ಚಿಕ್ಕ ಗಡಿಯಾರದ ಪಕ್ಕದಲ್ಲಿರುವ ಗಾಡಿಯಲ್ಲಿ ದಿನವೂ ಮಹಾದೇವ ಅವರು ಸೊಪ್ಪು ಮಾರುತ್ತಿರುತ್ತಾರೆ. ಇವರದೇ ಸ್ವಂತ ಅಂಗಡಿಯಲ್ಲ. ಈ ಸಹಾಯಕ ಕೆಲಸಕ್ಕೆ ಸೇರಿ ಒಂದು ವರ್ಷ ಆಗಿದ್ದಷ್ಟೇ. ಈ ಹಿಂದೆ ಪಾಂಡವಪುರದ ಬಳಿ ಇರುವ ತಮ್ಮ ಗದ್ದೆಯಲ್ಲಿ ಉಳುಮೆ ಮಾಡುತ್ತಾ, ಸೊಪ್ಪು ಕಡಿಯುತ್ತಾ ಬದುಕು ಸಾಗಿಸುತ್ತಿದ್ದ ಇವರು ಒಮ್ಮೆ ಚಿಕ್ಕ ಗಡಿಯಾರದ ಬಳಿ ಸುಮ್ಮನೆ ಕೂತಿದ್ದಾಗ, ಕರಿಯಪ್ಪ ಅವರು ಬಂದು ಸೊಪ್ಪು ಮಾರುವ ಕೆಲಸಕ್ಕೆ ಕರೆದರು. ಮಧ್ಯಾಹ್ನದ ಬಿಡುವಿನಲ್ಲಿ ಬಂದು ಮಾಡಬಹುದಲ್ಲಾ ಎಂದು ಯೋಚಿಸಿ, ಕರಿಯಪ್ಪನವರೊಡನೆ ಸಹಾಯಕರಾಗಿ ಕೆಲಸಕ್ಕೆ ಸೇರಿದರು.
ಮಹಾದೇವ ಅವರ ವಯಸ್ಸು 64. ವಿಶೇಷವೆಂದರೆ ಇವರ ದೇಹ, ಮನಸ್ಸಿಗೆ ವಯಸ್ಸಿನ ಲೆಕ್ಕ ತಿಳಿದಿಲ್ಲ. ಹಾಗಾಗಿ ತುಂಬು ಉತ್ಸಾಹದಿಂದ, ಶ್ರದ್ಧೆಯಿಂದ ತಮ್ಮ ಕೆಲಸ ನಿರ್ವಹಿಸುತ್ತಾರೆ. ಸಂಜೆ ಐದರ ಹೊತ್ತಿಗೆ ಸೊಪ್ಪು ಮಾರುವುದಕ್ಕೆಂದು ನಿಂತವರು ಮರಳಿ ಮನೆ ಸೇರುವುದು ಹನ್ನೊಂದಕ್ಕೆ ಆದರೆ ಮಕ್ಕಳಿಗೆ ಹೊರೆಯಾಗಿ ಬದುಕಬಾರದು ಎಂಬ ಜೀವನ ಸೂತ್ರವನು ಇವರು ಪಾಲಿಸುತ್ತಿದ್ದಾರೆ. ರಟ್ಟೆಯಲ್ಲಿ ಶಕ್ತಿ ಇರುವ ತನಕ ಕೆಲಸ ಮಾಡುತ್ತೇನೆಂಬ ಭರವಸೆ ಇವರಿಗಿದೆ. ಒಂದು ಕೆಲಸ ಕೈಕೊಟ್ಟರೆ ಇನ್ನೊಂದು ಆಧಾರ ವಾಗಿರುತ್ತದೆ ಎನ್ನುತ್ತಲೇ ಹೊಟ್ಟೆಪಾಡಿನ ಕತೆ ಹೇಳು ತ್ತಾರೆ. ಕೆಲಸ ಮಾಡುತ್ತಿರಬೇಕೆಂಬ ಮಹಾದೇವ ಅವರಲ್ಲಿ ಆರೋಗ್ಯದ ಗುಟ್ಟು ಕೇಳಿದರೆ ರಾಗಿಮುದ್ದೆ ಮತ್ತು ಹುರುಳಿಕಾಳು ಎನ್ನುತ್ತಾರೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…