ಎಡಿಟೋರಿಯಲ್

ಕಾಣದ ಆರ್ಥಿಕ ಜವಾಬ್ದಾರಿ, ಶಿಸ್ತು ಪ್ರದರ್ಶನ

ರಾಜಾರಾಂ ತಲ್ಲೂರುಹಿರಿಯ ಪತ್ರಕರ್ತ

 ಭಾರತ ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2023-24 ನೇ ಸಾಲಿನ ಬಜೆಟ್‌ಅನ್ನು ಸ್ಥೂಲವಾಗಿ ನೋಡಿದರೆಇದು ಚುನಾವಣೆಗೆ ಪೂರ್ವ ತಯಾರಿಯ ಬಜೆಟ್ ಎಂದು ತೋರುತ್ತದೆಇಲ್ಲಿ ಸತ್ವಕ್ಕಿಂತ ನೊರೆಯೇ ಜಾಸ್ತಿ ಇದೆಬಜೆಟ್ಟಿಗಿಂತಲೂ ಬಜೆಟ್ ಸಾಗುತ್ತಿರುವ ದಾರಿ ಎಬ್ಬಿಸುತ್ತಿರುವ ಕೆಲವು ಪ್ರಶ್ನೆಗಳು ನನಗೆ ಮಹತ್ವದ್ದು ಅನ್ನಿಸುತ್ತದೆಅವನ್ನು ವಿವರವಾಗಿ ಗಮನಿಸೋಣ.

ಕೃಷಿ ಕಾರ್ಪೊರೇಟೀಕರಣದ ಹಾದಿ

ಬಜೆಟ್‌ನಲ್ಲಿ ನನಗೆ ಅತ್ಯಂತ ಕೌತುಕದ್ದೆನಿಸಿದ್ದು ಕೃಷಿರಂಗದಲ್ಲಿ ಹಣಕಾಸು ಸಚಿವರು ಮಾಡಿರುವ ಪ್ರಕಟಣೆಗಳುಕೃಷಿ ಕಾರ್ಪೊರೇಟೀಕರಣಕ್ಕೆಂದು ತಂದಿದ್ದ ಕಾಯಿದೆಗಳನ್ನ್ನು ಸರ್ಕಾರ ರೈತ ಹೋರಾಟಗಳ ಬಳಿಕ ಹಿಂತೆಗೆದುಕೊಂಡಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ಈ ಪ್ರಕಟಣೆಗಳನ್ನು ನೋಡಬೇಕುಕೃಷಿ ಮಾತ್ರವಲ್ಲದೇ ಪಶುಸಂಗೋಪನೆಮೀನುಗಾರಿಕೆಡೈರಿ ಫಾರ್ಮಿಂಗ್‌ಗಳಿಗೆ ಕೂಡ 20 ಲಕ್ಷ ಕೋಟಿ ರೂ.ಗಳ ಟಾರ್ಗೆಟೆಡ್ ಸಾಲ ಸೌಲಭ್ಯಸಹಕಾರಿ ಇಲಾಖೆಯ ಸಹಾಯದಿಂದ ದಾಸ್ತಾನುಮಾರಾಟ ಸೌಲಭ್ಯಕೃಷಿಗೆ ತಂತ್ರಜ್ಞಾನದ ಬೆಂಬಲ ಇತ್ಯಾದಿಗಳನ್ನು ಪ್ರಕಟಿಸಲಾಗಿದೆಇವೆಲ್ಲವೂ ಕೃಷಿಯ ಕಾರ್ಪೊರೇಟೀಕರಣದತ್ತಲೇ ಮುಖಮಾಡಿದ ಪ್ರಕಟಣೆಗಳುಹಾಗಿದ್ದರೆ ಕೃಷಿಯಲ್ಲಿ ಶಾಸನದ ಬಲವಿಲ್ಲದೇ ಈ ಉದ್ದೇಶಿತ ‘ಸ್ಕೇಲ್’ ಸಾಽಸುವುದು ಹೇಗೆ?

