ಮಹಿಳೆಯರಿಗಾಗಿ 2 ವರ್ಷಗಳ ಅವಧಿಯ ವಿಶೇಷ ಉಳಿತಾಯ ಯೋಜನೆ
ಗರಿಷ್ಠ 2 ಲಕ್ಷ ರೂ. ಠೇವಣಿಗೆ ವಾರ್ಷಿಕ ಶೇ.7.5ರ ಆಕರ್ಷಕ ಬಡ್ಡಿ
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಯೋಜನೆ
ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಮಿತಿ ಹೆಚ್ಚಳದ ಕೊಡುಗೆ
ಗರಿಷ್ಠ ಠೇವಣಿ ಮಿತಿ 15 ಲಕ್ಷದಿಂದ 30 ಲಕ್ಷ ರೂ. ಗಳಿಗೆ ಏರಿಕೆ
60ರ ಮೇಲ್ಪಟ್ಟ ನಾಗರಿಕರ ಹಣದ ಹೂಡಿಕೆಗೆ ಸುರಕ್ಷಿತ ಮಾರ್ಗ
ಹಿರಿಯ ನಾಗರಿಕರ ಮಾಸಿಕ ಆದಾಯ ಯೋಜನೆ ಮಿತಿಯೂ ದುಪ್ಟಟ್ಟು
ಗರಿಷ್ಠ ಠೇವಣಿ ಮೊತ್ತ 9 ಲಕ್ಷಕ್ಕೆ ಏರಿಕೆ, ಜಂಟಿ ಖಾತೆ ಮೊತ್ತ 15 ಲಕ್ಷಕ್ಕೆ ಏರಿಕೆ
ಲೋಕೇಶ್ ಕಾಯರ್ಗ
ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ಯಾರಿಗೂ ಹೊರೆಯಾಗದೆ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿ ಮಾಸಿಕ ಬಡ್ಡಿಯಿಂದ ಜೀವನ ನಿರ್ವಹಣೆ ಮಾಡಿಕೊಂಡು ಬರಬೇಕೆನ್ನುವುದು ನಿವೃತ್ತಿದಾರರ ಕನಸು. ಬರುತ್ತಿರುವ ಆದಾಯದಲ್ಲಿ ಅಲ್ಪಸ್ವಲ್ಪ ಹಣವನ್ನು ಕೂಡಿಡಬೇಕೆನ್ನುವುದು ಗೃಹಿಣಿಯರ ಆಸೆ. ಆದರೆ ಕಳೆದ ಕೆಲವು ವರ್ಷಗಳಿಂದ ಉಳಿತಾಯ ಯೋಜನೆಗಳ ಬಡ್ಡಿ ಇಳಿಯುತ್ತಲೇ ಬಂದಿದೆ. 80-90 ರ ದಶಕದಲ್ಲಿ ಶೇ.12ರಷ್ಟಿದ್ದ ಸಾರ್ವಜನಿಕ ಭವಿಷ್ಯನಿಧಿ ಬಡ್ಡಿದರ ಈಗ 7ರ ಆಸುಪಾಸಿನಲ್ಲಿದೆ. ಹಣದುಬ್ಬರದ ಈ ದಿನಗಳಲ್ಲಿ ಇಷ್ಟು ಕಡಿಮೆ ಬಡ್ಡಿಯಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟ. ಹೆಚ್ಚು ಬಡ್ಡಿ ಸಿಗುವ ಆಸೆಯಿಂದ ಕೆಲವರು ಖಾಸಗಿ ಸಹಕಾರಿ ಸಂಸ್ಥೆಗಳು ಸೇರಿದಂತೆ ವಿಶ್ವಾಸಾರ್ಹವಲ್ಲದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದೂ ಇದೆ. ಕೇಂದ್ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸುತ್ತಿದ್ದ ನಾಗರಿಕರಿಗೆ ಕಳೆದ ಕೆಲವು ವರ್ಷಗಳಿಂದ ನಿರಾಶೆಯೇ ಕಾದಿತ್ತು. ಆದರೆ ಈ ಬಾರಿ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸಾಂತ್ವನ, ಸಮಾಧಾನ ನೀಡಿದೆ.
ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿಯೇ ಪ್ರಕಟಿಸಿರುವ ವಿಶೇಷ ಯೋಜನೆ ಇದು. 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆ ಅಂಗವಾಗಿ ಘೋಷಿಸಿರುವ ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಮಹಿಳೆ ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಎರಡು ವರ್ಷಗಳ ಅವಧಿಗೆ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದರ ಮೇಲೆ ವಾರ್ಷಿಕ ಶೇ.7.5ರ ಬಡ್ಡಿಯನ್ನು ನೀಡಲಾಗುವುದು. ಈ ಯೋಜನೆ ಮಾರ್ಚ್ 2025 ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯಲ್ಲಿ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಸದ್ಯಕ್ಕೆ ಎರಡು ವರ್ಷಗಳ ಅವಧಿಯ ಠೇವಣಿಗೆ ಬ್ಯಾಂಕುಗಳಲ್ಲಿ ಶೇ. 6ರಿಂದ ಶೇ. 6.5 ರಷ್ಟು ಬಡ್ಡಿ ದರವಿದೆ. ಇದಕ್ಕೆ ಹೋಲಿಸಿದರೆ ಇದು ಅತ್ಯಂತ ಆಕರ್ಷಕ ಯೋಜನೆಯಾಗಿದೆ. ತುರ್ತು ಸಮಯದಲ್ಲಿ ಭಾಗಶಃ ವಾಪಸಾತಿ ಸೌಲಭ್ಯ ಸಹ ಇರಲಿದೆ. ಮಹಿಳೆಯರಲ್ಲಿ ಸಣ್ಣ ಉಳಿತಾಯಕ್ಕೆ ಉತ್ತೇಜನ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ.
ಹಿರಿಯ ನಾಗರಿಕರಿಗೆ ಗರಿಷ್ಠ ಠೇವಣಿ ಮಿತಿ ಹೆಚ್ಚಳ
ಹಿರಿಯ ನಾಗರಿಕರಿಗೆ ಈ ತನಕ ಗರಿಷ್ಠ 15 ಲಕ್ಷ ರೂ.ಹಣ ಠೇವಣಿ ಇಡಲು ಅವಕಾಶವಿತ್ತು. 2023ರ ಕೇಂದ್ರ ಬಜೆಟ್‌ನಲ್ಲಿ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷ ರೂ. ಗಳಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಸೇವೆಯಿಂದ ನಿವೃತ್ತರಾದ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಸದ್ಯ ಕನಿಷ್ಠ ಸಾವಿರ ರೂ. ಗಳ ಹೂಡಿಕೆ ಇರುವ ಈ ಉಳಿತಾಯ ಯೋಜನೆಗೆ ಶೇ. 7.4ರಷ್ಟು ಬಡ್ಡಿ ನೀಡಲಾಗುತ್ತಿದೆ. ಆಂದರೆ ಗರಿಷ್ಟ 15 ಲಕ್ಷ ರೂ. ಠೇವಣಿ ಇಟ್ಟರೂ ತಿಂಗಳಿಗೆ 9250 ರೂ. ಬಡ್ಡಿ ಆದಾಯ ಸಿಗುತ್ತಿತ್ತು. ಇನ್ನು ಮುಂದೆ 30 ಲಕ್ಷ ರೂ. ತನಕ ಠೇವಣಿ ಇಟ್ಟು ಮಾಸಿಕ ದುಪ್ಟಟ್ಟು ಬಡ್ಡಿ ಆದಾಯ ಪಡೆಯಲು ಅವಕಾಶವಿದೆ. ಬ್ಯಾಂಕ್‌ಗಳಲ್ಲಿ ಅಥವಾ ಅಂಚೆ ಕಚೇರಿಗಳಲ್ಲಿ ಈ ಠೇವಣಿ ತೆರೆಯಲು ಅವಕಾಶವಿದೆ. ಆದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಮಾತ್ರ ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. 55ರ ಬಳಿಕ ವಿಆರ್‌ಎಸ್ (ಸ್ವಯಂ ನಿವೃತ್ತಿ ಯೋಜನೆ) ತೆಗೆದುಕೊಂಡವರು ಕೂಡ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು.
ಇದೇ ವೇಳೆ, ಮಾಸಿಕ ಆದಾಯ ಯೋಜನೆಯ ಮಿತಿಯನ್ನೂ ದ್ವಿಗುಣಗೊಳಿಸಲಾಗಿದೆ. ಇದುವರೆಗೆ ಮಾಸಿಕ ಆದಾಯ ಖಾತೆ ಯೋಜನೆಯಡಿ ಒಂದು ಖಾತೆಯಲ್ಲಿ ಗರಿಷ್ಠ 4.5 ರೂ. ಠೇವಣಿ ಇಡಲು ಅವಕಾಶವಿತ್ತು. ಈ ಮೊತ್ತವನ್ನು 9 ಲಕ್ಷ ರೂ. ಗಳಿಗೆ ಏರಿಸಲಾಗಿದೆ. ಪತಿ-ಪತ್ನಿಯರ ಹೆಸರಿನ ಜಂಟಿ ಖಾತೆ ಠೇವಣಿ ಮಿತಿಯನ್ನು 9 ಲಕ್ಷದಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಈ ಠೇವಣಿಗೆ ಶೇ.6ರ ಆಸುಪಾಸಿನಲ್ಲಿ ಬಡ್ಡಿ ನೀಡಲಾಗುತ್ತಿದೆ.
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…
ನ್ಯೂ ಇಯರ್ ಸೆಲಬ್ರೇಷನ್‌ಗೆ ದಿನಗಣನೆ ಬೆಂಗಳೂರು: 2024ನ್ನು ಮುಗಿಸಿ 2025ನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಸದ್ಯ…