ಎಡಿಟೋರಿಯಲ್

‘ಪ್ರಭುತ್ವ’ಕ್ಕೆ ಸವಾಲು, ನಾಮದ ಬಲವೊಂದಿದ್ದರೆ ಸಾಕೊ…

 

   ನ್ಯಥಾ ಭಾವಿಸಬಾರದಾಗಿ ವಿನಂತಿಶೀರ್ಷಿಕೆ ನೋಡಿದ ಕೂಡಲೇ ಅಂಕಣ ಚುನಾವಣೆಯತ್ತ ಹೊರಳಿತು ಎಂದು ಖಂಡಿತ ತಿಳಿದುಕೊಳ್ಳಬಾರದು. ‘ಪ್ರಭುತ್ವ’ಕ್ಕೆ ಸವಾಲು ಎಂದು ಹೇಳಿರುವುದು ಸೀಮಿತವಾಗಿ ಈ ಹೆಸರಿನ ಚಿತ್ರವೊಂದಕ್ಕೆ ಸಂಬಂಧಪಟ್ಟಂತೆ ಮಾತ್ರ. ‘ಪ್ರಜಾಪ್ರಭುತ್ವ’ದ ಸವಾಲಿನ ಕುರಿತು ಇಲ್ಲಿ ಯಾವುದೇ ಮಾತಿಲ್ಲಅದನ್ನು ಓದುಗ/ಮತದಾರ ಮಹಾಪ್ರಭು ಅವರವರ ಭಾವಅವರವರ ಭಕುತಿಗೆ ಅನುಗುಣವಾಗಿ ತಿಳಿದುಕೊಳ್ಳುತ್ತಾರೆ.

ನಾಮದ ಬಲ’ ಕೂಡಚುನಾವಣೆಯಾಗಲಿಅದಕ್ಕೆ ಯಾರದೋ ಹೆಸರಿನ ಪ್ರಸ್ತಾಪವಾಗಲಿ ಇಲ್ಲಿ ಮಾಡುವುದಿಲ್ಲಇದು ತಮ್ಮ ಚಿತ್ರದ ಶೀರ್ಷಿಕೆಯ ಕುರಿತಂತೆ ಎದ್ದ ವಿವಾದಅದರ ಬೆಳವಣಿಗೆವಸ್ತುಸ್ಥಿತಿ ಇತ್ಯಾದಿ ಪ್ರಸಂಗಗಳ ಮಾತು.

ಮೊದಲು ಈ ‘ನಾಮ’ದತ್ತಲೇ ಬರೋಣಇತ್ತೀಚೆಗೆ ಶೀರ್ಷಿಕೆಯೊಂದು ತಮಗೆ ಸಲ್ಲಬೇಕು ಎಂದು ಸುದ್ದಿಯಾದದ್ದು ‘ರೋಸಿ’ ಹೆಸರಿಗೆಒಂದು ‘ರೋಸಿ’ಇನ್ನೊಂದು ‘ರೋಸಿ 45’. ‘ರೋಸಿ’ ಹೆಸರಿನ ಚಿತ್ರ ಇತ್ತೀಚೆಗೆ ಸೆಟ್ಟೇರಿತುಇದು ಲೂಸ್ ಮಾದ ಖ್ಯಾತಿಯ ಯೋಗಿ ಅಭಿನಯದ ೫೦ನೇ ಚಿತ್ರಯೋಗೀಶ್ ತೆರೆಯ ಮೇಲೆ ಲೂಸ್ ಮಾದ ಆಗಿ ಕಾಣಿಸಿಕೊಂಡದ್ದುಮಾವ ವಿಜಯ್ ಮುಖ್ಯಭೂಮಿಕೆಯ ‘ದುನಿಯಾ’ ಮೂಲಕಆ ಪಾತ್ರದ ಹೆಸರು ಅವರ ಹೆಸರಿಗೆ ಅಂಟಿಕೊಂಡಿತುಸಣ್ಣಪುಟ್ಟ ಪಾತ್ರಗಳಿಂದ ಮುಖ್ಯ ಭೂಮಿಕೆಗೆ ಜಿಗಿದ ಯೋಗೀಶ್ ಆಗಲೇ ಐವತ್ತರ ಹೊಸ್ತಿಲಲ್ಲಿದ್ದಾರೆಮೊನ್ನೆ ಅವರ ಐವತ್ತನೇ ಚಿತ್ರದ ಹೆಸರಿನ ಅನಾವರಣ ಮತ್ತು ಮುಹೂರ್ತ ಆಯಿತುವೈ.ರಾಜೇಶ್ಡಿ.ವೈ.ವಿನೋದ್ ಅವರಿಗಾಗಿ ‘ಹೆಡ್‌ಬುಷ್’ ಖ್ಯಾತಿಯ ಶೂನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆಯೋಗೀಶ್ ಪ್ರಕಾರ ಅವರು ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು.

ಶಿವರಾಜ್‌ಕುಮಾರ್ 60ನೇ ಜನ್ಮದಿನದ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಪ್ರಕಟಣೆ ಆಗಿತ್ತುಸಂಗೀತ ಸಂಯೋಜಕ ಅರ್ಜುನ್ ಜನ್ಯ ಹೇಳಿದ ಕಥೆಯನ್ನು ಇಷ್ಟಪಟ್ಟ ಶಿವಣ್ಣಅವರಿಂದಲೇ ಆ ಚಿತ್ರವನ್ನು ನಿರ್ದೇಶಿಸಲು ಹೇಳಿದರುಹೆಸರಾಂತ ನಿರ್ಮಾಪಕರಾದ ‘ನಾತಿಚರಾಮಿ’, ‘ಗಾಳಿಪಟ 2’ ಚಿತ್ರಗಳ ಖ್ಯಾತಿಯ ರಮೇಶ್ ರೆಡ್ಡಿ ಇದನ್ನು ನಿರ್ಮಿಸುವುದಾಗಿಯೂ ಪ್ರಕಟವಾಯಿತುಆಗ ಮೊದಲ ನೋಟದಲ್ಲಿದ್ದ ಹೆಸರು ‘45’ಅಖಿಲ ಭಾರತ ಮಟ್ಟದಲ್ಲಿತೆರೆಗೆ ಬರಲಿರುವ ಈ ಚಿತ್ರದಲ್ಲಿ ಶಿವಣ್ಣ ಅವರೊಂದಿಗೆ ಉಪೇಂದ್ರರಾಜ್ ಬಿ.ಶೆಟ್ಟಿ ಅವರೂ ಪ್ರಮುಖ ಪಾತ್ರಧಾರಿಗಳು ಎಂದೂ ಹೇಳಲಾಯಿತು.

ಈ ನಡುವೆ ನಿರ್ಮಾಣ ಸಂಸ್ಥೆ ‘45’ರ ಬದಲು ‘ರೋಸಿ 45’ ಶೀರ್ಷಿಕೆಯನ್ನು ವಾಣಿಜ್ಯ ಮಂಡಳಿಯಿಂದ ಕೇಳಿರಬೇಕುವಾಣಿಜ್ಯ ಮಂಡಳಿ ಅದಕ್ಕೆ ಅನುಮತಿ ನೀಡಿದೆಈ ಹೆಸರನ್ನು ಶಿವರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸೂರಜ್ ಪ್ರೊಡಕ್ಷನ್ಸ್‌ಗೆ ನೋಂದಾಯಿಸಲಾಗಿದೆಈಗ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ಅದೇ ಹೆಸರನ್ನು ಇಟ್ಟಿದೆಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ಇದು ಬಂದಿದ್ದುಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಪತ್ರ ನೀಡಿತ್ತುಹಾಗಾಗಿ ಈ ಶೀರ್ಷಿಕೆ ತನ್ನದು ಎಂದು ಸೂರಜ್ ಸಂಸ್ಥೆ ಹೇಳಿಕೊಂಡಿತ್ತು.

ತಮ್ಮ ಅಭಿನಯದ ಐವತ್ತನೇ ಚಿತ್ರಕ್ಕೆ ‘ರೋಸಿ’ ಹೆಸರೇ ಸೂಕ್ತ ಎಂದುಕೊಂಡ ಯೋಗೀಶ್ ಶಿವಣ್ಣ ಅವರನ್ನೇ ನೇರವಾಗಿ ಕಂಡು ವಿಷಯ ತಿಳಿಸಿದರಂತೆತಮ್ಮ ಮುಂದಿನ ಚಿತ್ರ ‘45’ಅರ್ಜುನ್ ಜನ್ಯ ನಿರ್ದೇಶಿಸುತ್ತಾರೆ ಎಂದು ಜನ್ಮದಿನದಂದು ಸಾಮಾಜಿಕ ತಾಣದಲ್ಲಿ ಹೇಳಿದ್ದ ಶಿವಣ್ಣ ಅವರಿಗೆ ಈ ಹೆಸರು ಬದಲಾದ ವಿಷಯವೇ ಗೊತ್ತಿರಲಿಲ್ಲ ಎನ್ನುವುದು ನಂತರ ತಿಳಿದು ಬಂದ ವಿಷಯಹಾಗಂತ ಅವರೇ ಹೇಳಿದರು ಎಂದು ಯೋಗೀಶ್ ಹೇಳಿದ್ದಾಗಿ ವರದಿಯಾಯಿತುಹಾಗಾಗಿ ಯೋಗೀಶ್ ಅಭಿನಯದ 50ನೇ ಚಿತ್ರ ‘ರೋಸಿ’ ಆಗಲಿದೆಹಾಗಾದರೆವಾಣಿಜ್ಯ ಮಂಡಳಿ ಅವಸರದಲ್ಲಿ ಈ ಶೀರ್ಷಿಕೆಯ ಅಧಿಕೃತತೆಯನ್ನು ಹೇಳಿದ್ದಾದರೂ ಯಾಕೆ ಎಂದು ಕೇಳುವವರೂ ಇದ್ದಾರೆನ್ನಿಮಂಡಳಿಯಲ್ಲಿ ಹೆಸರುಪತ್ರ ವ್ಯವಹಾರಗಳು ತಡವಾದರೆಬೇರೆಡೆ ಅದನ್ನು ಮಾಡಿಕೊಳ್ಳುವ ವ್ಯವಸ್ಥೆಯೂ ಇರುವುದರಿಂದ ಇಂತಹ ಅಬದ್ಧಗಳಿಗೆ ದಾರಿಯಾಗಿದೆ.

ಇನ್ನು ‘ಪ್ರಭುತ್ವ’ದ ಸವಾಲಿನ ವಿಷಯಈ ವಾರ ತೆರೆಗೆ ಬರಬೇಕಾಗಿದ್ದ ಚಿತ್ರವಿದುಮೇಘರಾಜ್ ಮೂವೀಸ್ ಲಾಂಛನದಲ್ಲಿ ಶಿವಕುಮಾರ್ ಎನ್ನುವವರು ನಿರ್ಮಿಸಿರುವ ಚಿತ್ರಚಿತ್ರದ ಹೆಸರೇ ಸೂಚಿಸುವಂತೆಇದು ಪ್ರಭುತ್ವಕ್ಕೆ ಸಂಬಂಧಿಸಿದಂತೆ ಇರುವ ಕಥಾನಕ ಎನ್ನುತಾರೆಕಥೆಗಾರರೂ ಆಗಿರುವ ನಿರ್ಮಾಪಕನಿವೇಶನೋದ್ಯಮಿ ಶಿವಕುಮಾರ್.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮೊದಲು ತೆರೆಗೆ ಬರಬೇಕಾಗಿದ್ದ ಚಿತ್ರವದು. 2017ರಲ್ಲೇ ಈ ನಿರ್ಮಾಪಕರು ಕಥೆಯನ್ನು ಸಿದ್ಧಪಡಿಸಿಚುನಾವಣೆಮತದಾನದ ವೇಳೆ ಪ್ರಜೆಯ ಕರ್ತವ್ಯವೇ ಮೊದಲಾದವನ್ನು ಸೇರಿಸಿ ಈ ಕಥೆ ಸಿದ್ಧಪಡಿಸಿದ್ದರಂತೆಇದೀಗ ಮತ್ತೆ ಚುನಾವಣೆ ಬಂದರೂ ಚಿತ್ರ ಸಿದ್ಧವಾಗಿರಲಿಲ್ಲಮೊನ್ನೆ ನಿರ್ಮಾಪಕರು ಪತ್ರಿಕಾಗೋಷ್ಠಿ ಕರೆದಿದ್ದರುವಾಣಿಜ್ಯ ಮಂಡಳಿಯಲ್ಲಿ ಈ ಗೋಷ್ಠಿ ಕರೆದದ್ದರ ಉದ್ದೇಶತಮ್ಮ ಚಿತ್ರದ ನಿರ್ದೇಶಕರುಚಿತ್ರ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ಅವರ ವಕೀಲರು ಕಳುಹಿಸಿರುವ ಪತ್ರದ ಕುರಿತಂತೆ ಹೇಳುವುದು ಹಾಗೂ ಮಂಡಳಿಗೆ ಈ ಕುರಿತು ದೂರು ನೀಡುವುದುವಾಣಿಜ್ಯ ಮಂಡಳಿಯ ಅಧ್ಯಕ್ಷರ ಕಾರ್ಯ ಬಾಹುಳ್ಯವೋ ಏನೋಅವರ ಗೈರು ಹಾಜರಿಯಲ್ಲಿ ನಿರ್ಮಾಪಕ ಶಿವಕುಮಾರ್ ಪತ್ರಿಕಾ ಗೋಷ್ಠಿ ಆರಂಭಿಸಿದರುನಿರ್ಮಾಪಕರ ಮಗ ರವಿರಾಜ್ಚಿತ್ರದ ಜಂಟಿ ನಿರ್ದೇಶಕ ವಿನಯ ಮೂರ್ತಿಮುಖ್ಯ ಪಾತ್ರಧಾರಿಗಳಾದ ಚೇತನ್ ಚಂದ್ರ ಮತ್ತು ಪಾವನಾ ಪತ್ರಿಕಾಗೋಷ್ಠಿಯಲ್ಲಿದ್ದರುಚೋದ್ಯವೆಂದರೆತಡೆಯಾಜ್ಞೆಯಲ್ಲಿ ಇಷ್ಟೂ ಜನರ ಹೆಸರಿತ್ತು ಎನ್ನುವುದು.

ನಿರ್ಮಾಪಕರ ಪ್ರಕಾರ, 2017ರಲ್ಲಿ ಸದ್ರಿ ನಿರ್ದೇಶಕರುಈ ಚಿತ್ರವನ್ನು ನಿರ್ದೇಶಿಸಿಮೊದಲ ಪ್ರತಿ ನೀಡಲು 2.5 ಕೋಟಿ ರೂನಿರ್ಮಾಣ ವೆಚ್ಚಕ್ಕೆ ಒಪ್ಪಿದವರು, 2022ರಲ್ಲಿ ಚಿತ್ರೀಕರಣ ಮುಗಿಸುವ ವೇಳೆಗೆ ಎಂಟು ಕೋಟಿ ರೂವೆಚ್ಚ ಮಾಡಿದ್ದಾರೆಚಿತ್ರೀಕರಣೋತ್ತರ ಕೆಲಸಗಳು ಇನ್ನೂ ಆಗಿರಲಿಲ್ಲತಾವೇ ಮಾಡಿಕೊಡುವುದಾಗಿ ಹೇಳಿ ಮತ್ತೆಮತ್ತೆ ಹಣ ಪಡೆದು ಕೆಲಸ ಮಾಡಲಿಲ್ಲನಂತರ ಸಿನಿಮಾದ ಸಂಕಲನಕಾರರುಜಂಟಿ ನಿರ್ದೇಶಕರು ಸೇರಿ ಆ ಕೆಲಸ ಮುಗಿಸಲಾಗಿದೆಮಾತ್ರವಲ್ಲಚಿತ್ರಕ್ಕೂ ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದಾಗಿ ಕೊನೆಯಲ್ಲಿ ಬರೆದುಕೊಟ್ಟಿದ್ದಾರೆ.

ಇದನ್ನು ಹೇಳಿದ್ದು ಮಾತ್ರವಲ್ಲದೆನಿರ್ದೇಶಕರು ಬರೆದು ಕೊಟ್ಟ ಪತ್ರದ ಪ್ರತಿವಾಣಿಜ್ಯ ಮಂಡಳಿಗೆ ನೀಡಿದ ದೂರಿನ ಪ್ರತಿ ಹಾಗೂ ವಕೀಲರಿಂದ ಬಂದ ಪತ್ರದ ಪ್ರತಿಗಳನ್ನು ನೀಡಿದರು.

ತಮಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಲಿಖಿತವಾಗಿ ಹೇಳಿದ ನಿರ್ದೇಶಕರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆಚುನಾವಣೆಗೆ ಮೊದಲೇ ಈ ಚಿತ್ರವನ್ನು ತೆರೆಗೆ ತರುವ ನಿರ್ಮಾಪಕರ ಧಾವಂತಕ್ಕೆ ಕೊಂಚ ತಡೆಯಾದರೂತಡೆಯಾಜ್ಞೆ ತೆರವುಗೊಳಿಸಿ ಬಿಡುಗಡೆ ಮಾಡುವುದು ಅಸಾಧ್ಯದ ಮಾತೇನಲ್ಲನಿರ್ಮಾಪಕರು ಹೇಳಿದ ವಿವರಗಳನ್ನು ಕೇಳಿದರೆಅವರ ಔದಾರ್ಯವನ್ನು ನಿರ್ದೇಶಕರು ಬಳಸಿಕೊಂಡಿದ್ದು ಸ್ಪಷ್ಟಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕ ತಮ್ಮ ಕ್ಷೇತ್ರಕ್ಕೆ ಎಷ್ಟು ಸಹಾಯ ಮಾಡಿದರೋ ಏನೋಆದರೆ ಈ ನಿರ್ಮಾಪಕರುತಮ್ಮ ನಿರ್ದೇಶಕರನ್ನು ಅಷ್ಟೊಂದು ಚೆನ್ನಾಗಿ ನೋಡಿಕೊಂಡಿದ್ದಾರೆಅವರಿಗೆ ಇರಲು ಬಾಡಿಗೆ ಮನೆ ಕೊಡಿಸಿಅವರ ಮದುವೆ ವೆಚ್ಚ ನೋಡಿಕೊಂಡುದೈನಂದಿನ ದಿನಸಿ ಮತ್ತಿತರ ವೆಚ್ಚಗಳಿಗಾಗಿ 1200 ರಿಂದ 1800 ರೂವರೆಗೆ ಪ್ರತಿದಿನ ನೀಡಿಅವರ ಮಡದಿಮಗು ಚಿಕಿತ್ಸೆಯೇ ಮೊದಲಾದ ವೆಚ್ಚಗಳನ್ನೂ ಭರಿಸಿದ್ದರಿಂದ ನಿರ್ದೇಶಕರು ತಮ್ಮ ಕೆಲಸವನ್ನು ಮರೆತರೇನೋನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳಲು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ ನಿರ್ಮಾಪಕರುನಿರ್ದೇಶಕರ ಸಂಘದ ಗಮನಕ್ಕೆ ಇದನ್ನು ತರಬೇಕುಅಲ್ಲಿನ ವಿಷಯ ಮತ್ತೊಮ್ಮೆ ಹೇಳೋಣ.

ನಿರ್ಮಾಪಕರಿಗೆ ತಾವು ಬರೆದು ಕೊಟ್ಟ ಪತ್ರದ ಸುಳಿವು ನೀಡದೆಚಿತ್ರದ ಬಿಡುಗಡೆಗೆ ತಡೆನೀಡಲು ನಿರ್ದೇಶಕರು ನ್ಯಾಯಾಲಯದ ಮೊರೆ ಹೋಗಿ ಯಶಸ್ವಿಯೇನೋ ಆದರುಆದರೆ ನಿರ್ಮಾಪಕರು ಆ ಪತ್ರವನ್ನು ನ್ಯಾಯಾಲಯದ ಮುಂದೆ ಇಟ್ಟಾಗಅದೇನು ಮಾಡುತ್ತದೋ ಕಾದು ನೋಡೋಣಹೊಸದಾಗಿ ಚಿತ್ರ ನಿರ್ಮಾಣಕ್ಕೆ ಬರುವವರಲ್ಲಿ ಇಂತಹ ಅನುಭವ ಆಗುವ ನಿರ್ಮಾಪಕರ ಸಂಖ್ಯೆ ಕಡಿಮೆ ಏನೂ ಅಲ್ಲ.

 

andolanait

Share
Published by
andolanait

Recent Posts

ಬಿಜೆಪಿ ಬೆಳಗಾವಿ ಚಲೋಗೆ ಅನುಮತಿ ಕೊಡಲ್ಲ: ಸಚಿವ ಜಿ.ಪರಮೇಶ್ವರ್‌

ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…

8 mins ago

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

44 mins ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

1 hour ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

2 hours ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

2 hours ago

ಸಿ.ಟಿ.ರವಿ ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ

ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…

3 hours ago