ಎಡಿಟೋರಿಯಲ್

ಮುಸ್ಲಿಂ ಹಾಸ್ಟೆಲಿನಲ್ಲಿ ಸೀಟು ಸಿಕ್ಕಿದ್ದು

   ಎಂಎ ಓದಲು ಊರಿಗೆ ಅರ್ಧತಾಸಿನ ಪಯಣದಷ್ಟು ಸನಿಹದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪಿಜಿ ಸೆಂಟರಿಗೆ ಹೋಗಬೇಕೆಂದು ಆಲೋಚಿಸಿದ್ದೆನನ್ನ ಗುರುಗಳು ನೀನು ಮೈಸೂರಿಗೇ ಹೋಗತಕ್ಕದ್ದುಹಾ.ಮಾ.ನಾಯಕಪ್ರಭುಶಂಕರಚನ್ನಯ್ಯಜಿ.ಎಚ್.ನಾಯಕ ಮುಂತಾದವರಿದ್ದಾರೆ ಎಂದರುಅಪ್ಪನಿಗೆ ಮಗ ಲಕ್ಕವಳ್ಳಿಯಲ್ಲಿ ಓದುವುದು ಮರ್ಯಾದೆಗೆ ಕುಂದೆನಿಸಿರಬೇಕು. ‘ಎಷ್ಟು ಓದ್ತೀಯೊ ಓದುಎಲ್ಲಿಗೆ ಹೋಗ್ತಿಯೊ ಹೋಗುನಾನಿದೀನಿ’ ಎಂದಮೈಸೂರಿಗೆ ಹೋದೆವಿಶ್ವವಿದ್ಯಾನಿಲಯದ ಹಾಸ್ಟೆಲ್ ತಿಂಗಳಿಗೆ ರೂ.250ಅದರ ಮುಂದೆ ಮುಸ್ಲಿಂ ಹಾಸ್ಟೆಲಿನ ರೂ.120 ಸೋವಿ ಅನಿಸಿತುವರ್ಷಂಪ್ರತಿ ರೂಐನೂರಂತೆ ಸಬ್ಜೆಕ್ಟ್ ಸ್ಕಾಲರ್‌ಶಿಪ್ ಸಿಗುತ್ತದೆಪುಸ್ತಕದ ಗೌರವ ಸಂಭಾವನೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ರೂ. 500 ಕೊಟ್ಟಿದೆಅಪ್ಪ ತಿಂಗಳಾ ರೂನೂರು ಕಳಿಸಿದರೆ ಸಾಕುನಿಭಾಯಿಸಬಲ್ಲೆ ಅನಿಸಿತುಈ ಲೆಕ್ಕಾಚಾರದಲ್ಲಿ ಕನ್ನಡ ಎಂಎಗೆ ಸೇರಿಕೊಂಡೆಅಡ್ಮಿಶನ್ ರಶೀದಿ ಹಿಡಿದು ಮುಸ್ಲಿಂ ಹಾಸ್ಟೆಲಿಗೆ ಹೋದೆಕಚೇರಿಯಲ್ಲಿ ವಾರ್ಡನ್ ಇರಲಿಲ್ಲಗುಮಾಸ್ತರಿಗೆ ಕೇಳಲು ಕ್ಯಾಂಪಸ್ಸಿನ ವಿಶಾಲ ಮೈದಾನದಲ್ಲಿ ವಾಕಿಂಗ್‌ಸ್ಟಿಕ್ ಹಿಡಿದು ವಿಹಾರ ಮಾಡುತ್ತಿದ್ದ ಒಬ್ಬ ವೃದ್ಧರನ್ನು ತೋರಿಸಿದರುಅವರನ್ನು ಹೋಗಿ ಅಡ್ಡಗಟ್ಟಿ ನಮಸ್ಕರಿಸಿದೆ:

ಸಲಾಂ ಅಲೈಕುಂ

ವಾಲೇಕುಂ ಸಲಾಂಕೋನ್ ಬ ತೂಕ್ಯಾನಾಮ್ಕಹಾಸಿ ಆಯಾ?”

ಸರ್ತರೀಕೆರೆ ಸೆ ಆಯಾ ಹ್ಞೂಂಎಂಎ ಕೋರ್ಸು

ತರೀಕೆರೆ?” ಹುಬ್ಬು ಗಂಟಿಕ್ಕಿತುನಮ್ಮೂರಿನ ಕೆಲವು ವಿದ್ಯಾರ್ಥಿಗಳು ತಲೆನೋವಾಗಿದ್ದರು ಎಂದು ನಂತರ ಗೊತ್ತಾಯಿತು.

ಕ್ಯಾಬಾ ಸಬೆಕ್ಟ್?”

ಕನಡಾ ಸಾರ್

ಕನಡಾಕಾಂಟ್ ಬಿಲೀವ್ತು ಮುಸಲ್ಮಾನ್ ಕ್ಯಾಬಾ?’

ಎಸೆಸೆಲ್ಸಿ ಮಾರ್ಕ್‌ಕಾರ್ಡು ತೋರಿಸಿದೆಆದರೂ ನಂಬಿಕೆ ಹುಟ್ಟಲಿಲ್ಲ. ‘ಕಂಹಾಸೂರಾ ಏ ಫಾತೆಹಾ ಪಡ್’ ಎಂದರುಇದು ಕುರಾನಿನ ಮೊದಲನೇ ಮಂತ್ರನನ್ನಮ್ಮ ಕುರಾನು ಶಿಕ್ಷಕಿಯಾಗಿದ್ದರಿಂದಲೂಸಂಜೆ ಕಲ್ಮಾ ಸೂರಗಳನ್ನು ಮುಗಿಸದ ಹೊರತು ಊಟ ಬೀಳುತ್ತಿರಲಿಲ್ಲವಾದ್ದರಿಂದಲೂತಾರುಣ್ಯದಲ್ಲಿ ಧರ್ಮಭೀರುವಾಗಿದ್ದರಿಂದಲೂಕುರಾನಿನ ಸೂರಾಗಳು ಜನಗಣಮನದಷ್ಟೆ ಕಂಠಸ್ಥವಾಗಿದ್ದವುಮಕ್ಕಳು ಮಗ್ಗಿ ಹೇಳುವಾಗಿನಂತೆ ಕೈಕಟ್ಟಿಕೊಂಡು ‘ಅಲಹಮ್ದು ಲಿಲ್ಲಾಹಿ ರಬಿಲ್ ಆಲಮೀನ್’ ಶುರು ಮಾಡಿ ಕುರಾನಿನ ಆಯತುಗಳಿಗೆ ವಿಶಿಷ್ಟವಾದ ರಾಗಲಯ ಏರಿಳಿತಗಳ ಸಮೇತ ಪಠಿಸಿದೆಅಷ್ಟುಹೊತ್ತಿಗೆ ಅನೇಕ ಹುಡುಗರು ಸುತ್ತಿಕೊಂಡರುಮುಜುಗರವೂ ಹಾಸ್ಟೆಲ್ ಸೀಟು ತಪ್ಪುವ ಆತಂಕವೂ ಆಗುತ್ತಿತ್ತುವಾರ್ಡನರ ಮುಖದಲ್ಲಿ ನಂಬಿಕೆ ಕಂಡಿತುಅರ್ಜಿ ಮೇಲೆ ಸಹಿ ಮಾಡಿ ನಾಲ್ಕನೇ ನಂಬರಿನ ರೂಮನ್ನು ಅಲಾಟ್ ಮಾಡಿದರು. ‘ನೀನು ಹಾಸ್ಟೆಲಿನ ಚರಿತ್ರೆಯಲ್ಲೇ ಕನ್ನಡ ಎಂಎ ಓದೋಕೆ ಬಂದಿರೋ ವ್ಯಕ್ತಿಚೆನ್ನಾಗಿ ಓದಬೇಕು’ ಎಂದರು.

ಹಾಸ್ಟೆಲ್ಆಯಕಟ್ಟಿನ ಜಾಗೆಯಲ್ಲಿತ್ತುಎದುರಿಗೆ ಗಂಟೆಗಂಟೆಗೂ ಬೆಲ್ ಬಾರಿಸುತ್ತಿದ್ದ ಅಗ್ನಿಶಾಮಕ ದಳದ ಠಾಣೆಅದರ ಬದಿಗೆ ಕುವೆಂಪು ಸಹಪಾಠಿಗಳಾದ ಅನಂತರಂಗಾಚಾರ್ಯರ ಮನೆಅದರ ಹಿಂದಿನ ಮೇನುಗಳಲ್ಲಿ ಸಾರ್ವಜನಿಕ ಲೈಬ್ರರಿಸಮತೆಂತೋ ತೆಂಗಿನತೋಟದಲ್ಲಿ ನಡೆವ ನಾಟಕಗಳುವಿಶ್ವವಿದ್ಯಾನಿಲಯದ ಈಜುಕೊಳಹಿಂಬದಿ ದಿಬ್ಬದ ಮೇಲೆ ಮೈಸೂರುಚಾಮರಾಜನಗರ ರೈಲು ಹಳಿಅದಕ್ಕೂ ಹಿಂದೆ ಮಹಾರಾಜ ಕಾಲೇಜುಬಲಪಕ್ಕಕ್ಕೆ ಎಸ್.ರಾಧಾಕೃಷ್ಣನ್ ಮೊದಲಾದ ಪ್ರಾಧ್ಯಾಪಕರು ವಾಸವಾಗಿದ್ದ ವಿಶಾಲ ಬಂಗಲೆಗಳುಅವನ್ನು ದಾಟಿದರೆ ಕುಕ್ಕರಹಳ್ಳಿ ಕೆರೆಎಡಪಕ್ಕಕ್ಕೆ ಕನ್ನೇಗೌಡರ ಕೊಪ್ಪಲುಸರಸ್ವತಿ ಥಿಯೇಟರುರುಚಿಕರ ಚಹ ಕೊಡುತ್ತಿದ್ದ ಮಲೆಯಾಳಿ ಕ್ಯಾಂಟೀನುಪರಿಮಳ ಹಬ್ಬಿಸುತ್ತಿದ್ದ ಬಜ್ಜಿವಡೆ ಹಾಕುವ ತಳ್ಳುಗಾಡಿ ಅಂಗಡಿಜಟಕಾದಲ್ಲಿ ಕೂತು ರೈಲು ಹಿಡಿಯಲು ಶೂಟಿಂಗಿಗೆಂದು ಮದರಾಸಿಗೊ ಬೆಂಗಳೂರಿಗೊ ಹಾಸ್ಟೆಲಿನ ಮುಂದಿನಿಂದಲೇ ಹೋಗುತ್ತಿದ್ದ ಯಾವ ಪ್ರಭಾವಳಿಯೂ ಓಡಾಡುತ್ತಿದ್ದ ನಟ ಅಶ್ವತ್ಥರ ಮನೆನಾವು ಅಗ್ನಿಶಾಮಕ ದಳದ ಕಾಂಪೌಂಡಿನ ಪಕ್ಕದಲ್ಲಿದ್ದ ಈಜುಕೊಳದ ರಸ್ತೆ ಹಿಡಿದು ಕುಕ್ಕರಹಳ್ಳಿಯನ್ನು ಹಾದು ಕ್ಯಾಂಪಸ್ಸಿಗೆ ಹೋಗುತ್ತಿದ್ದೆವುಕುಕ್ಕರಹಳ್ಳಿಯ ಬಳಿ ಕೈಲೊಂದು ಲೆದರ್ ಸೂಟ್‌ಕೇಸು ಹಿಡಿದು ತುಸುವೇ ಕುಂಟುತ್ತ ಬರುತ್ತಿದ್ದ ಪ್ರೊ.ಚೆನ್ನಯ್ಯನವರು ಸಿಗುತ್ತಿದ್ದರು.

ಹಳೇ ಮೈಸೂರು ಸೀಮೆಯಲ್ಲಿ ವೈದ್ಯಕೀಯಇಂಜಿನಿಯರಿಂಗ್ಎಂಎಎಂಎಸ್ಸಿಎಂಕಾಂ ಓದುವ ವಿದ್ಯಾರ್ಥಿಗಳೆಲ್ಲ ಸಾಮಾನ್ಯವಾಗಿ ಮುಸ್ಲಿಂ ಹಾಸ್ಟೆಲು ಸೇರುತ್ತಿದ್ದರುಹಾಸ್ಟೆಲಿನಲ್ಲಿ ಮೆಡಿಕಲ್ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಅವರಿಗೆ ತಾರಸಿ ಹೊದಿಕೆಯ ಟೂ ಇನ್ ಒನ್ ಕೋಣೆಗಳುಬಳಿಕ ಮಾಸ್ಟರ‍್ಸ್ ಪದವಿಯವರಿಗೆಹೆಂಚಿನ ಚಾವಣಿಯ ಫೋರ್ ಇನ್ ಒನ್ ಕೋಣೆಗಳುಸೀಟುಳಿದರೆ ಬಿಎಬಿಕಾಂಬಿಎಸ್ಸಿಗಳನ್ನು ಹೆಂಚಿನ ಕೋಣೆಗಳಲ್ಲಿ ಒಬ್ಬೊಬ್ಬರಂತೆ ಹಾಕುತ್ತಿದ್ದರುಕೇರಳ ಬ್ಲಾಕಿನಲ್ಲಿದ್ದ ವಯನಾಡುಕಲ್ಲಿಕೋಟೆಯ ಹುಡುಗರು ಪ್ಯಾರಾಮೆಡಿಕಲ್ ಮಾಡುತ್ತಿದ್ದರುಹಾಸ್ಟೆಲಿನಲ್ಲಿ ನಾಲ್ಕು ಅಂಗಿ ಎರಡು ಪ್ಯಾಂಟುಗಳಲ್ಲಿ ವರ್ಷ ದಾಟಿಸುವವರು ಸಾಕಷ್ಟಿದ್ದರುಇವರ ಜತೆ ಚಿಕ್ಕಮಗಳೂರು ಹಾಸನ ಸೀಮೆಯಿಂದ ಕಾಫಿ ಪ್ಲಾಂಟರುಗಳು ಜಮೀನುದಾರ ಕುಟುಂಬಗಳಿಂದ ಬಂದವರೂ ಇದ್ದರುಅವರನ್ನು ಹಾಸ್ಟೆಲಿಗೆ ಬಿಡಲು ಮನೆಯಿಂದ ಕಾರು ಬರುತ್ತಿದ್ದವುಸೇವಕರು ರೂಮಿನಲ್ಲಿ ಸಾಮಾನು ಜೋಡಿಸಿಡುತ್ತಿದ್ದರುಶೆಲ್ಛುಗಳನ್ನು ಒರೆಸಿ ಸ್ವಚ್ಛಗೊಳಿಸುತ್ತಿದ್ದರುಈ ಹುಡುಗರು ಚಂದದ ವಸ್ತ್ರಗಳನ್ನು ಧರಿಸುತ್ತಿದ್ದರುಮುಖಕ್ಕೆಮೈಕೈಗೆತಲೆಗೂದಲನ್ನು ಒಪ್ಪವಾಗಿ ಕೂರಿಸಲುಅಲಾಯಿದ ಕ್ರೀಮುಗಳುಮಲಗುವಾಗ ರಾತ್ರಿಯುಡುಪುಐದಾರು ಜತೆ ಶೂತಿಂಗಳಿಡೀ ಪುನರುಕ್ತಿಯಾಗದಂತೆ ಉಡುವಷ್ಟು ಶರ್ಟುಸಂಜೆಯಾದೊಡನೆ ಇಸ್ತ್ರಿಬಟ್ಟೆ ಧರಿಸಿ ಸೆಂಟು ಪೂಸಿಕೊಂಡು ಸಯ್ಯಾಜಿರಾವ್ ರಸ್ತೆಯಲ್ಲಿ ಚೈನೀ ತಿರುಗಲು ತೆರಳುತ್ತಿದ್ದರುಕೆಲವರಿಗೆ ಪ್ರೇಮಿಗಳೂ ಇರುತ್ತಿದ್ದರುಉರ್ದು ಎಂಎಗೆ ಬಂದಿದ್ದ ಒಬ್ಬ ದಡ್ಡನಾಗಿದ್ದುಸಿನಿಮಾ ನಟನಂತಿದ್ದಇವನಿಗೆ ಊರಲ್ಲೂ ವಿಭಾಗದಲ್ಲೂ ಪ್ರೇಮಿಗಳಿದ್ದರುಇವರು ಹಾಸ್ಟೆಲಿನ ಅಡುಗೆಯವರಿಗೆ ಭಕ್ಷೀಸು ಕೊಡುತ್ತಿದ್ದರಿಂದಒಳ್ಳೆಯ ಮಾಂಸದ ಪೀಸು ಸಿಗುತ್ತಿದ್ದವುತಡವಾಗಿ ಬಂದರೂ ಊಟ ಕಾದಿರಿಸಲಾಗುತ್ತಿತ್ತು.

ಹಾಸ್ಟೆಲಿನಲ್ಲಿ ಟಿಪ್ಪು ಎಂಬ ಜಗಳಗಂಟ ಅಡುಗೆಯವನಿದ್ದನುಆತ ಸಿರಿವಂತ ಹುಡುಗರನ್ನು ಓಲೈಸುತ್ತಿದ್ದನುಅವನ ಕೈರುಚಿಗಾಗಿ ಅವನನ್ನು ಸಹಿಸಿಕೊಂಡಿದ್ದರುಹಾಸ್ಟೆಲಿನಲ್ಲಿ ದಿನಬಿಟ್ಟು ದಿನ ಮಾಂಸ ಮೊಟ್ಟೆ ಇರುತ್ತಿದ್ದವುತಿಂಡಿಗೆ ಬಿಸಿಕಾವಲಿಯ ಮೇಲಿಂದ ಗರಿಗರಿಯಾದ ಪದರಗಳ ಗೋಧಿ ಪರೋಟದ ಮೇಲೆ ಹಸಿಮೊಟ್ಟೆ ಹಾಕಿ ಬೇಯಿಸಿದ ಆಮ್ಲೆಟ್ ಮತ್ತು ಗಟ್ಟಿಬೇಳೆಬೀಫ್ ಸುಕ್ಕಾ ತೆಗೆದುಕೊಂಡರೆ ಪ್ರತಿಪ್ಲೇಟಿಗೆ ನಾಲ್ಕಾಣೆಯಂತೆ ಪತ್ಯೇಕ ಛಾರ್ಜುಶುಕ್ರವಾರ ಮಧ್ಯಾಹ್ನ ಮಟನ್ ಖುರ್ಮಪಲಾವುಪ್ರತಿ ಭಾನುವಾರ ಮಿನಿ ಡಿನ್ನರ್ತಿಂಗಳ ಕೊನೆಯ ಭಾನುವಾರ ಗ್ರ್ಯಾಂಡ್ ಡಿನ್ನರ್ಇದರಲ್ಲಿ ಬಿರಿಯಾನಿಮೊಸರು ಪಚಡಿಗೋಡಂಬಿದ್ರಾಕ್ಷಿ ಖೋವಾ ಹಾಕಿದ ಪಾಯಸಬೇಯಿಸಿದ ಮೊಟ್ಟೆದಾಲ್ಖುರ್ಮಬೀಡಾಬಾಳೆಹಣ್ಣು ಇರುತ್ತಿದ್ದವುಆ ದಿನ ಪ್ರತಿಯೊಬ್ಬರೂ ಶಕ್ತ್ಯನುಸಾರ ಗೆಳೆಯರನ್ನು ಕರೆದುಕೊಂಡು ಬರುತ್ತಿದ್ದರುಈ ಗೆಳೆಯರು ಎರಡು ವರ್ಷಕ್ಕೆ ಧರ್ಮಾಂತರ ಮಾಡಿಕೊಂಡು ಹಾಸ್ಟೆಲಿನ ಊಟ ಮಾಡಿಕೊಂಡಿರಬಹುದೇ ಎಂದು ಕೇಳುತ್ತಿದ್ದರುಈ ಮಹಾಭೋಜನದ ದಿನ ನಾವು ಮಧ್ಯಾಹ್ನ ಎರಡು ತುತ್ತು ತಿಂದುಹೊಟ್ಟೆ ಖಾಲಿ ಇರಿಸುತ್ತಿದ್ದೆವುಡಿನ್ನರ್‌ಗೆ ಹತ್ತು ನಿಮಿಷ ಮೊದಲೇ ಡೈನಿಂಗ್ ಹಾಲಿನ ಆಜುಬಾಜು ಸುಳಿದಾಡುತ್ತಿದ್ದೆವುಅಲ್ಯುಮಿನಿಯಮ್ಮಿನ ಶೀಟ್ ಹಾಸಿದ್ದ ಡೈನಿಂಗ್ ಟೇಬಲಿನ ಮೇಲೆ ಬೋಗುಣಿ ಇಡುವ ಸಪ್ಪಳ ಬಂದೊಡನೆ ಒಳನುಗ್ಗುತ್ತಿದ್ದೆವು.

ಹಾಸ್ಟೆಲಿನವರಿಗೆ ಕನ್ನಡದ ವಿದ್ಯಾರ್ಥಿಯೊಬ್ಬನ ಅಸ್ತಿತ್ವ ಗೊತ್ತಾಗಿದ್ದೇನಾನು ಇಂಟರ್ ಹಾಸ್ಟೆಲ್ ಭಾಷಣಪ್ರಬಂಧ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನ ತಂದ ಬಳಿಕಚಾಮರಾಜ ಒಡೆಯರ್ ಕಾಲದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ದಿವಾನ್ ರಂಗಾಚಾರ್ಲು ಸಮಕಾಲೀನರೂ ಆದ ವೆಂಕಟಕೃಷ್ಣಯ್ಯನವರ ಸ್ಮರಣೆಯಲ್ಲಿ ಕಟ್ಟಿದ ಒಂದು ಹಾಸ್ಟೆಲಿತ್ತುಅಲ್ಲಿ ನಡೆವ ಸ್ಪರ್ಧೆಗಳಲ್ಲಿ ನನಗೆ ಶೀಲ್ಡು ದೊರಕುತ್ತಿತ್ತುಅದನ್ನು ವಾರ್ಡನರು ಡೈನಿಂಗ್ ಹಾಲಿನಲ್ಲಿ ಎಲ್ಲರಿಗೂ ಕಾಣುವಂತೆ ಇಡುತ್ತಿದ್ದರುಎಂಎಯಲ್ಲಿ ರ‍್ಯಾಂಕನ್ನು ಪದಕಗಳನ್ನು ಪಡೆದಿದ್ದು ವಾರ್ಡನರಿಗೆ ತುಂಬ ಖುಷಿ ಕೊಟ್ಟಿತುಘಟಿಕೋತ್ಸವದ ಸುದ್ದಿಯನ್ನು ಪತ್ರಿಕೆಗಳೂ ದೊಡ್ಡದಾಗಿ ಹಾಕಿದ್ದವುಹಾಸ್ಟೆಲ್ ಡೇ ದಿನ ನನಗೆ ಮರ್ಯಾದೆ ಸಲ್ಲಿಕೆಯಿತ್ತುರ‍್ಯಾಂಕ್ ಗಳಿಸುವುದಕ್ಕೆ ಟೂ ಇನ್ ಒನ್ ರೂಮೇ ಬೇಕೆಂದು ಹಟಮಾಡುವ ವಿದ್ಯಾರ್ಥಿಗಳನ್ನು ಖಂಡಿಸುತ್ತ ವಾರ್ಡನರು ನನ್ನ ನಿದರ್ಶನ ನೀಡಿದರುಸನ್ಮಾನ ಸ್ವೀಕರಿಸಿ ಉರ್ದುವಿನಲ್ಲಿ ಮಾತು ಶುರುಮಾಡಿದೆಅತಿಥಿಗಳಾಗಿದ್ದ ಮಂತ್ರಿ ಅಜೀಜ್ ಸೇಟರು ‘ಕನ್ನಡದಲ್ಲೇ ಮಾತಾಡು’ ಎಂದರುಆಶ್ರಯ ಕೊಟ್ಟ ಹಾಸ್ಟೆಲಿಗೆ ಕೃತಜ್ಞತೆ ಸಲ್ಲಿಸಿದೆಪ್ರವೇಶ ಕಾಲಕ್ಕೆ ಕನ್ನಡ ವಿದ್ಯಾರ್ಥಿ ಎಂಬ ಕಾರಣಕ್ಕೆ ಧಾರ್ಮಿಕ ಪರೀಕ್ಷೆ ಮಾಡಿದ್ದು ತಪ್ಪುಕಲಿಯಲು ಬರುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಪರೀಕ್ಷೆ ಮಾನದಂಡವಾಗಬಾರದು ಎಂದೆಈ ಬಗ್ಗೆ ತಮ್ಮ ಪ್ರಸ್ತಾವನ ಭಾಷಣದಲ್ಲಿ ಪರಿತಾಪ ವ್ಯಕ್ತಪಡಿಸಿದ್ದ ವಾರ್ಡನ್ ಅವರಿಗೆ ನೋವಾಗಿರಬೇಕುವಿಷಾದಭಾವದಲ್ಲಿ ಕುಳಿತಿದ್ದರುನನಗೂ ಈ ಮಾತನ್ನು ನುಂಗಬೇಕಿತ್ತು ಅನಿಸಿತುಆದರೆ ಅದು ಎದೆಯಲ್ಲಿ ಮುರಿದ ಮುಳ್ಳಂತೆ ಖಟಕವಾಡುತ್ತಿತ್ತುಅದನ್ನು ತೆಗೆದು ನಿರಾಳವಾಗಿ ಉಸಿರಾಡಿದೆ.

