ಎಡಿಟೋರಿಯಲ್

ಆಂದೋಲನ ಓದುಗರಪತ್ರ : 22 ಶುಕ್ರವಾರ 2022

ನಂದಿನಿ ಬುಡಕ್ಕೆ ಬಿದ್ದ ತೆರಿಗೆ ಏಟು!

ನಂದಿನಿ ಮೊಸರು ಕೊಳ್ಳಲು ಹೋಗಿದ್ದೆ. ಅರ್ಧ ಲೀಟರ್ ಮೊಸರಿಗೆ ಎರಡು ರೂಪಾಯಿ ಹೆಚ್ಚಳವಾಗಿದೆ. ಮಜ್ಜಿಗೆ, ಪನೀರ್ ಬೆಲೆಯೂ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರು ಕೊಳ್ಳುವ ಬದಲಿಗೆ ೨೦೦ ಮಿಲಿ ಮೊಸರು ಖರೀದಿಸಿದೆ. ನಂತರ ಮತ್ತೊಬ್ಬ ಗ್ರಾಹಕರೂ ಅರ್ಧ ಲೀಟರ್ ಬದಲಿಗೆ ೨೦೦ ಮಿಲಿ ಮೊಸರು ಖರೀದಿಸಿದರು. ನಂದಿನಿ ಬೂತ್ ನವರಿಗೆ ಕೇಳಿದೆ ‘ಮೊಸರು ಮಾರಾಟ ಹೇಗಿದೆ’ ಅಂತಾ. ‘ಬೆಲೆ ಏರಿದೆ ಅಂತಾ ಮೊಸರು ತಿನ್ನದೇ ಇರಲು ಸಾಧ್ಯವಿಲ್ಲ. ಆದರೆ, ತಿನ್ನುವ ಪ್ರಮಾಣ ಕಡಮೆಯಾಗುತ್ತಿದೆ. ಒಂದು ಲೀಟರ್ ಮೊಸರು ಕೊಳ್ಳುತ್ತಿದ್ದವರು ಅರ್ಧ ಲೀಟರ್ ಕೊಳ್ಳುತ್ತಿದ್ದಾರೆ. ಅರ್ಧ ಲೀಟರ್ ಕೊಳ್ಳುತ್ತಿದ್ದವರು ೨೦೦ ಮಿಲಿ ಕೊಳ್ಳುತ್ತಿದ್ದಾರೆ’ ಅಂತ ವಿವರಿಸಿದರು. ಕೇಂದ್ರ ಸರ್ಕಾರ ನೀಡಿರುವ ಜಿಎಸ್‌ಟಿ ಏಟು ‘ನಂದಿನಿ’ಯ ಬುಡಕ್ಕೆ ಬಿದ್ದಿದೆ ಎನಿಸಿತು.
ನಂದಿನಿ ಬುಟಕ್ಕೆ ಏಟು ಬಿದ್ದರೆ, ಅದು ಲಕ್ಷಾಂತರ ಹಾಲು ಉತ್ಪಾದರ ಬುಡಕ್ಕೂ ಬಿದ್ದಂತೆಯೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!

-ದೊಡ್ಡೇಗೌಡ, ಕುವೆಂಪುನಗರ, ಮೈಸೂರು.


ಶಿಕ್ಷಣ ವಿರೋಧಿ ಜಿಎಸ್‌ಟಿ ಹೇರಿಕೆ

ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷಾರ್ಪನರ್, ರೈಟಿಂಗ್-ಡ್ರಾಯಿಂಗ್-ಪ್ರಿಂಟಿಂಗ್ ಇಂಕ್, ಪೇಪರ್, ಗ್ರಾಫ್ ಪೇಪರ್, ನೋಟ್‌ಬುಕ್ ಮೇಲೆ ಜಿಎಸ್ಟಿ ಹಾಕಿರುವುದು ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಶಿಕ್ಷಣದ ಮೇಲೆ ದಾಳಿಗಳು ಹೆಚ್ಚಾಗಿವೆ. ಶಿಕ್ಷಣದ ವ್ಯಾಪಾರೀಕರಣ ತೀವ್ರಗೊಂಡು ತಳಸಮುದಾಯದ ಮಕ್ಕಳು ಶಿಕ್ಷಣದಿಂದ ಹೊರ ಹೋಗುತ್ತಿರುವ ಹೆಚ್ಚಾಗುತ್ತಿ . ಇಂತಹ ವಿಷಮ ಸಂಧರ್ಭದಲ್ಲಿ ಅಪ್ರಜಾಸತ್ತತ್ಮಕವಾಗಿ, ಅವೈಜ್ಞಾನಿಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಎನ್‌ಇಪಿ ಜಾರಿಗೊಳಿಸುತ್ತಿದೆ. ಇದರ ನಡುವೆಯೇ ಒಕ್ಕೂಟ ಸರ್ಕಾರ ಶಿಕ್ಷಣದ ಸಾಮಾಗ್ರಿಗಳ ಮೇಲೆ ಶೇ.೧೨ರಿಂದ ೧೮ರಷ್ಟು ಜಿಎಸ್‌ಟಿ ಹೇರಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ. ಒಕ್ಕೂಟ ಸರ್ಕಾರದ ಈ ನೀತಿಯು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಶಿಕ್ಷಣದ ವೆಚ್ಚ ವಿಪರೀತ ಏರಿಕೆ ಮಾಡಲಿದೆ. ಇದು ತಳಸಮುದಾಯಗಳ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಕ್ರಮಗಳಾಗಿವೆ.

-ಮದನ್ ಹಾದನೂರು, ಮೈಸೂರು.


ಸರ್ಕಾರದ ಎಡವಟ್ಟು!

ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಹಿತಾಸಕ್ತಿಗಿಂತ ತನ್ನ ಪ್ರತಿಷ್ಠೆಯೇ ಮುಖ್ಯ ಎಂಬುದು ಪಠ್ಯ ಪರಿಷ್ಕರಣೆ ಪ್ರಹಸನದಲ್ಲಿ ಬಯಲಾಗಿದೆ. ಇದೀಗ ವಿದ್ಯಾರ್ಥಿಗಳು ಪಠ್ಯಗಳೇ ಇಲ್ಲದೇ ಪರೀಕ್ಷೆ ಬರೆಯುವ ಪರಿಸ್ಥಿತಿ ಎದುರಾಗಿದೆ (‘ಆಂದೋಲನ’ ವರದಿ). ವರದಿಯಲ್ಲಿ ಉಲ್ಲೇಖಿಸಿದಂತೆ ಸಾವಿರಾರು ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕಗಳೇ ತಲುಪಿಲ್ಲ. ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ಮಾಡಿದ ಎಡವಟ್ಟು ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಇನ್ನು ಮುಂದಾದರೂ ಇಂತಹ ಎಡವಟ್ಟು ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಲಿ. ವಿದ್ಯಾರ್ಥಿಗಳ ಹಿತಾಸಕ್ತಿ ಆದ್ಯತೆಯಾಗಲಿ.

-ನಂದಕುಮಾರ್, ಸರಸ್ವತಿಪುರಂ, ಮೈಸೂರು.


ಶಿಕ್ಷಕರ ದುಸ್ಥಿತಿ

ರಾಜ್ಯದಲ್ಲಿ ನರೇಗಾ ಕೂಲಿಗಿಂತಲೂ ಕಡಿಮೆ ವೇತನಕ್ಕೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಅತಿಥಿ ಶಿಕ್ಷಕರದ್ದಾಗಿದೆ. ಒಂದು ಲೆಕ್ಕದಲ್ಲಿ ಬಿಇಡಿ ಪದವಿ ಪಡೆದು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದಕ್ಕಿಂತ ಯಾವುದೇ ಖರ್ಚು ವೆಚ್ಚವಿಲ್ಲದೆ ನರೇಗಾದಲ್ಲಿ ಕೆಲಸ ಮಾಡುವವರ ಜೀವನವೇ ಲೇಸು ಎಂಬಂತಾಗಿದೆ . ಪ್ರಸ್ತುತ ನರೇಗಾ ಕೂಲಿ ದಿನವೊಂದಕ್ಕೆ ೨೮೯ ರೂ ನೀಡಲಾಗುತ್ತಿದೆ. ಆದರೆ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವವರಿಗೆ ದಿನವೊಂದಕ್ಕೆ ೨೫೦ ರೂ. ಮಾತ್ರ ನೀಡಲಾಗುತ್ತಿದೆ. ಇದು ಕನಿಷ್ಠ ವೇತನದ ಅರ್ಧದಷ್ಟು ಕೂಡ ಇಲ್ಲದಂತಾಗಿದೆ. ಕೇವಲ ೭,೫೦೦ ರೂ.ಗಳಿಗೆ ಕಾರ್ಯನಿರ್ವಹಿಸಿದರೆ ಶಿಕ್ಷಕರು ಜೀವನ ನಿರ್ವಹಣೆ ಮಾಡುವುದು ಹೇಗೆ? ಶಿಕ್ಷಣ ಸಚಿವರು ಈ ಬಗ್ಗೆ ಚಿಂತಿಸಬೇಕಿದೆ.

-ಪುಟ್ಟಸ್ವಾಮಿ ಹೆಚ್ ಎಂ, ಮಹಾರಾಜ ಕಾಲೇಜು, ಮೈಸೂರು.


ಸಂತ್ರಸ್ತರಿಗೆ ತ್ವರಿತ ನೆರವಾಗಿ

ರಾಜ್ಯದಲ್ಲಿ ನೆರೆಯಿಂದ ಹಲವಾರು ಊರು ಕೇರಿಗಳು ಜಲಾವೃತಗೊಂಡು ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರವು ಅಲ್ಲಿನ ಜನರ ಸ್ಥಿತಿ ಗತಿಗಳ ಬಗ್ಗೆ ಅವಲೋಕನ ಮಾಡಿ ಅವರ ಸಂಕಷ್ಟಗಳಿಗೆ ಪರಿಹಾರ ನೀಡದೆ, ಅದ್ಧೂರಿ ದಸರಾ ಆಚರಣೆಯ ಬಗೆ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರವು ತನ್ನ ಪ್ರತಿಷ್ಠೆಗಾಗಿ ಅದ್ದೂರಿ ದಸರಾ ಆಚರಣೆ ಚಿಂತನೆಯನ್ನು ಬಿಟ್ಟು, ಮೊದಲು ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ. ದಸರಾ ಹಬ್ಬಕ್ಕೆ ಇನ್ನೂ ಹೆಚ್ಚು ಕಾಲವಿದೆ. ಮಳೆಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಬೇಕಾಗಿರುವುದು ಸರ್ಕಾರದ ತುರ್ತು ಕೆಲೆಸ ಎಂಬುದನ್ನು ಮರೆಯಬಾರದು.

-ಸ್ವಸ್ತಿಕ್ ಎಸ್, ಮಹಾರಾಜ ಕಾಲೇಜು, ಮೈಸೂರು.

 

andolana

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

1 day ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

1 day ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

1 day ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

1 day ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

1 day ago