ಎಡಿಟೋರಿಯಲ್

ದುಷ್ಟ ಸಿದ್ಧಾಂತಿಗಳ ಹುಸಿ ಓಲೈಕೆ!

-ಕೆ.ವೆಂಕಟರಾಜು, ಚಾಮರಾಜನಗರ

ದೇವನೂರ ಮಹಾದೇವ ಅವರ ‘ಆರೆಸೆಸ್- ಆಳ, ಅಗಲ’ ಕೃತಿಯ ಬಗ್ಗೆ ಪ್ರಸನ್ನ ಅವರ ಲೇಖನ ಪ್ರಕಟವಾಗಿದೆ. ಆರೆಸೆಸ್ ಅನ್ನು ವಿರೋಧಿಸುತ್ತಿದ್ದ ಮಾರ್ಕ್ಸ್‌ವಾದಿಗಳು , ಸಮಾಜವಾದಿಗಳು ಮತ್ತು ಗಾಂಧಿವಾದಿಗಳು ವಿವಿಧ ಸಂದರ್ಭದಲ್ಲಿ ಕೈ ಜೋಡಿಸಿದ್ದಾರೆ ಎಂದು ಹೇಳಿ ಎರಡು ಸಂದರ್ಭ ಉಲ್ಲೇಖಿಸುತ್ತಾರೆ.

೧೯೭೧ ರ ಲೋಕಸಭಾ (ಮಧ್ಯಂತರ) ಚುನಾವಣೆ ಸಂದರ್ಭ. ಪ್ರೊ. ಎಮ್. ಗೋಪಾಲಕೃಷ್ಣ ಅಡಿಗರು ಬೆಂಗಳೂರಿನಲ್ಲಿ ಜನಸಂಘದಿಂದ ಚುನಾವಣೆಗೆ ನಿಂತಾಗ ಆರೆಸೆಸ್ ಜತೆ ಕಮ್ಯುನಿಸ್ಟರು, ಸಮಾಜವಾದಿಗಳು ಕೈಗೂಡಿಸಿದ್ದರು ಎಂದು ಹೇಳಿದ್ದಾರೆ. ಇದು ಅರ್ಧ ಸತ್ಯ. ಕಾಂಗ್ರೆಸ್ಸೇತರ ಚಳವಳಿ (ಇದನ್ನು ಲೋಹಿಯಾ ಹಿಂದೆಯೇ ಪ್ರಬಲವಾಗಿ ಪ್ರತಿಪಾದಿಸಿ ಜನಸಂಘವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಇದಕ್ಕೆ ಹಿಂದೆ ರಾಷ್ಟ್ರಪತಿ ಚುನಾವಣೆಯಲ್ಲಿ ಕೋಕಾ ಸುಬ್ಬರಾವ್ ಅವರನ್ನು ಬೆಂಬಲಿಸಿ ಈ ಕೂಟದ ಆರಂಭವಾಗಿತ್ತು ) ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಸನ್ನು ಅಥವಾ ಆಡಳಿತ ಪಕ್ಷವನ್ನೂ ವಿರೋಧಿಸಿ ಅಡಿಗರನ್ನು ಬೆಂಬಲಿಸಿ ಕೆಲಸ ಮಾಡಿದರು. ಆರೆಸೆಸ್‌ನವರೂ ಕೆಲಸ ಮಾಡಿದರು ಇತರರೂ ಕೆಲಸ ಮಾಡಿದರು. ಬೆಂಗಳೂರಿನಲ್ಲಿ ಕೇಶವ ಕೃಪಾದಲ್ಲಿ ಮೀಟಿಂಗ್‌ಗಳು ನಡೆದಿರಬಹುದು.

ಈ ಚುನಾವಣಾ ವ್ಯಾವಹಾರ ಹೊರತು ಪಡಿಸಿ ಸಹಕಾರ, ಸ್ನೇಹ ಇತ್ಯಾದಿ ಯಾವುವೂ ಇರಲಿಲ್ಲ. ಇನ್ನು ಬಿಜೆಪಿ ಹುಟ್ಟಿದ ಸಂದರ್ಭದ ಮಾತು ಆಡುತ್ತಾರೆ. ಅವರು ಆಗ ಹೇಳಿದ ಗಾಂಧಿಪ್ರಣೀತ ಸಮಾಜವಾದವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಜನರನ್ನು ಯಾಮಾರಿಸಲು ಈ ಪದ ಪುಂಜ ಬಳಸಲಾಗಿತ್ತು. ಆರ್‌ಎಸ್‌ಎಸ್ಸಿನ ಗೆಳೆಯರು ಒಳಿತಿನ ಭಾವಾವೇಷಕ್ಕೆ ಒಳಗಾಗಿ ಎಂದು ಪ್ರಸನ್ನ ಬರೆಯುತ್ತಾರೆ. ಯಾವ ಒಳಿತೂ, ಯಾವ ಭಾವಾವೇಷವೂ ಇರಲಿಲ್ಲ. ಆಡಳಿತದಲ್ಲಿದ್ದ ಜನತಾ ಇಂದ ಹೊರಬಂದ ಜನಸಂಘದ ಗುಂಪು ಬಿಜೆಪಿ ಮಾಡಿಕೊಂಡಿತು. (ಜನತಾ ಸರಕಾರ ಗಬ್ಬೇಳಲು ಜನಸಂಘದ ಗುಂಪಿನ ದೇಣಿಗೆಯೂ ಇದೆ. ಕೊನೆಗೆ ಇದನ್ನು ಚರಣ್ ಸಿಂಗ್ ಮತ್ತು ರಾಜನಾರಾಯಣ್ ತಲೆಗೆ ಕಟ್ಟಲಾಯಿತು.) ಆಗ ಗಾಂಧಿಪ್ರಣೀತ ಸಮಾಜವಾದ ಎಂಬ ಅರ್ಥಹೀನ ಬಾವುಟ ಏರಿಸಲಾಯಿತು. ಹಾಗೆ ನೋಡಹೋದರೆ ೧೯೭೭ರಲ್ಲಿ ಜನತಾ ಸರಕಾರ ಕೇಂದ್ರದಲ್ಲಿ ಬಂದಾಗ ಬಹಳ ಅಲ್ಪ ಕಾಲಕ್ಕೆ ಒಂದು ರೀತಿಯ ಸಹಕಾರ ಇತ್ತು. ಅಧಿಕಾರ ಸಿಮೆಂಟ್ ಅಲ್ಲವೇ ? ಇದರಿಂದ ದೊಡ್ಡ ಹೊಡೆತ ಬಿದ್ದಿದ್ದು ಸಮಾಜವಾದಿ ಪಕ್ಷಕ್ಕೆ . ದೇಶದ ಎಲ್ಲ ಕಡೆ ಸೋಷಲಿಸ್ಟ್ ಕಚೇರಿ ಮುಚ್ಚಿ ಮೇಜು ಕುರ್ಚಿ ಸಮೇತ ಅವರು ಜನತಾ ಕಚೇರಿಗೆ ಬಂದರು !!

ಹೌದು ನಮ್ಮ ವಿರೋಧಿಗಳು ಶತ್ರುಗಳೇನಲ್ಲ. ಅವರನ್ನು ದ್ವೇಷಿಸಬೇಕಾದ ಅಗತ್ಯ ಇಲ್ಲ. ಇದು ಪ್ರಜಾಪ್ರಭುತ್ವದ ನಿಯಮ ಹಾಗೂ ಸನ್ನಡತೆ. ಆದರೆ ಪ್ರಸನ್ನರ ಮಾತುಗಳು ಅನಗತ್ಯವಾಗಿ ಒಂದು ದುಷ್ಟ ಸಿಧ್ದಾಂತಿಗಳ ಹುಸಿ ಓಲೈಕೆಯಂತೆ ಕಾಣುತ್ತದೆ.

 

andolana

Recent Posts

ಇರಾನ್‌ ಮೇಲೆ ಅಮೇರಿಕಾ ಭೀಕರ ದಾಳಿ: ಟಾಪ್‌ ಕಮಾಂಡರ್‌ಗಳ ಹತ್ಯೆ

ಟೆಹರಾನ್:‌ ಟೆಹರಾನ್‌ ಮೇಲೆ ಅಮೇರಿಕಾ ನಡೆಸಿದ ಬೃಹತ್‌ ದಾಳಿಯಲ್ಲಿ ಇರಾನಿನ ಮಿಲಿಟರಿ ಪಡೆಯ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ. ಈ…

39 mins ago

ಮಡಿಕೇರಿ: ಶರಣ್ಯಾಳಿಗಾಗಿ ಇಂದು ಕೂಡ ತೀವ್ರಗೊಂಡ ಶೋಧ ಕಾರ್ಯಾಚರಣೆ

ಮಡಿಕೇರಿ: ತಡಿಯಂಡಮೋಳ್‌ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ನಾಪತ್ತೆಯಾಗಿ ಮೂರು ದಿನಗಳು ಕಳೆದರೂ ಈವರೆಗೂ…

52 mins ago

ಓದುಗರ ಪತ್ರ: ರೈಲು ಟಿಕೆಟ್ ರದ್ದತಿ ಹೊಸ ನಿಯಮದ ಬಗ್ಗೆ ಅರಿವಿರಲಿ

ಭಾರತೀಯ ರೈಲ್ವೆ ಇಲಾಖೆಯು ಕಾಯ್ದಿರಿಸುವ ಮುಂಗಡ ಟಿಕೆಟ್ ರದ್ದತಿಯ ಬಗ್ಗೆ ಹೊಸ ನಿಯಮವನ್ನು ಏಪ್ರಿಲ್ ೧ರಿಂದ ಜಾರಿಗೆ ತಂದಿದೆ. ಪ್ರಯಾಣಿಸುವ…

2 hours ago

ಓದುಗರ ಪತ್ರ: ಅಂಚೆ ಕಚೇರಿಯಲ್ಲಿ ಹೆಚ್ಚುವರಿ ಕೌಂಟರ್ ತೆರೆಯಿರಿ

ಮೈಸೂರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ನಿಧಾನಗತಿಯಲ್ಲಿ ಕೆಲಸ ಸಾಗುತ್ತಿದೆ. ಹಿರಿಯ…

2 hours ago

ಓದುಗರ ಪತ್ರ: ಇರುವುದರಲ್ಲೇ ತೃಪ್ತಿ ಕಾಣಬೇಕು

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ! ಜನಪ್ರಿಯ ಕವಿ ಗೋಪಾಲಕೃಷ್ಣ ಅಡಿಗರ ಕವನದ ಈ ಸಾಲು ಇಂದಿನ ಕಾಲಮಾನದ ಜನಮಾನಸಕ್ಕೆ…

2 hours ago

ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್

ಎಚ್.ಹಾಲಪ್ಪ ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಅಪೂರ್ಣ ಎಂದು ನಂಬಿದ್ದ ತಮ್ಮ ಕಾರ್ಯಪ್ರವೃತ್ತಿಯಿಂದ ಸಮಾಜದಲ್ಲಿ ಸಮಾನತೆಯನ್ನು ಜೀವಂತಗೊಳಿಸಿದ ದೇಶದಾದ್ಯಂತ ಬಾಬೂಜಿ ಎಂದೇ…

4 hours ago