ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 04 ಶುಕ್ರವಾರ 2022

ಓದುಗರಪತ್ರ

ಜೂನಿಯರ್ ಎನ್‌ಟಿಆರ್ ಸರಳ ವ್ಯಕ್ತಿತ್ವ

ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂಧರ್ಭದಲ್ಲಿ ಜೂನಿಯರ್ ಎನ್ಟಿಆರ್ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕನ್ನಡ ನಮ್ಮೆಲ್ಲರನ್ನೂ ಮೆಚ್ಚಿಸಿದೆ. ವೇದಿಕೆಯಲ್ಲಿ ಮಳೆಯಿಂದ ಒದ್ದೆಯಾಗಿದ್ದ ಕುರ್ಚಿಗಳನ್ನು ಬಟ್ಟೆಯಿಂದ ಸ್ವತಃ ತಾವೇ ಒರೆಸಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಸುಧಾಮೂರ್ತಿ ಅವರುಗಳಿಗೆ ಕುಳಿತುಕೊಳ್ಳಲು ಅನುವು ಮಾಡಿಕೊಟ್ಟರು. ಅಂತಹ ಅವರ ಸರಳತೆಯ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕು.

ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.


ಬೆಲೆ ಏರಿಕೆಗೆ ನಿಯಂತ್ರಣವಿಲ್ಲವೇ?

ನಂದಿನಿ ತುಪ್ಪ ಗ್ರಾಹಕರ ಗಂಟಲನ್ನೇ ಸುಡುತ್ತಿದೆ. ಏಕೆಂದರೆ ಆಗಸ್ಟ್ ತಿಂಗಳಲ್ಲಿ ೧೧೭ ರೂ. ಇದ್ದ ೨೦೦ ಎಂಎಲ್ ನಂದಿನಿ ತುಪ್ಪದ ಬೆಲೆ ಅಕ್ಟೋಬರ್ ತಿಂಗಳಲ್ಲಿ ೧೩೫ ರೂ.ಗೇರಿದೆ. ಎಂದರೆ ಕೇವಲ ೨ ತಿಂಗಳ ಲ್ಲಿ ೧೮ ರೂ.ಹೆಚ್ಚಳ. ಕೆಜಿಗೆ ೭೨ ರೂ. ಹೆಚ್ಚಾಗಿದೆ. ಅಂದ ಹಾಗೆ ಈ ರೀತಿ ಬೆಲೆ ಹೆಚ್ಚಳ ಇದೇ ಮೊದಲು ಅಲ್ಲ ಕೊನೆಯೂ ಅಲ್ಲ. ಮನ ಬಂದ ಹಾಗೆ ಏರಿಸುತ್ತಿದ್ದಾರೆ! ಹಾಲು ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿರುವ ಕೆಎಂಎಫ್ ನಿಜಕ್ಕೂ ನಷ್ಟದಲ್ಲಿದೆಯೇ? ಹಾಗಿದ್ದರೂ ಅನೇಕ ನೇಮಕಾತಿ ಮಾಡಿ ಹುದ್ದೆ ಗಳನ್ನು ಭರ್ತಿ ಮಾಡಿಕೊಳ್ಳುವುದೇಕೆ? ನಷ್ಟವಾಗುತ್ತಿದ್ದರೆ ಯಾವ ಕಾರಣದಿಂದ ನಷ್ಟವಾಗುತ್ತಿದೆ? ನಷ್ಟಕ್ಕೆ ಕಾರಣವಾಗುತ್ತಿರುವವರು ಯಾರು? ನಂದಿನಿ ಉತ್ಪನ್ನಗಳ ಅನಿಯಮಿತ ಬೆಲೆ ಏರಿಕೆಗೆ ಕಾರಣವೇನು? ಈ ಬಗ್ಗೆ ಕೆಎಂಎಫ್ ಸ್ಪಷ್ಟನೆ ಕೊಡಲಿ. ಸರ್ಕಾರ ತನಿಖೆಗೆ ಆದೇಶ ನೀಡಲಿ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು.


ರಕ್ಷಕರಿಗೆ ರಕ್ಷಣೆ ಇಲ್ಲವೇ?

ಗಿರಿಜನರೇ ಇಲ್ಲದಿದ್ದರೆ ಕಾಡುಗಳ್ಳರು ಇಡೀ ಕಾಡನ್ನು ನಾಶ ಮಾಡುತ್ತಿದ್ದರು. ಕಾಡನ್ನು ದೇವರೆಂದೇ ತಿಳಿದವರು ಗಿರಿಜನರು. ಅಂತಹ ಗಿರಿಜನರ ಮೇಲೆ ಅರಣ್ಯ ಇಲಾಖೆಯವರು ಅನವಶ್ಯಕ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುವುದು ಅಕ್ಷಮ್ಯ. ಅರಣ್ಯ ಇಲಾಖೆ ಸಿಬ್ಬಂದಿ ಮಾಡಬೇಕಾದ ಬಹಳಷ್ಟು ಕೆಲಸವನ್ನು ಯಾವುದೇ ವೇತನ ಪಡೆಯದೇ ಗಿರಿಜನರು ಮಾಡುತ್ತಿದ್ದಾರೆ. ಅವರ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾನವೀಯತೆಯಿಂದ ನಡೆದುಕೊಳ್ಳಬೇಕು.

-ವಿನಯ್ ಕುಮಾರ್, ಬನ್ನಿಮಂಟಪ, ಮೈಸೂರು.


ರಸಗೊಬ್ಬರಗಳಿಗೆ ಸಬ್ಸಿಡಿ

ಕೋವಿಡ್ ಸಮಸ್ಯೆ , ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ನಡುವೆ ಬಸವಳಿದ ರೈತರಿಗೆ ಈ ವರ್ಷದ ಹಿಂಗಾರು ಋತುವಿಗೆ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು ಸ್ವಾಗತಾರ್ಹ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಳಿತವನ್ನು ಹತ್ತಿಕ್ಕಲು ಸರ್ಕಾರದ ಈ ನಿರ್ಧಾರವು ಸಹಾಯಕವಾಗಲಿದೆ ಎಂಬುದು ಕೃಷಿ ತಜ್ಞರ ವಿಶ್ಲೇಷಣೆ.
ದೇಶೀಯ ರಸಗೊಬ್ಬರ ಕಾರ್ಖಾನೆಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು, ಸರಕು ಸಬ್ಸಿಡಿ ಮೂಲಕ ಈ ಸಹಾಯಧನ ನೀಡಲು ಮುಂದಾಗಿರುವುದು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ ಪರಿಕಲ್ಪನೆಗೆ ಉತ್ತೇಜನಕಾರಿ. ರೈತರಿಗೆ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಸಬ್ಸಿಡಿ ಮಣ್ಣಿನ ಮಕ್ಕಳಿಗೆ ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಇದು ಸಹಕಾರಿ.

-ವಿಜಯಕುಮಾರ್ ಎಚ್.ಕೆ. ಮೈಸೂರು.


ಉಚಿತ ಕೊಡುಗೆಗಳು ದೇಶಕ್ಕೆ ಮಾರಕ

ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಘೋಷಣೆ ಮಾಡುವ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಈ ಹಿಂದೆ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಉಚಿತ ಕೊಡುಗೆಗಳು ಈಗ ದೇಶಾದ್ಯಂತ ಮತದಾರರನ್ನು ಸೆಳೆಯುವ ಅಸ್ತ್ರಗಳಂತೆ ಬಳಕೆಯಾಗುತ್ತಿರುವುದು ಬೇಸರದ ಸಂಗತಿ. ಹೇಗಾದರೂ ಸರಿ ಅಧಿಕಾರಕ್ಕೇರಲೇಬೇಕು ಎಂಬ ಉಮೇದಿಯೊಂದಿಗೆ ರಾಜಕೀಯ ಪಕ್ಷಗಳು ಚುನಾವಣೆ ಪೂರ್ವದಲ್ಲಿ ಮಾಡುವ ಈ ಉಚಿತ ಘೋಷಣೆಗಳು ಜಾರಿಗೆ ಬಂದರೆ ಅವುಗಳ ಹೊರೆಬೀಳುವುದು ತೆರಿಗೆದಾರರ ಮೇಲೆಯೇ. ಒಂದು ಪಕ್ಷ ಅಧಿಕಾರದ ಗದ್ದುಗೆ ಏರಲು ಸಾರ್ವಜನಿಕರ ಹಣವನ್ನು ಈ ರೀತಿ ಬೇಕಾಬಿಟ್ಟಿ ಪೋಲು ಮಾಡುವುದು ಎಷ್ಟು ಸರಿ ಎಂಬ ಚರ್ಚೆ ಹಾಗೂ ಆತ್ಮವಲೋಕನ ನಡೆಯುವುದು ಅವಶ್ಯಕ.

-ಹರಳಹಳ್ಳಿಪುಟ್ಟರಾಜು, ಪಾಂಡವಪುರ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago