ಜಿಲ್ಲೆಗಳು

2022ಕ್ಕೆ ವಿದಾಯ ಹೇಳೋಣ: ಅವಲೋಕನ ಆಗಲಿ

ಕಹಿ ಅನುಭವಗಳ ಮರೆತು ಹೊಸತನ್ನು ಸ್ವಾಗತಿಸುವ ಅನವಾರ್ಯತೆ

ಬಿ.ಎನ್.ಧನಂಜಯಗೌಡ

ಮೈಸೂರು: ದೇಶದ ರಾಜಕೀಯ, ಕೃಷಿ, ಧಾರ್ಮಿಕ ಸೇರಿ ವಿವಿಧ ವಲಯಗಳಲ್ಲಿ ೨೦೨೨ರಲ್ಲಿ ನಡೆದ ಸಂತೋಷ ಮತ್ತು ತಲ್ಲಣದ ಸಂಗತಿಗಳನ್ನು ಮೆಲುಕು ಹಾಕುತ್ತಲೇ, ೨೦೨೨ಕ್ಕೆ ವಿದಾಯ ಹೇಳುವ ಹಾಗೂ ಹೊಸ ವರ್ಷ-೨೦೨೩ಅನ್ನು ಸ್ವಾಗತಿಸುವ ದಿನ ಇದಾಗಿದ್ದು, ಕಳೆದ ಈ ವರ್ಷದ ದಿನಗಳ ಬಗ್ಗೆ ಕೊಂಚ ಅವಲೋಕನ ಮಾಡುವುದು, ಮುಂದಿನ ಹೆಜ್ಜೆಯಿಡಲು ಅಗತ್ಯ.

ಅಂತೂ, ಇಂತೂ ಇದು ೨೦೨೨ಕ್ಕೆ ವಿದಾಯ ಹೇಳಿ ೨೦೨೩ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವ ದಿನವಾಗಿದೆ. ಹಳೆಯ ವರ್ಷದ ಕಹಿ ಅನುಭವಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾನುವಾರದಿಂದ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಸುಂದರ, ಸದೃಢ ಮತ್ತು ಸ್ವಸ್ಥ ಆಲೋಚನೆಗಳು ಎಲ್ಲರಲ್ಲೂ ಚಿಗುರುವುದಾದರೆ ಒಳ್ಳೆಯದು.
ಕುಣಿದು, ಪಾರ್ಟಿ ಮಾಡಿ, ಬರೀ ಕ್ಯಾಲೆಂಡರ್ ಬದಲಾಯಿಸುವುದೇ ಹೊಸ ವರ್ಷವಲ್ಲ. ನಾಳೆಯಿಂದ ಆರಂಭವಾಗುವ ೨೦೨೩ರ ಹೊಸ ೩೬೫ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂಬ ಅರಿವಿನೊಂದಿಗೆ ೨೦೨೨ರ ಕಳೆದ ದಿನಗಳನ್ನು ಅವಲೋಕನ ಮಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಹಾಗಾಗಿ, ಈ ವರ್ಷದ ನಮ್ಮ ಸರಿ-ತಪ್ಪು ಅನುಭವಗಳು ಹೊಸ ವರ್ಷಕ್ಕೆ ಪಾಠವಾಗಲಿ. ಹೊಸ ಹೆಜ್ಜೆಗಳು ಸರಿ ಮಾರ್ಗದಲ್ಲಿ ಇರಬೇಕು.
೨೦೨೨ರಲ್ಲಿ ನಾನಾ ವಿವಾದಗಳಿಂದಾಗಿ ಸಾಕಷ್ಟು ಅವಘಡಗಳು, ಪ್ರಾಣಿಹಾನಿಯಂತಹ ಘಟನೆಗಳು ಆಗಿವೆ. ಇದಕ್ಕೆ ಜನರ ಆಲೋಚನೆ ಮತ್ತು ಮನಸ್ಥಿತಿಯೂ ಕಾರಣವಾಗಿದೆ. ಹಾಗಾಗಿ, ಜನರು ಯಾವುದೇ ವಿಷಯ ಅಥವಾ ಘಟನೆಗಳ ಬಗ್ಗೆಯೂ ಪಕ್ಷ ಮತ್ತು ಪಂಥದ ಆಧಾರಿತವಾಗಿ ಆಲೋಚಿಸದೆ, ವಸ್ತುನಿಷ್ಠವಾಗಿ ನೋಡುವ ದೃಷಿಕೋನವನ್ನು ಬೆಳಸಿಕೊಳ್ಳಬೇಕು. ಆಗ ಸಮಾಜದಲ್ಲಿ ಶಾಂತಿ ಕದಡುವ ತಂತ್ರಗಳಿಗೆ ಸಫಲವಾಗುವುದನ್ನು ತಡೆಯಬಹುದು. ಹಾಗಾಗಿ, ೨೦೨೩ರಲ್ಲಿ ಹುಟ್ಟಿಸಬಹುದಾದ ವಿವಾದ, ಗಲಭೆಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಮೂಲಕ ಸಮಾಜದಲ್ಲಿ, ದೇಶದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಆದ್ಯತೆಯಾಗಲಿ.


೨೦೨೨ರಲ್ಲಿ ಆಗಿರುವ ಕೆಲವು ಅನುಭವಗಳಿಂದ ಜೀವನದಲ್ಲಿ ಹೊಸ ಪಾಠಗಳನ್ನು ಕಲಿತ್ತಿದ್ದೇನೆ. ಹಾಗಾಗಿ, ನಾನು ಹೊಸ ವರ್ಷ-೨೦೨೩ ಅನ್ನು ಬರ ಮಾಡಿಕೊಳ್ಳುವ ಕ್ಷಣವನ್ನು ಕಲಿತ ಪಾಠಗಳನ್ನು ಕಾರ್ಯರೂಪಕ್ಕೆ ತರುವ ಮೊದಲ ಕ್ಷಣವಾಗಿ ಆಚರಿಸುತ್ತೇನೆ. ಈ ವರ್ಷದ ಅವಲೋಕನದ ಜೊತೆಗೆ ನಾಳೆಯಿಂದ ಹೊಸ ಚಿಂತನೆ ಮತ್ತು ಕನಸುಗಳನ್ನು ಅನುಷ್ಠಾನಗೊಳಿಸುವ ಯೋಜನೆ, ಯೋಚನೆ ಅಚಲವಾಗಿದೆ.

-ರವಿಕೀರ್ತಿ, ಹವ್ಯಾಸಿ ಫೋಟೋಗ್ರಾಫರ್

———————————

ಹೊಸ ವರ್ಷವನ್ನು ಆಚರಿಸುವುದಕ್ಕಿಂತ ಮುಖ್ಯವಾಗಿ ಈ ವರ್ಷದ ದಿನಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ನಾಳೆಯಿಂದ ಆದಷ್ಟು ಬದಲಾಗಬೇಕು ಎಂಬುದು ನನ್ನ ಆಲೋಚನೆ. ಈ ಆಲೋಚನೆಗಳನ್ನು ಆಚರಣೆಗೆ ತರುವುದೇ ನನಗೆ ಹೊಸ ವರ್ಷ. ಅದನ್ನು ಬಿಟ್ಟರೆ, ಆತ್ಮೀಯರಿಗೆ ಶುಭಾಶಯ ಹೇಳಿ ಹಾರೈಸುವುದು ಅಷ್ಟೆ.

-ರಮ್ಯಶ್ರೀ, ಉಪನ್ಯಾಸಕಿ

 

 

 

andolanait

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

11 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

12 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

13 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

15 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

19 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

19 hours ago