ಎಡಿಟೋರಿಯಲ್

‘ಟಿಫಾನಿ ಟೆಂಪ್ಲೆಟ್’ ಎಂಬ ಅಂಧರ ಕರೆನ್ಸಿ ಮಾಪಕ

ಭಾರತದಲ್ಲಿರುವ ಕುರುಡರ ಸಂಖ್ಯೆ ಅಂದಾಜು 15 ಮಿಲಿಯನ್ಇದು ವಿಶ್ವದ ಒಟ್ಟು ಕುರುಡರ ಸಂಖ್ಯೆಯಲ್ಲಿ ಅರ್ಧದಷ್ಟುಅಂದರೆವಿಶ್ವದ ಅರ್ಧದಷ್ಟು ಅಂಧರು ಭಾರತ ದೇಶವೊಂದರಲ್ಲಿಯೇ ವಾಸಿಸುತ್ತಿದ್ದಾರೆಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಒಂದು ಜನವರ್ಗ ಸಂವಹನಸಾರಿಗೆಪ್ರಯಾಣಖರೀದಿಮಾರಾಟಬಿಲ್ ಪಾವತಿ ಮೊದಲಾದ ದಿನನಿತ್ಯದ ಅತ್ಯಂತ ಮೂಲಭೂತ ಚಟುವಟಿಕೆಗಳನ್ನು ನಿಭಾಯಿಸಲು ಎಂತಹ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಯಾರೂ ಊಹಿಸಬಹುದಾದ ಸಂಗತಿಅದರಲ್ಲೂ ಮುಖ್ಯವಾಗಿಕರೆನ್ಸಿ ನೋಟುಗಳನ್ನು ಬಳಸುವಾಗ ಅಂಧರು ಎದುರಿಸುವ ಸಮಸ್ಯೆ ಅತ್ಯಂತ ಗುರುತರವಾದುದು.

ತಿರುವನಂತಪುರದ 25 ವರ್ಷ ಪ್ರಾಯದ ಟಿಫಾನಿ ಬ್ರಾರ್ ಅಂತಹ ಓರ್ವ ಅಂಧ ಮಹಿಳೆಆಕೆ ಸಾಮಾನು ಖರೀದಿಸಲು ಅಂಗಡಿಗಳಿಗೆ ಹೋದಾಗ ಹೆಚ್ಚಿನ ಬಾರಿ ವಂಚನೆಗೆ ಒಳಗಾಗುತ್ತಿದ್ದರುಆಕೆಯ ದೃಷ್ಟಿ ಹೀನತೆಯ ದುರ್ಲಾಭ ಪಡೆಯುವ ಅಂಗಡಿ ಮಾಲೀಕರು ಎಷ್ಟೋ ಬಾರಿ ಹೆಚ್ಚು ಮೌಲ್ಯದ ರೂಪಾಯಿ ನೋಟೆಂದು ಕಡಿಮೆ ಮೌಲ್ಯದ ನೋಟುಗಳನ್ನು ಕೊಟ್ಟು ಅವರನ್ನು ಮೋಸಗೊಳಿಸುತ್ತಿದ್ದರುಟಿಫಾನಿ ಬ್ರಾರ್ ತನಗೆ ಅಂಗಡಿಗಳಲ್ಲಿ ಹಣದ ಮೋಸವಾಗುತ್ತಿರುವ ಬಗ್ಗೆ ತಮ್ಮ ಪರಿಚಿತರಾದ ಬೆಂಗಳೂರಿನ ಪೌಲ್ ಡಿ’ಸೋಜಾ ಎಂಬವರಲ್ಲಿ ಹೇಳಿಕೊಳ್ಳುತ್ತಾರೆಟಿಫಾನಿ ಬ್ರಾರ್‌ರ ಸಮಸ್ಯೆಗೆ ಸ್ಪಂದಿಸಿದ ಪೌಲ್ ಡಿ’ಸೋಜಾಅಂಧರು ಬಹು ