ಎಡಿಟೋರಿಯಲ್

ಅಂಬರೀಶ್ ಮಾರ್ಗ, ಸ್ಮಾರಕಗಳ ಉದ್ಘಾಟನೆ, ಚಿತ್ರೋತ್ಸವದಲ್ಲೂ ನೆನಪು

 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಆಗಬೇಕು ಎಂದ ಅದರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸಚಿವ ಆರ್.ಅಶೋಕ್ ಒತ್ತಾಯದಂತೆ ಅಲ್ಲೇ ಆ ಕಾರ್ಯಕ್ರಮ ನಡೆಯಿತುಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಂತರ ಅಲ್ಲಿ ನಡೆದ ಮೊದಲ ಉದ್ಘಾಟನಾ ಸಮಾರಂಭವಿದುಬಹಳ ಕಡಿಮೆ ಕಾಲಾವಧಿಯಲ್ಲಿ ಹಮ್ಮಿಕೊಂಡ ಕಾರಣ ನೆರೆಯ ಶ್ರೀಲಂಕಾನೇಪಾಳ ಮತ್ತು ಇರಾನ್ ಹಾಗೂ ಇಸ್ರೇಲ್ ಹೊರತುಪಡಿಸಿದರೆ ಬೇರೆ ದೇಶಗಳಿಂದ ಅಭ್ಯಾಗತರಿರಲಿಲ್ಲಕೆಲವು ದೇಶಗಳ ಸಿನಿಮಾ ಮಂದಿಯ ಜೊತೆ ಪತ್ರ ವ್ಯವಹಾರ ಮಾಡಿ ಆಹ್ವಾನಿಸಿಅವರು ಪ್ರಯಾಣಕ್ಕೆ ವೀಸಾ ಮಾಡಿಸಲು ಬೇಕಾದಷ್ಟು ಕಾಲಾವಧಿ ಕೂಡ ಇರಲಿಲ್ಲವೆನ್ನಿ.

ಕೊನೆಯ ಕ್ಷಣದಲ್ಲಿ ಹೆಸರಾಂತ ಛಾಯಾಗ್ರಾಹಕ ಗೋವಿಂದ ನಿಹಲಾನಿ ಮತ್ತು ಆರ್‌ಆರ್‌ಆರ್ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಅತಿಥಿಗಳಾಗಿದ್ದರುಒಂದೇ ಚಿತ್ರದಲ್ಲಿ ಹೆಸರಾದ ನಟಿ ಸಪ್ತಮಿಗೌಡ ಮತ್ತು ಅಭಿಷೇಕ್ ಅಂಬರೀಶ್ ಕೂಡಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರುಅವರ ಸಂಪುಟದ ಕೆಲವು ಮಂದಿ ಸಚಿವರು ವೇದಿಕೆಯ ಮೇಲಿದ್ದರು.

ಕನ್ನಡ ಚಿತ್ರೋದ್ಯಮಕ್ಕೆ ಎಲ್ಲ ರೀತಿಯ ಉತ್ತೇಜನನೆರವುಗಳನ್ನು ನೀಡುವುದಾಗಿ ಪ್ರಕಟಿಸಿದ ಬೊಮ್ಮಾಯಿ ಅವರುಅಂಬರೀಶ್ ಸ್ಮಾರಕದ ಉದ್ಘಾಟನೆ ಮತ್ತು ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡುವುದನ್ನು ಅಲ್ಲೇ ಪ್ರಸ್ತಾಪಿಸಿದರುಕಂಠೀರವ ಸ್ಟುಡಿಯೊದಲ್ಲಿ ಅವರ ಸ್ಮಾರಕಮುಖ್ಯಮಂತ್ರಿಗಳ ನಿವಾಸವಿರುವ ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರುಅಂಬರೀಶ್ ಹೆಸರಿಡಲು ಇದಕ್ಕಿಂತಲೂ ಸೂಕ್ತವಾದ ರಸ್ತೆ ಇನ್ನೊಂದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುವ ಮೂಲಕ ಅಂಬರೀಶ್ ಮತ್ತು ರೇಸ್ ಜೊತೆಗಿನ ಅವಿನಾಭಾವ ಸಂಬಂಧವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದ ವೇಳೆ ತಿಳಿಯ ಹೇಳಿದರುಮಾತ್ರವಲ್ಲತಮ್ಮ ಮತ್ತು ಅಂಬರೀಶ್ ಜೊತೆಗಿನ ಗೆಳೆತನಅಂಬರೀಶ್ ಮೊದಲು ವಾಸವಾಗಿರುತ್ತಿದ್ದ ಉಡ್‌ಲ್ಯಾಂಡ್ಸ್ ಹೋಟೆಲ್ ಇತ್ಯಾದಿ ಕೂಡ ಪ್ರಸ್ತಾಪಿಸಿದರಲ್ಲದೆಪುನೀತ್ ರಾಜಕುಮಾರ್ ಸ್ಮಾರಕದ ಕೆಲಸದ ಬಗೆಗೂ ಹೇಳಿದರು.

ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕಬೆಂಗಳೂರಿನಲ್ಲಿ ಅಂಬರೀಶ್ ಸ್ಮಾರಕಪುನೀತ್ ರಾಜಕುಮಾರ್ ಸ್ಮಾರಕಅಂಬರೀಶ್ ರಸ್ತೆಪುನೀತ್ ರಾಜಕುಮಾರ್ ರಸ್ತೆ ಹೀಗೆ ಜನಪ್ರಿಯ ನಟರ ಹೆಸರಲ್ಲಿ ಸ್ಮಾರಕರಸ್ತೆಗಳಿಗೆ ಹೆಸರನ್ನು ಇಡುವುದರ ಬಗ್ಗೆ ಯಾರ ತಕರಾರೂ ಇಲ್ಲಆದರೆ ಸರ್ಕಾರಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯರ ಹೆಸರನ್ನು ಪರಿಗಣಿಸದೆ ಇರುವುದರ ಕುರಿತಂತೆ ಸಂಬಂಧಪಟ್ಟ ವರು ಆಕ್ಷೇಪಿಸುತ್ತಾರೆ.

ಕನ್ನಡದ ಮೊದಲ ಚಿತ್ರದ ನಟರಾದ ಸುಬ್ಬಯ್ಯನಾಯ್ಡುಆರ್.ನಾಗೇಂದ್ರ ರಾವ್ಮೂಕಿ ಚಿತ್ರಗಳ ದಿನಗಳಿಂದಲೂ ಸಕ್ರಿಯರಾಗಿದ್ದ ಗುಬ್ಬಿ ವೀರಣ್ಣ ಅಲ್ಲದೆ ಬಿ.ಆರ್.ಪಂತುಲುಎಂ.ವಿ.ರಾಜಮ್ಮ ಮುಂತಾದವರ ನೆನಪೇ ಇಲ್ಲದಂತೆ ಸರ್ಕಾರ ಮತ್ತು ಚಿತ್ರೋದ್ಯಮ ವರ್ತಿಸುತ್ತಿದೆ ಎನ್ನುವ ಆರೋಪ ಸುಳ್ಳೇನೂ ಅಲ್ಲ.

ಇನ್ನು ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗೋವಿಂದ ನಿಹಲಾನಿ ಅವರು ತಮ್ಮ ಮಾರ್ಗದರ್ಶಕರಾಗಿದ್ದ ವಿ.ಕೆ.ಮೂರ್ತಿ ಅವರ ಪುನರವಲೋಕನ ಈ ಚಿತ್ರೋತ್ಸವದಲ್ಲಿ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆತಾವು ಕೂಡ ಮೂರ್ತಿ ಅವರು ಓದಿದ ಬೆಂಗಳೂರಿನ ಎಸ್‌ಜೆಪಿ (ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ)ಯ ವಿದ್ಯಾರ್ಥಿ ಎನ್ನುವುದನ್ನು ನೆನಪಿಸಿಕೊಂಡರುಕಾಕತಾಳೀಯ ಎಂದರೆ ಅಕಾಡೆಮಿಯ ಅಧ್ಯಕ್ಷರಾಗಿರುವ ಅಶೋಕ ಕಶ್ಯಪ್ ಅವರು ಕೂಡ ಈ ಸಂಸ್ಥೆಯಿಂದಲೇ ಛಾಯಾಗ್ರಹಣ ಡಿಪ್ಲೊಮೊ ಪಡೆದವರು.

ಉದ್ಘಾಟನಾ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡವರು ವಿಜಯೇಂದ್ರ ಪ್ರಸಾದ್ಡಾ.ರಾಜಕುಮಾರ್ ಹಾಡಿರುವ ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು’ ಎನ್ನುವ ಸಾಲಿನೊಂದಿಗೆ ಮಾತು ಆರಂಭಿಸಿದ ಅವರುನನಗೆ ಆ ಭಾಗ್ಯ ಇರಲಿಲ್ಲಆದರೆನನ್ನ ಮಗ ಮತ್ತು ಮಗಳು ಕನ್ನಡ ನಾಡಿನಲ್ಲಿ ಹುಟ್ಟಿದ್ದಾರೆಈ ಎತ್ತರಕ್ಕೆ ಏರಿದ್ದಾರೆಕನ್ನಡಿಗರ ಆಶೀರ್ವಾದ ಇದಕ್ಕೆ ಕಾರಣನಿಮ್ಮ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದರುಈ ಬಾರಿ ಆಸ್ಕರ್ ಪ್ರಶಸ್ತಿಯ ಕಣದಲ್ಲಿ ಸುದ್ದಿ ಮಾಡಿದ ಆರ್‌ಆರ್‌ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಅವರು ವಿಜಯೇಂದ್ರ ಪ್ರಸಾದ್ ಅವರ ಮಗ ಎನ್ನುವುದು ಎಲ್ಲರಿಗೂ ತಿಳಿದಿದೆಸಂಗೀತ ಸಂಯೋಜಕ ಕೀರವಾಣಿವಿಜಯೇಂದ್ರ ಪ್ರಸಾದ್‌ರ ಸೋದರನ ಮಗ.

ಈ ಬಾರಿ ಚಿತ್ರೋತ್ಸವದಲ್ಲಿ ಕೆಲವೊಂದು ವಿಭಾಗಗಳನ್ನುಬಹುಶಃ ಸಮಯದ ಅಭಾವದಿಂದಕೈಬಿಡಲಾಗಿದೆವಿಶೇಷ ವಿಷಯಾಧಾರಿತ ಆಯ್ದ ಚಿತ್ರಗಳ ವಿಭಾಗಆತ್ಮಕಥೆ ವ್ಯಕ್ತಿಚಿತ್ರಗಳುಆತ್ಮಕಥೆ ಜೀವನಚರಿತ್ರೆ ಆಧಾರಿತ ಚಿತ್ರಗಳ ವಿಭಾಗಕೇಳರಿಯದ ಅದ್ಭುತ ಭಾರತಹೆಚ್ಚು ಪ್ರಚಾರವಿಲ್ಲದ ಭಾಷೆಗಳ ಚಿತ್ರಗಳ ವಿಭಾಗಏಷ್ಯಾ ಚಲನಚಿತ್ರ ಪ್ರಚಾರ ಜಾಲ (ನೆಟ್‌ಪ್ಯಾಕ್ಪ್ರಶಸ್ತಿ ವಿಜೇತ ಚಿತ್ರಗಳ ವಿಭಾಗ ಈ ಬಾರಿ ಇರಲಿಲ್ಲಹೆಚ್ಚು ಪ್ರಚಾರವಿಲ್ಲದ ಭಾಷಾಚಿತ್ರಗಳ ವಿಭಾಗ ಇಲ್ಲದೆ ಇದ್ದರೂಸ್ಪರ್ಧೆಯಲ್ಲಿ ತುಳುಕೊಡವಮುಡುಗಬೋಡೋಸಂತಾಲಿ ಭಾಷೆಯ ಚಿತ್ರಗಳು ಆ ಕೊರತೆಯನ್ನು ನೀಗಿಸಿದವು.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಮುಖ್ಯವಾಹಿನಿ ಚಿತ್ರಗಳ ಸ್ಪರ್ಧೆ ಇರುವುದಿಲ್ಲಆದರೆ ಈ ಹಿಂದೆ ಕನ್ನಡ ಜನಪ್ರಿಯ ಮನೋರಂಜನಾ ಚಿತ್ರಗಳ ಸ್ಪರ್ಧೆ ಸೇರಿದ್ದನ್ನು ಈ ಬಾರಿ ಕೈಬಿಟ್ಟುಪರ್ಯಾಯವಾಗಿ ಕನ್ನಡ ಜನಪ್ರಿಯ ಚಿತ್ರಗಳ ವಿಭಾಗ ಸೇರಿಸಲಾಗಿತ್ತುಈ ವಿಭಾಗದ ಆಯ್ಕೆ ಮತ್ತು ಹೊಣೆಗಾರಿಕೆ ವಾಣಿಜ್ಯ ಮಂಡಳಿಯದುಅದು ಗಾಳಿಪಟ 2ವೇದವಿಕ್ರಾಂತ್ ರೋಣಬೈ ಟು ಲವ್ರಾಜ್ ಲೈಟ್ಸ್ ಅಂಡ್ ಸೌಂಡ್ಸ್ಹೆಡ್‌ಬುಷ್ಪದವಿಪೂರ್ವದ ಫಿಲಂ ಮೇಕರ್ಕಾಕ್ ಟೈಲ್ವದನಭರ್ಜರಿ ಆಟಕಾಮಧೇನುಹಕ್ಕಿಗಳ ಕನಸು ಚಿತ್ರಗಳ ಹೆಸರನ್ನು ಕಳುಹಿಸಿತ್ತು.

ಈ ಚಿತ್ರಗಳಲ್ಲಿ ಹಲವು ಚಿತ್ರಗಳ ಡಿಸಿಪಿ ಬಂದಿಲ್ಲಸಂಬಂಧಪಟ್ಟವರನ್ನು ಸಂಪರ್ಕಿಸಿದರೆ ಸರಿಯಾದ ಪ್ರತಿಕ್ರಿಯೆಯೂ ಇರಲಿಲ್ಲ ಎನ್ನುತ್ತಾರೆ ಇವುಗಳ ಪ್ರದರ್ಶನದ ಜವಾಬ್ದಾರಿ ಹೊತ್ತವರುಜನಪ್ರಿಯ ಚಿತ್ರಗಳ ಬಹುತೇಕ ಮಂದಿಚಿತ್ರೋತ್ಸವಕ್ಕೂ ತಮಗೂ ಏನೂ ಸಂಬಂಧ ಇಲ್ಲ ಎನ್ನುವಂತಿದ್ದರುಇದು ಚಿತ್ರಗಳ ನಟನಟಿಯರುತಂತ್ರಜ್ಞರು ಮಾತ್ರವಲ್ಲಉದ್ಯಮಿಗಳಿಗೂ ಅನ್ವಯವಾಗುವ ಮಾತು.

ಚಿತ್ರೋತ್ಸವದಲ್ಲಿ ಪ್ರತಿನಿಧಿಗಳಾಗಲುಆನ್‌ಲೈನ್ ಮೂಲಕ ಅವಕಾಶ ಇತ್ತುಚಿತ್ರೋದ್ಯಮದ ಗಣ್ಯರುಸ್ಪರ್ಧೆಯಲ್ಲಿರುವ ಚಿತ್ರಗಳ ನಿರ್ಮಾಪಕರುನಿರ್ದೇಶಕರುಮಾಧ್ಯಮದ ಮಂದಿ ಮೊದಲಾದವರಿಗೆ ಉಚಿತ ಪಾಸ್‌ಗಳುಮೂಲಗಳ ಪ್ರಕಾರಆನ್‌ಲೈನ್‌ನಲ್ಲಿ ಪ್ರತಿನಿಧಿಯಾದವರು ದುಪ್ಪಟ್ಟು ಉಚಿತ ಪಾಸ್‌ಗಾಗಿ ಬಂದವರೇ.

ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಸ್ಥಳೀಯ ಚಿತ್ರೋದ್ಯಮದಿಂದ ಕೆಲವೇ ಚಿತ್ರಗಳ ಪ್ರದರ್ಶನ ಇರುತ್ತದೆಆದರೆ ಈ ಬಾರಿಸ್ಛರ್ಧೆಯೂ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯಿತುಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗದ ಚಿತ್ರಗಳ ನಿರ್ಮಾಪಕನಿರ್ದೇಶಕರು ಚಿತ್ರೋತ್ಸವ ನಿರ್ದೇಶಕರ ಮುಂದೆ ತಮ್ಮ ಚಿತ್ರಗಳ ಪ್ರದರ್ಶನಕ್ಕಾಗಿ ದುಂಬಾಲು ಬೀಳುತ್ತಿದ್ದ ದೃಶ್ಯಗಳೂ ಇದ್ದವುಅವರೂ ಸಾಕಷ್ಟು ಔದಾರ್ಯ ಮೆರೆದರೆನ್ನಿ!

 

ನಿನ್ನೆ ಚಿತ್ರೋತ್ಸವದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನದ ವೇಳೆ ಚುನಾವಣೆ ಘೋಷಣೆ ಆಗಿರುವುದರಿಂದ ಸಚಿವರುರಾಜಕಾರಣಿಗಳು ಈ ಸಮಾರಂಭದಲ್ಲಿ ಭಾಗವಹಿಸುವಂತಿರಲಿಲ್ಲಚುನಾವಣಾ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಾಜ್ಯಪಾಲರೂ ದೆಹಲಿಗೆ ತೆರಳಿದ್ದರುಹಾಗಾಗಿ ಈ ಬಾರಿಯ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಲಾಗಲಿಲ್ಲ.

andolanait

Share
Published by
andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

34 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

40 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

49 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago