ಎಡಿಟೋರಿಯಲ್

ಸಂಪಾದಕೀಯ : ಕಾಡು ಪ್ರಾಣಿಗಳ ರಕ್ಷಣೆಗೆ ಬೇಕಿದೆ ಸೂಕ್ತ ಕ್ರಮ

ಶ್ರೇಯಸ್ ದೇವನೂರು

ಪ್ರಕೃತಿಯಲ್ಲಿ ಮನುಷ್ಯನು ಸೃಷ್ಟಿಸಿರುವ ಹಸ್ತಕ್ಷೇಪಗಳು ಇಂದು ಮಾನವ -ಪ್ರಾಣಿಗಳ ಸಂಘರ್ಷಕ್ಕೆ ಬಹುದೊಡ್ಡ ಕಾರಣಗಳಾಗಿ ಪರಿಣಮಿಸಿವೆ. ಕಾಡಿನಿಂದ ನಾಡಿಗೆ ಬಂದು ಪ್ರಾಣಿಗಳು ದಾಳಿ ಮಾಡಿದಾಗ ಅವುಗಳ ವಿರುದ್ಧ ಒಗ್ಗೂಡುವ ಧ್ವನಿಗಳು, ಕಾಡಿನಲ್ಲಿಯೇ ಮನುಷ್ಯನಿಂದ ಅವುಗಳಿಗಾಗುವ ಅಪಾಯಗಳಿಗೆ ಮೌನವಹಿಸುತ್ತವೆ.

ಪ್ರಸ್ತುತ ದಿನಗಳಲ್ಲಿ ಪ್ರಾಣಿಗಳಿಂದ ಮನುಷ್ಯನ ಮೇಲೆ, ಮನುಷ್ಯನಿಂದ ಪ್ರಾಣಿಗಳ ಮೇಲೆ ದಾಳಿ ಹೆಚ್ಚಾಗತೊಡಗಿದೆ. ಉದ್ದೇಶ ಪೂರ್ವಕ ವಾಗಿ ನಡೆಯುತ್ತಿರುವ ಕಳ್ಳಬೇಟೆಗಳು ಒಂದೆಡೆ ಯಾದರೆ, ಅಪಘಾತದಂತಹ ಸಂದರ್ಭಗಳಲ್ಲಿ ಪ್ರಾಣಿಗಳು ಹೆಚ್ಚು ಜೀವ ಕಳೆದುಕೊಳ್ಳುತ್ತಿವೆ. ಇತ್ತೀಚೆಗೆ ಬಂಡೀಪುರದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಆನೆಯ ವರೆಗೂ ಮನುಷ್ಯನಿಂದ ಪ್ರಾಣ ಕಳೆದುಕೊಂಡ ಪ್ರಾಣಿಗಳ ಸಾಕಷ್ಟು ಉದಾಹರಣೆಗಳನ್ನು ನೋಡಬಹುದಾಗಿದೆ.

ಈ ಸಾವುಗಳಿಗೆ ಕಾರಣವೇನು? ಹುಡುಕುತ್ತಾ ಹೋದರೆ ಬೆರಳು ನಮ್ಮತ್ತ ತೋರುತ್ತದೆ. ಈಗಾಗಲೇ ಸಾಕಷ್ಟು ಪ್ರಮಾಣದ ಕಾಡು ನಶಿಸಿದೆ. ಜೊತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ರಾಷ್ಟ್ರೀಯ ಹೆದ್ದಾರಿ ಎಂಬ ಹೆಸರಿನಲ್ಲಿ ಅತಿಯಾಗಿ ಅಭಿವೃದ್ಧಿಗೊಂಡು ವಾಹನಗಳ ಸಂಖ್ಯೆ ಮತ್ತು ವೇಗ ಹೆಚ್ಚಾಗಲು ಕಾರಣವಾಗಿದೆ. ಬಂಡೀಪುರದಲ್ಲಿಯೂ ಇದೇ ಸಮಸ್ಯೆಯನ್ನು ಕಾಣಬಹುದಾಗಿದೆ.

ರಸ್ತೆ ಅಭಿವೃದ್ಧಿ ಮಾಡುವುದು ಸಂಚಾರಕ್ಕೆ ಪೂರಕವಾಗಿದ್ದರೆ, ಪ್ರಾಣಿಗಳ ಜೀವಕ್ಕೆ ಅದುಮಾರಕವಾಗಿದೆ. ಹುಲಿ, ಚಿರತೆ, ಜಿಂಕೆ, ಲಂಗೂರ್‌ನಂತಹ ಪ್ರಾಣಿಗಳು,ಸಾಕಷ್ಟು ಬಾರಿ ಪಕ್ಷಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗಿದ್ದು, ಪ್ರಾಣಿ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.

ಬಂಡೀಪುರ ಅರಣ್ಯದೊಳಗಿನ ರಸ್ತೆಯಲ್ಲಿ ಸಂಚಾರ ನಿಯಮಗಳು ಸಡಿಲವಾಗಿವೆಯೇ? ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ. ಬಂಡೀಪುರದಲ್ಲಿ ರಾತ್ರಿ ೯ರಿಂದ ಬೆಳಿಗ್ಗೆ ೬ಗಂಟೆವರೆಗೂ ಕಾಡಂಚಿನ ೨ ಗೇಟ್‌ಗಳನ್ನು ಬಂದ್ ಮಾಡುವ ಕಾರಣ ಅಷ್ಟರೊಳಗೆ ಗೇಟ್ ದಾಟಲು ವಾಹನಗಳು ಅತಿಯಾದ ವೇಗದಲ್ಲಿ ಸಂಚಾರ ಮಾಡುವುದರಿಂದ ರಾತ್ರಿ ವೇಳೆಯೇ ಅಪಘಾತಗಳು ಹೆಚ್ಚಾಗಲು ಕಾರಣವಾಗಿವೆ. ಅಪಘಾತಗಳನ್ನು ತಪ್ಪಸಿ ಪ್ರಾಣಿಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಒಂದಲ್ಲ ಒಂದು ಕಡೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಬಹುಶಃ ಆ ತಂತ್ರಜ್ಞಾನದ ಬಳಕೆ ಕಾಡಿನ ರಸ್ತೆಗಳಲ್ಲಾದರೆ ಇಂತಹ ಅಪಘಾತಗಳನ್ನು ತಪ್ಪಿಸಲು ಉಪಯೋಗವಾಗಬಹುದಾಗಿದೆ. ಕಾಡಿನಲ್ಲಿ ಹಾದುಹೋಗುವ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ವಯಂ ಚಾಲಿತವಾಗಿ ವಾಹನದ ವೇಗ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಿ ನಿಗದಿತ ವೇಗಕ್ಕಿಂತ ಅತಿಯಾಗಿ ಚಾಲನೆ ಮಾಡುವವರನ್ನು ಗುರುತಿಸಿ ಕೂಡಲೆ ಆ ವಾಹನಗಳಿಗೆ ದಂಡ ಅಥವಾ ಕಾನೂನು ಕ್ರಮ ಜರುಗಿಸಬೇಕಿದೆ. ಇದು ಉಳಿದ ವಾಹನಚಾಲಕರಿಗೆ ಎಚ್ಚರಿಕೆ ಯಾಗಲಿದೆ. ಜೊತೆಗೆ ಅರಣ್ಯದೊಳಗೆ ರಸ್ತೆಯಲ್ಲಿ ಅಲ್ಲಲ್ಲಿ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸುವುದು ಸೂಕ್ತವೆನಿಸುತ್ತದೆ. ಇನ್ನು ರಾತ್ರಿಯ ವೇಳೆ ಅರಣ್ಯದೊಳಗಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧ ಮಾಡುವುದು ಮತ್ತಷ್ಟು ಸೂಕ್ತವೆನಿಸುತ್ತದೆ. ಹಾಗೆಯೇ ಪ್ರವಾಸಿಗರು ವಾಹನ ನಿಲ್ಲಿಸಿ ಪ್ರಾಣಿಗಳಿಗೆ ಕೀಟಲೆ ಮಾಡುವುದು, ಮದ್ಯವ್ಯಸನಿಗಳು ಕಾಡಿನಲ್ಲಿ ವಾಹನ ನಿಲ್ಲಿಸಿ ಮದ್ಯ ಸೇವನೆ ಮಾಡುವ ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಅವುಗಳಿಗೆ ಸೂಕ್ತ ಕಾನೂನು ಕ್ರಮವಾದಲ್ಲಿ ಮಾತ್ರ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯ.

ರಾತ್ರಿಯ ವೇಳೆ ವಾಹನಗಳ ಬೆಳಕು ಪ್ರಾಣಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಬೆಳಕಿನ ತೀವ್ರತೆಗೆ ಅವು ದಿಕ್ಕು ಕಾಣದೆ ರಸ್ತೆ ಬಿಟ್ಟು ಹೋಗಲಾ ರದೇ ವಾಹನಗಳಿಗೆ ಸಿಲುಕುವ ಸಾಧ್ಯತೆಯೇ ಹೆಚ್ಚು ಅದರಲ್ಲೂ ನಿಶಾಚರಿ ಪ್ರಾಣಿಗಳೇ ಹೆಚ್ಚಾಗಿ ಸಿಲುಕುತ್ತವೆ. ಆದ್ದರಿಂದ ವನ್ಯಸಂಪತ್ತು ಹೆಚ್ಚಾಗಿರುವ ಬಂಡೀಪುರದಂತಹ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ಕೊಂಚ ಬ್ರೇಕ್ ನೀಡಬೇಕಿದೆ. ಏಕೆಂದರೆ ನಮ್ಮಂತೆಯೇ ಮುಂದಿನ ಪೀಳಿಗೆಯೂ ಪ್ರಾಣಿಗಳನ್ನು ನೈಜ್ಯವಾಗಿ ನೋಡಬೇಕಿದೆ ಅಲ್ಲವೇ?

andolanait

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

3 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

3 hours ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

3 hours ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

3 hours ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

3 hours ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

3 hours ago