ಎಡಿಟೋರಿಯಲ್

ಆಂದೋಲನ ಓದುಗರ ಪತ್ರ: 07 ಶನಿವಾರ 2023

ರಾಜಕೀಯ ನಾಯಕರು ಘನತೆಯಿಂದ ಮಾತಾಡಲಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪ್ರಮುಖ ನಾಯಕರು ತಮ್ಮ ಭಾಷಣಗಳಲ್ಲಿ ಜನರಿಗೆ ತಾವು ನೀಡಿದ ಕೊಡುಗೆಗಳು, ಅಭಿವೃದ್ಧಿ ಕುರಿತ ಭಾಷಣಗಳ ಬದಲಿಗೆ, ತಮ್ಮ ವಿರೋಧಿಗಳನ್ನು ನಿಂದಿಸುವುದನ್ನೇ ಗುರಿ ಮಾಡಿಕೊಂಡಂತಿದೆ. ಚುನಾಯಿತ ಜನಪ್ರತಿನಿಧಿಗಳ ಭಾಷಣ ಎಂದರೆ ಅದೊಂದು ಎದುರಾಳಿ ನಿಂದನೆ ಎನ್ನುವುದು ಕಡ್ಡಾಯ ಎಂಬಂತಾಗಿದೆ. ಇದು ರಾಜಕೀಯ ನಾಯಕರ ಕುರಿತು ಯುವಸಮೂಹದಲ್ಲಿ ಅಸಹ್ಯ ಹುಟ್ಟಿಸಿದೆ. ಆಡಳಿತ ಪಕ್ಷ ಮತ್ತು ವಿರೋಧಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ತಮ್ಮ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಆದರೆ ಇಲ್ಲಿ ಅದರ ಹೊರತಾಗಿ ಪ್ರತಿ ಪಕ್ಷಗಳ ತೇಜೋವಧೆಯೇ ಹೆಚ್ಚಾಗಿದೆ. ಈ ವರ್ತನೆಯನ್ನು ಪ್ರಜ್ಞಾವಂತ ನಾಗರಿಕರು ಸಹಿಸುವುದಿಲ್ಲ ಎಂಬುದು ಮಾತ್ರ ಸತ್ಯ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣವೆಂದರೆ ಕೇಳಲು ವಿರೋಧ ಪಕ್ಷದವರು ಕೂಡ ಹಾಜರಿರುತ್ತಿದ್ದರು. ವಿರೋಧಿಗಳನ್ನು ಟೀಕಿಸಿದರೂ ಅದರಲ್ಲೊಂದು ಘನತೆ, ವ್ಯಂಗ್ಯ ಮತ್ತು ಕಾವ್ಯಾತ್ಮಕತೆಯಿಂದ ಕೂಡಿದ ಭಾಷೆಯನ್ನೇ ಅವರು ಬಳಸುತ್ತಿದ್ದರು. ಆದ್ದರಿಂದ ರಾಜ್ಯದ ರಾಜಕೀಯ ನಾಯಕರು ಇನ್ನು ಮುಂದೆ ಘನತೆಗೆ ತಕ್ಕಂತೆ ಮಾತನಾಡುವತ್ತ ಎಚ್ಚರವಹಿಸಬೇಕು.

-ಬಿ.ಎಸ್.ಚೈತ್ರ, ಚಿತ್ರದುರ್ಗ.


ಕುಮಾರಸ್ವಾಮಿ ಅವರ ಹೇಳಿಕೆಗೆ ಸಿಎಂ, ಬಿಎಸ್‌ವೈ ಮೌನವೇಕೆ?

ಇದೇ ಜ.2ರಂದು ಮೈಸೂರಿನಲ್ಲಿ ಜಾತ್ಯತೀತ ಜನತಾದಳದಿಂದ ಆಯೋಜಿಸಿದ್ದ ‘ಶರಣರೊಂದಿಗೆ ಕುಮಾರಣ್ಣ‘ ಕಾರ್ಯಕ್ರಮದಲ್ಲಿ, ವೀರಶೈವರ ಮುಖಂಡರನ್ನುದ್ದೇಶಿಸಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಮಾತನಾಡಿ ಯಡಿಯೂರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ, ಬಸವರಾಜ ಬೊಮ್ಮಾಯಿ ಅವರು ಕೂಡ ಮುಖ್ಯಮಂತ್ರಿಯಾಗಿ ಯಾವ ಸ್ವಂತ ತೀರ್ಮಾನ ತೆಗೆದುಕೊಳ್ಳುವ ಹಾಗಿಲ್ಲ. ಬಿಜೆಪಿ ಬೆಂಬಲಿಸುವ ವೀರಶೈವ ನಾಯಕರನ್ನೂ ಕೂಡ ಅಸಡ್ಡೆಯಿಂದ ಕಾಣುತ್ತಿದ್ದಾರೆ. ಇದರಿಂದ ವೀರಶೈವ ಸಮಾಜವು ಎಚ್ಚೆತ್ತುಕೊಂಡು ಬಿಜೆಪಿಯಿಂದ ವಿಮುಖವಾಗುತ್ತಿದೆ ಎಂದಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ವಿಚಾರದ ಬಗ್ಗೆ ಯಡಿಯೂರಪ್ಪ ಅವರು ಮತ್ತು ಬಸವರಾಜ ಬೊಮ್ಮಾಯಿ ಅವರ ಪ್ರತಿಕ್ರಿಯೆ ಏನು? ಕುಮಾರಸ್ವಾಮಿ ಅವರು ಹೇಳುವುದರಲ್ಲಿ ಸತ್ಯಾಂಶವಿದೆಯೇ? ಅಥವಾ ಅದು ಕೇವಲ ಊಹೆಯೇ? ಎಂಬುದರ ಕುರಿತು ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಈ ಇಬ್ಬರೂ ನಾಯಕರೇ ಆ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಬೇಕಿದೆ. ಒಂದು ವೇಳೆ ಅವರುಗಳು ಪ್ರತಿಕ್ರಿಯೆ ನೀಡದಿದ್ದಲ್ಲಿ, ಅದು ಕುಮಾರಸ್ವಾಮಿಯವರ ಹೇಳಿಕೆಗೆ ಬಲ ನೀಡಲಿದೆ. ಅದು ಆ ಮಾತು ನಿಜವೆಂದು ಆ ಸಮುದಾಯ ಪರಿಗಣಿಸ ಬೇಕಾಗಬಹುದು. ಈಗಲಾದರೂ ಸಿಎಂ, ಬಿಎಸ್‌ವೈ ಪ್ರತಿಕ್ರಿಯಿಸುವುದು ಸೂಕ್ತ.

-ಬ್ಯಾಂಕ್ ಶಿವಕುಮಾರ್, ಜೆ.ಪಿ.ನಗರ, ಮೈಸೂರು.

andolanait

Recent Posts

ಬೇಬಿ ಬೆಟ್ಟದ ಜಾತ್ರೆಯಲ್ಲಿ ಹಳ್ಳಿಕಾರ್ ದರ್ಬಾರ್!

ಎಸ್.ನಾಗಸುಂದರ್ ೫೦ ಸಾವಿರ ರೂ.ಗಳಿಂದ ೧೫ ಲಕ್ಷ ರೂ.ವರೆಗೆ ಬೆಲೆಬಾಳುವ ರಾಸುಗಳ ಪ್ರದರ್ಶನ ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಭಾರೀ…

30 seconds ago

ಹೀಗೊಂದು ಬೆಕ್ಕಾಯಣ

ಭಾರತಿ ಬಿ.ವಿ. ಕದ್ದುಮುಚ್ಚಿ ನಮ್ಮ ಮನೆಯ ಗರಾಜಿಗೆ ಅಂಟಿದಂತಿದ್ದ ಕೋಣೆಯಲ್ಲಿ ಮರಿ ಹಾಕಿ ಬೀಡುಬಿಟ್ಟ ಮೊದಲಲ್ಲಿ ನಮಗೆ ಹೆದರುತ್ತಿದ್ದ ಬೆಕ್ಕು…

6 mins ago

ಜಾತಿಬೇಲಿಯ ಕಳಚಿಬಿಡುವ ಮಾರಿಹಬ್ಬಗಳು

ಅಜಯ್ ಕುಮಾರ್ ಎಂ.ಗುಂಬಳ್ಳಿ ಮಾರಿಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿಕೊಂಡು ಹಬ್ಬ ಮಾಡುತ್ತಾರೆ…

11 mins ago

‘ಗಾಡ್ ಫಾದರ್’ ಇಲ್ಲದೇ ಬರೆಯಲಾಗುವುದಿಲ್ಲವೇ?

ಅಕ್ಷತಾ ಏಕಲವ್ಯ ದ್ರೋಣರನ್ನು ಗುರುಗಳೆಂದು ಒಪ್ಪಿ, ಮರೆಯಲ್ಲೇ ನಿಂತು ಬಿಲ್ವಿದ್ಯೆ ಪ್ರವೀಣನಾದರೂ ದ್ರೋಣರು ಒಪ್ಪಿಕೊಂಡದ್ದು ಅರ್ಜುನನ ಮೇಲಿನ ಶಿಷ್ಯ ಪ್ರೀತಿಯನ್ನು!…

15 mins ago

ಅವಕಾಶ ವಂಚಿತ ಚೆನ್ನೈ ಮಕ್ಕಳಿಗೆ ಪ್ರವಾಸ ಭಾಗ್ಯ

ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು: ಪ್ರತಿಯೊಂದು ಮಗುವಿಗೂ ಎಲ್ಲಾ ರೀತಿಯ ಅನುಭವ ಬೇಕು. ಆದರೆ ಎಲ್ಲ ಮಕ್ಕಳಿಗೂ ಅಂತಹ ಅವಕಾಶ ಒದಗಿ…

26 mins ago