ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 08 ಗುರುವಾರ 2022

ಹೆಮ್ಮೆಯ ಮೈ.. ಸೂರು !
ಬೆಂದಕಾಳೂರು
ಬಹಳ ಕಾಲದ ನಂತರ
ಆಯಿತು
ಬೆಂಗಳೂರು
ಮಳೆಯಿಂದ ಆಗಿಹೋಯಿತು
ಈಗ ರಾಜಧಾನಿ
ಬೆಂಗಳೂರು ಅಸ್ತವ್ಯಸ್ತ …
ಸಿಲಿಕಾನ್ ಸಿಟಿಗೆ ಹೋಲಿಸಿದರೆ
ಎಷ್ಟೋ ಪರವಾಗಿಲ್ಲ
ಸಾಂಸ್ಕೃತಿಕ
ರಾಜಧಾನಿ
ನಮ್ಮ ಮೈ……ಸೂರು !
-ಮ.ಗು.ಬಸವಣ್ಣ, ಜೆಎಸ್‌ಎಸ್ ಪ್ರೌಢಶಾಲೆ, ಸುತ್ತೂರು.


‘ತೆರಿಗೆ ಭಿಕ್ಷೆ’ ಪಡೆಯುವುದನ್ನು ನಿಲ್ಲಿಸಿ
ಮೈಸೂರು ನಗರ ಪಾಲಿಕೆಯವರು ಸ್ವತ್ತಿನ ತೆರಿಗೆ ಪಡೆಯುವ ಸಂದರ್ಭದಲ್ಲಿ ಭಿಕ್ಷುಕರ ಸೆಸ್ ವಸೂಲಿ ಮಾಡುತ್ತಾರೆ. ಹಾಗೆಯೇ ರಾಜ್ಯ ಸರ್ಕಾರದ ವತಿಯಿಂದ ಭಿಕ್ಷುಕರ ಪುನರ್ವಸತಿ ಕೇಂದ್ರವು ಕಾರ್ಯನಿರ್ವಹಿಸುತ್ತದೆ. ಪ್ರತಿ ನಗರದ ಸಿಗ್ನಲ್ ಗಳಲ್ಲಿ ಇತ್ತೀಚೆಗೆ ಲೈಂಗಿಕ ಅಲ್ಪ ಸಂಖ್ಯಾತರು ಭಿಕ್ಷಾಟನೆ ನಡೆಸುವುದು ಮಿತಿ ಮೀರಿದೆ. ರೈಲುಗಳಲ್ಲಿಯೂ ಇವರ ಉಪಟಳ ವಿಪರೀತವೆನಿಸುವಷ್ಟು ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆಗಳು ಮತ್ತು ಪುನರ್ವಸತಿ ಕೇಂದ್ರಗಳು ವಿಫಲವಾಗಿವೆ. ಇವರುಗಳನ್ನು ಕರೆದುಕೊಂಡು ಹೋಗಿ ಜೀವನ ನಿರ್ವಹಣೆಗೆ ಸಹಾಯವಾಗುವ ಬೇರೆ ಯಾವುದಾದರೂ  ಅವಶ್ಯ ತರಬೇತಿ ನೀಡುವುದು ಪುನರ್ವಸತಿ ಕೇಂದ್ರಗಳ ಕೆಲಸವಾಗಿದೆ. ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಭಿಕ್ಷುಕರ ಸೆಸ್ ವಸೂಲಿಮಾಡಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ.
-ಎಸ್.ರವಿ, ಮೈಸೂರು.

ಕಾಯಕ ಯಾವುದು?
ಕಾಯಕವೇ ಕೈಲಾಸ ಎನ್ನುವುದು ನಿರ್ಬಂಧಿತ ಸತ್ಯ. ನಾವು ಇಷ್ಟಪಟ್ಟು ಮಾಡುವ, ಮಾಡುವುದನ್ನು ಸಂತೋಷಿಸುವ, ಅಥವಾ ತಿಳಿದು ಸಂತೋಷದಿಂದ ಮಾಡುವ ಕಾಯಕ ಕೈಲಾಸವೇ ಆಗಬಹುದು. ಆದರೆ ವರ್ಗ ಸಮಾಜದಲ್ಲಿ ಮಾಲೀಕರಿಗಾಗಿ, ಜಾತಿಯ ಸಂಕೋಲೆಯಲ್ಲಿ ಉಳ್ಳವರಿಗಾಗಿ, ‘ಜಾತಿ ಶ್ರೇಷ್ಠ’ರಿಗಾಗಿ ಮಾಡುವ ಕಾಯಕ ಖಂಡಿತ ಕೈಲಾಸವಲ್ಲ. ನಮ್ಮನ್ನು ಕಾಯಕದ ಸಂಕೋಲೆಯಲ್ಲಿ ಬಂಧಿಸಿ ಕೇವಲ ಕಾರ್ಮಿಕರನ್ನಾಗಿಸಿ, ನಮ್ಮ ಮಾನವ ಘನತೆಯನ್ನು, ಸೃಜನ ಶೀಲತೆಯನ್ನು ಕಿತ್ತುಕೊಳ್ಳುವ  ಕಾಯಕ ಖಂಡಿತ ಕೈಲಾಸವಲ್ಲ. ಸ್ವಾತಂತ್ರ್ಯಗಳಿಸುವುದೆಂದರೆ ಜನ್ಮಸಿದ್ಧ ಹಕ್ಕುಗಳಾದ ಮಾನವ ಘನತೆಯನ್ನು, ಸೃಜನಶೀಲತೆಯನ್ನು ಗಳಿಸುವುದು. ಹುಟ್ಟಿನಿಂದಲೇ ಮನುಷ್ಯರ ಮೇಲೆ ಶ್ರಮವಿಭಜನೆಯನ್ನು ಹೇರಿದ ಜಾತಿಸಮಾಜದಲ್ಲಿ, ಉಳ್ಳವರು ಹೇರಿದ ಕಾಯಕದ ವರ್ಗಸಮಾಜದಲ್ಲಿ ಬದುಕುತ್ತಿರುವ ಯಾರೊಬ್ಬರೂ ಸ್ವತಂತ್ರರಲ್ಲ. ಅಂಥ ಯಾರಿಗೂ ಮಾನವ ಘನತೆ ಇಲ್ಲ. (ಬಸವಣ್ಣ ಹೇಳಿದ್ದು ‘ಶರಣರ ಕಾಯವೇ ಕೈಲಾಸ’ ಎಂದು.)
-ಲಕ್ಷ್ಮಿನಾರಾಯಣ ವಿ.ಎನ್, ಮೈಸೂರು.


ಮೇಯರ್ ಆಯ್ಕೆಯಲ್ಲಿ ಗೊಂದಲ

ಮೈಸೂರು ಮಹಾನಗರಪಾಲಿಕೆಯ ೨೪ ನೇ ಮೇಯರ್ ಆಗಿ ಭಾರತೀಯ ಜನತಾ ಪಕ್ಷದ    ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ಅದೇ ಪಕ್ಷದ ಡಾ.ಜಿ.ರೂಪಾರವರು ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು.   ಹಲವಾರು ವರ್ಷಗಳಿಂದ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗಳಲ್ಲಿ
ಕಡೆಯ ಹಂತದವರೆಗೂ, ಗೊಂದಲ ಹಾಗೂ ಅನಿಶ್ಚಿತತೆ ಕಾಡುತ್ತಿರುವುದನ್ನು ಮೈಸೂರಿನ ಪ್ರಜ್ಞಾವಂತ ನಾಗರಿಕರು  ಗಮನಿಸುತ್ತಲೇ
ಬಂದಿದ್ದಾರೆ.  ಇದೊಂದು ಪ್ರಹಸನದ ಸ್ವರೂಪ ಪಡೆದುಕೊಂಡಿದೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ,  ಕಾಂಗ್ರೆಸ್ ಮತ್ತು ಜಾ.ದಳ ಈ ಪ್ರಹಸನದ ಕೇಂದ್ರ ಬಿಂದುಗಳು.  ೧೫ ವರ್ಷಗಳ ಹಿಂದೆ ಮೇಯರ್ ಚುನಾವಣೆ ಇಷ್ಟೊಂದು ಗೊಂದಲಮಯವಾಗಿರಲಿಲ್ಲ.  ಎಲ್ಲವೂ ಪೂರ್ವ ನಿರ್ಧಾರಗಳಂತೆ ನಡೆಯುತ್ತಿದ್ದವು.  ಇತ್ತೀಚಿನ ವರ್ಷಗಳಲ್ಲಿ ಮಾತ್ರ ಈ ಗೊಂದಲ ಹೆಚ್ಚಾಗುತ್ತಲೇ ಬಂದಿದೆ.  ಏಕೆಂದರೆ ನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲ. ಈ ಬಾರಿ, ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಸ್ವತಂತ್ರವಾಗಿಯೇ ಮೇಯರ್ ಹುದ್ದೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡು ಬಂದಿದ್ದರೂ ಕಡೆಯ ಕ್ಷಣದಲ್ಲಿ ಬಿಜೆಪಿ ಮತ್ತು ಜಾ.ದಳ  ತಮ್ಮ ನಿಜವಾದ ರಾಜಕೀಯ ದಾಳ ಉರುಳಿಸಿದವು.  ವಾಸ್ತವವಾಗಿ ಜಾ.ದಳಕ್ಕೆ ಉಪ ಮೇಯರ್ ಸ್ಥಾನ ಸಿಕ್ಕಬೇಕಿದ್ದರೂ ಸಹ, ತಾಂತ್ರಿಕ ಕಾರಣದಿಂದ ಅಭ್ಯರ್ಥಿ ರೇಷ್ಮಬಾನುರವರ ನಾಮಪತ್ರ ತಿರಸ್ಕೃತಗೊಂಡಿತು.
ಅದೇನೆ ಇರಲಿ, ಗೆದ್ದ ಅಭ್ಯರ್ಥಿಗಳು ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿ ಎಂಬುದು  ಮೈಸೂರಿನ ನಾಗರಿಕರ ಕಳಕಳಿ.
– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು.
andolanait

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

5 hours ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

6 hours ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

7 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

7 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

7 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

7 hours ago