ಎಡಿಟೋರಿಯಲ್

ಆಂದೋಲನ ವಿ4 : 09 ಭಾನುವಾರ 2022

ರೂಪಾಯಿ ಕುಸಿತದ  ಮತ್ತೊಂದು ದಾಖಲೆ

ಎರಡು ವಾರಗಳ ಹಿಂದಷ್ಟೇ ರೂಪಾಯಿ ಡಾಲರ್ ವಿರುದ್ಧ 81ರ ಗಡಿದಾಟಿತ್ತು. ಈಗ ಮತ್ತೊಂದು ದಾಖಲೆಯಾಗಿದೆ.  ಡಾಲರ್ ವಿರುದ್ಧ ೮೨ರ ಗಡಿದಾಟಿದೆ. ಅಂದರೆ, ರೂಪಾಯಿ ಮೌಲ್ಯ  ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದಕ್ಕಿಂತಲೂ ತ್ವರಿತವಾಗಿ ಕುಸಿಯುತ್ತಿದೆ. ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಉದಯಿಸುತ್ತಿರುವ ಮಾರುಕಟ್ಟೆ ದೇಶಗಳಷ್ಟೇ ಅಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳ ಕರೆನ್ಸಿಗಳು  ಡಾಲರ್ ವಿರುದ್ಧ ಕುಸಿಯುತ್ತಿವೆ. ಆದರೆ, ರೂಪಾಯಿ ಕುಸಿತದ ತೀವ್ರತೆ ಹೆಚ್ಚಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ದರ, ಹಿಡಿತಕ್ಕೆ ಸಿಗದ ಹಣದುಬ್ಬರ ರೂಪಾಯಿ ಮೌಲ್ಯ ತೀವ್ರ ಕುಸಿತಕ್ಕೆ ಕಾರಣವಾದರೆ, ದೇಶದ ಆಮದು ರಫ್ತುಗಳಲ್ಲಿನ ಅಸಮತೋಲವೂ ಮತ್ತೊಂದು ಕಾರಣ. ನಮ್ಮ ಆಮದು ರಫ್ತಿನ ದುಪ್ಪಟ್ಟಾಗಿದೆ. ಹೀಗಾಗಿ ಆಮದು ಬಿಲ್ಲುಗಳ ಪಾವತಿಗೆ ಹೆಚ್ಚಿನ ಡಾಲರ್‌ಗಳು ಬೇಕಿದೆ. ಹೀಗಾಗಿ ಹಿಂದೆಂದಿಗಿಂತಲೂ ಭಾರತ ಹೆಚ್ಚು ಡಾಲರ್ ವಿನಿಯೋಗಿಸುತ್ತಿದೆ. ಈ ನಡುವೆ, ರಷ್ಯಾದೊಂದಿಗಿನ ತೈಲ ಆಮದು ವಹಿವಾಟು ರೂಪಾಯಿ ಲೆಕ್ಕದಲ್ಲಿ ಆಗುತ್ತಿರುವುದರಿಂದ ರೂಪಾಯಿಗೆ ಒಂದಷ್ಟು ಮೌಲ್ಯ ದಕ್ಕಿದೆ!


ಮಂಗಳದಲ್ಲಿ ಕಂಡಿದ್ದು ಸರೋವರವಲ್ಲ!
ಮಂಗಳ ಗ್ರಹದಲ್ಲಿ ಪತ್ತೆಯಾಗಿದ್ದ ಸರೋವರವೊಂದರ ಸಮಾಧಿ ಎಂದು ನಂಬಲಾಗಿದ್ದ ಸ್ಥಳದಲ್ಲಿ ಸರೋವರವಿರಲಿಲ್ಲ ,ಅದು  ಕೇವಲ ಮಂಜುಗಡ್ಡೆ ಮತ್ತು ಬಂಡೆಯ ಪದರಗಳಾಗಿರಬಹುದು ಎಂದು ನೂತನ ಅಧ್ಯಯನದಿಂದ ದೃಢಪಟ್ಟಿದೆ.  ಭೂಮಿಯಾಚೆಗಿನ ಜೀವವನ್ನು ಹುಡುಕಲು ನೀರನ್ನು ಹಿಂಬಾಲಿಸು ಎಂಬುದು  ವಿಜ್ಞಾನಿಗಳ ಮಂತ್ರವಾಗಿದೆ. ಆದರೆ ಈಗ ಮಂಗಳ ಗ್ರಹದಲ್ಲಿ ದ್ರವರೂಪದ ನೀರಿನ ಸಂಭಾವ್ಯ ಆವಿಷ್ಕಾರವು ಜಲನಿರೋಧಕವಾಗಿ–ರುವುದಿಲ್ಲ ಎಂದು ಸೂಚಿಸುವ ಹೆಚ್ಚಿನ ಪುರಾವೆಗಳಿವೆ ಎಂದು ಸಂಶೋಧಕರು ‘ನೇಚರ್ ಅಸ್ಟ್ರಾನಮಿ’ಯಲ್ಲಿ ವರದಿ ಮಾಡಿದ್ದಾರೆ. 2018ರಲ್ಲಿ, ವಿಜ್ಞಾನಿಗಳು ಮಂಗಳದ ದಕ್ಷಿಣ ಧ್ರುವದ ಬಳಿ ದೊಡ್ಡ ಉಪಮೇಲ್ಮೈ ಸರೋವರದ ಆವಿಷ್ಕಾರ ಮಾಡಿರುವುದಾಗಿ ಘೋಷಿಸಿದರು. ಮಂಗಳ ಗ್ರಹದಲ್ಲಿ ಕಂಡು ಬಂದ ಸಮಾಧಿಯಾದ ನೀರಿನ ಸರೋವರವು   ಜೀವಕ್ಕೆ ಅನುಕೂಲಕರವಾದ ಭೂಮ್ಯತೀತ ಜಗತ್ತನ್ನು ಕಂಡುಕೊಳ್ಳುವ ಉತ್ಸಾಹವನ್ನು ಹೆಚ್ಚಿಸಿತ್ತು.  ಆ ಬಗ್ಗೆ ಮತ್ತಷ್ಟು ಅನುಸರಣಾ ಅವಲೋಕನಗಳ ಅಗತ್ಯವಿದೆ ಸಂಶೋಧಕರು ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಸಂಶೋಧನೆಗಳು ಮುಂದುವರಿದಿವೆ.

ನಾಯಿಯ ಕೃತಜ್ಞತೆ!
ನಾಯಿಗಳ ನಿಯತ್ತಿನ ಬಗ್ಗೆ ಶತಶತಮಾನಗಳಿಂದಲೂ ಮಾತನಾಡುತ್ತಾ ಬಂದಿದ್ದೇವೆ. ಇದು ಇತ್ತೀಚಿನದು. ಮುಂಬೈನಲ್ಲಿ ಪ್ರಿಯಾಂಕಾ ಚೌಬಾಲ್ ಎಂಬವರು ಕೋವಿಡ್ ಲಾಕ್‌ಡೌನ್ ಅವಧಿ–ಯಲ್ಲಿ ನಾಯಿಯೊಂದಕ್ಕೆ ಕೆಲವು ದಿನಗಳ ಕಾಲ ಊಟ– ವನ್ನು ನೀಡಿದ್ದರು. ಅದಾಗಿ ಹೆಚ್ಚು ಕಮ್ಮಿ ಒಂದು ವರ್ಷ ದಾಟಿದೆ. ಅವರು ಸಾಕಷ್ಟು ಬೀದಿ ನಾಯಿಗಳಿಗೆ ಆಗಾಗ್ಗೆ ಊಟ ನೀಡುವುದ–ರಿಂದ ಎಲ್ಲಾ ನಾಯಿಗಳನ್ನು ನೆನಪಿಟ್ಟುಕೊಂಡಿರಲಾರರು. ಆದರೆ, ಊಟ ತಿಂದ ನಾಯಿಗಳು ಮಾತ್ರ ನೆನಪಿಟ್ಟುಕೊಂಡಿರುತ್ತವೆ. ಇತ್ತೀಚೆಗೆ ಪ್ರಿಯಾಂಕ ಕಚೇರಿ ಬಸ್ ತಪ್ಪಿಸಿಕೊಂಡಿದ್ದರು. ಮತ್ತೊಂದು ಬಸ್ ಬರುವವರೆಗೆ ದೇವ–ಸ್ಥಾನಕ್ಕೆ ತೆರಳಿದ್ದರು. ಏನಾಶ್ಚರ್ಯ. ಅಲ್ಲಿದ್ದ ನಾಯಿಯೊಂದು ಆಕೆಯ ಬಳಿ  ಓಡಿ ಬಂದು ಬಾಲ ಅಲ್ಲಾಡಿಸಿ ತನ್ನ ಪ್ರೀತಿ  ವ್ಯಕ್ತಪಡಿಸಿತು. ಪ್ರಿಯಾಂಕ ಅವರಿಗೆ ಆಗಲೇ ನೆನಪಾಗಿದ್ದು, ಆ ನಾಯಿಗೆ ಅವರು ಕೋವಿಡ್ ಲಾಕ್‌ಡೌನ್ ಅವಧಿ ಯಲ್ಲಿ ಊಟ ನೀಡಿದ್ದು. ಈ ಅಪರೂಪದ ಭೇಟಿ–ಯನ್ನು ಅವರು ಇನ್‌ಸ್ಟ್ರಾ ಗ್ರಾಮ್‌ನ ‘ಸ್ಟ್ರೇಡಾಗ್ ಫೀಡರ್ ಅಂಧೇರಿ’ ಪುಟದಲ್ಲಿ  ಹಂಚಿಕೊಂಡಿದ್ದಾರೆ. ವರ್ಷವಾದರೂ ನಾಯಿ ಆಕೆಯನ್ನು ನೆನಪಿಟ್ಟು–ಕೊಂಡು ಬಂದು ಪ್ರೀತಿ ವ್ಯಕ್ತಪಡಿಸಿದ ಪರಿಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಸುವರ್ಣಾವತಿ ಜಲಾಶಯ
ಚಾಮರಾಜನಗರ ತಾಲ್ಲೂಕಿನ ಅಟ್ಟುಗುಳಿಪುರ ಬಳಿ ಸುವರ್ಣಾವತಿ ಜಲಾಶಯವಿದೆ. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(209)ಯ ಬದಿಯಲ್ಲಿದೆ. 1977 ರಲ್ಲಿ ಈ ಜಲಾಶಯವನ್ನು ನಿರ್ಮಿಸಲಾಯಿತು. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅಂಚಿನಲ್ಲಿರುವ ಈ ಜಲಾಶಯವು ಒಂದು ದಿನದ ಪಿಕನಿಕ್‌ಗೆ  ಉತ್ತಮ ಸ್ಥಳವಾಗಿದೆ. ಅಪಾರ ಜಲರಾಶಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ತಣ್ಣಗೆ ಇರುವ ಜಲಾಶಯವನ್ನು ನೋಡುವುದೇ ಒಂದು ಸೋಜಿಗ. ಜಿಂಕೆ, ಆನೆ, ಚಿರತೆ, ಹುಲಿ ಹಾಗೂ ಇತರೆ ವನ್ಯಜೀವಿಗಳು ಕುಡಿಯುವ ನೀರಿಗಾಗಿ ಜಲಾಶಯವನ್ನು ಆಶ್ರಯಿಸಿವೆ. ಆಗಾಗ ಜಲಾಶಯಕ್ಕೆ ಬಂದು ಹೋಗುತ್ತವೆ. ಈ ಪ್ರವಾಸಿ ತಾಣವು ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 16 ಕಿ.ಮೀ.ದೂರದಲ್ಲಿದೆ. ವಾರಾಂತ್ಯದ ದಿನಗಳಲ್ಲಿ ಕುಟುಂಬ ಸಮೇತ ಹೋದರೆ ಜಲಾಶಯದ ಏರಿ ಮೇಲೆ ಓಡಾಡಿಕೊಂಡು ಆಹ್ಲಾದಕರ ವಾತಾವರಣವನ್ನು ಸವಿಯಬಹುದು. ನಗರದ ಶಬ್ದ, ವಾಯು ಮಾಲಿನ್ಯದಿಂದ ದೂರವಾಗಿ ಶುದ್ಧಗಾಳಿ, ನಿಸರ್ಗದ ರಮಣೀಯತೆಯನ್ನು ಸವಿಯಬಹುದು.
andolana

Recent Posts

ಮೈಸೂರು | 21 ರಂದು ಪಲ್ಸ್ ಪೋಲಿಯೋ ಅಭಿಯಾನ

ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…

3 mins ago

ವೈದ್ಯ, ನರ್ಸ್‌ ಹುದ್ದೆ ಭರ್ತಿಗೆ ಒಂದು ತಿಂಗಳೊಳಗೆ ಕ್ರಮ : ಆರೋಗ್ಯ ಸಚಿವ ಗುಂಡೂರಾವ್‌

ಬೆಳಗಾವಿ : ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ…

27 mins ago

ಸುಪ್ರೀಂಕೋರ್ಟ್‌ನಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನಡೆ

ನವದೆಹಲಿ: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ…

1 hour ago

ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ: ಸಚಿವ ಕೆ.ಎಚ್.ಮುನಿಯಪ್ಪ

ಬೆಳಗಾವಿ: ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…

2 hours ago

ಬೆಂಗಳೂರಿನಲ್ಲಿ ಸಾಕು ಪ್ರಾಣಿಗಳ ಮಾರಣಹೋಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…

2 hours ago

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

3 hours ago