ಇತ್ತೀಚೆಗೆ ಹೊಸ ಹುಡುಗ ಹುಡುಗಿಯರಲ್ಲಿ ಜಾಸ್ತಿಯಾದ ‘ಜೊತೆಯಾಗಿ ಬದುಕುವುದು (ಲಿವಿಂಗ್ ಟುಗೆದರ್), ಅವಶ್ಯವಿದ್ದರೆ ಮದುವೆ ಯಾಗುವುದು, ಇಲ್ಲದಿದ್ದರೆ ಹಾಗೆಯೇ ಮಕ್ಕಳನ್ನು ಪಡೆದು ಸಿಂಗಲ್ ಪೇರೆಂಟ್ ಆಗಿ ಬದು ಕುವುದು, ಡೇಟಿಂಗ್ ಇತ್ಯಾದಿಗಳನ್ನು ನೋಡುವ ಹಳಬರು ‘ಅದೆಂತಹಾ ಜೀವನ, ಇದೊಂದು ಮನುಷ್ಯನ ಬದುಕೇ? ಪ್ರಾಣಿಗಳಿಗಿಂತ ಕಡೆ !
ಮೌಲ್ಯಗಳೇ ಇಲ್ಲದ ಜೀವನ, ನಮ್ಮ ಕಾಲದಲ್ಲಿ ಹೀಗೆಲ್ಲಾ ಇಲ್ಲವಾಗಿತ್ತು, ಕಾಲ ಕೆಟ್ಟುಹೋಯಿತು ಎಂದು ಅಲವತ್ತುಕೊಳ್ಳುವುದಿದೆ. ಇದರರ್ಥ ನಾವಿನ್ನೂ ಈ ಹೊಸಕಾಲಕ್ಕೆ ಹೊಂದಿಕೊಂಡಿಲ್ಲ ಎಂದು ಅರ್ಥ. ಆದರೆ ಪ್ರಾಣಿಗಳ ಜೀವನ ದೂರದಿಂದ ನೋಡಲು ಅತ್ಯಂತ ಸುಂದರ, ರಸಮಯ. ಹತ್ತಿರದಿಂದ ನೋಡಿದರೆ ಕರುಣೆ ಇಲ್ಲದ, ಯಾತನಾಮಯ ಹಾಗೂ ದುರಂತ. ಸಾಮಾಜಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಾಣಿಗಳಂತೆ ಬದುಕಿದರೆ ಜೀವನ ಅತ್ಯಂತ ಸರಳ. ಯಾವುದೇ ಪ್ರಾಣಿ ಬದುಕಲು ತಿನ್ನುತ್ತದೆ, ಸಂತಾನೋತ್ಪತ್ತಿ ಮುಂದುವರಿಸಲು ಇತರ ಗಂಡುಗಳ ಜೊತೆ ಹೋರಾಡುತ್ತದೆ ಮತ್ತು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಬಯಸುತ್ತದೆ. ನಾಳೆಗೆಂದು ಕೆಲವೇ ಕೆಲವು ಪ್ರಾಣಿ ಗಳು ಅಥವಾ ಕೀಟಗಳನ್ನು ಹೊರತುಪಡಿಸಿದರೆ ಯಾವುದೇ ಪ್ರಾಣಿಯೂ ಕೂಡಿಡುವುದಿಲ್ಲ. ಹುಲಿಗೆ ವಯಸ್ಸಾಯಿತೆಂದು, ಗಾಯವಾಯಿತೆಂದು, ಕಾಲು ಮುರಿಯಿತೆಂದು ಇತರ ಯಾವುದೇ ಹುಲಿ ಅದಕ್ಕೆ ಮಾಂಸ ತಂದು ಕೊಡುವುದಿಲ್ಲ. ಅಲ್ಲಿ ಕರುಣೆ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ಒಂದು ಕಾಡುಕೋಣ ಹುಲಿಯ ಬಾಯಿಗೆ ಸಿಕ್ಕು ನರಳುತ್ತಿರುವಾಗ ಉಳಿದ ಕಾಡುಕೋಣಗಳು ಅದೆಷ್ಟೇ ಬಲಶಾಲಿಗಳಾದರೂ ಕೂಡ ಹುಲಿ, ಸಿಂಹಕ್ಕೆ ಗುದ್ದಿ ಬಿಡಿಸಿಕೊಳ್ಳುವುದಿಲ್ಲ. ಬದಲಾಗಿ ಈ ದಿನ ನನ್ನ ಪಾಳಿಯಲ್ಲವಲ್ಲ ಎಂದು ಸುಮ್ಮನಿದ್ದು ತಮ್ಮ ಪಾಡಿಗೆ ತಾವು ಮೇಯಲು ತೆರಳುತ್ತವೆ. ಸರ್ವೈವಲ್ ಆಫ್ ಫಿಟೆಸ್ಟ್ ಅಂದರೆ ಬಲಶಾಲಿಗೆ ಮಾತ್ರ ಅಲ್ಲಿ ಬದುಕಲು ಅವಕಾಶ. ಬಲಶಾಲಿಗೆ ಮಾತ್ರ ಸಂತಾನೋತ್ಪತ್ತಿ ಭಾಗ್ಯ. ಬಲಶಾಲಿಗೆ ಮಾತ್ರ ರಕ್ಷಣೆ. ಯಾರಿಗೆ ಯಾರೂ ಸಹಾಯ ಮಾಡುವುದಿಲ್ಲ. ಮನುಷ್ಯರಾದ ನಾವೂ ಕೂಡ ಪ್ರಾಣಿಗಳಾಗಿರುವುದರಿಂದ ಇದೇ ನಿಯಮ ಅನ್ವಯಿಸಿಕೊಂಡಾಗ ಮಾತ್ರ ಬದುಕಲು ಸಾಧ್ಯ. ಯಾರಿಂದಲೂ ಕರುಣೆ, ಸಹಾಯ, ಅನುಕಂಪ, ಸ್ನೇಹ, ಕೃತಜ್ಞತೆ ಇತ್ಯಾದಿಗಳ ನಿರೀಕ್ಷೆ ಇರಲೇಬಾರದು. ಬಂದರೆ ಬೋನಸ್ ಇಲ್ಲದಿದ್ದರೆ ಇಲ್ಲ. ಎಷ್ಟೋ ಜನ ‘ನಾನು ಎಷ್ಟೆಲ್ಲಾ ಸಹಾಯ ಮಾಡಿದೆ, ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲ ಎಂದು ಹೇಳುವವರು ಇದನ್ನು ನೆನಪಿಟ್ಟರೆ ಸಾಕು. ಪ್ರಾಣಿಗಳಿಗೆ ಸಂತಾನೋತ್ಪತ್ತಿ ಒಂದು ಸಹಜ ಪ್ರಕ್ರಿಯೆ. ಬಲಶಾಲಿ ಗಂಡು ಹೆಣ್ಣನ್ನು ಕೂಡುತ್ತದೆ. ಅದರ ಮರಿಗಳು ಹುಟ್ಟಿ ಕಾಡಿನಲ್ಲಿ ಸಶಕ್ತ ವಾಗಿ ಬದುಕಲಿ ಎನ್ನುವುದು ಪ್ರಕೃತಿ ನಿಯಮ. ಬೆಕ್ಕು ಅಥವಾ ನಾಯಿ ಜಾತಿಗೆ ಸೇರಿದ ಮಾಂಸಾಹಾರಿ ಪ್ರಾಣಿಗಳು ಹುಟ್ಟುವ ಮರಿ ನಿಶ್ಶಕ್ತವಾಗಿದ್ದರೆ ಅದು ಮುಂದೆ ಕಾಡಿನಲ್ಲಿ ಬದುಕಲು ಯೋಗ್ಯವಲ್ಲ ಎಂದು ಗೊತ್ತಾದರೆ ತಾಯಿಯೇ ಅವುಗಳನ್ನು ತಿಂದು ಮುಗಿಸುತ್ತದೆ. ಇದಕ್ಕೆ ಕೆನಿಬಾಲಿಸಮ್ ಎನ್ನುತ್ತಾರೆ. ಇದೊಂದು ಅತ್ಯಂತ ಸಹಜ ಪ್ರಕ್ರಿಯೆ.
ಮನುಷ್ಯನಲ್ಲಿ ಇದು ಸಾಧ್ಯವಿಲ್ಲ. ಬುದ್ಧಿ ಮಾಂದ್ಯ, ದುರ್ಬಲ ಮಗು ಜನಿಸಿದರೂ ನೈಸರ್ಗಿಕ ಮರಣದವರೆಗೆ ಸಾಕುವುದು ಈ ಸಮಾಜದ ಧರ್ಮ. ಆದರೆ ಈಗ ಆಧುನಿಕ ವೈಜ್ಞಾನಿಕ ಪತ್ತೆ ವಿಧಾನದಿಂದ ಭ್ರೂಣ ಹಂತ ದಲ್ಲಿಯೇ ಇದನ್ನು ಪತ್ತೆ ಮಾಡಿ ಗರ್ಭಪಾತ ಮಾಡುವುದರಿಂದ ಇಂತಹ ಹುಟ್ಟುವಿಕೆಗಳ ಸಂಖ್ಯೆ ಒಂದಿಷ್ಟು ಕಡಿಮೆಯಾಗಿರಬಹುದು. ಮನುಷ್ಯ ಮತ್ತು ಚಿಂಪಾಂಜಿಯಂತಹ ಪ್ರಭೇದಗಳನ್ನು ಹೊರತುಪಡಿಸಿದರೆ ಲೈಂಗಿಕ ಕ್ರಿಯೆ ಯಾವುದೇ ಪ್ರಾಣಿಗೆ ಸಂತಾನೋತ್ಪತ್ತಿಗಾಗಿ ಇರುವ ಸಹಜ ಪ್ರಕ್ರಿಯೆ. ಅವೆಂದೂ ಸುಖಕ್ಕಾಗಿ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. ಬೆದೆಯ ಅವಧಿ ಮುಗಿದ ಮೇಲೆ ಹೆಣ್ಣು ಪ್ರಾಣಿ ಗಂಡನ್ನು ಹತ್ತಿರ ಸುಳಿಯಲೂ ಬಿಡುವುದಿಲ್ಲ. ಲೈಂಗಿಕವಾಗಿ ಪ್ರಬುದ್ಧವೆನಿಸದ ಹೊರತು ಯಾವುದೇ ಪ್ರಾಣಿಗಳು ಅಪ್ರಾಪ್ತ ಹೆಣ್ಣುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ದಾಖಲೆಗಳೇ ಇಲ್ಲ. ಚಿಕ್ಕ ೫ ವರ್ಷದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡುವ ದುಷ್ಟ ಮನುಷ್ಯನಿಗೆ ಇದನ್ನು ಹೋಲಿಸುವುದೇ ಬೇಡ. ಮನುಷ್ಯನೂ ಪ್ರಾಣಿಗಳ ಹಾಗಿದ್ದರೆ ದಿನ ಬೆಳಗಾದರೆ ಕೇಳುವ ಅತ್ಯಾಚಾರದಂತಹ ಪ್ರಕರಣಗಳೇ ಶೂನ್ಯವಾಗುತ್ತಿದ್ದವು.
ಮಕ್ಕಳನ್ನು ಸಾಕುವಲ್ಲಿ ನಾವು ಪ್ರಾಣಿಗಳನ್ನು ನೋಡಿ ಕಲಿಯುವುದು ಬಹಳ ಇದೆ. ಹಕ್ಕಿಗಳು ಮೊಟ್ಟೆಯಿಡುತ್ತವೆ ಮತ್ತು ಪ್ರಾಣಿಗಳು ಮರಿ ಹಾಕಿದ ನಂತರ ಚಿಕ್ಕ ಮರಿಗಳ ರಕ್ಷಣೆ, ಅವುಗಳ ಮತ್ತು ಸ್ವಂತ ಆಹಾರದ ಜವಾಬ್ದಾರಿ ಬಹುತೇಕ ತಾಯಿಯದೇ. ಪ್ರಾಣಿ ಪ್ರಪಂಚದಲ್ಲಿ ಮಕ್ಕ ಳನ್ನು ಪಾಲಿಸುವ ಒಳ್ಳೆಯ ತಂದೆಯಂದಿರು ಅಪರೂಪ. ಬಹುತೇಕ ಗಂಡುಗಳು ಮರಿ ದೊಡ್ಡದಾಗಿ ಅವು ಪುನಃ ಬೆದೆಗೆ ಬಂದು ಕೂಡಲು ಸಿದ್ಧವಾಗಲಿ ಎಂದು ಕಾಯುತ್ತಿರು ತ್ತವೆ. ಅದು ಹಾಲು ಕೊಡುವವರೆಗೆ ಮತ್ತು ಕಾವು ಕೊಡುವಾಗ ಪ್ರಸರಣವಾಗುವ ‘ಪ್ರೊಲಾ ಕ್ಟಿನ್‘ ಹಾರ್ಮೋನ್ ಇರುವವರೆಗೆ ಅವುಗಳಿಗೆ ಲೈಂಗಿಕೆ ಚಕ್ರ ಪ್ರಾರಂಭವಾಗುವುದೇ ಇಲ್ಲ. ಕಾರಣ ಹುಲಿ, ಸಿಂಹ ಮತ್ತು ಬೆಕ್ಕುಗಳು ಮರಿ ಗಳನ್ನು ಸಾಯಿಸಿ ಭಕ್ಷಿಸಲು ಹೊಂಚು ಹಾಕುತ್ತಾ ಇರುತ್ತವೆ. ತೋಳ ಮಾತ್ರ ಒಳ್ಳೆಯ ತಂದೆ ಪಾತ್ರ ನಿರ್ವಹಿಸುತ್ತದೆ. ಮರಿ ಹಾಕಿದ ಹೆಣ್ಣು ತೋಳಕ್ಕೆ ಗುಹೆಯ ಒಳಗೇ ಬಗೆ ಬಗೆಯ ಆಹಾರ ತಂದು ‘ರೂಂ ಸರ್ವೀಸ್’ ನೀಡುತ್ತದೆ. ಇದೆಂತಹ ಉತ್ತಮ ತಂದೆ ಅಂದರೆ ಅದು ಶುದ್ಧ ತಪ್ಪು.
ಬೇಟೆಯಾಡಿದ ಅಥವಾ ಕದ್ದ ಪ್ರಾಣಿಗಳನ್ನು ಗುಹೆಯ ಒಳಗೆ ಒಯ್ದು ಹೆಣ್ಣು ತೋಳಕ್ಕೆ ನೀಡುವ ಮುನ್ನ ಗುಹೆಯ ಹೊರಗಿನ ದಿಬ್ಬದ ಮೇಲೆ ಬೇಟೆಯಾಡಿದ ಪ್ರಾಣಿಯನ್ನು ತೋರಿಸಿ ಊಳಿಡುತ್ತಾ ಬಿಲ್ಡಪ್ ಕೊಡುತ್ತದೆ. ಇದರ ತಂದೆತನ ನೋಡಿ ಉಳಿದ ಯುವತಿ ತೋಳ ಗಳು ತನ್ನಿಂದ ಮರಿ ಪಡೆಯಲು ಆಯ್ಕೆ ಮಾಡಲಿ ಎನ್ನುವುದೇ ಅದರ ಉದ್ದೇಶವೇ ಹೊರತು ಮರಿಗಳ ಮೇಲೆ ಅದಕ್ಕೆ ಏನೂ ಪ್ರೀತಿ ಇರುವು ದಿಲ್ಲ. ಮರಿಗಳು ಒಂದೆರಡು ಹೆಜ್ಜೆ ಹಾಕಿ, ಬೇಟೆಯಾಡುವುದನ್ನು ಕಲಿತು ಸ್ವಲ್ಪದೊಡ್ಡ ವಾದವೆಂದರೆ ಹೆಣ್ಣು ಅವುಗಳನ್ನು ಒದ್ದೋಡಿಸಿ ಪುನಾ ಬೆದೆಗೆ ಬಂದು ಇನ್ನೊಂದು ಹಂತದ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತದೆ. ಹೊಸ ಗಂಡು, ಹೊಸ ಹೆಣ್ಣು, ಹೊಸ ಮರಿಗಳು, ಹೊಸ ಜೀವನ. ಏನು ಥ್ರಿಲ್ಲಿಂಗ್ ಅಲ್ಲವೇ?
(ಲೇಖಕರು: ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…