ಎಡಿಟೋರಿಯಲ್

ದೆಹಲಿ ಧ್ಯಾನ : ಪ್ರಧಾನಿಯವರು ಕೆಂಗಣ್ಣು ಬಿಟ್ಟು ಚೀನಾವನ್ನು ಹೆದರಿಸುವುದು ಯಾವಾಗ?

ಅರುಣಾಚಲ ಪ್ರದೇಶದ ತವಾಂಗ್ ವಲಯದ ಯಾಂಗ್ಸೇ ಎಂಬಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಜರುಗಿರುವ ಘರ್ಷಣೆ ಗಾಲ್ವನ್ ಕಣಿವೆಯ ಹಳೆಯ ಕಹಿ ನೆನಪುಗಳನ್ನು ಕೆದರಿದೆ. ಎರಡು ವರ್ಷಗಳ ಹಿಂದಿನ ಈ ಮಾರಾಮಾರಿಯಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಉಭಯ ಸೇನೆಗಳ ನಡುವಣ ಘರ್ಷಣೆ ಇದೀಗ ಪ್ರತಿ ವರ್ಷ ತಪ್ಪದೆ ನಡೆಯುವ ವಿದ್ಯಮಾನ. ಆದರೆ ಈ ಘರ್ಷಣೆಗಳಿಗೆ ಚೀನಾ ಹೂಡುತ್ತಿರುವ ತನ್ನ ಯೋಧರ ಸಂಖ್ಯೆ ಹೆಚ್ಚುತ್ತಲೇ ನಡೆದಿರುವುದು ಕಳವಳದ ಸಂಗತಿ. ಮಿಲಿಟರಿ ಪರಿಣತರ ಪ್ರಕಾರ ಯಾಂಗ್ಸೆ ಆಕ್ರಮಣಕ್ಕೆ ನುಗ್ಗಿ ಬಂದಿದ್ದ ಚೀನೀ ಯೋಧರ ಸಂಖ್ಯೆ ೨೦೦ರಿಂದ ೬೦೦ಕ್ಕೂ ಹೆಚ್ಚು ಸೈನಿಕರ ಜಮಾವಣೆಯ ಅರ್ಥ ತೀವ್ರ ದಟ್ಟ ಘರ್ಷಣೆ ಮತ್ತು ತೀವ್ರ ಪ್ರಾಣಹಾನಿ. ಗಾಲ್ವನ್ ಕಣಿವೆಯ ಸಾವುನೋವುಗಳ ಮರುಕಳಿಕೆ.

ಕಳೆದ ಶುಕ್ರವಾರದ ಈ ಘಟನೆಯನ್ನು ‘ದಿ ಹಿಂದೂ’ ಪತ್ರಿಕೆ ಕಳೆದ ಸೋಮವಾರ ವರದಿ ಮಾಡಿದ ನಂತರವೇ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಕಳೆದ ಮಂಗಳವಾರ ಹೇಳಿಕೆ ನೀಡಿದರು. ತಾವಾಗಿಯೇ ಈ ವಿವರಗಳನ್ನು ಸಂಸತ್ತಿನೊಂದಿಗೆ ಹಂಚಿಕೊಳ್ಳಲಿಲ್ಲ.

ಯಾಂಗ್ಸೆಯನ್ನು ಭಾರತ ೧೯೮೭ರಲ್ಲಿ ಆಕ್ರಮಿಸಿಕೊಂಡಿತ್ತು. ಯಾಂಗ್ಸೆ ತನ್ನ ಭೂಪ್ರದೇಶವೆಂಬುದು ಭಾರತದ ದಾವೆಯಾಗಿತ್ತು. ಆದರೂ ೧೯೮೭ರವರೆಗೆ ವಶಪಡಿಸಿಕೊಂಡಿರಲಿಲ್ಲ. ಚೀನೀ ಆಕ್ರಮಿತ ಟಿಬೆಟ್ ಮತ್ತು ಭಾರತದ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ನಡುವಣ ಸುಮ್ಡೋರಾಂಗ್ ಎಂಬ ಪ್ರದೇಶವನ್ನು ೧೯೮೭ರಲ್ಲಿ ಚೀನಾ ಆಕ್ರಮಿಸಿಕೊಂಡಿತು. ಈ ಕೃತ್ಯಕ್ಕೆ ಪ್ರತಿಯಾಗಿ ಯಾಂಗ್ಸೆಯನ್ನು ಭಾರತ ತನ್ನ ಕೈಗೆ ತೆಗೆದುಕೊಂಡಿತ್ತು. ಯಾಂಗ್ಸೆ ಭಾರತದ ವಶಕ್ಕೆ ಜಾರಿದ್ದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ನುಂಗಲಾರದ ತುತ್ತಾಗಿತ್ತು. ೯೦ರ ದಶಕದ ಮಧ್ಯಭಾಗದಲ್ಲಿ ನಡೆದ ರಾಜೀ ಸಂಧಾನದಿಂದ ಈ ಘರ್ಷಣೆ ಕೊನೆಯಾಗಿತ್ತು.

ಇತ್ಯರ್ಥವಾಗಿದ್ದ ಈ ವಿಚಾರವನ್ನು ಚೀನಾ ಇದೀಗ ಮತ್ತೆ ಕೆದಕುತ್ತಿದೆ. ಯಥಾಸ್ಥಿತಿಯನ್ನು ಚೀನಾ ಏಕಪಕ್ಷೀಯವಾಗಿ ಬದಲಿಸಲು ಯಾಂಗ್ಸೆಯ ಪ್ರವೇಶಕ್ಕೆ ಮುಂದಾಗಿದೆ ಎಂದಿದ್ದಾರೆ ರಕ್ಷಣಾ ಸಚಿವ ರಾಜನಾಥಸಿಂಗ್.

ಕಳೆದ ಆರು ವರ್ಷಗಳಿಂದ ಪ್ರತಿ ವರ್ಷವೂ ಈ ಸೀಮೆಯನ್ನು ಸೆಪ್ಪೆಂಬರ್-ಡಿಸೆಂಬರ್ ನಡುವೆ ಅತಿಕ್ರಮಿಸಿ ಯಾಂಗ್ಸೆ ತನ್ನದೆಂಬ ದಾವೆಯನ್ನು ಮತ್ತೆ ಮತ್ತೆ ಸ್ಥಾಪಿಸತೊಡಗಿದೆ ಎನ್ನುತ್ತಾರೆ ಪರಿಣತರು.

ವಾಸ್ತವ ಗಡಿ ರೇಖೆಯಿಂದ ಕೇವಲ ೨೫೦ ಮೀಟರುಗಳ ದೂರದಲ್ಲಿ ೧೧ ಸಾವಿರ ಅಡಿಗಳ ಎತ್ತರದಿಂದ ಧುಮುಕುವ ಜಲಪಾತವಿದೆ. ಅದರ ಹೆಸರು ಚುಮಿ ಗ್ಯಾತ್ಸೆ ಚೀನೀ ಆಕ್ರಮಿತ ಟಿಬೆಟ್ ಮತ್ತು ಭಾರತದ ಗಡಿಯಾಚೆಯ ಮತ್ತು ಈಚೆಯವರೂ ಈ ಜಲಪಾತವನ್ನು ಆರಾಽಸುತ್ತಾರೆ. ೧೦೮ ಜಲಪಾತಗಳ ಸಂಗಮದ ಪವಿತ್ರ ಜಲಪಾತವಿದು ಎಂದು ನಂಬಲಾಗಿದೆ. ಗುರು ಪದ್ಮಸಂಭವ ತನ್ನ ಜಪಮಾಲೆಯನ್ನು ಬಂಡೆಯೊಂದಕ್ಕೆ ಎಸೆದು ರಾಚಿದಾಗ ೧೦೮ ತೊರೆಗಳು ಚಿಮ್ಮಿ ಹರಿದವು ಎಂಬ ಕತೆಯೊಂದು ಈ ಸೀಮೆಯಲ್ಲಿ ಪ್ರಚಲಿತ. ಎರಡು ವರ್ಷಗಳ ಹಿಂದೆ ಈ ಪರಿಸರದಲ್ಲಿ ಬೌದ್ಧ ಮಠ- ದೇವಾಲಯವೊಂದು ಎರಡು ವರ್ಷದ ಹಿಂದೆ ತಲೆಯೆತ್ತಿತು. ಭಾರತ ಸರ್ಕಾರ ಈ ಜಲಪಾತ ತಲುಪಲು ರಸ್ತೆಯೊಂದನ್ನೂ ನಿರ್ಮಿಸಿದೆ. ಈ ಸೀಮೆಯ ಎಲ್ಲ ಎತ್ತರದ ಪ್ರದೇಶಗಳೂ ಭಾರತದ ಸೇನೆಯ ವಶದಲ್ಲಿವೆ. ಚೀನೀ ಸೇನೆಯ ಚಲನವಲನದ ಮೇಲೆ ಕಣ್ಣಿರಿಸುವುದು ಭಾರತಕ್ಕೆ ಸಲೀಸು. ಈ ಎತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಸೇನೆಯನ್ನು ಇರಿಸಬೇಕೆಂಬುದು ಚೀನಾದ ಗಂಭೀರ ಇರಾದೆ.

ಯಾಂಗ್ಸೆ ಸೇನಾ ತಾಣವನ್ನು ಕಾಯುತ್ತಿದ್ದ ಭಾರತೀಯ ಯೋಧರ ಸಂಖ್ಯೆ ಕೇವಲ ಐವತ್ತರ ಆಸುಪಾಸು. ಸುಲಭವಾಗಿ ಮಣಿಸಿ ಒಳನುಗ್ಗುವ ಅಂದಾಜು ಚೀನೀಯರದು. ೨೦೦ ರಿಂದ ೬೦೦ ಮಂದಿ ಚೀನೀ ಯೋಧರು ಮೊಳೆಗಳ ನೆಟ್ಟ ಬಡಿಗೆಗಳ ಹಿಡಿದು ಯಾಂಗ್ಸೆ ತಾಣವನ್ನು ಭೇದಿಸಲು ಎರಗಿದರು. ಆದರೆ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಭಾರತೀಯ ಯೋಧರು ಮುಂದೆ ಮಾಡಿದ ದಿಟ್ಟ ಪ್ರತಿರೋಧ ಚೀನೀಯರನ್ನು ತಡೆದು ನಿಲ್ಲಿಸಿತ್ತು.

ಅರ್ಧ ತಾಸಿನಲ್ಲೇ ಭಾರತೀಯ ಯೋಧರು ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಚೀನೀಯರನ್ನು ಹಿಮ್ಮೆಟ್ಟಿಸಿದರು. ಈ ಸೀಮೆಯಲ್ಲಿ ಮಾರಕ ಅಸ್ತ್ರಗಳ ಪ್ರಯೋಗ ಸಲ್ಲದೆಂಬ ಒಪ್ಪಂದದ ಅಂಗವಾಗಿ ಎರಡು ಅಣ್ವಸ್ತ್ರ ಶಕ್ತಿಗಳು ಹೀಗೆ ಬಡಿಗೆಗಳನ್ನು ಹಿಡಿದು ಎಲುಬು ಮುರಿಯುವ ಮತ್ತು ಬುರುಡೆ ಬಿಚ್ಚುವ ಬಡಿದಾಟದಲ್ಲಿ ತೊಡಗಿವೆ. ಭಾರತೀಯ ಯೋಧರನೇಕರು ಮೂಳೆ ಮುರಿದು ಗಾಯಗೊಂಡಿದ್ದಾರೆ. ಶತ್ರು ಪಾಳೆಯದಲ್ಲಿ ಹೀಗೆ ಗಾಯಗೊಂಡಿರುವ ಸೈನಿಕರ ಸಂಖ್ಯೆ ಭಾರತಕ್ಕಿಂತ ದುಪ್ಪಟ್ಟು ಎಂದು ಸಮಾಧಾನಪಡಲಾಗುತ್ತಿದೆ. ಲದ್ದಾಖ್ ಮತ್ತು ಚೀನಾ ಗಡಿಗಳಲ್ಲಿನ ಘರ್ಷಣೆಗಳ ಕುರಿತು ಸರ್ಕಾರ ಸಂಸತ್ತಿನಲ್ಲಿ ಬಾಯಿ ಬಿಡದೆ ಎರಡು ವರ್ಷಗಳೇ ಉರುಳಿವೆ. ಇದೊಂದು ಅತಿ ಸೂಕ್ಷ್ತ್ರ್ಮ ಗಡಿ ವಿಷಯವಾಗಿದ್ದು, ನಮ್ಮ ಯೋಧರ ಪರಾಕ್ರಮವನ್ನು ಪ್ರಶ್ನಿಸಿದಂತಾಗುತ್ತದೆ ಎಂಬುದು ಸರ್ಕಾರ ನೀಡುವ ಸಮಜಾಯಿಷಿ. ತನ್ನ ಬೇಹುಗಾರಿಕೆ ವೈಫಲ್ಯಗಳ ಮೇಲೆ ಮುಸುಕು ಹೊದಿಸಲು ನೆಹರೂ ಯುಗದ ತಪ್ಪು ತಡೆಗಳು ಮತ್ತು ರಾಜೀವಗಾಂಽ ಪ್ರತಿಷ್ಠಾನಕ್ಕೆ ಚೀನೀ ಕೊಡುಗೆಯ ಗುರಾಣಿಗಳನ್ನು ಅಡ್ಡ ಹಿಡಿಯುತ್ತಿದೆ.

೨೦೨೦ರಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ದಂಡೆತ್ತಿ ಭಾರತದ ಸೀಮೆಯೊಳಕ್ಕೆ ನುಗ್ಗಿ ರಸ್ತೆ ನಿರ್ಮಿಸಿ, ಮನೆಗಳನ್ನು ಕಟ್ಟಿತ್ತು. ಉಪಗ್ರಹ ಚಿತ್ರಗಳ ಪುರಾವೆಗಳು ಕೂಡ ಈ ಅತಿಕ್ರಮಣವನ್ನು ರುಜುವಾತು ಮಾಡಿದ್ದವು. ಆದರೂ ‘ಭಾರತೀಯ ಸೀಮೆಗೆ ಯಾರೂ ನುಗ್ಗಿಲ್ಲ, ಅದನ್ನು ಯಾರೂ ಆಕ್ರಮಿಸಿಲ್ಲ’ ಎಂಬುದಾಗಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದುಂಟು. ಈ ಸಲ ಗೃಹಸಚಿವ ಅಮಿತ್ ಶಾ ಅವರು ಇಂತಹುದೇ ಮಾತುಗಳನ್ನು ಸಂಸತ್ತಿನಲ್ಲಿ ಪುನರುಚ್ಚರಿಸಿದ್ದಾರೆ- ಮೋದಿಯವರು ಅಽಕಾರದಲ್ಲಿರುವ ತನಕ ಭಾರತದ ಒಂದೇ ಒಂದು ಅಂಗುಲ ನೆಲವನ್ನೂ ಯಾರೂ ಆಕ್ರಮಿಸುವುದು ಸಾಧ್ಯವಿಲ್ಲ.

ಆರನೇಯ ದಲೈಲಾಮ ಹುಟ್ಟಿರುವ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎನ್ನುತ್ತಿದ್ದ ಟಿಬೆಟ್, ಈ ಭೂಭಾಗವನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತಿತ್ತು. ಟಿಬೆಟ್ಟನ್ನು ಆಕ್ರಮಿಸಿರುವ ಚೀನಾ ತವಾಂಗ್ ತನ್ನದು ಎಂಬ ದಾವೆ ಹೂಡಿದೆ. ಮುಂದಿನ ದಲೈಲಾಮಾರನ್ನು ಆರಿಸುವ ಹಕ್ಕು ತನ್ನದು ಎನ್ನುತ್ತಿದೆ.

ಗಡಿ ತಂಟೆಗಳನ್ನು ಬಗೆಹರಿಸಿಕೊಳ್ಳದೆ ತನಗೆ ಬೇಕಾದಾಗಲೆಲ್ಲ ಮತ್ತೆ ಮತ್ತೆ ಜೀವಂತಗೊಳಿಸಿ ಭುಗಿಲೆಬ್ಬಿಸುವುದು ಚೀನೀ ತಂತ್ರ. ಯಾಂಗ್ಸೆ ಘರ್ಷಣೆ ಕೂಡ ಈ ತಂತ್ರದ ಭಾಗ. ಯಾಂಗ್ಸೆ ಘರ್ಷಣೆಯು ಗಡಿ ಭಾಗದಲ್ಲಿ ಶಾಂತಿ ಸ್ಥಾಪನೆಯನ್ನು ಬಿಸಿಲುಗುದುರೆಯಾಗಿಸಿದೆ.

ಅರುಣಾಚಲ ಪ್ರದೇಶಕ್ಕೆ ಅಂಟಿಕೊಂಡಂತೆ ಹೊಸ ರಸ್ತೆಗಳು, ಬೇಕೆಂದಾಗ ಸೇನೆಯ ಬಳಕೆಗೆ ಅವಕಾಶ ಕೊಡಬಹುದಾದ ಸಮೃದ್ಧ ಚೀನೀ ಗ್ರಾಮಗಳನ್ನು ಚೀನಾ ಉದ್ದೇಶಕ್ಕೆ ನೇರವಂತಿಕೆ ಇಲ್ಲ. ೧೯೬೨ರ ಯುದ್ಧದಲ್ಲಿ ಚೀನೀಯರು ಆಕ್ರಮಿಸಿಕೊಂಡಿದ್ದ ಪ್ರದೇಶವಿದು. ಆನಂತರ ಹಿಂದೆ ಸರಿದು ೨೦ ಕಿ.ಮೀ. ಹಿಂದೆ ಹೋಗಿತ್ತು. ಎರಡು ತಿಂಗಳ ಹಿಂದೆ ಚೀನಾ ಹೊರಡಿಸಿದ ನಕಾಶೆಯೊಂದರಲ್ಲಿ ಅರುಣಾಚಲ ಪ್ರದೇಶ ಮತ್ತು ಲದ್ದಾಖ್ ನ್ನು ತನ್ನ ಪ್ರದೇಶಗಳೆಂದು ಗುರುತಿಸಿಕೊಂಡಿದೆ. ತಾವು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಽಯಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಚೀನೀ ನೀತಿಯನ್ನು ಕಟುವಾಗಿ ಟೀಕಿಸಿದ್ದರು ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ. ಕೆಂಗಣ್ಣು ತೋರಿಸಿ ಚೀನಾವನ್ನು ಹಿಮ್ಮೆಟ್ಟಿಸಬೇಕು ಎಂದು ಸಿಂಗ್ ಅವರಿಗೆ ತಾಕೀತು ಮಾಡಿ ಅಣಕವಾಡಿದ್ದರು. ಪ್ರಧಾನಿಯಾಗಿ ಎಂಟು ವರ್ಷಗಳು ದಾಟಿವೆ. ಮೋದಿಯವರು ಕೆಂಗಣ್ಣು ಬಿಟ್ಟು ಚೀನಾವನ್ನು ಹೆದರಿಸುವುದು ಯಾವಾಗ ಎಂದು ದೇಶ ಕಾಯುತ್ತಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago