ಎಡಿಟೋರಿಯಲ್

ಮೈಸೂರು ಭಾಗದಲ್ಲಿ 5 ವರ್ಷಗಳಲ್ಲಿ 328 ಮಂದಿ ಬಾಲಕರು ಕಾನೂನು ಸಂಘರ್ಷಕ್ಕೊಳಗಾಗಿದ್ದಾರೆ

ಸಾಮಾಜಿಕ ಪಿಡುಗಾಗುತ್ತಿರುವ ‘ಬಾಲಾಪರಾಧ’ 

-ಬಿ.ಎನ್. ಧನಂಜಯಗೌಡ, ಮೈಸೂರು

‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಈ ಮಕ್ಕಳ ಭವಿಷ್ಯವೇ ರಾಷ್ಟ್ರದ ಅಡಿಗಲ್ಲು’ ಎಂಬ ಮಾತುಗಳ ನಡುವೆಯೂ ಪ್ರಸ್ತುತ ದಿನಗಳಲ್ಲಿ ಬಾಲಕರಲ್ಲಿ ಅಪರಾಧಿ ಪ್ರವೃತ್ತಿಗಳು ಕಂಡು ಬರುತ್ತಿವೆ. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಂದ ೫ ವರ್ಷಗಳಲ್ಲಿ

 (೨೦೨೨ ಜುಲೈವರೆಗೆ) ೩೨೮ ಮಂದಿ ಬಾಲಕರು ಕಾನೂನು ಸಂಘರ್ಷಕ್ಕೆ ಒಳಗಾಗಿ, ಸರ್ಕಾರಿ ಬಾಲಕರ ವೀಕ್ಷಣಾಲಯವನ್ನು ಸೇರಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ, ಇತ್ತೀಚೆಗೆ ಮೈಸೂರಿನಲ್ಲಿ ತಂದೆಯನ್ನು ೧೬ ವರ್ಷದ ಮಗನೇ ಮನೆಯಲ್ಲಿ ಹತ್ಯೆ ಮಾಡಿದ್ದ. ಬಳಿಕ ಯಾರೋ ಅಪರಿಚಿತರು ಬಂದು ಹತ್ಯೆ ಮಾಡಿದರು ಎಂದು ಕಥೆ ಕಟ್ಟಿದ್ದ. ಆದರೆ, ಪೊಲೀಸರು ಕೇಳುವ ನಾನಾ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಂತಿಮವಾಗಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಇದಕ್ಕೆ ಅವನು ಕೊಟ್ಟ ಕಾರಣ ‘ಅಪ್ಪ ಒಂದು ರೀತಿಯ ಕಿರಿಕಿರಿ ಮನುಷ್ಯ, ಆತನ ಅತಿಯಾದ ಶಿಸ್ತು ನನಗೆ ಹಿಡಿಸುತ್ತಿರಲಿಲ್ಲ. ಹಾಗಾಗಿಯೇ, ಅಪ್ಪನನ್ನು ಕೊಲೆ ಮಾಡಿದೆ’. ಈ ಬಾಲಕನೀಗ ಕಾನೂನು ಸಂಘರ್ಷಕ್ಕೆ ಒಳಪಟ್ಟು ಸರ್ಕಾರಿ ಬಾಲಕರ ವೀಕ್ಷಣಾಲಯದಲ್ಲಿ ಇದ್ದಾನೆ. ಇದೊಂದು ಉದಾಹರಣೆಯಷ್ಟೆ ಪ್ರಕರಣವಷ್ಟೆ. ಆದರೆ, ನಾನಾ ಪ್ರಕರಣಗಳಲ್ಲಿ ಅನೇಕ ಬಾಲಕರು ಅಪರಾಧವೆಸಗಿ ಕಾನೂನು ಸಂಘರ್ಷಕ್ಕೆ ಒಳಪಟ್ಟಿದ್ದಾರೆ. ನಾಲ್ಕು ಜಿಲ್ಲೆಗಳಿಂದ ೨೦೨೧ರಲ್ಲಿ ೭೫, ೨೦೨೨ ರಲ್ಲಿ (ಜುಲೈವರೆಗೆ) ೪೩ ಮಂದಿ ಕಾನೂನು ಸಂಘರ್ಷಕ್ಕೆ ಒಳಪಟ್ಟವರನ್ನು ಮೈಸೂರಿನಲ್ಲಿ ಇರುವ ಸರ್ಕಾರಿ ಬಾಲಕರ ವೀಕ್ಷಣಾಲಯ ಕೇಂದ್ರಕ್ಕೆ ಬಿಡಲಾಗಿದೆ. ಈ ಪೈಕಿ ಬಹುತೇಕರು ೧೬ ಮತ್ತು ೧೭ ವರ್ಷದವರಾಗಿದ್ದಾರೆ. ಪೋಕ್ಸೋ, ಕಳ್ಳತನ, ಜಗಳದ ಆರೋಪಗಳಲ್ಲಿ ಬಂದವರೇ ಹೆಚ್ಚಿದ್ದಾರೆ ಎನ್ನುತ್ತಾರೆ ವೀಕ್ಷಣಾಲಯದ ಅಧೀಕ್ಷಕ ರಘು.

ಮಕ್ಕಳ ಅಪರಾಧಕ್ಕೆ ಕಾರಣಗಳೇನು?

ಕಾನೂನು ಸಂಘರ್ಷಕ್ಕೆ ಒಳಗಾಗುವವರ ಪೈಕಿ ೧೬ ರಿಂದ ೧೮ ವರ್ಷದ ಹುಡುಗರೇ ಹೆಚ್ಚಿದ್ದಾರೆ. ಬಾಲಕರು ಹೀಗೆ ನಾನಾ ಅಪರಾಧಗಳಲ್ಲಿ ಭಾಗಿಯಾಗಲು ಅನೇಕ ಕಾರಣಗಳು ಇವೆ. ಕೌಟುಂಬಿಕ ಪರಿಸರ ಸರಿಯಿಲ್ಲದಿರುವುದು, ಸಹವಾಸ ದೋಷ, ಬಡತನ, ಅಜ್ಞಾನ, ಶಿಸ್ತಿನ ಹೆಸರಲ್ಲಿ ಮಕ್ಕಳನ್ನು ಅತಿಯಾಗಿ ಶಿಕ್ಷಿಸುವುದು ಮತ್ತು ಅತಿಯಾದ ಮುದ್ದು, ಮಕ್ಕಳ ನಡುವೆ ಪಾಲಕರು, ಶಿಕ್ಷಕರು ಮಾಡುವ ತಾರತಮ್ಯ ಮತ್ತು ತಿರಸ್ಕಾರ, ಬುದ್ಧಿ ಮಾಂದ್ಯತೆ ಮತ್ತು ಮಾನಸಿಕ ದೌರ್ಬಲ್ಯ , ಭಾವತಿರೇಕಗಳು ಹಾಗೂ ಮನೋರೋಗಗಳು, ಮಾದಕ ವ್ಯಸನಗಳ ದಾಸರಾಗುವುದು, ಅಪ್ರಾಪ್ತ ಪ್ರೀತಿಗೆ ಬೀಳುವುದು.

ಹೀಗೊಂದು ಕಥೆ

ಬಾಲಕರು ಎಸಗುವ ಅನೇಕ ಅಪರಾಧಗಳು ಹಠಾತ್ ಪ್ರವೃತ್ತಿಯಿಂದ (ಇಮ್‌ಪಲ್ಸಿವ್ ವರ್ತನೆ- ಜಿಞಟ್ಠ್ಝಜಿಛಿ) ಘಟಿಸುತ್ತವೆ. ಇದು ಕೆಲವು ವರ್ಷದ ಹಿಂದೆ ನಗರದಲ್ಲಿಯೇ ನಡೆದ ಘಟನೆ. ಆತ ಹೈಸ್ಕೂಲ್ ಓದುತ್ತಿದ್ದ. ಪಕ್ಕದ ಮನೆಯ ಬಾಲಕಿಯನ್ನು ಕರೆತರುವುದಾಗಿ ತನ್ನ ಸ್ನೇಹಿತರೊಂದಿಗೆ ಪಂದ್ಯ ಕಟ್ಟುತ್ತಾನೆ. ತನ್ನದೇ ಬೀದಿಯ ಬಾಲಕಿಯನ್ನು ಪುಸಲಾಯಿಸಿ ಮನೆಯ ಮಹಡಿಗೆ ಕರೆ ತರುವ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾನೆ. ಈ ವಿಷಯವನ್ನು ಮನೆಯವರಿಗೆ ಹೇಳುತ್ತೇನೆ ಎಂದ ಆಕೆಯನ್ನು ಹಿಂದುಮುಂದು ನೋಡದೆ ಹಠಾತ್ ಉಸಿರುಗಟ್ಟಿಸಿ ಸಾಯಿಸಿ, ಸುಟ್ಟು ಹಾಕಿ ಪೊಲೀಸರಿಗೆ ಸಿಕ್ಕಿಬೀಳುತ್ತಾನೆ. ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಳ್ಳುತ್ತಾನೆ. ಈ ಘಟನೆಗೂ ಮುನ್ನವೇ ಒಮ್ಮೆ ಈತ ಬಾಲನ್ಯಾಯ ಮಂಡಳಿಯ ಮುಂದೆ ಹಾಜರಾಗಿರುತ್ತಾನೆ. ಆ ನಂತರವೂ ಇಂತಹ ಒಂದು ತಪ್ಪು ಮಾಡಿ ಬಿಡುತ್ತಾನೆ. ನಂತರ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ವೀಕ್ಷಣಾಲಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಆನಂತರ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುವ ಆತ ನಡೆದದೆಲ್ಲ ಒಂದು ಕನಸು ಎನ್ನುತ್ತಾನೆ. ಈಗ ಒಬ್ಬ ಜವಾಬ್ದಾರಿ ನಾಗರಿಕನಾಗಿದ್ದಾನೆ ಎನ್ನುತ್ತಾರೆ ಆತನನ್ನು ಕೌನ್ಸ್ಸಿಲಿಂಗ್ ಮಾಡಿದ ವಕೀಲರೊಬ್ಬರು. ಹೀಗೆ ಮುಂದೆ ಪರಿಣಾಮ ಏನಾಗಲಿದೆ ಎಂಬ ಅರಿವೆ ಇಲ್ಲದೆ. ಹಿಂದೆ ಮುಂದೆ ನೋಡದೆ ಹಠಾತ್ತನೆ ಮಾಡುವ ತಪ್ಪು ಮಾಡುವುದನ್ನೇ ಇಮ್‌ಪಲ್ಸಿವ್ ವರ್ತನೆ ಎನ್ನುತ್ತಾರೆ.

ಸಾಮಾಜಿಕ ಪಿಡುಗಾಗುತ್ತಿದೆ:

ದೇಶದ ಭದ್ರ ಅಡಿಗಲ್ಲಾಗಬೇಕಾದ ಬಾಲಕರಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು, ಬಾಲಕರಲ್ಲಿನ ಅಪರಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದ್ದು, ದೇಶದ ಅಡಿಗಲ್ಲನ್ನೇ ಸಡಿಲಿಸುತ್ತಿರುವ ಪ್ರಮುಖ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿದೆ. ಬಾಲಾಪರಾಧವು ಇಂದು ಜಗತ್ತಿನ ಕೋಟಿಗಟ್ಟಲೆ ಮಕ್ಕಳ ವ್ಯಕ್ತಿತ್ವವನ್ನು ವಿನಾಶ ಮಾಡುತ್ತಿರುವ ಒಂದು ಸಾಮಾಜಿಕ ಸಮಸ್ಯೆಯಾಗಿದೆ. ಇದನ್ನು ಎಳೆಎಳೆಯಾಗಿ ಅರ್ಥೈಸಿ ಅದರ ನಿವಾರಣೋಪಾಯಗಳನ್ನು ತಿಳಿದುಕೊಳ್ಳುವ ಗಂಭೀರ ಪ್ರಯತ್ನಗಳನ್ನು ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ.

ಬಾಲಕರು ಭಾಗಿಯಾದ ಅನೇಕ ಪ್ರಕರಣಗಳನ್ನು ನೋಡಿದಾಗ ಸುತ್ತಲಿನ ಪರಿಸರ ಕಲುಷಿತವಾಗಿರುವುದು. ಕುಟುಂಬದಲ್ಲಿ ತಂದೆ, ತಾಯಿ ಸರಿಯಿಲ್ಲದಿರುವುದು, ಸಹವಾಸ ದೋಷ ಸರಿಯಿಲ್ಲದಿರುವುದು, ಪಾಲಕರೇ ಇಲ್ಲದಿರುವುದು ಕಂಡು ಬಂದಿದೆ. ಹೀಗಿರುವಾಗ ಅವರ ಬಾಲ್ಯ ಸಾಕಷ್ಟು ಸಮಸ್ಯೆಯಿಂದ ಕೂಡಿರುತ್ತದೆ. ಅವರಿಗೆ ಸರಿಯಾದ ಶಿಕ್ಷಣ ಮತ್ತು ಮಾರ್ಗದರ್ಶನ ಇರುವುದಿಲ್ಲ. ಇದು ಅವರನ್ನು ಅಪರಾಧಕ್ಕೆ ಪ್ರಚೋದಿಸುತ್ತದೆ. ಹಾಗಾಗಿ, ಮಕ್ಕಳು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದಾಗಲೇ ಅವರನ್ನು ತಿದ್ದುವ ಕೆಲಸ ಮಾಡಬೇಕು. ಜೀವನದ ಮೌಲ್ಯಗಳ ಬಗ್ಗೆ ಬುದ್ಧ್ದಿವಂತಿಕೆಯಿಂದ ತಿಳಿಸುವ ಪ್ರಯತ್ನವಾಗಬೇಕು ಎನ್ನುತ್ತಾರೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್.

andolana

Recent Posts

ಬಿಜೆಪಿ ಸಂಸದರಿಂದ ನನ್ನ ಮೇಲೆ ಹಲ್ಲೆ ಆಗಿದೆ: ಸ್ಪೀಕರ್‌ಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸಂಸತ್‌ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…

4 mins ago

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಂವಿಧಾನಿಕ ಪದ ಬಳಸಿದ ಸಿ.ಟಿ.ರವಿ?

ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್‌ ಶಾ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…

27 mins ago

ಅಮಿತ್ ಶಾ ಹೇಳಿಕೆ ಖಂಡಿಸಿ ವಿಧಾನಸಭೆಯಲ್ಲೂ ಪ್ರತಿಭಟನೆ

ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…

56 mins ago

ಅಕ್ರಮ ವಾಸಿಗಳ ಪತ್ತೆಗೆ ಸರ್ಕಾರದಿಂದ ಹೊಸ ಕ್ರಮ: ಸಚಿವ ಜಿ.ಪರಮೇಶ್ವರ್‌ ಮಾಹಿತಿ

ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…

1 hour ago

ಮಂಡ್ಯ ನುಡಿಜಾತ್ರೆಗೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ

ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು,…

2 hours ago

ಅಂಬೇಡ್ಕರ್‌ ಕುರಿತು ಅಮಿತ್‌ ಶಾ ವಿವಾದಾತ್ಮಕ ಹೇಳಿಕೆ: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ: ಬಾಬಾಸಾಹೇಬ್‌ ಅಂಬೇಡ್ಕರ್‌ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…

2 hours ago