ಅಂಕಣ

ಅರವತ್ತಕ್ಕೆ ಮತ್ತೆ ನೀ ಅರಳು

 – ಸೌಮ್ಯಕೋಠಿ, ಮೈಸೂರು

ಸಾಮಾನ್ಯವಾಗಿ 60 ವರ್ಷವಾಯಿತು, ನಿವೃತ್ತಿ ಯಾಯಿತು ಎಂದರೆ ಜೀವನವೇ ಮುಗಿದು ಹೋಯಿತು ಎನ್ನುವಂತಹ ಮನಸ್ಥಿತಿ ಮೊದಲಿತ್ತು. ಆದರೆ ಈಗ ಹಾಗಲ್ಲ ಅರವತ್ತಕ್ಕೆ ಅರಳೋ ಮರುಳೋ ಅಲ್ಲ 60ಕ್ಕೆ ನೀ ಮರಳಿ ಮತ್ತೆ ನೀ ಅರಳು ಎಂದುಕೊಳ್ಳಬಹುದು.

ಹೌದು. ನಮ್ಮ ಜೀವನವನ್ನು ನಾವು ಯಾಂತ್ರಿಕವಾಗಿ ಮಾಡಿಕೊಂಡು ಬಿಟ್ಟಿರುತ್ತೇವೆ. ಕೆಲಸ ಜವಾಬ್ದಾರಿ ಹಾಗೂ ನಮ್ಮದೇ ಆದಂತಹ ಸುಳಿಯಲ್ಲಿ ಸಿಕ್ಕಿಕೊಂಡು ಯಾಂತ್ರಿಕವಾಗಿ ಬದುಕುತ್ತಿರುತ್ತೇವೆ. ಬೆಳಿಗ್ಗೆ ಮನೆ ಕೆಲಸ, ಆಫೀಸ್, ಮನೆಗೆ ಬಾ, ಮಕ್ಕಳ ಜವಾಬ್ದಾರಿ ಈ ರೀತಿ ಆದರೆ ಅರವತ್ತು ವರ್ಷ ಮುಟ್ಟಿದ ಹಾಗೆ ಮಕ್ಕಳ ಜವಾಬ್ದಾರಿ ಮುಗಿದಿರುತ್ತದೆ ಹಾಗೂ ಸಾಮಾನ್ಯವಾಗಿ ಆರ್ಥಿಕವಾಗಿ ನಾವು ಉನ್ನತ ಮಟ್ಟದಲ್ಲಿ ಇರುತ್ತೇವೆ. ಹಾಗಾಗಿ 60 ವರ್ಷ ನಿವೃತ್ತಿ ಎಂದರೆ ಮತ್ತೆ ಮರಳುವಂತಹ ಸಂದರ್ಭ ಎಷ್ಟೋ ವಿಷಯ ಗಳನ್ನು ಕಲಿಯುವುದಕ್ಕೆ ಆಗಿರುವುದಿಲ್ಲ ಹಾಗೂ ನಮ್ಮ ಹವ್ಯಾಸಕ್ಕೆ ಸಮಯವನ್ನು ಕೊಡುವಂತಹ ಕಾಲ ಇದು.

ಒಂದೆರಡು ದಿನ ನಮಗೆ ನಾವೇ ಸಮಯವನ್ನು ಕೊಟ್ಟು ಒಂದು ಪುಟ್ಟ ಪ್ರವಾಸಕ್ಕೆ ಹೋಗಬೇಕು. ಪ್ರವಾ ಸಕ್ಕೆ ಹೋಗುವುದು ಜಗವನ್ನು ನೋಡುವುದಕ್ಕೆ ಅಲ್ಲ ನಮ್ಮನ್ನು ನಾವು ಹುಡುಕುವುದಕ್ಕೆ. ಹೌದು ಸ್ವಲ್ಪ ಸಮಯ ನನಗಾಗಿ ನಾನು ಸಮಯ ಕೊಟ್ಟು, ನಾನು ಏನು ಮಾಡಬೇಕು ಎಂದಿದೆ ಹಾಗೂ ನಿವೃತ್ತಿ ಜೀವನವನ್ನು ಹೇಗೆ ಕಳೆಯ ಬೇಕು ಎಂದು ನನ್ನನ್ನು ನಾನು ಪರೀಕ್ಷಿಸಿ ಉತ್ತರ ಹುಡುಕುವಂತಹ ಸಮಯ. ಯಾಂತ್ರಿಕ ಬದುಕಿನಿಂದ ಹೊರಬಂದು ಬೆಳಿಗ್ಗೆ ಎದ್ದು ಒಂದು ಪುಟ್ಟ ವಾಕಿಂಗ್, ನನ್ನ ಕೈಲಾದಷ್ಟು ಮಟ್ಟಿಗೆ ವ್ಯಾಯಾಮ, ಒಳ್ಳೆಯ ಆರೋಗ್ಯಕರ ತಿಂಡಿಯನ್ನು ಸೇವಿಸಿ, ಧ್ಯಾನ ಹಾಗೂ ಓದಿಗೆ ಸಮಯ ಕೊಡುವುದು, ನನ್ನ ಹವ್ಯಾಸಕ್ಕೆ ಸಮಯವನ್ನು ಕೊಡುವುದು.

ಹಳೆಯ ಗೆಳೆಯರೊಂದಿಗೆ ಭೇಟಿಯಾಗಿ ನಮ್ಮ ಬಾಲ್ಯಕ್ಕೆ ಹೋಗಿ ಬರಬಹುದು. ನಮ್ಮ ಕೈಲಾದಷ್ಟು ಮಟ್ಟಿಗೆ ಮನೆಯವರಿಗೆ ಹಾಗೂ ಸ್ನೇಹಿತರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಆನಂದವೇ ಬೇರೆ.

ಮಕ್ಕಳೊಂದಿಗೆ ಕಳೆದ ಕಾಲವನ್ನು ಮೊಮ್ಮಕ್ಕಳೊಂದಿಗೆ ಮತ್ತೆ ನಮ್ಮ ಬಾಲ್ಯದ ಆಟಗಳನ್ನು ಆಡುವಂತಹ ಸಮಯ. ಅಷ್ಟೇ ಅಲ್ಲದೆ ಸಮಾಜ ಮುಖಿಯಾಗಿಯೂ ಸಾಕಷ್ಟು ಕಾರ್ಯಗಳನ್ನು ಮಾಡಬಹುದು. ನಮ್ಮ ಮನೆಯ ಬಳಿ ಇರುವಂತಹ ಪಾರ್ಕ್‌ಗಳಲ್ಲಿ ಒಂದು ಗುಂಪು ಮಾಡಿಕೊಂಡು ಸ್ವಚ್ಛತೆ ಮಾಡುವುದು ಹಾಗೂ ಸಮಾನ ಮನಸ್ಥಿತಿ ಇರುವವರೊಂದಿಗೆ ಕಾಲ ಕಳೆಯುವುದು, ಆಧ್ಯಾತ್ಮಿಕವಾಗಿಯೂ ಇದು ಸಕಾಲ ಎನ್ನ ಬಹುದು. ಅಷ್ಟೇ ಅಲ್ಲದೆ ನಮ್ಮ eನವನ್ನು ಹಂಚು ವಂತಹ ಸಮಯ ಎಂದರೂ ತಪ್ಪಾಗುವುದಿಲ್ಲ. ಈಗಿನ ಯುವ ಪೀಳಿಗೆಗೆ ನಮ್ಮ ಅನುಭವದ ಜ್ಞಾನವನ್ನು ಹಂಚಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಕೊಡಬಹುದು.

ನಮ್ಮ ಈ ಒತ್ತಡದ ಜೀವನದಲ್ಲಿ ನೋಡದಂತಹ ಆ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಅಷ್ಟೇ ಅಲ್ಲದೆ ಪತಿ-ಪತ್ನಿಯರಿಬ್ಬರೂ ಹೊಸದಾಗಿ ಮತ್ತೆ ತಮ್ಮ ದಿನಚರಿಯನ್ನು ಮಾಡಿಕೊಳ್ಳಬಹುದು. ಮನೆ ಕೆಲಸದಲ್ಲಿ ಕೈಜೋಡಿಸುವುದು,೦ಪ ಇಬ್ಬರೂ ಒಟ್ಟಿಗೆ ವಾಕಿಂಗ್ ಹೋಗುವುದು, ವ್ಯಾಯಾಮ ಮಾಡುವುದು. ಒಬ್ಬರಿಗೊಬ್ಬರು ಹುರಿದುಂಬಿಸಿ ಸಂತೋಷದ ಜೀವನ ವನ್ನು ಮತ್ತೆ ಆರಂಭಿಸಬಹುದು.

ಸಮಾನ ಮನಸ್ಥಿತಿಯವರೊಂದಿಗೆ ಕಾಲ ಕಳೆದು ಪ್ರವಾಸಕ್ಕೆ ಹೋಗುವುದು ಹಾಗೂ ಈ ಒತ್ತಡದ ಬದುಕಿನಲ್ಲಿ ಕಳೆದು ಹೋದಂತಹ ಹವ್ಯಾಸಕ್ಕೆ ಮರು ಜೀವ ಕೊಡಬಹುದು. ನಮ್ಮ ಜೀವನವನ್ನು ಇನ್ನಷ್ಟು ಉತ್ತಮ ಮಾಡಿಕೊಳ್ಳುವವರು ನಾವೇ ಆಗಿರುವುದ ರಿಂದ ನಮ್ಮ ಜೀವನವನ್ನು ಆದಷ್ಟು ಸಂತೋಷವಾಗಿ ಹರುಷದ ಹುಮ್ಮಸ್ಸಿನಿಂದ ಬರೆಯೋಣ ಎಂದು ಹೇಳುತ್ತೇನೆ. ಒಮ್ಮೆ ಯೋಚನೆ ಮಾಡಿ.

ಆಂದೋಲನ ಡೆಸ್ಕ್

Recent Posts

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

9 mins ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

18 mins ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

4 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

9 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

9 hours ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

9 hours ago