ಅವಸಾನದ ಅಂಚಿಗೆ ತಲುಪಿದ್ದ ದೇವನೂರು ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ಸರ್ಕಾರದ ಪ್ರತಿನಿಧಿಗಳು ಕಾರ್ಯಪ್ರವೃತ್ತ ರಾಗಿರುವುದು ತುಂಬಾ ಸಂತೋಷದಾಯಕ ಸಂಗತಿ. ಅದೇ ರೀತಿ ಸಾತಗಳ್ಳಿ ಕೆರೆಯನ್ನು ಅಭಿವೃದ್ಧಿ ಪಡಿಸದೆ ಅದನ್ನು ಮುಚ್ಚಿ ಕ್ರಿಕೆಟ್ ಸ್ಟೇಡಿಯಂ ಮಾಡುತ್ತಿರುವುದು ಎಷ್ಟು ನ್ಯಾಯ? ಸಾತಗಳ್ಳಿ ಕೆರೆಗೆ ಬರುವ ನೀರಿನ ಸೆಲೆ ಬತ್ತಿದೆ ಎಂದು ಹೇಳಿ ಕೆರೆಯನ್ನು ಮುಚ್ಚುವ ಬದಲು ಮಳೆ ನೀರನ್ನು ಸಂಗ್ರಹ ಮಾಡುವ ಮೂಲಕ ಗಮನ ಹರಿಸಿ ಕೆರೆಯನ್ನು ಅಭಿವೃದ್ಧಿ ಪಡಿಸುವುದು ಉತ್ತಮ. ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮಾಡದೆ ಬೇರೆ ಕಡೆ ಸರ್ಕಾರದವರು ಭೂಮಿಯನ್ನು ಗುರುತಿಸಿ ಕೊಡುವುದು ಸೂಕ್ತ. ಸಂಬಂಧ ಪಟ್ಟವರು ಇತ್ತಾ ಕಡೆ ಗಮನ ಹರಿಸಬೇಕು.
-ಬೆಸಗರಹಳ್ಳಿ ರವಿ ಪ್ರಸಾದ್ , ಮೈಸೂರು.
ದಮನಿತರ ದನಿಯಾಗಿ, ಕಾರ್ಮಿಕರ ನೇತಾರರಾಗಿ ಜನಮಾನಸದಲ್ಲಿ ಸದಾ ಹಚ್ಚ ಹಸಿರಾಗಿ ಉಳಿದು, ತಳ ಸಮುದಾಯಕ್ಕೆ ಆಶಾಕಿರಣದ ಬೆಳಕಾದವರು ‘ಆಂದೋಲನ’ ದಿನಪತ್ರಿಕೆ ಸಂಸ್ಥಾಪಕ ಸಂಪಾದಕರ ರಾಜಶೇಖರ ಕೋಟಿಯವರು. ಅವರು ಕೇವಲ ನೆನಪಲ್ಲ. ನಮ್ಮೊಂದಿಗೆ ಇದ್ದಾರೆ. ಅವರ ಆಶೋತ್ತರಗಳು ಸದಾ ನಮ್ಮನ್ನೂ ಬಡಿದೆಬ್ಬಿಸಿ ನಾವು ಸಾಮಾಜಿಕ ನ್ಯಾಯದ ಕೆಲಸಗಳು ಮಾಡಲು ಪ್ರೇರೇಪಿಸುತ್ತಿವೆ. ಅವರ ಅಕಾಲಿಕ ನಿಧನದ ಬಳಿಕವೂ ‘ಆಂದೋಲನ’ ಸಂಪಾದಕರು ಅದೇ ಹಾದಿಯಲ್ಲಿ ಸಾಗುವ ಮೂಲಕ ಕೋಟಿಯವರ ದಾರ್ಶನಿಕ ಹೆಜ್ಜೆ ಗುರುತು ಉಳಿಸುತ್ತಿರುವುದು ಮಾತ್ರವಲ್ಲದೆ, ದಮನಿತರಾದ ನಮ್ಮಂತಹ ಅನೇಕರಿಗೆ ವೇದಿಕೆ ನೀಡುತ್ತಿದ್ದಾರೆ. ಕೋಟಿಯವರ ಹೆಸರನ್ನು ಮೈಸೂರು ನಗರದ ವೃತ್ತವೊಂದಕ್ಕೆ ಇಡಬೇಕೆಂಬುದು ನನ್ನ ಮನವಿಯಾಗಿದೆ. ಆ ಮೂಲಕ ಜನಮಾನಸದಲ್ಲಿ ‘ಕೆಂಪಂಗಿ ದೊರೆ’ ಕೋಟಿಯವರು ಸದಾ ಜೀವಂತವಾಗಿ ಇರುತ್ತಾರೆ.
– ಕೆ.ಮಹೇಶ್, ವಕ್ತಾರರು, ಜಿಲ್ಲಾ ಕಾಂಗ್ರೆಸ್ ಸಮಿತಿ.
ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ
ಹೆಗ್ಗೋಠಾರದಲ್ಲಿ ದಲಿತ ಮಹಿಳೆಯೊಬ್ಬರು ಸಾರ್ವಜನಿಕ ಟ್ಯಾಂಕ್‌ನ ನಲ್ಲಿಯಲ್ಲಿ ನೀರು ಕುಡಿದರೆಂಬ ಕ್ಷುಲ್ಲಕ ಕಾರಣಕ್ಕೆ ಸವರ್ಣಿಯರು ಆ ಟ್ಯಾಂಕ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನ ಖಾಲಿ ಮಾಡಿ ಅದನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಮೂಲಕ ಬಹಿರಂಗವಾಗಿಯೇ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಇದು ನಾಗರಿಕ ಸಮಾಜ ಅನಾಗರಿಕರಂತೆ ನಡೆದುಕೊಂಡಿರುವಂತಹ ಒಂದು ಅಮಾನವೀಯವಾದ ಕೃತ್ಯ. ಈ ಘಟನೆಯಿಂದ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಜನಜಾಗೃತಿ ಮೂಡಿಸಬೇಕು.
-ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು.
ಕತಾರ್ ದೇಶದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುವರ ಮೇಲೆ ಅಲ್ಲಿ ಸರ್ಕಾರ ಹಲವಾರು ಸಂಹಿತೆಗಳನ್ನು ವಿಧಿಸಿದೆ. ಬಿಯರ್, ಮದ್ಯ ಸೇವಿಸುವಂತಿಲ್ಲ. ಮಹಿಳೆಯರು ಮೈ ಕಾಣುವ ಉಡುಪು ಧರಿಸುವಂತಿಲ್ಲ. ಯುವಪ್ರೇಮಿಗಳಿಗೆ ಅವಕಾಶವಿಲ್ಲ. ಹಂದಿ ಮಾಂಸ ಸೇವನೆ ನಿಷಿದ್ಧ. ಹೀಗೆ ತನ್ನ ದೇಶದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪರಂಪರೆಗೆ ಅನುಗುಣವಾಗಿ ಕಟ್ಟು ಪಾಡುಗಳನ್ನು ವಿಧಿಸಿದೆ. ಇದನ್ನು ತಪ್ಪು ಎನ್ನಲಾಗದು. ಈ ಸಂಹಿತೆಗಳನ್ನು ಯಾರೂ ಪ್ರಶ್ನಿಸಿಲ್ಲ ಮತ್ತು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅಕಸ್ಮಾತ್ ನಮ್ಮ ದೇಶದಲ್ಲೂ , ದೇಶದ ಸಂಸ್ಕ್ರತಿ, ಧಾರ್ಮಿಕತೆ, ಸಂಸ್ಕಾರ ಮತ್ತು ಪರಂಪರೆಗಳಿಗೆ ಅನುಗುಣವಾಗಿ ಇಂತಹ ಸಂಹಿತೆಗಳನ್ನು ವಿದಿಸಿದ್ದರೆ , ಇವುಗಳನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು.
-ರಮಾನಂದ ಶರ್ಮ, ಬೆಂಗಳೂರು.
ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…