ಎಡಿಟೋರಿಯಲ್

ಭರವಸೆ ಮೂಡಿಸುತ್ತಿದೆ ‘ನಾನ್-ಫಂಜಿಬಲ್ ಟೋಕನ್’ ಹೊಸ ವಿಧಾನ

ಕಾರ್ತಿಕ್ ಕೃಷ್ಣ

ಅಂತರ್ಜಾಲದಲ್ಲಿ ವಸ್ತುಗಳನ್ನು ಖರೀದಿಸುವುದಕ್ಕೆ ಅಥವಾ ಅದರ ಸಂಪೂರ್ಣ ಹಕ್ಕನ್ನು ಪಡೆಯುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೊಸತೊಂದು ಡಿಜಿಟಲ್ ಫೈಲ್ ಫಾರ್ಮ್ಯಾಟ್ ಕ್ರಾಂತಿಕಾರಿಯಾಗಿ ಬಳಸಲ್ಪಡುತ್ತಿದೆ. ‘ನಾನ್-ಫಂಜಿಬಲ್ ಟೋಕನ್’ ಅಥವಾ ಸಂಕ್ಷಿಪ್ತವಾಗಿ NFT ಎಂದು ಕರೆಯಲ್ಪಡುವ ಈ ಹೊಸ ವಿಧಾನ ಸಾಕಷ್ಟು ಭರವಸೆ ಮೂಡಿಸುತ್ತಿದೆ ಕೂಡ. ಕಲಾವಿದರು ಮತ್ತು ಪ್ರಕಾಶಕರು ಅದಾಗಲೇ ಈ ಹೊಸ ತಂತ್ರಜ್ಞಾನವನ್ನು ಪ್ರಯೋಗಿಸಲು ಪ್ರಾರಂಭಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡ ‘ICC Crictos’ ಹೆಸರಿನಲ್ಲಿ NFT ಗಳನ್ನು ಮಾರಾಟ ಮಾಡುತ್ತಿದೆ. ಹಾಗೆಯೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್, ‘Digital Items’ ಎಂಬ ಆಯ್ಕೆಯಡಿಯಲ್ಲಿ, ಈಜಿಜಜಿಠಿZ ಐಠಿಛಿಞo ಅಂದರೆ ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಚಿತ್ರ, ಹಾಡು ಇತ್ಯಾದಿಗಳನ್ನು ಮಾರಾಟ ಮಾಡುವಂತಹ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

ಮೊದಲು NFT ಬೆನ್ನೆಲುಬಾಗಿರುವ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು. ‘ಬ್ಲಾಕ್‌ಚೈನ್’ ಎಂದು ಕರೆಯಲ್ಪಡುವ ತಂತ್ರಜ್ಞಾನವನ್ನು ಸರಳವಾಗಿ ವಿಶ್ಲೇಷಿಸುವುದಾದರೆ, ಇದೊಂದು ಎಲ್ಲರಿಗೂ ಲಭ್ಯವಿರುವ ಲೆಡ್ಜರ್(ಖಾತೆ ಪುಸ್ತಕ) ಅಥವಾ ತಂತ್ರಜ್ಞಾನ ಪರಿಭಾಷೆಯಲ್ಲಿ ಹೇಳುವುದಾದರೆ ದತ್ತಾಂಶ(ಡೇಟಾ). ಅದರರ್ಥ ಎಲ್ಲರಿಗೂ ಮುಕ್ತವಾಗಿ ದೊರೆಯುತ್ತದೆ ಎಂದಲ್ಲ. ಬ್ಲಾಕ್‌ಚೈನಿಗೆ ಒಳಪಟ್ಟ ಸದಸ್ಯರಿಗೆ ಮಾತ್ರ ಇದು ಲಭ್ಯ ಮತ್ತು ಮುಕ್ತವಾಗಿರುತ್ತದೆ. ಇದು ಒಂದು ರೀತಿಯ ಡಿಜಿಟಲ್ ಲೆಡ್ಜರ್ ತಂತ್ರಜ್ಞಾನವಾಗಿದ್ದು, ಮಾಹಿತಿಯನ್ನು, ವಹಿವಾಟುಗಳನ್ನು ಬದಲಾಯಿಸಲು, ಹ್ಯಾಕ್ ಮಾಡಲು ಅಥವಾ ಮೋಸ ಮಾಡಲು ಕಷ್ಟವಾಗುವ ರೀತಿಯಲ್ಲಿ ಡೇಟಾವನ್ನು ಹೊಂದಿರುತ್ತದೆ. ಈ ವಹಿವಾಟುಗಳನ್ನು, ಬ್ಲಾಕ್‌ಚೈನ್‌ನಲ್ಲಿ ಕಂಪ್ಯೂಟರ್ ಸಿಸ್ಟಮ್‌ಗಳ ಸಂಪೂರ್ಣ ನೆಟ್‌ವರ್ಕ್ ಜೊತೆಗೆ ವಿತರಿಸಲಾಗುತ್ತದೆ ಮತ್ತು ನಕಲು ಮಾಡಲಾಗುತ್ತದೆ. ಬ್ಲಾಕ್‌ಚೈನ್‌ನಲ್ಲಿ ಹೊಸ ವಹಿವಾಟು ಮಾಡಿದಾಗಲೆಲ್ಲಾ, ಅದರ ದಾಖಲೆಗಳನ್ನು ಭಾಗವಹಿಸುವವರ ಲೆಡ್ಜರ್‌ಗೆ ಸೇರಿಸಲಾಗುತ್ತದೆ. ಮುಖ್ಯವಾಗಿ, NFTಗಳು ಅಸೆಟ್‌ಗಳ ಸಂಪೂರ್ಣ ಡೇಟಾವನ್ನು ಹೊಂದಿರುವುದಿಲ್ಲ ಅಥವಾ ಅದರ ಹಕ್ಕುಸ್ವಾಮ್ಯ ಪೂರ್ತಿಯಾಗಿ ಖರೀದಿಸಿದವರಿಗೆ ವರ್ಗವಾಗಿರುವುದಿಲ್ಲ. ಸಾಮಾನ್ಯವಾಗಿ, NFTಗಳಲ್ಲಿ ಒಂದು ಪ್ರತ್ಯೇಕ ಕಂಪ್ಯೂಟರ್ ನೆಟ್‌ವರ್ಕ್‌ನಲ್ಲಿ ಸಂಗ್ರಹವಾಗಿರುವ ಸ್ವತ್ತಿಗೆ ಲಿಂಕ್ ಮಾಡುವ ಖ್ಕಿಔ ಅಡಗಿರುತ್ತದೆ ಅಷ್ಟೇ. ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಬಹುದಾದ ಯಾವುದನ್ನೂ ಎನ್‌ಎಫ್‌ಟಿ ಮಾಡಬಹುದು. ನೀವು ರಚಿಸಿದ ಪೇಂಟಿಂಗ್, ಫೋಟೊ, ವಿಡಿಯೋ, ಜಿಫ್, ಸಂಗೀತ, ಸುಮ್ಮನೇ ಕ್ಲಿಕ್ಕಿಸಿದ ಒಂದು ಸೆಲ್ಛಿ, ನಿಮ್ಮ ಒಂದು ಟ್ವೀಟ್ ಅನ್ನು ಕೂಡ ಎನ್‌ಎಫ್‌ಟಿ ಎಂದು ಘೋಷಿಸಬಹುದು.

ಸಾಮಾನ್ಯವಾಗಿ ನಾವು ಗೂಗಲ್‌ನಲ್ಲಿ ನಮಗೆ ಬೇಕಾದ ಫೋಟೊವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತೇವೆ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತೇವೆ. ಈ ಕಲಾಕೃತಿಗಳನ್ನೂ ಹೀಗೇ ಸುಲಭವಾಗಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದಲ್ಲವೇ? ಇವುಗಳಿಗೆ ಕೋಟ್ಯಂತರ ಹಣ ನೀಡುವ ಅಗತ್ಯವಿದೆಯೇ ಎಂಬ ನಿಮಗನ್ನಿಸಬಹುದು. ಆದರೆ ಅದು ಕೃತಿಚೌರ್ಯದಂತಾಗುತ್ತದೆ. ಕಾಪಿರೈಟ್ ಇರುವ ಚಿತ್ರವನ್ನು ಹಣ ಕೊಟ್ಟು ಎಷ್ಟು ಮಂದಿ ಬೇಕಾದರೂ ಖರೀದಿಸಬಹುದು. ಆದರೆ ಎನ್‌ಎಫ್‌ಟಿಯನ್ನು ಅದರ ಮೌಲ್ಯ ನೀಡಿ ಒಬ್ಬ ಮಾತ್ರವೇ ಖರೀದಿಸಬಹುದು. ಒಂದು ವೇಳೆ ಇವುಗಳ ಚಿತ್ರ ಅಥವಾ ಸ್ಕ್ರೀನ್‌ಶಾಟ್ ತೆಗೆದು ಯಾರಾದರೂ ಬಳಸಿಕೊಂಡರೆ, ಅಂತಹವರ ಮೇಲೆ ಎನ್‌ಎಫ್‌ಟಿ ಹೊಂದಿದವರು ಕೋಟ್ಯಂತರ ಮೌಲ್ಯದ ಕೇಸು ಹಾಕಬಹುದು! ಎನ್‌ಎಫ್‌ಟಿಯನ್ನು ಕ್ರಿಪ್ಟೋ ಕರೆನ್ಸಿಯ ಮೂಲಕ ಮಾತ್ರ ಖರೀದಿಸಬಹುದು. ಹೀಗಾಗಿ ನಮ್ಮಲ್ಲಿ ಒಂದು ಡಿಜಿಟಲ್ ವ್ಯಾಲೆಟ್ ಇರಲೇಬೇಕು. ಈ ವ್ಯಾಲೆಟ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಮತ್ತು ಎನ್‌ಎಫ್‌ಟಿಯನ್ನು ಸಂಗ್ರಹಿಸಿಡಬಹುದಾಗಿದೆ.

ಕಳೆದ ಎರಡು ವರ್ಷಗಳಲ್ಲಿ NFTಗಳು ಅಪಾರ ಪ್ರಮಾಣದ ಹಣವನ್ನು ಆಕರ್ಷಿಸಿವೆ! ಅಂದರೆ ಜನರು ಮುಗಿಬಿದ್ದು ಇದರ ಮೇಲೆ ಹೂಡಿಕೆ ಮಾಡಿದ್ದಾರೆ. ಮಾರ್ಚ್ ೨೦೨೧ರಲ್ಲಿ, ಡಿಜಿಟಲ್ ಆರ್ಟಿಸ್ಟ್ ಆಗಿರುವ ಬೀಪಲ್ ಎಂಬಾತ ತನ್ನ ಡಿಜಿಟಲ್ ಕಲೆಯನ್ನು ಹರಾಜಿನಲ್ಲಿ ೬೯ ಮಿಲಿಯನ್ ಡಾಲರಿಗೆ NFT ಮಾರಾಟ ಮಾಡಿದರು. ಬೋರ್ಡ್ ಏಪ್ ಯಾಚ್ ಕ್ಲಬ್, ಕಾರ್ಟೂನ್‌ಗಳನ್ನು ಚಿತ್ರಿಸಿ ಅದನ್ನು NFTಗಳಲ್ಲಿ ಹರಾಜು ಹಾಕಿದ್ದರು. ಒಂದೊಂದು ಕಾರ್ಟೂನು ಸುಮಾರು ಹತ್ತು ಸಾವಿರ ಡಾಲರ್‌ಗಳಿಗೆ ಮಾರಾಟವಾಗಿತ್ತಂತೆ! ಚಿತ್ರಗಳು, ವಿಡಿಯೋಗಳು ಮತ್ತು ಇತರ ಡಿಜಿಟಲ್ ಸ್ವತ್ತುಗಳನ್ನು ಆನ್‌ಲೈನ್ ಸಂಗ್ರಹಣೆಗಳನ್ನಾಗಿ ಮಾರಾಟ ಮಾಡಲು ಅವಕಾಶ ನೀಡುವ ಮೂಲಕ NFTಗಳು ಕಲಾವಿದರಿಗೆ ಹೊಸ ಆದಾಯ ಮಾದರಿಯನ್ನು ಒದಗಿಸುತ್ತವೆ. ರಷ್ಯಾದ ವಿರುದ್ಧದ ತನ್ನ ಯುದ್ಧದ ಪ್ರಯತ್ನವನ್ನು ಬೆಂಬಲಿಸಲು ಉಕ್ರೇನ್ ಕಳೆದ ವರ್ಷ NFT ಹರಾಜಿನಲ್ಲಿ ಹತ್ತಾರು ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿತ್ತು ಎಂಬುದು ಗಮನಾರ್ಹ ವಿಚಾರ.