ಈ ಪ್ರಶ್ನೆಗೆ ಉತ್ತರ ಎಲ್ಲಿದೆ ಎಂದರೆಕರ್ನಾಟಕ ಸಹಿತ ಯಾವುದೇ ರಾಜ್ಯಗಳು ತಾವು ಈಗಾಗಲೇ ಜಾರಿಗೆ ತಂದಿರುವ ಕೃಷಿ ಕಾರ್ಪೊರೇಟೀಕರಣದ ಕಾನೂನುಗಳನ್ನು ಹಿಂದೆಗೆದುಕೊಂಡಿಲ್ಲಹಾಗಾಗಿ ಒಕ್ಕೂಟ ಸರ್ಕಾರ ರಾಜ್ಯಗಳ ಹೆಗಲ ಮೇಲೆ ಬಂದೂಕು ಇರಿಸಿರೈತರತ್ತ ಗುಂಡು ಹಾರಿಸಲು ಹೊರಟಿದೆ ಎಂಬುದು ಸ್ಪಷ್ಟ.

ಒಕ್ಕೂಟ ವ್ಯವಸ್ಥೆಯ ಮೇಲೆ ಕಣ್ಣು

ಹಾಲಿ ಸರ್ಕಾರಕ್ಕೆ ಆರಂಭದಿಂದಲೂ ಕೇಂದ್ರರಾಜ್ಯ ಸಂಬಂಧಗಳ ಮೇಲೆ ಕಣ್ಣಿದೆಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ಸಹಕಾರ ಇಲಾಖೆಯ ಮೂಲಕ ಅಂತಾರಾಜ್ಯ ದಾಸ್ತಾನುಲಾಜಿಸ್ಟಿಕ್ಸ್ ಸರಪಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಯಾವ ಮಟ್ಟಿಗೆ ರಾಜ್ಯಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿದೆ ಎಂದರೆರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ಕೇಂದ್ರದಿಂದ ದೊರೆಯುವ ಬಡ್ಡಿರಹಿತ ಸಾಲ ನೀಡುವಾಗತಮ್ಮ ಇಚ್ಛೆಗೆ ಪೂರಕವಾದ ನೀತ್ಯಾತ್ಮಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಇನ್ಸೆಂಟಿವೈಸ್ ಮಾಡುತ್ತೇವೆ ಎಂದು ಹೇಳಿಈ ವರ್ಷ ಅದಕ್ಕಾಗಿ 1.3 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಿದೆ.

ಒಕ್ಕೂಟ ಸರ್ಕಾರಕ್ಕೆ ಕೇವಲ ಕೇಂದ್ರಪಟ್ಟಿ ಮತ್ತು ಜಂಟಿಪಟ್ಟಿಗಳ ಮೇಲೆ ಮಾತ್ರ ಕಣ್ಣಿಟ್ಟುಕೊಂಡಿದ್ದರೆ ನೀತಿ ನಿರೂಪಣೆಯಲ್ಲಿ ಕಳೆದು ಹೋಗುವ ಭಯ ಇರುವುದರಿಂದಅದರ ಬದಲು ರಾಜ್ಯಗಳ ಪಟ್ಟಿಯಲ್ಲೂ ಕೈಯಾಡಿಸುವ ಆಸೆ ಇರುವುದರಿಂದ (ಇದು ಸ್ಥೂಲವಾಗಿ ಹೇಳಬೇಕೆಂದರೆ ಶಾಸಕರ ಜವಾಬ್ದಾರಿಗಳಲ್ಲಿ ಸಂಸದರು ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶಕೊಡುವ ನೀತ್ಯಾತ್ಮಕ ತೀರ್ಮಾನ!) ರಾಜ್ಯ ಸರ್ಕಾರಗಳ ಮೊಣಕೈಗೆ ಬೆಲ್ಲ ಹಚ್ಚುವ ಪ್ರಯತ್ನದಂತೆ ಕಾಣಿಸುತ್ತಿದೆಇದಕ್ಕೆ ರಾಜ್ಯ ಸರ್ಕಾರಗಳು ಒಪ್ಪಿ ತಲೆಯಾಡಿಸಿದರೆಅದು ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು.

ಡೇಟಾ ಆಟಗಳು

kyc ಪ್ರಕ್ರಿಯೆಯನ್ನು ಸರಳೀಕರಿಸಿ, ‘ವನ್ ಸೈಜ್ ಫಿಟ್ಸ್ ಆಲ್’ ಮಾಡುವ ಮಾತನ್ನು ಸಚಿವರು ಆಡಿದ್ದಾರೆಜೊತೆಗೆ ಎಲ್ಲ ವ್ಯವಹಾರಗಳಿಗೂ Pan ಹೆಗ್ಗುರುತಾಗಲಿದೆ ಎಂದಿದ್ದಾರೆಇವೆರಡೂ ಒಳ್ಳೆಯ ಬೆಳವಣಿಗೆಆದರೆ ಇವೆರಡೂ ಬೆಳವಣಿಗೆಗಳನ್ನು ಕೂಡ ಎಚ್ಚರಿಕೆಯಿಂದ ಗಮನಿಸಬೇಕಿದೆಮೊದಲನೆಯದಾಗಿಇವನ್ನೆಲ್ಲ ಒಂದು ಕೇಂದ್ರೀಕೃತ ಯೋಜನೆಯಿಲ್ಲದೇ ರೂಪಿಸಿದ್ದೂ ಅವರೇಮತ್ತೀಗ ಸುಧಾರಿಸಿ ರಿಪೇರಿ ಮಾಡುತ್ತಿರುವುದೂ ಅವರೇಇದಲ್ಲದೇ ಬಜೆಟಿನುದ್ದಕ್ಕೂ ಟೆಕ್ನಾಲಜಿ ಬಳಸಿ ಆಡಳಿತ ಸುಧಾರಿಸುವ ಹಲವು ಸಂಗತಿಗಳು ಪ್ರಸ್ತಾಪವಾಗಿವೆಆದರೆಈಗ ಡೇಟಾ ಸುರಕ್ಷತೆಯ ಕಾನೂನು ಜಾರಿಗೆ ಬರುವ ಮೊದಲೇ ಇಂತಹದನ್ನೆಲ್ಲ ಮಾಡುವುದರ ಅಂತಿಮ ಪರಿಣಾಮಗಳು ಏನೇನು ಎಂಬುದನ್ನು ಪರಿಗಣನೆಗೆ ತೆಗೆದುಕೊಂಡುಈ ಸುಧಾರಣೆಗಳ ಫಲಿತಾಂಶಗಳನ್ನು ಗುರುತಿಸಬೇಕು.

ಆದಾಯ ತೆರಿಗೆದಾರರ ಇಳಿಕೆ?

ಕಳೆದ ಮಾರ್ಚ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಸಚಿವರು 2019-20ನೇ ಸಾಲಿನಲ್ಲಿ 8.22 ಕೋಟಿ ಮಂದಿ ಭಾರತೀಯರು ಆದಾಯ ತೆರಿಗೆದಾರರು ಎಂದು ಹೇಳಿದ್ದರುಆದರೆ ಈಗ ಕೊರೊನಾ ಮುಗಿದ ಬಳಿಕದ ಇಂದಿನ ಬಜೆಟ್‌ನಲ್ಲಿ ಸಚಿವರು ಆದಾಯ ತೆರಿಗೆ ಇಲಾಖೆ 6.5 ಕೋಟಿ ರಿಟರ್ನ್ಸ್‌ಗಳನ್ನು ಸಂಸ್ಕರಿಸಿದೆ ಎಂದು ಹೇಳಿದ್ದಾರೆಅಂದರೆ ಕೋವಿಡ್ ಕಾಲದಲ್ಲಿ ಸುಮಾರು ಎರಡು ಕೋಟಿಯಷ್ಟು ಜನ ಮಧ್ಯಮ ವರ್ಗದವರು ಆದಾಯ ತೆರಿಗೆ ಬಲೆಯಿಂದ ಜಾರಿ ಹೋಗುವಷ್ಟು ಬಡವರಾಗಿದ್ದಾರೆ ಎಂದು ಅದಿಕೃತವಾಗಿಯೇ ಒಪ್ಪಿಕೊಂಡಂತಾಯಿತು.

ಒಟ್ಟಿನಲ್ಲಿ, gdpಯ 5.9ನಷ್ಟು ಹಣಕಾಸು ಕೊರತೆ ಹೊಂದಿರುವ ಬಜೆಟ್ ಅನ್ನು ಮಂಡಿಸುವಾಗ ಸರ್ಕಾರ ತೋರಿಸಬೇಕಿದ್ದ ಆರ್ಥಿಕ ಜವಾಬ್ದಾರಿ ಮತ್ತು ಶಿಸ್ತನ್ನು ಈ ಬಜೆಟ್ ತೋರಿಸಿಲ್ಲಬದಲಾಗಿ ಸಾಲ ತಂದು ತುಪ್ಪ ತಿನ್ನುವ ಕೆಲಸಕ್ಕೆ ಮುಂದಾದಂತಿದೆ ಎಂಬುದು ಬಜೆಟ್ ಬಗ್ಗೆ ನನ್ನ ಅಭಿಪ್ರಾಯ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago