ವಾಜಪೇಯಿ ಅವರ ಈ ಚಿತ್ರ ನೋಡಿದಾಗತಗಡೂರು ರಾಮಚಂದ್ರ ರಾಯರು ನೆನಪಾದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಗಡೂರರಿಗೆ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಬಂದಾಗ ಮೈಸೂರಿನ ಶತಮಾನೋತ್ಸವ ಭವನದಲ್ಲಿ ಪೌರ ಸನ್ಮಾನ ಏರ್ಪಡಿಸಿದ್ದರು (1983).

ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರದೇ ಅಧ್ಯಕ್ಷತೆಗಾಂಧಿ ಟೋಪಿಯನ್ನು ಹಾಕಿದ್ದ ಎಂಬತ್ತೆಂಟು ವರ್ಷದ ತಗಡೂರರನ್ನು ವ್ಹೀಲ್‌ಛೇರ್ ಮೇಲೆ ಕೂರಿಸಿದ್ದರುಅವರು ಈ ಚಿತ್ರದಲ್ಲಿ ವಾಜಪೇಯಿಯವರಂತೆಯೇ ನಿತ್ರಾಣರಾಗಿ ಕಾಣುತ್ತಿದ್ದರು.

ಜರಾಜೀರ್ಣರಾಗಿ ಹೋಗಿದ್ದ ಅವರು ಒಂದು ಕಾಲದ ಅತ್ಯಂತ ದೊಡ್ಡ ಸ್ವಾತಂತ್ರ ಹೋರಾಟಗಾರರಾಗಿದ್ದರು ಎಂದು ನಂಬುವುದಕ್ಕೇ ಸಾಧ್ಯವಿರಲಿಲ್ಲಕನ್ನಡಪ್ರಭದ ಖಾದ್ರಿ ಶಾಮಣ್ಣ ಮೊದಲಾಗಿ ಅನೇಕ ಪ್ರಸಿದ್ಧರು ತಗಡೂರರನ್ನು ಕುರಿತು ಮಾತಾಡಿದರುಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಪೊಲೀಸರಿಗೆ ತಲೆನೋವಾಗಿದ್ದ ತಗಡೂರರ ಉಗ್ರ ಚಟುವಟಿಕೆಗಳನ್ನು ನೆನೆದರು.

ಸ್ವಾತಂತ್ರ್ಯ ಬಾವುಟ ಹಾರಿಸಕೂಡದೆಂದು ನಿಷೇಧ ಹೇರಿದ್ದಾಗತಗಡೂರರು ಸ್ವಾತಂತ್ರ್ಯದ ಬಾವುಟದಲ್ಲೇ ಬಟ್ಟೆ ಹೊಲೆಸಿಕೊಂಡು ಊರಲ್ಲೆಲ್ಲಾ ಓಡಾಡುತ್ತಿದ್ದರಂತೆಅರೆಸ್ಟ್ ಮಾಡಲೂ ಆಗದೆಬಿಡಲೂ ಆಗದೆ ಪೊಲೀಸರು ಕಕ್ಕಾಬಿಕ್ಕಿಯಾಗುತ್ತಿದ್ದರಂತೆ.

ಗೌರಿ ಬಿದನೂರಿನ ವಿದುರಾಶ್ವತ್ಥದಲ್ಲಿ ಗೋಲಿಬಾರ್ ಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದಿದ್ದರ ಬಗ್ಗೆ ನಾನಾ ಬಗೆಯ ಪ್ರತಿಭಟನೆಗಳನ್ನು ತಗಡೂರರು ಮಾಡಿದ್ದರುಮಹಿಳೆಯರನ್ನು ಸಂಘಟಿಸಿ ಹ್ಯಾಮಿಲ್ಟನ್ ಬಿಲ್ಡಿಂಗ್‌ಗೆ ಮುತ್ತಿಗೆ ಹಾಕಿಸಿದ್ದರುಈಗಿನ ಲಷ್ಕರ್ ಪೊಲೀಸ್ ಠಾಣೆಯ ಕಟ್ಟಡಕ್ಕೆ ಅಂದಿನ IGP Hamilton ಹೆಸರು ಇಟ್ಟಿದ್ದರುಅನ್ಯಾಯದ ಗೋಲಿಬಾರ್ ಮಾಡಿಸಿ ಸ್ವಾತಂತ್ರ್ಯ ಹೋರಾಟಗಾರರ ಕಗ್ಗೊಲೆ ಮಾಡಿದ ಅವನ ಹೆಸರು ತೆಗೆಯಿರಿ ಎಂಬ ಉಗ್ರ ಹೋರಾಟ ಅದುಪೊಲೀಸರ ವಿರುದ್ಧ ನಡೆದ ಈ ಚಳವಳಿಯಲ್ಲಿ 2000ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರುಠಾಣೆಯ ಕಟ್ಟಡದ ಮೇಲೆ ಹತ್ತಿ ಗೋಡೆಯ ಮೇಲೆ ಮೂಡಿಸಿದ್ದ (embossingಹ್ಯಾಮಿಲ್ಟನ್ ಬಿಲ್ಡಿಂಗ್ ಅಕ್ಷರಗಳನ್ನು ಕೆತ್ತಿ ಹಾಕಿದ್ದರು.

ಮಹಿಳೆಯರೇ ಅಟ್ಟಣಿಗೆಯ ಮೇಲೆ ಕಟ್ಟಡವನ್ನು ಹತ್ತಿಹೆಸರು ಅಳಿಸಿದ್ದ ಘಟನೆ ಅದುಬಂದೂಕು ಹಿಡಿದಿದ್ದ ಪೊಲೀಸರು ಏನೂ ಮಾಡಲಾಗದೆ ಬೆಪ್ಪಾಗಿ ನಿಂತಿದ್ದರುವಿದುರಾಶ್ವತ್ಥದ ಗೋಲಿಬಾರ್ ದುರಂತದ ಬಗ್ಗೆ ಎದ್ದಿದ್ದ ಉಗ್ರ ವಿರೋಧವನ್ನು ನೆನೆದು ಪೊಲೀಸರು ಭಯಗೊಂಡಿದ್ದರುಸ್ವಲ್ಪ ಹೆಚ್ಚು ಕಡಿಮೆಯಾದರೂ ಪರಿಸ್ಥಿತಿ ಭುಗಿಲೇಳುತ್ತದೆ ಎಂಬ ಆತಂಕ ಪೊಲೀಸರಿಗೆಗಾಂಧಿನೆಹರೂನೇತಾಜಿ ಹೀಗೆ ಎಲ್ಲ ನಾಯಕರ ಗಮನ ಸೆಳೆದಿದ್ದ ಉಗ್ರ ಮಹಿಳಾ ಚಳವಳಿ ಅದು.

ಹ್ಯಾಮಿಲ್ಟನ್ ಹೆಸರನ್ನು ಅದೇ IGP ಎದುರಿಗೇ ಅಳಿಸಿ ಲಷ್ಕರ್ (ಹಿಂದಿದ್ದ ಹೆಸರು– ದಂಡು ಪ್ರದೇಶದ ಠಾಣೆಎಂದು ಬರೆಸಿ ಬಿಟ್ಟರು ಆ ಹೆಣ್ಣುಮಕ್ಕಳುಇಂತಹ ಚಳವಳಿಗಳ ಹಿನ್ನೆಲೆಯಲ್ಲಿ ತಗಡೂರರದೇ ನೇತೃತ್ವಈ ರೋಚಕ ಚಳವಳಿಯ ಮುಂಚೂಣಿಯಲ್ಲಿದ್ದವರು ವಿಶಾಲಕ್ಷಮ್ಮನವರು (ಅರವಿಂದ ಪರಿಮಳ ವರ್ಕ್ಸ್‌ನ ಮಾಲೀಕರಾದ ಎಚ್.ಎಸ್.ರಾವ್ ಮತ್ತು ರಾಮತೀರ್ಥರ ತಾಯಿಯವರುಅವರೂ ಕೂಡ ಅಂದಿನ ಸಮಾರಂಭದಲ್ಲಿದ್ದರು).

ತಗಡೂರರ ಇಂತಹ ಹತ್ತಾರು ರೋಚಕ ಪ್ರಸಂಗಗಳನ್ನು ವಿವರಿಸುತ್ತಿದ್ದಾಗ ಸಭೆಯಲ್ಲಿದ್ದ ನಮಗೇ ಮೈನವಿರೇಳುತ್ತಿತ್ತು.

ಆಗೆಲ್ಲ ತಗಡೂರರದು ದಿನಕ್ಕೊಂದು ಚಳವಳಿ. 1910ರಿಂದಲೇ ತಿಲಕ್ಗಾಂಧಿಜಿಯವರ ಗಮನ ಸೆಳೆದಿದ್ದರುಅಸ್ಪ ಶ್ಯತೆಯ ನಿವಾರಣೆಗಾಗಿ ಸವರ್ಣೀಯ ಯುವಕರನ್ನು ಸಂಘಟಿಸಿದ್ದರುದೇವಾಲಯ ಪ್ರವೇಶ ಮಾಡಿಸಿದ್ದರುಸವರ್ಣೀಯ ಯುವಕರಲ್ಲಿ ಜಾಗೃತಿ ಮೂಡಿಸಿದರು. 1919ರಲ್ಲೇ ತಗಡೂರಿನಲ್ಲಿ ಸ್ವರಾಜ್ಯ ಮಂದಿರ ಸ್ಥಾಪಿಸಿದವರು ಅವರುಗಾಂಧಿಜಿಯವರನ್ನೂ ಆಕರ್ಷಿಸಿದ್ದ ಚಳವಳಿಗಳು ಅವು. 1934ರಲ್ಲಿ ಸ್ವತಃ ಗಾಂಧಿಯವರು ತಗಡೂರರ ಬದನವಾಳುವಿಗೆ ಬಂದು ಹರಿಜನ ಫಂಡ್‌ಗೆ ಚಾಲನೆ ಕೊಟ್ಟರುಅಸ್ಪ ಶ್ಯತಾ ನಿವಾರಣಾ ಚಳವಳಿ ಬೃಹತ್ ಸ್ವರೂಪ ತಳೆಯಿತುಸ್ವದೇಶೀ ಚಳವಳಿಯಲ್ಲಿ ವಿದೇಶಿ ವಸ್ತುಗಳನ್ನು ಸುಡಲು ಹೋಗಿ ತಮ್ಮ ಸ್ವಂತ ಅಂಗಡಿಯನ್ನೇ ಬೆಂಕಿಗೆ ಬಲಿಕೊಟ್ಟರು!

ಅಧ್ಯಕ್ಷತೆ ವಹಿಸಿದ್ದ ನಿಟ್ಟೂರರು (ಮಾಜಿ ಗವರ್ನರ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರುಮಾತಾಡಿದರುಯುವಕರಾಗಿದ್ದ ಅವರಿಗೆಲ್ಲಾ ಆ ದಿನಗಳಲ್ಲಿ ನಿತ್ಯ ಸ್ಛೂರ್ತಿಯಾಗಿದ್ದವರೆಂದರೆ ತಗಡೂರರುಅವರ ಒಂದೊಂದು ಸಾಹಸದ ಘಟನೆಗಳನ್ನು ಕೇಳಿ ಪ್ರಭಾವಿತರಾಗಿ ಚಳವಳಿಗೆ ಯುವಕರು ಧುಮುಕುತ್ತಿದ್ದರಂತೆಸ್ವಾತಂತ್ರ್ಯ ಹೋರಾಟದಲ್ಲಿ ಪೂರ್ಣ ತೊಡಗಿಕೊಂಡು ತಗಡೂರರು ತಮ್ಮ ಆರೋಗ್ಯ ನಿರ್ಲಕ್ಷಿಸಿದರುದೇಹ ಜರ್ಜರಿತವಾಗಿತ್ತುಒಂದು ಮಾತನ್ನೂ ಆಡಲಾರದಷ್ಟು ನಿತ್ರಾಣರಾಗಿಬಿಟ್ಟಿದ್ದರು.

ನಿಟ್ಟೂರರ ಮಾತು ಮುಂದುವರಿಯಿತು.

ಒಂದು ಕಾಲದಲ್ಲಿ ನಮಗೆಲ್ಲಾ ಉತ್ಸಾಹಸ್ಛೂರ್ತಿ ತುಂಬುತ್ತಿದ್ದವರು ಇವರೇನಾ ಅನ್ನಿಸುತ್ತಿತ್ತು.’ ಈಗಲೂ ಅಷ್ಟೇಅವರನ್ನು ನೋಡಬೇಕು ಅನ್ನಿಸಿದಾಗಲೆಲ್ಲಾಬೆಂಗಳೂರಿನಿಂದ ಬೆಳಿಗ್ಗೆಯೇ ಹೊರಟು ಬರುತ್ತೇನೆನಂಜನಗೂಡಿನ ಹತ್ತಿರದ ಅವರ ಮನೆ ತಲುಪುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಯಾಗಿರುತ್ತದೆಅವರು ಮಂಚದ ಮೇಲೆ ಮೌನವಾಗಿ ಮಲಗಿರುತ್ತಾರೆಏನನ್ನೂ ಮಾತನಾಡಲಾರರುಕೈಸನ್ನೆ ಮಾಡುತ್ತಾರೆಕಣ್ಣುಗಳಲ್ಲಿ ಹೊಳಪು ಮೂಡುತ್ತದೆನನಗೂ ಮಾತನಾಡಲಾಗುವುದಿಲ್ಲಮೂರು ಗಂಟೆಗಳ ಕಾಲ ಅವರೆದುರು ಕುರ್ಚಿಯಲ್ಲಿ ಕುಳಿತಿದ್ದುನಂತರ ಬೆಂಗಳೂರಿಗೆ ಹೊರಡುತ್ತೇನೆ.

ಅವರೊಂದಿಗೆ ಅನಿಸಿದ ಎಲ್ಲವನ್ನೂ ಮಾತಾಡಿದೆನೆಂಬ ಸಂತೃಪ್ತಿ ನನ್ನ ಮನಸ್ಸನ್ನು ತುಂಬಿರುತ್ತದೆಅವರಿಗೂ ಅಷ್ಟೇಅಲ್ಲಿಯ ತನಕ ನಾವಿಬ್ಬರೂ ಮುಕ್ತವಾಗಿ ಎಲ್ಲ ವಿಚಾರಗಳನ್ನೂ ಮಾತಾಡಿದೆವು ಅನ್ನಿಸುತ್ತದೆ’.

ಇಲ್ಲಿರುವ ವಾಜಪೇಯಿ ಚಿತ್ರ ನೋಡಿ ಈ ಪ್ರಸಂಗ ನೆನಪಾಯ್ತುಹೃದಯ ಸಂವಾದ ಎಂದರೆ ಇದೇನಾ?

ವಾಜಪೇಯಿ ಇರುವ ತನಕವೂ ಅವರನ್ನು ಅದ್ವಾನಿಯವರು ಮನೆಗೆ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದರಂತೆಭಾವುಕ ಮೌನನೆನಪುಗಳುಕಣ್ಣೀರು ಇಷ್ಟೇ ಅವರ ಮಾತಂತೆಇವರಿಬ್ಬರ ನಡುವಿನ ಮಾತುಕತೆ ಪರಸ್ಪರರಿಗೆ ಮಾತ್ರ ಅರಿವಾಗುವ ಸಹೃದಯ ಸಂವಾದ ಇದ್ದಿರಬಹುದೇ?

ಹೀಗೆ ಮೂಲೆ ಹಿಡಿದ ನಿತ್ರಾಣಿ ಮುದುಕರುಗಳು ನಮ್ಮ ಸುತ್ತಲಲ್ಲೂ ಇರುತ್ತಾರೆಕ್ವಾರಂಟೈನ್ ಮುಗಿದ ಮೇಲೆ ಹೋಗಿ ಒಂದಷ್ಟು ಕಾಲ ಅವರೊಂದಿಗಿದ್ದು ಬರಬೇಕು ಎಂದು ನಿರ್ಧರಿಸಿದವನೇ ಅನೇಕ ಹಿರಿಯರ ಮನೆಗೆ ಹೋಗಿ ಮಾತಾಡಿಸಿ ನಮಸ್ಕರಿಸಿ ಬಂದೆ.

ಹೀಗೇ ನೆನಪಾದ ಇತರ ನಾಲ್ಕಾರು ಹಿರಿಯರೊಂದಿಗೆ ಫೋನ್ ಮಾಡಿ ಮಾತಾಡಿದೆ.

ಅಯ್ಯೋ ಅದೇನು ಸಂತಸಸಂಭ್ರಮ!

ನಂದಿರ್ಲಿನೀನೆಂಗಿದ್ದೀಯಾ ಹೇಳೋ?!’ ಎಂದವರೇ ಹೆಚ್ಚು.

 

ಈ ಮೊದಲು ಬಹುವಚನದಲ್ಲೇ ಮಾತಾಡಿಸುತ್ತಿದ್ದರುಅವರ ಈಗಿನ ಏಕವಚನ ಎಷ್ಟು ಆಪ್ಯಾಯಮಾನವಾಗಿ ಕೇಳಿಸಿತು ಗೊತ್ತಾ ?

andolanait

Recent Posts

ಚಾ.ನಗರ | ಶೆಡ್‌, 4ಸಾವಿರ ಕೋಳಿ ಬೆಂಕಿಗಾಹುತಿ ; 25 ಲಕ್ಷ ನಷ್ಟ

ಚಾಮರಾಜನಗರ : ತಾಲೂಕಿನ ದೇವರಾಜಪುರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೋಳಿ ಫಾರಂ ಶೆಡ್‌ಗೆ ಬೆಂಕಿ ತಗುಲಿ ಸುಮಾರು 4…

8 hours ago

ಸಿಎನ್‌ಜಿ ಸಮಸ್ಯೆ ಇಲ್ಲ : ಸಚಿವ ಮುನಿಯಪ್ಪ

ದಾವಣಗೆರೆ : ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ…

9 hours ago

ಬಲಮುರಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು

ಶ್ರೀರಂಗಪಟ್ಟಣ : ಪ್ರವಾಸಕ್ಕೆ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ…

9 hours ago

ದಿನಗೂಲಿ ನೌಕರರಿಗೂ ಆರೋಗ್ಯ ವಿಮಾ ಸೌಲಭ್ಯ

ಬೆಂಗಳೂರು : ಕರ್ನಾಟಕ ಸರ್ಕಾರವು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ…

9 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಹೈಕೋರ್ಟ್‌ ಅಸ್ತು

ಬೆಂಗಳೂರು : ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್…

9 hours ago

ಜನಗಣತಿಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿ ; ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ

ಮೈಸೂರು : ಜಿಲ್ಲೆಯಲ್ಲಿ ಏ.16 ರಿಂದ ಮೇ 15ರವರೆಗೆ ನಡೆಯುವ ಜನಗಣತಿಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜನಗಣತಿಗೂ ಮುನ್ನ ‘ಸ್ವಯಂ…

9 hours ago