ಇಷ್ಟೊಂದು ಸುರಕ್ಷಿತವಾಗಿರುವ NFTಗಳನ್ನೂ ಆನ್‌ಲೈನ್ ಚೋರರು ಬಿಟ್ಟಿಲ್ಲ. ಸ್ಕ್ಯಾಮರ್‌ಗಳು ಬ್ಲಾಕ್‌ಚೈನ್ ಬಳಸಿಕೊಂಡು, ಫಿಶಿಂಗ್ ದಾಳಿಗಳನ್ನು ನಡೆಸಿ ಜನರ ಡಿಜಿಟಲ್ ವ್ಯಾಲೆಟ್‌ಗಳನ್ನು ಖಾಲಿ ಮಾಡಿದ್ದಾರೆ. ೨೦೨೨ರಲ್ಲೇ, ೧೦೦ ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ NFTಗಳನ್ನು ಕಳವು ಮಾಡಲಾಗಿದೆಯಂತೆ! NFT ವಹಿವಾಟುಗಳು ವಿಕೇಂದ್ರೀಕೃತವಾಗಿರು ವುದರಿಂದ Third party ತಂತ್ರಜ್ಞಾನವನ್ನು ಬಳಸಿ ಅಕ್ರಮ ವರ್ಗಾವಣೆಗಳನ್ನು ತಡೆಹಿಡಿಯಲು ಕಷ್ಟವಾಗುತ್ತದೆ.

ಬಹುಶಃ ೨೦೦೦ರ ದಶಕದ ಆರಂಭದಲ್ಲಿ ಉಂಟಾದ ಡಾಟ್-ಕಾಮ್ ಕ್ರ್ಯಾಶ್‌ನಂತೆ, ಅನೇಕ nft ಸ್ಟಾರ್ಟ್ ಅಪ್‌ಗಳು ಮಾರುಕಟ್ಟೆಯ ತೀವ್ರ ಏರಿಳಿತದಿಂದ ನಶಿಸಿ ಹೋಗಬಹುದು. ಛಲದಂಕಮಲ್ಲನಂತೆ ಉಳಿದಿರುವ ಮಿಕ್ಕ ಸ್ಟಾರ್ಟ್‌ಅಪ್‌ಗಳು ಮಾತ್ರ ಡಿಜಿಟಲ್ ಜಗತ್ತನ್ನು ಮರುನಿರ್ಮಿಸಿ ಇತಿಹಾಸ ಬರೆಯಬಲ್ಲವು.

andolanait

Recent Posts

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

4 hours ago