ತುರ್ತಾಗಿ ಮಾಡುವ ಅಗತ್ಯವಿತ್ತೇ?
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಂಗಳವಾರದವರೆಗೆ ದಾಳಿ ಮತ್ತು ಬಂಧನಗಳು ನಡೆದಿವೆ. ಬುಧವಾರ ಮುಂಜಾನೆಯೇ ಪಿಎಫ್‌ಐ ನಿಷೇಧಿಸಿದ ಆಜ್ಞೆ ಹೊರಬಿದ್ದಿದೆ. ಕೇಂದ್ರ ಸರ್ಕಾರ ಇಷ್ಟೊಂದು ತರಾತುರಿಯಲ್ಲಿ ನಿಷೇಧ ಮಾಡುವ ಅಗತ್ಯವಿತ್ತೇ? ಬಂಧಿತರನ್ನು ವಿಚಾರಣೆಗೆ ಒಳಪಡಿಸಿ, ಬಂಧಿತರಿಂದ ಪಡೆದ ಸಾಕ್ಷ್ಯಗಳ ಸತ್ಯಶೋಧನೆ ಮಾಡಿ ನಂತರ ನಿಷೇಧ ಮಾಡಬಹುದಿತ್ತು. ಶಾಂತಿ ಕದಡುವ ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ಯಾರದೂ ತಕರಾರು ಇರುವುದಿಲ್ಲ. ಆದರೆ, ತರಾತುರಿಯಲ್ಲಿ ನಿಷೇಧ ಮಾಡುವುದರ ಬದಲು ತನಿಖೆ ಪೂರ್ಣಗೊಳಿಸಿ ಮಾಹಿತಿಯನ್ನು ಸಾರ್ವಜನಿಕರ ಮುಂದಿಟ್ಟು ನಿಷೇಧ ಮಾಡಿದರೆ ಸರ್ಕಾರದ ಬಗ್ಗೆ ಯಾವ ಅನುಮಾನವೂ ಬಾರದು. ಸರ್ಕಾರ ತಾನು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಾಬೀತು ಮಾಡಲು ಇಂತಹ ಸಂದರ್ಭಗಳು ಒದಗಿಬರುತ್ತವೆ. ಅದನ್ನು ಸರ್ಕಾರ ಬಳಸಿಕೊಳ್ಳಬೇಕು.
-ನಂದಕುಮಾರ್, ಸರಸ್ವತಿಪುರಂ, ಮೈಸೂರು.
ವಿಬಿ- ಜಿ ರಾಮ್ ಜಿ (ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ್)- ೨೦೨೫) ಕಾಯ್ದೆಯು…
ಜನನಾಯಕ ಅನ್ನಿಸಿಕೊಂಡವರ ಅಧಿಕಾರ ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ ಅವತ್ತು ವಿಧಾನಸಭೆಯ ಮೊಗಸಾಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಪತ್ರಕರ್ತ ರಾಕೇಶನ ಮುಖದಲ್ಲಿ…
ಪರಿಸರ ಪ್ರೇಮಿಗಳು, ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯ ಮಂಡ್ಯ: ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ ೨೭೫ರ ವಿಸ್ತೃತ ಮಾರ್ಗವಾದ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ಹೆಣ್ಣುಮಕ್ಕಳಿಗಾಗಿ ರಾಜ್ಯದಲ್ಲಿ ಸ್ಥಾಪಿಸಿದ ಮೊದಲ ಶಾಲೆ ಇದು. ಶತೋತ್ತರ ಅರ್ಧ…
ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು…