ವಿಶ್ವದ ಬಲಿಷ್ಠ ಕೈಗಾರಿಕಾ ದೇಶಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಅಧ್ಯಕ್ಷ ಇಮಾನ್ಯುಯಲ್ ಮೆಕ್ರಾನ್ ಅವರು ಜಾರಿಗೆ ತರಲು ಮುಂದಾಗಿರುವ ಕಾರ್ಮಿಕರ ಪೆನ್ಷನ್ ವ್ಯವಸ್ಥೆ ಸುಧಾರಣೆ ವಿರುದ್ಧ ವಿರೋಧ ಪಕ್ಷಗಳು, ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಚಳವಳಿ ತೀವ್ರಗೊಂಡಿದ್ದು ಹಿಂಸಾಚಾರ ಸಿಡಿದಿದೆ. ಕಳೆದ ಗುರುವಾರ ಪ್ಯಾರಿಸ್‌ನಲ್ಲಿರುವ ಖಾಸಗಿಯಾಗಿ ಪೆನ್ಷನ್ ವ್ಯವಸ್ಥೆ ನಿರ್ವಹಿ–ಸುವ ಬ್ಲಾಕ್ ರಾಕ್ ಕಂಪೆನಿಯ ಕಚೇರಿಯ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ. ಮೆಕ್ರಾನ್ ಅವರಿಗೆ ಇಷ್ಟವಾದ ಪ್ಯಾರಿಸ್ ಬಿಸ್ಟ್ರೋ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿ–ದ್ದಾರೆ. ದೇಶದ ಹಲವೆಡೆ ಹಿಂಸಾಚಾರದಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ವ್ಯಾಪಕ ಪ್ರಮಾಣದಲ್ಲಿ ಸಿಡಿಸಿದ್ದಾರೆ. ಹತ್ತಾರು ಪ್ರತಿಭಟನಾಕಾರರು ಗಾಯಗೊಂಡಿದ್ದು, ನೂರಾರು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.
ಕಳೆದ ಗುರುವಾರ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರೆಂದು ವರದಿಯಾಗಿದೆ. ಮತ್ತೆ ಬರುವ ಗುರುವಾರ ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದು, ದೇಶವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಉದ್ದೇಶಿತ ಪೆನ್ಷನ್ ವ್ಯವಸ್ಥೆ ಸುಧಾರಣೆಗಳ ಬಗ್ಗೆ ಸಂವಿಧಾನ ಮಂಡಳಿ ಶುಕ್ರವಾರ ತನ್ನ ನಿರ್ಧಾರ ಬಹಿರಂಗ ಮಾಡಲಿದೆ. ಈ ಮಂಡಳಿಯ ನಿರ್ಧಾರ ತಮ್ಮ ಪರವಾಗಿರುತ್ತದೆ ಎಂದು ಕಾರ್ಮಿಕ ಸಂಘಗಳು ನಿರೀಕ್ಷಿಸುತ್ತಿವೆ.
ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಚಳವಳಿಗೆ ಪೌರಕಾರ್ಮಿಕರು ಬೆಂಬಲ ನೀಡಿದ್ದರಿಂದಾಗಿ ಪ್ಯಾರಿಸ್ ಸೇರಿದಂತೆ ದೇಶದ ಅನೇಕ ನಗರಗಳು ಕಸದ ತೊಟ್ಟಿಗಳಾಗಿ ಪರಿವರ್ತಿತವಾಗಿವೆ. ರೈಲ್ವೆ, ವಿದ್ಯುತ್, ಸಾರಿಗೆ ಇಲಾಖೆಗಳ ನೌಕರರು ಚಳವಳಿಯಲ್ಲಿ ಭಾಗವಹಿಸಿದ್ದರಿಂದಾಗಿ ದೇಶದಾದ್ಯಂತ ನಾಗರಿಕ ಸೇವೆಗಳು ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಧಾನಿ ಎಲಿಜಬೆತ್ ಬೋರ್ನೆ ಅವರು ಕಟ್ಟಾ ಬಲಪಂಥೀಯ ನಾಯಕಿ ಮರೀನ್ ಲೀ ಪೆನ್, ಎಡಪಂಥೀಯ ನಾಯಕ ಜೀನ್ ಲೂಕ್ ಮೆಲಾಂಕನ್ ಮತ್ತು ಕಾರ್ಮಿಕ ಸಂಘಟನೆಗಳ ನಾಯಕರ ಜೊತೆ ನಡೆಸಿದ ಮಾತುಕತೆಗಳು ಸಫಲವಾಗಿಲ್ಲ. ಸರ್ಕಾರ ಹೇಗೆ ಪಟ್ಟು ಬಿಟ್ಟಿಲ್ಲವೋ ಅದೇ ರೀತಿ ಕಾರ್ಮಿಕ ಸಂಘಟನೆಗಳ ಮುಖಂಡರೂ ತಮ್ಮ ನಿಲುವನ್ನು ಬದಲಿಸಿಲ್ಲ. ಒಂದೇ ಬೇಡಿಕೆ ಪೆನ್ಷನ್ ವ್ಯವಸ್ಥೆ ಸುಧಾರಣೆಯನ್ನು ವಾಪಸ್ ಪಡೆಯಬೇಕು ಎಂಬುದು.
ದೇಶದಲ್ಲೀಗ ಜಾರಿಯಲ್ಲಿರುವ ಪೆನ್ಷನ್ ಪದ್ಧತಿ ಮುಂಬರುವ ವರ್ಷಗಳಲ್ಲಿ ಸರ್ಕಾರಕ್ಕೆ ಆರ್ಥಿಕವಾಗಿ ಭಾರವಾಗಲಿದೆಯಾದ್ದರಿಂದ ಸುಧಾರಣೆಗಳು ಅನಿವಾರ್ಯ ಎಂದು ಮೆಕ್ರಾನ್ ಅವರು ಹೇಳುತ್ತಲೇ ಬಂದಿದ್ದಾರೆ. 2017ರ ಚುನಾವಣೆಗಳ ಪ್ರಚಾರ ಕಾಲದಲ್ಲಿಯೂ ಅವರು ಈ ಅಂಶವನ್ನು ಜನರ ಮುಂದಿಟ್ಟಿದ್ದರು. ವಿರೋಧ ಪಕ್ಷಗಳ ವಿರೋಧ ಜೊತೆಗೆ ಧುತ್ತನೆ ಬಂದೆರಗಿದ ಕೋವಿಡ್‌ನಿಂದಾಗಿ ಪೆನ್ಷನ್ ವ್ಯವಸ್ಥೆ ಸುಧಾರಣೆ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸುವುದನ್ನು ಮುಂದೂಡುತ್ತ ಬರಲಾಯಿತು. ಕಳೆದ ವರ್ಷ ಪಾರ್ಲಿಮೆಂಟಿನ ಕೆಳಮನೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಮೈತ್ರಿ ಕೂಟ ಅನುಭವಿಸಿದ ಸೋಲಿನಿಂದಾಗಿ ಸರ್ಕಾರ ಬಹುಮತ ಕಳೆದುಕೊಂಡಿತು. ಆದರೆ ವಿರೋಧಿಗಳು ಒಂದಾಗದಿದ್ದುದರಿಂದ ಅಲ್ಪಸಂಖ್ಯಾತ ಸರ್ಕಾರ ಅಽಕಾರದಲ್ಲಿ ಮುಂದುವರಿಯಿತು. ವಿರೋಧ ಪಕ್ಷಗಳ ಮನವೊಲಿಸಿ ಪೆನ್ಷನ್ ಕಾನೂನು ಸುಧಾರಣೆ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯುವ ಆಶಯದೊಂದಿಗೆ ಸರ್ಕಾರ ಮುಂದುವರಿಯಿತು. ಕಳೆದ ಜನವರಿಯಲ್ಲಿ ಈ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಲು ಸಿದ್ಧತೆ ನಡೆಸಿತು. ಆದರೆ ಸರ್ಕಾರದ ನಿರೀಕ್ಷೆಯಂತೆ ರಾಜಿ ಸಾಧ್ಯವಾಗಲಿಲ್ಲ. ಆಗ ಪಾರ್ಲಿಮೆಂಟ್ ಮುಂದೆ ತರದೆ ಹಾಗೂ ಸಮ್ಮತಿ ಪಡೆಯದೆ ಕಾನೂನು ಜಾರಿಗೊಳಿಸಲು ಸಂವಿಧಾನದಲ್ಲಿದ್ದ ಅವಕಾಶವನ್ನು ಬಳಸಿಕೊಂಡು ಕಳೆದ ತಿಂಗಳು ಪೆನ್ಷನ್ ಸುಧಾರಣೆ ಮಸೂದೆಗೆ ಅಂಗೀಕಾರ ನೀಡಿ ಸರ್ಕಾರ ಆದೇಶ ಹೊರಡಿಸಿತು. ಈ ಕ್ರಮ ವಿರೋಧ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿತು. ವಿರೋಧ ಪಕ್ಷಗಳು ಸರ್ಕಾರದ ಬಗ್ಗೆ ಅವಿಶ್ವಾಸ ಸೂಚಿಸುವ ಎರಡು ಸೂಚನೆಗಳನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದವು. ಆದರೆ ವಿರೋಽ ರಾಜಕೀಯ ಸರ್ಕಸ್‌ನಲ್ಲಿ ಎರಡೂ ಸೂಚನೆಗಳು ಬಿದ್ದುಹೋದವು. ಈ ಬೆಳವಣಿಗೆ ರಾಷ್ಟ್ರೀಯ ಚಳವಳಿಗೆ ದಾರಿ ಮಾಡಿಕೊಟ್ಟಿದೆ.
ಈಗ ಸರ್ಕಾರ ತರಬಯಸಿರುವ ಪೆನ್ಷನ್ ಸುಧಾರಣೆ ಕಾನೂನಿನ ಪ್ರಕಾರ ನಿವೃತ್ತಿ ವಯಸ್ಸನ್ನು ಈಗಿನ ೬೨ರಿಂದ ೬೪ಕ್ಕೆ ಏರಿಸಲಾಗುವುದು. ಪೂರ್ಣ–ಪ್ರಮಾ–ಣದ ಪೆನ್ಷನ್ ಪಡೆಯಲು ಈಗಿನ ೪೨ವರ್ಷಗಳ ಸೇವಾವಧಿಯನ್ನು 43ಕ್ಕೆ ಏರಿಸಲಾಗುವುದು. ಈ ಅವಽಯನ್ನು ಪೂರ್ಣಗೊಳಿಸಿದವರು ತಮ್ಮ ಮೂಲವೇತನದ ಶೇ.೮೫ರಷ್ಟನ್ನು ಪ್ರತಿತಿಂಗಳ ಪೆನ್ಷ್ಷನ್ ರೂಪದಲ್ಲಿ ಪಡೆಯುತ್ತಾರೆ. ತಡವಾಗಿ ಕೆಲಸಕ್ಕೆ ಸೇರಿದವರು ಕೂಡ 43 ವರ್ಷ ಸೇವಾವಧಿ ಪೂರೈಸಲು ಅವಕಾಶ ಕಲ್ಪಿಸಲಾಗಿದ್ದು, 67 ವರ್ಷಗಳವರೆಗೆ ಉದ್ಯೋಗ ಮಾಡಬಹುದಾಗಿದೆ. ಈಗ ಜಾರಿಯಲ್ಲಿರುವ ಪೆನ್ಷನ್ ಪದ್ಧತಿಯಲ್ಲಿ ೨೦೨೭ರ ವೇಳೆಗೆ ನಿವೃತ್ತರಾಗುವವರಿಗೆ ಕೊಡಬೇಕಿರುವ ವಾರ್ಷಿಕ ಪೆನ್ಷನ್ ವೆಚ್ಚ 13 ಬಿಲಿಯನ್ ಡಾಲರ್ ಆಗಲಿದ್ದು, ಸರ್ಕಾರದ ಮೇಲೆ ಬಾರಿ ಹೊರೆ ಬೀಳಲಿದೆ ಎಂದು ಮೆಕ್ರಾನ್ ಹೇಳಿದ್ದಾರೆ. ಕಾರ್ಮಿಕರು ಪೆನ್ಷನ್‌ಗೆ ಪ್ರತಿ ತಿಂಗಳು ಕೊಡುವ ತಮ್ಮ ಪಾಲಿನ ಹಣ ಮತ್ತು ಸರ್ಕಾರದ ಪಾಲು ಸೇರಿಸಿ ನಿವೃತ್ತಿಯ ನಂತರದ ಹಣ ನಿರ್ಧಾರವಾಗಬೇಕು. ಆದರೆ, ಈಗಿನ ಪದ್ಧತಿಯಲ್ಲಿ ಈ ಹಣಕ್ಕಿಂತ ಹೆಚ್ಚು ಪಟ್ಟು ಪೆನ್ಷನ್ ನೀಡಲಾಗುತ್ತಿದೆ. ೨೦೨೭ರ ವೇಳೆಗೆ ನಿವೃತ್ತಿ ಆಗುವವರ ಸಂಖ್ಯೆ ದುಪ್ಪಟ್ಟಾಗಲಿದ್ದು, ನಿಜವಾದ ಸಮಸ್ಯೆ ಆಗ ಎದುರಾಗಲಿದೆ. ಜನರ ಜೀವಿತಾವಽಯೂ ಹೆಚ್ಚುತ್ತಿದ್ದು, ಹೆಚ್ಚು ವರ್ಷಗಳು ನಿವೃತ್ತಿ ವೇತನ ನೀಡಬೇಕಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಕಾನೂನಿನಲ್ಲಿ ಸುಧಾರಣೆ ಅನಿವಾರ್ಯವಾಗಿದೆ ಎಂಬುದು ಮೆಕ್ರಾನ್ ನಿಲುವು. ಆದರೆ ಮೆಕ್ರಾನ್ ವಾದವನ್ನು ವಿರೋಧಿಗಳು ಒಪ್ಪುವುದಿಲ್ಲ. ಈ ಸಮಸ್ಯೆ ನಿವಾರಣೆಗೆ ಶ್ರೀಮಂತರ ಆದಾಯದ ಮೇಲೆ ಹೆಚ್ಚು ತೆರಿಗೆ ವಿಧಿಸುವುದೂ ಸೇರಿದಂತೆ ಹಲವು ದಾರಿಗಳಿದ್ದವು ಎಂದು ವಿರೋಧಿ ಕಾರ್ಮಿಕ ಸಂಘಟನೆಗಳ ನಾಯಕರು ಹೇಳುತ್ತಾರೆ. ಕಾರ್ಮಿಕರ ಸೇವಾವಽಯನ್ನು ಕಡಿಮೆ ಮಾಡಿ ಪೆನ್ಷನ್ ಹಣ ಹೆಚ್ಚಿಸುವ ಬಗ್ಗೆ ಮೆಕ್ರಾನ್ ಯೋಚಿಸಬೇಕಿತ್ತು ಎನ್ನುವುದು ಅವರ ನಿಲುವು. ಆದರೆ ಯೂರೋಪ್‌ನ ಅಭಿವೃದ್ಧಿ ದೇಶಗಳಲ್ಲಿ ಸರಾಸರಿ ನಿವೃತ್ತಿ ವಯಸ್ಸು ೬೫ ವರ್ಷಗಳಿವೆ. ಶ್ರೀಮಂತ ದೇಶಗಳಲ್ಲಿ ನಿವೃತ್ತರಿಗೆ ಸಾಮಾಜಿಕ ಭದ್ರತೆ ಹೆಸರಿನಲ್ಲಿ ಉಚಿತ ಆರೋಗ್ಯ ಸೇವೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.
ಗ್ರೀಸ್‌ನಲ್ಲಿ ಕಾರ್ಮಿಕರ ನಿವೃತ್ತಿ ವಯಸ್ಸು 67.15 ವರ್ಷಗಳು ಕೆಲಸ ಮಾಡಿದರೆ ಪೂರ್ಣಪ್ರಮಾಣದ ಪೆನ್ಷನ್ ಕೊಡಲಾಗುತ್ತದೆ. ಡೆನ್ಮಾರ್ಕ್, ಇಸ್ರೇಲ್, ಇಟಲಿ ಮುಂತಾದ ದೇಶಗಳಲ್ಲಿಯೂ ನಿವೃತ್ತಿ ವಯಸ್ಸು 67 ಇದ್ದು, ಪೆನ್ಷನ್ ನಿಧಿಗೆ ಕಾರ್ಮಿಕರೂ ಪಾಲು ಕೊಡಬೇಕಾಗುತ್ತದೆ. ಫ್ರಾನ್ಸ್ನಲ್ಲಿಯೂ ಇದೇ ಪದ್ಧತಿ ಜಾರಿಯಲ್ಲಿದೆ. ನಿವೃತ್ತಿ ವಯಸ್ಸನ್ನು ಏರಿಸುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಿಸುತ್ತದೆ ಜೊತೆಗೆ ಕಾರ್ಮಿಕರು ಪೂರ್ಣಪ್ರಮಾಣದಲ್ಲಿ ನಿವೃತ್ತಿ ವೇತನ ಪಡೆಯಲು ನಾಲ್ಕು ದಶಕಗಳಿಗೂ ಹೆಚ್ಚು ವರ್ಷ ದುಡಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದುಡಿಮೆಯ ವರ್ಷಗಳ ಪ್ರಮಾಣವನ್ನು ತಗ್ಗಿಸಲು ಈಗ ಜಾರಿಯಲ್ಲಿರುವ ನಿರುದ್ಯೋಗ ಭತ್ಯೆ ನೀಡಿಕೆ ಯೋಜನೆಯಲ್ಲಿ ಸುಧಾರಣೆ ತರುವ ಅಗತ್ಯವಿತ್ತು. ಸರ್ಕಾರ ದುಡಿಮೆಯ ವರ್ಷಗಳನ್ನು ಹೆಚ್ಚಿಸಿರುವುದು ಕಾರ್ಮಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದೂ ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿರುವ ಸಾಮಾಜಿಕ ಭದ್ರತೆ ವ್ಯವಸ್ಥೆಯೂ ಉತ್ತಮವಾಗಿಲ್ಲ. ಅಂತೆಯೇ ನಿರುದ್ಯೋಗ ಭತ್ಯೆ ಪದ್ಧತಿಯೂ ಜನಪರವಾಗಿಲ್ಲ ಎಂದು ಕಾರ್ಮಿಕ ನಾಯಕರು ಹೇಳುತ್ತಿದ್ದಾರೆ. ಆಸ್ಟ್ರಿಯಾ, ಬೆಲ್ಜಿಯಂ, ಜರ್ಮನಿ, ಐಸ್ಲ್ಯಾಂಡ್, ಲಕ್ಷಮ್ಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ, ಪೋರ್ಚುಗಲ್, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ನಿರುದ್ಯೋಗ ಭತ್ಯೆ ನೀಡುವ ಉತ್ತಮ ಯೋಜನೆಗಳಿರುವುದನ್ನು ವಿರೋಧ ನಾಯಕರು ಪ್ರಸ್ತಾಪಿಸಿದ್ದಾರೆ.
ಮುಂದಿನ ಗುರುವಾರ ನಡೆಯಲಿರುವ ರಾಷ್ಟ್ರೀಯ ಪ್ರತಿಭಟನೆ ಹಿಂಸೆಗೆ ತಿರುಗಿದರೆ ಮೆಕ್ರಾನ್ ರಾಜಕೀಯ ಭವಿಷ್ಯ ಮಂಕಾದಂತೆಯೇ. ಜೊತೆಗೆ ದೇಶ ಕೂಡ ಬಿಕ್ಕಟ್ಟಿಗೆ ಒಳಗಾಗುತ್ತದೆ. ಈಗಾಗಲೇ ಪ್ರತಿಭಟನಾಕಾರರು ಮೆಕ್ರಾನ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಆಗ್ರಹ ಹೆಚ್ಚುವ ಸಾಧ್ಯತೆ ಇದೆ. ಕೋವಿಡ್ ಪಿಡುಗು, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ, ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಫ್ರಾನ್ಸ್ ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗಿದೆ. ಇಂಥ ಸಂದರ್ಭದಲ್ಲಿ ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಇದು ದೇಶದ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಉದ್ದೇಶಿತ ಸುಧಾರಣೆಗಳ ಬಗ್ಗೆ ವಿರೋಧಿ ನಾಯಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಮೆಕ್ರಾನ್ ಸರ್ಕಾರ ವಿಫಲವಾಗಿದೆ. ಪ್ರತಿಭಟನೆ ಮುಂದುವರಿದರೆ ಮೆಕ್ರಾನ್ ಅವರ ಮುಂದಿರುವ ಮತ್ತಷ್ಟು ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟವಾಗಬಹುದು. ಸದ್ಯಕ್ಕೆ ಫ್ರಾನ್ಸಿನಲ್ಲಿ ನಡೆಯುತ್ತಿರುವ ಚಳವಳಿಯ ಪರಿಣಾಮ ಯುರೋಪಿನ ಇತರ ದೇಶಗಳಲ್ಲಿ ಕಾಣಿಸುತ್ತಿಲ್ಲ. ಫ್ರಾನ್ಸ್ ಯೂರೋಪಿನ ಮುಖ್ಯ ದೇಶವಾಗಿರುವುದರಿಂದ ಯಾವುದೇ ದೀರ್ಘಕಾಲೀನ ಚಳವಳಿ ಸಹಜವಾಗಿಯೇ ಇತರ ದೇಶಗಳ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರದೇ ಇರದು.
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…