 

ಈಚೆಗೆ ಮೈಸೂರಿಗೆ ಹೋದಾಗ ಹಾಸ್ಟೆಲಿಗೆ ಹೋದೆನನ್ನ ಬಾಳನ್ನು ರೂಪಿಸಿದ ಕನ್ನಡ ಅಧ್ಯಯನ ಸಂಸ್ಥೆಯಷ್ಟೇ ಇದಕ್ಕೂ ಪವಿತ್ರ ಸ್ಥಾನವಿದೆಸುತ್ತ ಶಾಪಿಂಗ್ ಮಾಲುಗಳನ್ನು ಕಟ್ಟಿಅದರ ಗುರುತೇ ಸಿಗದಂತೆ ಚಹರೆ ಬದಲಾಗಿತ್ತುನಾವಿದ್ದ ಹೆಂಚಿನ ರೂಮುಗಳನ್ನು ಕೆಡವಿ ಬಹುಮಹಡಿ ಕಟ್ಟಡಗಳು ಬಂದಿವೆಕಟ್ಟಡಗಳ ನಡುವಿನ ವಿಶಾಲ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆಅದರ ಹುಲ್ಲಹಾಸಿನೊಳಗೆ ಅಡ್ಡಾಡಿದೆಹೇಳುವವರೂ ಕೇಳುವವರೂ ಯಾರೂ ಇಲ್ಲಅಜ್ಞಾತನಾಗಿರುವ ಸುಖದುಃಖ ಅನುಭವಿಸಿದೆ.

andolanait

Recent Posts

ಶಾಸಕ ಗಾಲಿ ಜನಾರ್ಧನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…

26 seconds ago

ಉನ್ನಾವೋ ಅತ್ಯಾಚಾರ ಕೇಸ್:‌ ಆರೋಪಿ ಕುಲದೀಪ್‌ ಸಿಂಗ್‌ ಸೆಂಗರ್‌ ಜಾಮೀನಿಗೆ ಸುಪ್ರೀಂಕೋರ್ಟ್‌ ತಡೆ

ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…

22 mins ago

ರಾಜ್ಯದಲ್ಲಿ ಡ್ರಗ್ಸ್‌ ದಂಧೆ: ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್‌ ಸೀಜ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…

36 mins ago

ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ : ಯಾವುದು ನಂಬರ್‌ ಒನ್‌ ಗೊತ್ತಾ?

ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯು ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಪ್ರಸಿದ್ಧ…

1 hour ago

ತಲಕಾಡಿನತ್ತ ಹರಿದುಬರುತ್ತಿರುವ ಪ್ರವಾಸಿಗರು: ಕಾವೇರಿ ನದಿಯಲ್ಲಿ ಮಿಂದೆದ್ದು ಸಂಭ್ರಮ

ಟಿ.ನರಸೀಪುರ: ಹೊಸ ವರ್ಷದ ಸಂಭ್ರಮಾಚರಣೆ ಆಚರಿಸಲು ಐತಿಹಾಸಿಕ ಪಂಚಲಿಂಗಗಳ ಪುಣ್ಯಕ್ಷೇತ್ರ ತಲಕಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಳೆದ ಮೂರು…

1 hour ago

ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಸಚಿವ ಎಚ್.ಸಿ.ಮಹದೇವಪ್ಪ ಕಿಡಿ

ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳ ತೆರವು ಪ್ರಕರಣವನ್ನು ಖಂಡಿಸಿ ಟ್ವೀಟ್‌ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ…

2 hours ago