ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 31 ಬುಧವಾರ 2022

ನಿಷ್ಪಕ್ಷಪಾತ ತನಿಖೆ ನಡೆಯಲಿ!


ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಬಂದಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಶ್ರೀಗಳು ಆರೋಪಿಸಿದ್ದಾರೆ.  ಈ ನೆಲದ ಕಾನೂನನ್ನು ಗೌರವಿಸುತ್ತೇನೆ, ತನಿಖೆಗೆ ಸಹಕರಿಸುತ್ತೇನೆ ಎಂದೂ  ಹೇಳಿದ್ದಾರೆ.  ತಮ್ಮ ವೈಚಾರಿಕ ನಡೆ ನುಡಿಗಳಿಂದಾಗಿ ಜನರ ಮೆಚ್ಚುಗೆ ಪಡೆದಿರುವ  ಶ್ರೀಗಳು ಇಂತಹ ಆರೋಪ ಬಾರದಂತೆ ಎಚ್ಚರಿಕೆ ವಹಿಸಬೇಕಿತ್ತು. ಷಡ್ಯಂತ್ರ ಮಾಡುವವರ ಬಣ್ಣ ಬಯಲು ಮಾಡಬೇಕಿತ್ತು. ಮುರುಘಾ ಮಠದಲ್ಲಿ ಆಡಳಿತಕ್ಕಾಗಿ ಕಿತ್ತಾಟ ನಡೆಯುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.  ತಪ್ಪು ಎಸಗಿದ್ದಾರೋ ಇಲ್ಲವೋ ಅದು ತನಿಖೆಯಿಂದ ಗೊತ್ತಾಗುತ್ತದೆ.  ಈ ಘಟನೆಯ ಬಗ್ಗೆ ರಾಜಕೀಯ ಹಸ್ತಕ್ಷೇಪ ಇಲ್ಲದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸತ್ಯವನ್ನು ಹೊರತರಬೇಕು.
-ಚಂದ್ರಶೇಖರ್ ಚಿಲ್ಕುಂದ, ಕ್ಯಾತಮಾರನಹಳ್ಳಿ, ಮೈಸೂರು.

ಗಣೇಶ ಮೂರ್ತಿಯ ತಯಾರಕರನ್ನು ಗೌರವಿಸಿ


ಗಣೇಶನ ಹಬ್ಬ ಬಂದರೆ ವಯಸ್ಸಿನ  ಅಂತರವಿಲ್ಲದೆ ಪ್ರತಿಯೊಬ್ಬರೂ ಹಲವಾರು ಬಡಾವಣೆಗಳಲ್ಲಿ ಗಣೇಶನನ್ನು ಪ್ರತ್ಯೇಕವಾಗಿ ಕೂರಿಸಿ ಸಂಭ್ರಮಿಸುತ್ತಾರೆ.  ಕಲಾವಿದನ ಕೈ ಚಳಕದಲ್ಲಿ ಗಣೇಶನ ಮೂರ್ತಿಯು ಅತ್ಯದ್ಭುತವಾಗಿ ಅರಳುತ್ತದೆ. ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ಅನೇಕ ಗಣ್ಯರಿಗೆ ಸನ್ಮಾನಿಸುತ್ತಾರೆ.  ಇದೇ ಸಂದರ್ಭದಲ್ಲಿ ಗಣೇಶನನ್ನು ತಯಾರಿಸಿದ ಕಲಾವಿದರಿಗೂ ಗೌರವ ನೀಡಿ ಸನ್ಮಾನಿಸಿ. ಇದರಿಂದ ಅವರು ಸಂತೋಷಗೊಂಡು ವಿವಿಧ ಬಗೆಯ ಗಣೇಶನನ್ನು ತಯಾರಿಸಲು ಸ್ಫೂರ್ತಿ ಬರುತ್ತದೆ.   ಎಲ್ಲೆಡೆ ಗಣೇಶ ಮೂರ್ತಿಯ ತಯಾರಕರಾದ ಕಲಾವಿದರನ್ನು ಗೌರವಿಸಿ.  ಅವರು ಪಟ್ಟ ಶ್ರಮವು ಸಾರ್ಥಕವೆನಿಸುತ್ತದೆ. ಅವರ ಸಂತೋಷವು ದುಪ್ಪಟ್ಟವಾಗುತ್ತದೆ. ಎಲ್ಲರೂ ಈ ರೀತಿ ಯೋಚಿಸಿದರೆ ಒಳ್ಳೆಯದು.
-ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು.

ಮನೆಗೊಂದು ತೆಪ್ಪ ಬೇಕಿದೆ!

ರಾಮನಗರದಲ್ಲಿ
ಬಿದ್ದ ಮಳೆ ಅಬ್ಬರ
ನೋಡಿದರೆ….
ಮುಂದಿನ ದಿನಗಳಲ್ಲಿ
ಯಾವುದಕ್ಕೂ
ಮನೆಗೊಂದು
ಬೇಕೇ ಬೇಕು ತೆಪ್ಪ
ತೆಪ್ಪ ಇಲ್ಲದವನು
ಆಗುವನು ಬೆಪ್ಪ!
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

ಗುಂಡಿಬಿದ್ದ ರಸ್ತೆ!

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಮತ್ತು ಹುರ ಮುಖ್ಯ ರಸ್ತೆಯು ಗುಂಡಿಮಯವಾಗಿದ್ದು, ಕಾರ್ಯ, ಮಾದಾಪುರ ಗ್ರಾಮಗಳಲ್ಲಿ ವಾಹನಗಳು ಸಂಚರಿಸಲು  ಕಷ್ಟವಾಗಿದೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡು ಜೀವ ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯು ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರಿಂದ  ನೂರಾರು ರೈತರು ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಈ ಮಾರ್ಗದಲ್ಲೇ ಸಂಚರಿಸುತ್ತಾರೆ.  ದುಗ್ಗಹಳ್ಳಿ ಗೇಟ್, ಪೆಟ್ರೋಲ್ ಬಂಕ್‌ನ ಹತ್ತಿರ ರಸ್ತೆ  ತುಂಬಾ ಹದಗೆಟ್ಟಿದ್ದು ಅನೇಕ ಗುಂಡಿಗಳಿವೆ. ಮಳೆ ಬಂದರೆ  ಕೆಸರುಮಯವಾಗಿ ಸಂಚರಿಸಲು ಸಾಧ್ಯವಾಗುವುದೇ ಇಲ್ಲ. ಮುಖ್ಯ ರಸ್ತೆಯ ಸ್ಥಿತಿ ಈ ರೀತಿ ಆದರೆ, ಇನ್ನು ಗ್ರಾಮಗಳ ರಸ್ತೆಯ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ.  ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕೂಡಲೇ ಸ್ಪಂದಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾಲ್ಲೂಕು.
andolana

Recent Posts

ರಾಜ್ಯಗಳ ನಡುವೆ ಯಾವುದೇ ತಾರತಮ್ಯ ಇಲ್ಲ : ಪ್ರಧಾನಿ ಮೋದಿ ಅಭಯ

ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…

5 mins ago

KSOU | ಯುಜಿಸಿ ನೆಟ್, ಕೆ-ಸೆಟ್‌ ಪರೀಕ್ಷೆಗೆ ಉಚಿತ ತರಬೇತಿ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…

54 mins ago

ದೆಹಲಿ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ

ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವ ಡಿಕ್ಕಿ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ.…

1 hour ago

ಮಂತ್ರಾಲಯ ಬಳಿ ಭೀಕರ ಅಪಘಾತ : ಐವರು ಮಹಿಳೆಯರು ಸೇರಿ 8 ಮಂದಿ ಸಾವು

ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…

2 hours ago

ಈ ಬಾರಿ ಕರ್ನಾಟಕಕ್ಕೆ ಮುಂಗಾರು ಕೊರತೆ ; ಮುಂಜಾಗ್ರತ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…

2 hours ago

ಟರ್ಕಿ ಶಾಲೆಯಲ್ಲಿ ಗುಂಡಿನ ದಾಳಿ ; ಪೊಲೀಸ್‌ ಅಧಿಕಾರಿ ಮಗನಿಂದ ನರಮೇಧ!

ಟರ್ಕಿ : ಟರ್ಕಿಯ ಕಹ್ರಮನ್ಮರಾಸ್ ಪ್ರಾಂತ್ಯದ ಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ (ಮಾಜಿ ಪೊಲೀಸ್ ಅಧಿಕಾರಿ) ಬಂದೂಕನ್ನು…

3 hours ago