಛತೆ ಬೇಕು. ಹೊರಗೆ ಮಾತುಗಳ ಸ್ವಚ್ಛತೆ, ಒಳಗೆ ಭಾವ ಸ್ವಚ್ಛತೆ. ಸಾಕಲ್ಲವೇ ಒಂದು ಚಂದದ ಜೀವನಕ್ಕೆ ಇದು?


ಮನುಷ್ಯನಲ್ಲಿ ಸೋತ ಮನಸ್ಸು, ಸಮಾಧಾನದ ಮನಸ್ಸು ಎರಡನ್ನೂ ಕಾಣಬಹುದು. ಆದರೆ ಮನುಷ್ಯ ಸಮಾಧಾನದ ಮನಸ್ಸನ್ನು ಇಟ್ಟಿಕೊಳ್ಳಬೇಕಾದರೆ ದುರ್ಬಲವಾಗಬಾರದು, ಸೋಲುಬಾರದು. ಎಷ್ಟೋ ಸಲ ಮನುಷ್ಯ ಕಣ್ಣಿನ ರೂಪಕ್ಕೆ ಸೋಲುತ್ತಾನೆ. ನೋಡುವ ರೂಪ ಚಂದದೆ ಎಂದು ಸೋಲುತ್ತೇವೆ. ಆ ಚಂದಿದ್ದವರೇ ಮನಸ್ಸನ್ನು ಮುಗಿಸಿ ಹೋಗುತ್ತಾರೆ.

andolanait

Recent Posts

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

7 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago

ಮೈಸೂರು: ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

ಮೈಸೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…

9 hours ago