By: ಶ್ರೀಮತಿ ಹರಿಪ್ರಸಾದ್
ಪ್ರಪಂಚದಲ್ಲಿ 80 ವರ್ಷ ದಾಟಿದವರು ಶೇ.6-7ರಷ್ಟು ಮಂದಿ ಇರಬಹುದು. ಇದರಲ್ಲಿ ನಾನೂ ಒಬ್ಬಳು. ಇದಕ್ಕಾಗಿ ಪ್ರಕೃತಿಗೆ ನಾನು ಚಿರಋಣಿ.
ವಯೋಮಾನಕ್ಕೆ ತಕ್ಕಂತೆ ಸಾಕಷ್ಟು ಕೊರತೆಗಳು ನನ್ನಲ್ಲಿಯೂ ತಲೆಯೆತ್ತಿವೆ. ವಯಸ್ಸು ಮತ್ತು ಕೆಲವು ದೈಹಿಕ ಕಾರಣಗಳಿಂದ ಪ್ರತಿವರ್ತನೆ ಅಥವಾ ರಿಪ್ಲೆಕ್ಸ್ ಗಳು ನಿಧಾನವಾಗಿವೆ. ನಡಿಗೆ ಕೂಡ ಒಂದು. ಕೆಲಸಗಳು ನಿಧಾನ. ಮರೆವು- ಥಟ್ಟನೆ ನೆನಪು ಬಾರದಿರುವುದು. ನನ್ನ ದೈಹಿಕ ಕೆಲಸಗಳನ್ನು ನಾನೇ ಮಾಡಿಕೊಳ್ಳುವೆನಾದರೂ ಬಹುಶಃ ಮೈಗಿಂತ ಮನಸ್ಸು ಸ್ವಲ್ಪ ಫಾಸ್ಟ್ ಇರುವುದರಿಂದಲೋ ಅಥವಾ ನನ್ನ ಸಾಮರ್ಥ್ಯ ಇನ್ನೂ ಮೊದಲಿನಂತೆ ಇದೆ ಎಂದುಕೊಂಡಿದ್ದೇನೋ ಅರಿವಿಲ್ಲ. ಆಗಾಗ್ಗೆ ಸಾಮಾನುಗಳನ್ನು ಬೀಳಿಸುವುದು, ಪದಾರ್ಥಗಳನ್ನು ಚೆಲ್ಲುವುದು ನಡೆಯುತ್ತಿರುತ್ತವೆ. ಆದರೆ ನೆನಪು ಅಷ್ಟಾಗಿ ಮಾಸಿಲ್ಲ. ನನ್ನ ವಿಜ್ಞಾನ ಸಂವಹನ ಕೆಲಸಕ್ಕಾಗಿ ಸ್ವಲ್ಪ ಮಟ್ಟಿಗೆ ಓದಿಕೊಳ್ಳಲೇಬೇಕಾದ, ಅರ್ಥ ಮಾಡಿಕೊಂಡು ಸಂವಹಿಸಬೇಕಾದ ಒತ್ತಡಗಳಿರುತ್ತವೆ. ಆ ನಿರ್ದಿಷ್ಟತೆ ಮತ್ತು ಪದಬಂಧದಂತಹ ಕಸರತ್ತೂ ಉಂಟು.
ವಿಜ್ಞಾನ ಕಾರ್ಯಕ್ರಮಗಳ ಸಂಘಟಕಿಯಾಗಿ ಎರಡೂವರೆ ದಶಕಗಳ ಕಾಲ ಕೆಲಸ ಮಾಡಿರುವುದರಿಂದ ಸಂಘಟನೆಗಳ ನೀಲಿನಕ್ಷೆ ಇನ್ನೂ ತಲೆಯಲ್ಲಿದೆ. ನಾನು ಸಿಎಫ್ ಟಿಆರ್ ಐನಿಂದ ನಿವೃತ್ತಳಾದವಳು. ಅಲ್ಲಿ ರಾಷ್ಟ್ರೀಯ ಸಮಾವೇಶಗಳ, 5 ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ಸಮಾವೇಶ ಸಂಘಟನಾತ್ಮಕ ಕೆಲಸಗಳೆ ನಮ್ಮ ವಿಭಾಗಕ್ಕೆ ಬರುತ್ತಿದ್ದವು. ಇದರಿಂದ ನನ್ನದೇ ಆದ ಪ್ರಜ್ಞೆಯಿಂದ ಆ ಸಂಸ್ಥೆಯ ಹೊರಗೆ ಕರ್ನಾಟಕ ರಾಜ್ಯ ವಿಜ್ಞಾನ
ಪರಿಷತ್ತು (ಎನ್‌ಜಿಓ) ಪರವಾಗಿ (ಅದರ ಸ್ಥಾಪಕ ಸದಸ್ಯರಲ್ಲಿ ನಾನೂ ಒಬ್ಬಳು) ಮೂರು ರಾಷ್ಟ್ರೀಯ ಮಟ್ಟದ ಸಮಾವೇಶಗಳ ಹಾಗೂ 2 ರಾಜ್ಯ ಮಟ್ಟದ ಸಮಾವೇಶಗಳ ಕೋ ಆರ್ಡಿನೇಟರ್ ಆಗಿ ಸಂಘಟಿಸಿ, ನಡೆಸಿದ್ದೇನೆ. ರಂಗಭೂಮಿ ಯಲ್ಲಿಯೂ ಆರು ದಶಕಗಳ ಕಾಲ ಕೆಲಸ ಮಾಡಿದ್ದೇನೆ. ಈಗಲೂ ಕೆಲ ಪಾತ್ರಗಳ ಸಂಭಾಷಣೆಗಳನ್ನು ಹೇಳುವ ನೆನಪಿದೆ. ಹೀಗೆ ನೆನಪಿಸಿಕೊಳ್ಳುವ ಪ್ರವೃತ್ತಿಯಿಂದಾಗಿ ನನ್ನ ನೆನಪು ಚುರುಕಾಗಿಯೇ ಉಳಿದಿದೆ. ದಶಕದಿಂದೀಚೆಗೆ ನನಗೆ ಸಮಯವಿಲ್ಲ ಎಂಬ ಅತಿ ಪರಿಚಿತ ಮಾತುಗಳನ್ನು ನಾವೆಲ್ಲ ಆಡುತ್ತಿರುತ್ತೇವೆ. ಆದರೆ ಕೆಲವು ವಿಷಯಗಳನ್ನು ಬಿಟ್ಟರೆ ಬೇರೆಯವರ ಹೆಗಲೂ ಬೇಕಾದಾಗ ಅಥವಾ ನಮ್ಮದೇ ಧೈಯ ಅತಿ ಹೆಚ್ಚಿನ ಸ್ತರದ್ದಾ ದರೆ ಮಾತ್ರ ಇದು ನಿಜ. ನಮ್ಮ ದೈನಂದಿನ ಚಟುವಟಿಕೆಗಳು, ತಲುಪಬೇಕಾದ ಗುರಿಗಳಿಗೆ ನಾವು ನಮ್ಮ ಸಮಯ ಹಂಚಿಕೆಯನ್ನು ಮಾಡಿಕೊಳ್ಳು ತ್ತಲೇ ಇಲ್ಲ ಎಂದು ನನ್ನ ನಂಬಿಕೆ. ಇದನ್ನು ನಾವೇ ಸಾಬೀತು ಮಾಡಿಕೊಳ್ಳಬಹುದು ಮುಂದಿರುವ ಅಂದಿನ ಕೆಲಸಗಳನ್ನು ಆತಂಕವಿಲ್ಲದ, ಆದಷ್ಟು ತಣ್ಣಗಿನ ಮನಸ್ಸಿನಿಂದ ಒಂದೊಂದಾಗಿ ಮುಗಿಸುತ್ತ ಹೋದರೆ ಪ್ರತಿಯೊಂದಕ್ಕೂ ಸಮಯಾವಕಾಶ ಇರುತ್ತದೆ. ನಾಳಿನ ಅಥವಾ ಒಂದು ವಾರದ ಕೆಲಸ ಗಳಿಗೆ ವೇಳಾಪಟ್ಟಿ ಗೊತ್ತುಮಾಡಿಕೊಂಡರೆ ಒಳಿತು. ನಮ್ಮ ವಯಸ್ಸಿನವರೆಲ್ಲ ಇಂಥದೊಂದು ಪ್ರಯೋಗ ಮಾಡಿ ನೋಡಬಹುದು. ಕ್ರಮವಾಗಿ ನಮ್ಮ ಕೆಲಸಗಳನ್ನು ಮುಗಿಸುತ್ತ ಹೋದರೆ, ನಮ್ಮ ಗುರಿಯನ್ನು ಮುಟ್ಟುತ್ತೇವೆ. ಇದು ಪೇರಾಸೆಯ ಲಕ್ಷ್ಯಗಳಿಗೆ ಅನ್ವಯವಾಗದೇ ಇರಬಹುದು. ಆದರೆ ನಮ್ಮ ವಯಸ್ಸಿನ ಜೀವನದಲ್ಲಿ ಅಂದಿನ ಮತ್ತು ನಿಕಟ ಭವಿಷ್ಯಗಳಿಗೆ ಇದು ಸಂಬಂಧಪಟ್ಟಿದೆ ಎಂದು ನನ್ನ ವಿಶ್ವಾಸ. ಈ ನನ್ನ ಹೇಳಿಕೆಗಳು ಸರಿಯೇ? ಒರೆಹಚ್ಚಿ ನೋಡಿ.
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…
ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧೬ನೇ ಬಜೆಟ್ ಮಂಡನೆ ವೇಳೆ ಸಿನಿಮಾ ಟಿಕೆಟ್ ದರ ನಿಗದಿಯ ಬಗ್ಗೆ ಪ್ರಸ್ತಾಪಿಸಿದ್ದು, ಸಿನಿ ಪ್ರಿಯರಿಗೆ ಸಂತಸ…