ಎಡಿಟೋರಿಯಲ್

ಜಾಲಿವುಡ್ ಆಗಿ ಬದಲಾದ ಇನ್ನೋವೇಟಿವ್ ಚಿತ್ರನಗರಿ

 ಈಗಾಗಲೇ ಹಲವು ಬಾರಿ ಇದರ ಪ್ರಸ್ತಾಪ ಆಗಿದೆಆಗ ಬೆಂಗಳೂರಿನ ಹೊರವಲಯದಲ್ಲಿದ್ದ ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಜಾಗ ಮೀಸಲುಅಲ್ಲಿ ಅಡಿಗಲ್ಲು ಹಾಕಿದ್ದೇ ಮೊದಲಾದ ಸುದ್ದಿ ಹಳೆಯದುಹಾಗಂತ ನೀವು ಭಾರತದಲ್ಲಿರುವ ಪ್ರಮುಖ ಚಿತ್ರನಗರಿಗಳು ಯಾವುವು ಅಂತ ಗೂಗಲನ್ನು ಕೇಳಿ ನೋಡಿಬೆಂಗಳೂರಿನಲ್ಲೂ ಒಂದು ಚಿತ್ರನಗರಿ ಸಿಗುತ್ತದೆದೇಶದಲ್ಲಿರುವ ಐದು ಪ್ರಮುಖ ಚಿತ್ರನಗರಿಗಳನ್ನು ಬಹತೇಕ ಜಾಲತಾಣಗಳು ಗುರುತಿಸಿ ಹೇಳುತ್ತವೆ.

ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ರಾಮೋಜಿ ಚಿತ್ರನಗರಿಮಹಾ ರಾಷ್ಟ್ರದಲ್ಲಿರುವ ಮುಂಬೈ ಚಿತ್ರನಗರಿಕರ್ನಾಟಕದ ಬೆಂಗಳೂರಿನ ಇನ್ನೋವೇ ಟಿವ್ ಚಿತ್ರನಗರಿನೋಯ್ಡಾ ಚಿತ್ರನಗರಿಹಾಗೂ ತಮಿಳುನಾಡಿನ ಚೆನ್ನೈನಲ್ಲಿ ರುವ ಎಂಜಿಆರ್ ಚಿತ್ರನಗರಿ ಈ ಐದು ಹೆಸರುಗಳು ಈಗಲೂ ಇವೆಆದರೆ ಬೆಂಗಳೂರಿನ ಬಿಡದಿಯಲ್ಲಿರುವ ಇನ್ನೊವೇಟಿವ್ ಚಿತ್ರನಗರಿ ಬಾಗಿಲು ಮುಚ್ಚಿದ ವಿಷಯ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಆರ್ಥಿಕವಾಗಿ ನಷ್ಟವಾದ ಕಾರಣ ಈ ಸಂಸ್ಥೆಯ ಮಾಲೀಕರು ಮೂರ‍್ನಾಲ್ಕು ವರ್ಷಗಳ ಹಿಂದೆ ದಿವಾಳಿ ಘೋಷಿಸಿಕೊಂಡರುಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸರ್ಕಾರ ಮಧ್ಯವರ್ತಿಗಳನ್ನು ನೇಮಿಸುತ್ತದೆಇಲ್ಲೂ ಹಾಗಾಗಿತ್ತುಸಾಲದ ಮರುಪಾವತಿಗಾಗಿ ಅಲ್ಲಿನ ಸ್ಥಿರಚರ ಸೊತ್ತುಗಳನ್ನು ಮಾರುವಂತೆ ನ್ಯಾಯಾಲಯ ಆದೇಶಿಸಿತ್ತು ಎನ್ನಲಾಗಿದ್ದುಈ ಆಸ್ತಿಯನ್ನು ತಮಿಳುನಾಡಿನ ವೇಲ್ಸ್ ಗ್ರೂಪ್‌ನ ಸಂಸ್ಥಾಪಕ ಐಶರಿ ಕೆ.ಗಣೇಶ್ ಕೊಂಡುಕೊಂಡು ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಆಗಿ ಬದಲಾಯಿಸಿದರುಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಗಣೇಶ್ ಅದನ್ನು ಚಿತ್ರೀಕರಣದ ಅನುಕೂಲಗಳ ಜೊತೆಗೆ ಮನರಂಜನಾ ತಾಣವಾಗಿ ಬದಲಾಯಿಸಿದ್ದನ್ನು ಮೊನ್ನೆ ಅದರ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿದ್ದು ಹೀಗೆಬಹಳ ವರ್ಷಗಳ ಕನಸು ಇಂದು ನನಸಾಗಿದೆಕಳೆದ 30 ವರ್ಷಗಳಿಂದ ಶಿಕ್ಷಣಆರೋಗ್ಯಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆಮನೆ ಮಂದಿಯಲ್ಲಾ ಒಟ್ಟಿಗೆ ಸಮಯ ಕಳೆಯುವಂತಹ ಒಂದು ಥೀಮ್ ಪಾರ್ಕ್ ಮಾಡಬೇಕು ಎಂಬ ಆಸೆ ಇತ್ತುಹೀಗಿರುವಾಗಲೇಇನ್ನೋವೇಟೀವ್ ಫಿಲಂ ಸಿಟಿಯನ್ನು ಟೇಕ್ ಓವರ್ ಮಾಡುವ ಆಫರ್ ಬಂತುಕಳೆದ ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇತ್ತುಫಿಲಂಸಿಟಿಯನ್ನು ನವೀಕರಿಸಿರುವುದಷ್ಟೇ ಅಲ್ಲಹಲವು ಮನರಂಜನೆ ಆಟಗಳನ್ನು ಹೊಸದಾಗಿ ಪ್ರಾರಂಭಿಸಿದ್ದೇವೆ.

ಭಾರತೀಯ ಚಿತ್ರರಂಗಕ್ಕೆ ಇದನ್ನು ಸಮರ್ಪಿಸುತ್ತಿದ್ದೇವೆ.

ಈ ಪಾರ್ಕ್‌ನಲ್ಲಿ 33 ಮುಖ್ಯ ಆಕರ್ಷಣೆಗಳಿವೆವಾಟರ್ ರೈಡ್‌ಗಳಲ್ಲದ್ದೆಡೈನೋ ಪಾರ್ಕ್, 5 ರೆಸ್ಟೋರೆಂಟ್‌ಗಳುಎರಡು ರೆಸ್ಟೋ ಪಬ್‌ಗಳು ಹೀಗೆ ಮನೆಮಂದಿಯಲ್ಲಾ ಒಟ್ಟಾಗಿ ಕಾಲ ಕಳೆಯುವ ಸ್ಥಳವಿದುಈ ಜಾಲಿವುಡ್‌ನಲ್ಲಿ ಮನರಂಜನೆ ಖಚಿತ.

ಗಮನಿಸಿಇನ್ನೋವೇಟಿವ್ ಫಿಲಂ ಸಿಟಿ ಜಾಲಿವುಡ್ ಆಗಿದೆಹಾಲಿವುಡ್‌ನ ಪ್ರಭಾವ ಎಷ್ಟೆಂದರೆಸಿನಿಮಾ ಮಂದಿಗೆ ಈ‘ವುಡ್’ ರಹಿತ ಹೆಸರುಗಳ ಅಪಥ್ಯವೇನೋ ಎನ್ನುವಂತಿರುತ್ತದೆಬಾಲಿವುಡ್ಕಾಲಿವುಡ್ಟಾಲಿವುಡ್ಮಾಲಿವುಡ್ ಹೀಗೆ.. ಅಷ್ಟೇ ಏಕೆಸ್ಯಾಂಡಲ್‌ವುಡ್ಕನ್ನಡ ಚಿತ್ರರಂಗಕ್ಕೆ ಹೆಸರುಇದೀಗ ಜಾಲಿವುಡ್ಇದು ಅವರ ಪ್ರಕಾರಸಿನಿಮಾ ಹಿನ್ನೆಲೆಯ ಪಾರ್ಕ್ಇಡೀ ಕುಟುಂಬದ ವಾರಾಂತ್ಯದ ಮನರಂಜನೆಗೆ ಇದು ಸೂಕ್ತ ಸ್ಥಳ ಎನ್ನುವುದನ್ನು ಗಣೇಶ್ ಹೇಳುತ್ತಾರೆಇದರ ಜೊತೆಯಲ್ಲಿ ಚಿತ್ರೋದ್ಯಮದ ಚಿತ್ರೀಕರಣದ ಅಗತ್ಯಗಳನ್ನು ಪೂರೈಸಲು ಬೇಕಾದ ಸೌಲಭ್ಯಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಾಲವಾದ ಪರಿಸರಗಳೊಂದಿಗೆ ಸುಸಜ್ಜಿತವಾಗಿವೆನಮ್ಮ ಮೂರು ವಿಸ್ತಾರವಾದ ಸ್ಟುಡಿಯೋಗಳು ವಿಭಿನ್ನ ಶ್ರೇಣಿಯ ಉತ್ಪಾದನಾ ಅಗತ್ಯಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆನಿಮ್ಮ ಸಿನಿಮೀಯ ದೃಷ್ಟಿಯನ್ನು ವಾಸ್ತವಕ್ಕೆ ಪರಿವರ್ತಿಸಲು ಸೂಕ್ತವಾದ ವಾತಾವರಣವನ್ನು ಖಾತ್ರಿಪಡಿಸುತ್ತದೆ ಎನ್ನುತ್ತಾರೆ.

ವಿವಿಧ ವಿಸ್ತೀರ್ಣದ ಮೂರು ಚಿತ್ರೀಕರಣ ಅಂಗಣಗಳು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಇಲ್ಲಿವೆಮೊದಲನೆಯ ಅಂಗಣದ ವಿಸ್ತಾರ 25,000 ಚದರ ಅಡಿ ಇದ್ದರೆಎರಡನೆಯದು 12,000 ಚದರ ಅಡಿ ಇದೆಇಲ್ಲಿ ಬೇಕಾದಂತೆ ಸೆಟ್‌ಗಳನ್ನು ಹಾಕಬಹುದು ಎನ್ನುತ್ತಾರವರುಸಣ್ಣಪುಟ್ಟ ಚಿತ್ರೀಕರಣಗಳ ಅನುಕೂಲಕ್ಕಾಗಿ 6500 ಚದರ ಅಡಿಯ ಇನ್ನೊಂದು ಅಂಗಣವಿದೆಚಿತ್ರೀಕರಣ ಸೌಲಭ್ಯಗಳ ಕುರಿತಂತೆ ಪ್ರಸ್ತಾಪಿಸಿರುವ ಅವರ ಜಾಲತಾಣ ಚಿತ್ರೀಕರಣೋತ್ತರ ಸೌಲಭ್ಯಗಳ ಕುರಿತಂತೆ ಮೌನವಾಗಿದೆ.

ಮೊನ್ನೆ ಅದರ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ನಟ ಶಿವರಾಜ್‌ಕುಮಾರ್ಸಂಸದ ಡಿ.ಕೆ.ಸುರೇಶ್ಸ್ಥಳೀಯ ಶಾಸಕ ಹೆಚ್ಸಿ.ಬಾಲಕೃಷ್ಣ ಅವರುಗಳಿದ್ದರು. ‘ನಾನು ನಾಲ್ಕು ವರ್ಷಗಳಿಂದ ಯಾವುದೇ ಖಾಸಗಿ ಕಾರ್ಯಕ್ರಮಗಳ ಉದ್ಘಾಟನೆಗೆ ಕಾರ್ಯದೊತ್ತಡದಿಂದ ಹೋಗಿರಲಿಲ್ಲಇದೇ ಮೊದಲು ಬಂದಿರುವುದು. ‘ಜಾಲಿವುಡ್’ ಚೆನ್ನಾಗಿದೆಒಳ್ಳೆಯದಾಗಲಿಇಡೀ ಬೆಂಗಳೂರಿನವರು ಹಾಗೂ ಬೇರೆ ಊರಿನವರು ಬಂದು ಇದನ್ನು ವೀಕ್ಷಿಸಲಿ’ ಎಂದು ಹಾರೈಸಿದರು.

ಹಿಂದೆ ಇನ್ನೋವೇಟಿವ್ ಫಿಲಂ ಸಿಟಿ ಇದ್ದಾಗ ತಾವು ಬಂದು ಅಲ್ಲಿ ಹಾಡುಗಳ ಚಿತ್ರೀಕರಣಗಳಲ್ಲಿ ಪಾಲ್ಗೊಂಡ ನೆನಪನ್ನು ಶಿವರಾಜ್‌ಕುಮಾರ್ ಮೆಲುಕು ಹಾಕಿಹೊಸ ತಂಡಕ್ಕೆ ಶುಭಕೋರಿದರು ಶಿವರಾಜ್‌ಕುಮಾರ್.

ಹಿಂದೆ ಇನ್ನೋವೇಟಿವ್ ಫಿಲಂ ಸಿಟಿ ಇದ್ದಾಗಅದು ಮನರಂಜನಾ ತಾಣಚಿತ್ರೀಕರಣ ತಾಣ ಮಾತ್ರವಲ್ಲದೆಇನ್ನೋವೇಟಿವ್ ಫಿಲಂ ಅಕಾಡೆಮಿ ಮೂಲಕ ಚಲನಚಿತ್ರ ಶಿಕ್ಷಣ ವ್ಯವಸ್ಥೆಯೂ ಇತ್ತುಬೆಂಗಳೂರು ವಿವಿ ಇದಕ್ಕೆ ಮಾನ್ಯತೆ ನೀಡಿತ್ತುಈ ತರಗತಿಗಳು ಈಗ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಇರುವ ಜಾಗದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಸಿನಿಮಾ ತರಬೇತಿ ಸಂಸ್ಥೆಗಳಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಆದರ್ಶ ತರಬೇತಿ ಸಂಸ್ಥೆ ಮುಚ್ಚಿದೆಸಾಕಷ್ಟು ಮಂದಿ ಅಲ್ಲಿ ತರಬೇತಿ ಪಡೆದವರು ಕನ್ನಡ ಚಿತ್ರರಂಗದಲ್ಲಿ ಹೆಸರಾಗಿದ್ದಾರೆಸರ್ಕಾರದ ಅನುದಾನವೂ ಅದಕ್ಕೆ ದೊರೆಯುತ್ತಿತ್ತುಆ ಕಾರಣದಿಂದಲೇ ಅದಕ್ಕೆ ಹೆಸರಘಟ್ಟದಲ್ಲಿ ಹತ್ತು ಎಕರೆ ಜಾಗವನ್ನೂ ನೀಡಲಾಗಿತ್ತುಈಗ ಈ ಜಾಗಸಂಸ್ಥೆಗಳ ಕುರಿತಂತೆ ಮಾತನಾಡುವವರು ಯಾರೂ ಇದ್ದಂತಿಲ್ಲಅದರ ಸ್ಥಾಪಕರಲ್ಲಿ ಒಬ್ಬರಾದ ಬಿಆರ್‌ಪಿ ಸ್ವಾಮಿ ಅವರು ಈಗಿಲ್ಲಅವರ ಮಗ ಸಂಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರುಅವರಿಂದ ಆಡಳಿತವನ್ನು ಪಡೆದುಅವರನ್ನೇ ಹೊರಹಾಕಿದ ಪ್ರಸಂಗವೂ ನಡೆಯಿತು ಎನ್ನುವ ಮಾತೂ ಇತ್ತು. 48 ವರ್ಷಗಳ ಕಾಲ ನಡೆದ ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಆರ್.ನಾಗೇಂದ್ರ ರಾವ್ಬಿ.ವಿಕಾರಂತಗಿರೀಶ್ ಕಾಸರವಳ್ಳಿಟಿ.ಎಸ್.ನಾಗಾಭರಣಭಗವಾನ್ಎಸ್. ನಾರಾಯಣ್ ಮೊದಲಾದವರು ಪ್ರಾಂಶುಪಾಲರಾಗಿದ್ದರು.

ಈಗ ಚಲನಚಿತ್ರ ತರಬೇತಿ ಸಂಸ್ಥೆಗಳ ಹೆಸರಲ್ಲಿ ಹತ್ತಾರು ಇವೆಬೆರಳೆಣಿಕೆಯ ಕೆಲವನ್ನು ಹೊರತುಪಡಿಸಿದರೆಉಳಿದವು ಕೇವಲ ಹೆಸರಿಗೆ ಮಾತ್ರ ಇರುವವುಗಳುರಾಜ್ಯ ಚಲನಚಿತ್ರ ಅಕಾಡೆಮಿ ಚಲನಚಿತ್ರ ಶಿಕ್ಷಣದ ಕುರಿತಂತೆ ಯೋಚಿಸುವಯೋಜಿಸುವ ಕೆಲಸಗಳಾಗಬೇಕುಅದರ ಧ್ಯೇಯವಾಕ್ಯವಾದ ಚಲನಚಿತ್ರದಲ್ಲಿ ಶಿಕ್ಷಣಶಿಕ್ಷಣದಲ್ಲಿ ಚಲನಚಿತ್ರ’ ಎನ್ನುವುದನ್ನು ಕಾರ್ಯಗತ ಮಾಡುವ ಕೆಲಸ ಆಗಬೇಕು.

ಮೈಸೂರಿನಲ್ಲಿ ಚಿತ್ರನಗರಿಯ ಸ್ಥಾಪನೆ ಕುರಿತಂತೆ ಈಗಾಗಲೇ ಸರ್ಕಾರ ಹೇಳಿದೆಅಲ್ಲಿ ಮಾತ್ರವಲ್ಲಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆಅತ್ಯಾಧುನಿಕ ಸ್ಟುಡಿಯೊ ಸಂಕೀರ್ಣವನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಬಹುದುಆದರ್ಶ ಸಂಸ್ಥೆಗೆ ನೀಡಿದ ಜಾಗವನ್ನು ಚಿತ್ರರಂಗದ ಇನ್ಯಾವುದಾದರೂ ಸೌಲಭ್ಯ ಒದಗಿಸಲು ಬಳಸಬಹುದುಅಭಿಮಾನಿ ಸ್ಟುಡಿಯೊದಲ್ಲಿ ಕೂಡ.

ಆದರೆ ಈ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಡಲು ಒತ್ತಾಯಿಸುವವರು ಯಾರುಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂತಹ ವಿಷಯಗಳ ಕುರಿತಂತೆ ಆಸ್ಥೆ ಇದ್ದಂತಿಲ್ಲಚಿತ್ರೋದ್ಯಮಕ್ಕೆ ಬೇಕಾದ ಮೂಲಸೌಲಭ್ಯ ಒದಗಿಸುವ ಯೋಚನೆ ಅದಕ್ಕೆ ಇಲ್ಲಇರುತ್ತಿದ್ದರೆಹಳೆಯ ಕಟ್ಟಡ ಒಡೆಯುವ ವೇಳೆ ಇದ್ದ ಸಂಕೇತ್ ಎಲೆಕ್ಟ್ರಾನಿಕ್ ಸಂಸ್ಥೆಗೆ ಹೊಸ ಕಟ್ಟಡದಲ್ಲಿ ಜಾಗ ನೀಡುತ್ತಿತ್ತುಅಂತಹ ಯೋಚನೆ ಬರಲೇ ಇಲ್ಲ.

 

ಈಗ ನಿರ್ಮಾಪಕರ ಸಂಘದ ಹೊಸ ಕಟ್ಟಡ ವಾಣಿಜ್ಯ ಮಂಡಳಿಯ ಕೂಗಳತೆಯ ದೂರದಲ್ಲಿಗಾಂಧಿಭವನದ ಎದುರು ಸಿದ್ಧವಾಗುತ್ತಿದೆಅಲ್ಲಿ ಕೂಡ ಚಿತ್ರೋದ್ಯಮಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಬಹುದುಅಲ್ಲೊಂದು ಪೂರ್ವ ಪ್ರದರ್ಶನಗೃಹವನ್ನೋಸಂಕಲನಗ್ರಾಫಿಕ್ಸ್ಅನಿಮೇಶನ್‌ಗಳ ಕೇಂದ್ರವನ್ನೋ ಸ್ಥಾಪಿಸಿಚಿತ್ರೋದ್ಯಮಕ್ಕೆ ನೆರವಾಗಬಹುದುಆದರೆ ಆ ಸಾಧ್ಯತೆ ಕಡಿಮೆ ಎನ್ನಿ.

andolanait

Recent Posts

ಅರಣ್ಯ ಅಧಿಕಾರಿಗಳಿಂದಲೇ ಮೈಸೂರಿನಲ್ಲಿ ʻಮರಗಳ ಮಾರಣಹೋಮ’

ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು…

13 mins ago

ಮೈಸೂರಿನಿಂದ ಲಕ್ನೋಗೆ ಭವ್ಯ ಪೀಠ : UP ವಿಧಾನಸಭೆಯಲ್ಲಿ ಕರ್ನಾಟಕದ ಕಲಾ ಛಾಪು

ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್…

1 hour ago

ಮಾರ್ಚ್‌ನಲ್ಲಿ ಬಜೆಟ್‌ ಮಂಡನೆ : ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಗುರುವಾರದಿಂದ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಮಾರ್ಚ್.6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ…

2 hours ago

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ ಸೇದಿ ಫೋಟೋಶೂಟ್:‌ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲು

ಮೈಸೂರು: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ…

2 hours ago

ಮೆಟ್ರೋ ಪ್ರಯಾಣ ದರ ಏರಿಕೆ: ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥನೆ

ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,…

2 hours ago

ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮುಂದುವರಿದ ಹಸುಗಳ ಮರಣ ಮೃದಂಗ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಹಸುಗಳ ಮರಣ ಮೃದಂಗ ಮುಂದುವರೆದಿದ್ದು ಸಂಬಂಧಪಟ್ಟ ಪಶುಸಂಗೋಪನಾ…

3 hours ago