ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 31 ಡಿಸೆಂಬರ್‌ 2022

ಶಾಲಾ ಆವರಣದ ಸ್ವಚ್ಛತೆ ಯಾವಾಗ?

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣವು ಸತತ ಮಳೆ ಹಾಗೂ ಸಮೀಪದ ಎರಡು ಬೋರ್‌ವೆಲ್‌ಗಳ ಮೂಲಕ ಅಂತರ್ಜಲ ಉಕ್ಕಿ ಹರಿದ ಪರಿಣಾಮ ಮೈದಾನವೆಲ್ಲ ಕೆಸರು ಗದ್ದೆಯಂತಾಗಿದ್ದು, ಮಕ್ಕಳು ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ನೀರು ನಿಂತಲ್ಲೆ ನಿಂತು ದುರ್ವಾಸನೆ ಬರಲಾರಂಭಿಸಿ, ಸೊಳ್ಳೆಗಳ ಕಾಟ ಹೆಚ್ಚಾಗಿ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು. ಗ್ರಾಮ ಪಂಚಾಯಿತಿಯವರು ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡುವುದರ ಬಗ್ಗೆ ಯೋಜನೆ ಸಿದ್ಧವಾಗಿದೆ. ಮಳೆ ನಿಂತ ಕೂಡಲೇ ಕೆಲಸ ಆರಂಭಿಸುವ ಬಗ್ಗೆ ತಿಳಿಸಿದ್ದರು. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ. ಸದ್ಯ ಮೈದಾನ ಕೆರೆಯಂತಾಗಿರುವ ಪರಿಣಾಮ, ಶಾಲಾ ಕಟ್ಟಡದಲ್ಲಿಯೂ ನೀರು ಜಿನುಗುವಂತಾಗಿ ಕಟ್ಟಡದಲ್ಲಿ ಮಕ್ಕಳು ಆತಂಕದಲ್ಲಿ ಪಾಠ ಕೇಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗ ಮಳೆ ನಿಂತಿದ್ದು, ಮೈದಾನದ ದುರಸ್ತಿ ಕಾರ್ಯ ನಡೆಸುವುದಾಗಿ ಗ್ರಾಮ ಪಂಚಾಯಿತಿಯವರು ತಿಳಿಸಿದ್ದಾರೆ. ಅದಕ್ಕೂ ಮುಂಚೆ ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕಿದೆ. ಈಗ ರಾಜ್ಯದಲ್ಲಿ ಮತ್ತೆ ಕೊರೊನಾದ ಆತಂಕ ಎದುರಾಗಿದ್ದು, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ. ಹಾಗಾಗಿ ಸಂಬಂಧಪಟ್ಟ ಅಽಕಾರಿಗಳು ಪ್ರೌಢಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಸಮತಟ್ಟು ಮಾಡಿ ಮೈದಾನ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು.

-ರಾಜೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.


ಸರ್ಕಾರ, ಜನಪ್ರತಿನಿಧಿಗಳ ಕಾರ್ಯಕ್ರಮಕ್ಕೂ ಮಾಸ್ಕ್‌ ಕಡ್ಡಾಯವಾಗಲಿ 

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊಸ ಅಧಿಸೂಚನೆಯನ್ನು 2022ರ ಕೊನೆ ದಿನಗಳಲ್ಲಿ ಜಾರಿಗೆ ತಂದಿದ್ದು, ಅದರಂತೆ ಸಾರ್ವಜನಿಕರ ಮನರಂಜನೆಯ ಸ್ಥಳ, ಚಿತ್ರಮಂದಿರ, ಮದುವೆಯ ಸಮಾರಂಭ, ಹೋಟೆಲ್ ಹಾಗೂ ಶಾಲಾ ಕಾಲೇಜುಗಳು ಸೇರಿದಂತೆ ಹೆಚ್ಚಿನ ಜನರು ಸೇರುವಂತಹ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ ಈ ನಿರ್ಬಂಧಗಳು ಕೇವಲ ಸಾರ್ವಜನಿಕರಿಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಮೂಡುತ್ತಿದೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆ ಹತ್ತಿರವಾಗುತ್ತಿದೆ. ಆದ್ದರಿಂದ ಚುನಾವಣೆಯಲ್ಲಿ ಸ್ಪಧಿಸಲಿರುವ ಪ್ರತಿನಿಧಿಗಳು ಈಗಾಗಲೇ ತಯಾರಿ ಕಾರ್ಯ ಆರಂಭಿಸಿದ್ದು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಸಹಿತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ಬೆಂಬಲಿಗರೊಂದಿಗೆ ಸಾಕಷ್ಟು ಸಭೆ, ಸಮಾರಂಭಗಳು, ಜನವಸತಿ ಸ್ಥಳಕ್ಕೆ ಭೇಟಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಯಾ ಕ್ಷೇತ್ರಗಳಲ್ಲಿ ಓಡಾಡುತ್ತಿದ್ದಾರೆ. ಈ ವೇಳೆ ಹೆಚ್ಚಿನ ಜನರು ಅವರನ್ನು ಭೇಟಿಯಾಗುತ್ತಿದ್ದು, ಮಾಸ್ಕ್ ಧರಿಸುತ್ತಿಲ್ಲ. ಹಾಗಾಗಿ ಸರ್ಕಾರ, ಜನಪ್ರತಿನಿಧಿಗಳು ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕಿದೆ. ತಪ್ಪಿದರೆ ಅಂತಹ ರಾಜಕೀಯ ಪ್ರೇರಿತ ಸಭೆಗಳಿಂದ ಕೊರೊನಾ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡು ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲು ಗಮನಹರಿಸಬೇಕು.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು.

andolanait

Recent Posts

ಮಾರ್ಯಾದಾಗೇಡು ಹತ್ಯೆ ತಡೆಗೆ ವಿಶೇಷ ಕಾನೂನು : ಸಿಎಂ ಅಧಿಕೃತ ಘೋಷಣೆ

ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಆರು ತಿಂಗಳ ಗರ್ಭಿಣಿಯ ಮರ್ಯಾದಾಗೇಡು ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ…

8 hours ago

ಕೇರಳಕ್ಕೆ ಸಾಗಿಸುತ್ತಿದ್ದ ರಕ್ತಚಂದನ ವಶ ; ಮೂವರ ಬಂಧನ

ಕೊಳ್ಳೇಗಾಲ : ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ 101 ಕೆಜಿ ತೂಕದ 8 ರಕ್ತಚಂದನ ತುಂಡುಗಳನ್ನು ಅರಣ್ಯ ಸಂಚಾರ ದಳದವರು ವಶಪಡಿಸಿಕೊಂಡಿದ್ದಾರೆ.…

8 hours ago

ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿಗೆ 11 ಲಕ್ಷ ವಂಚನೆ

ಮೈಸೂರು : ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿಗೆ 11.76 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ವಿಜಯನಗರದ ನಿವಾಸಿ, ಖಾಸಗಿ…

9 hours ago

ಜ.9ರಿಂದ ಮೈಸೂರಲ್ಲಿ ʻದೇಸಿ ಎಣ್ಣೆ ಮೇಳʼ

ಮೈಸೂರು : ಸಾಂಪ್ರದಾಯಿಕ ಎಣ್ಣೆಗಳ ಕೃಷಿ ಮತ್ತು ಬಳಕೆಯ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸಲು, ಸಹಜ ಸಮೃದ್ಧ…

10 hours ago

ಟ್ರಂಪ್‌ ನಡೆಗೆ ಖಂಡನೆ ; ವೆನೆಜುವೆಲಾ ಅಧ್ಯಕ್ಷರ ಬಿಡುಗಡೆಗೆ ಆಗ್ರಹ

ಮೈಸೂರು : ವೆನೆಜುವೆಲಾ ಅಧ್ಯಕ್ಷರ ಬಂಧನ ಖಂಡಿಸಿ, ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ)…

10 hours ago

ಮೈಸೂರು | ವಸ್ತುಪ್ರದರ್ಶನದಲ್ಲಿ ಡ್ರಾಗನ್‌ ಬೋಟಿಂಗ್‌

ಮೈಸೂರು : ಮೈಸೂರು ನಗರಿಯೂ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದ್ದು, ಮೃಗಾಲಯ, ಚಾಮುಂಡಿ ಬೆಟ್ಟ, ಅರಮನೆ ಹೀಗೆ ಇಲ್ಲಿನ…

10 hours ago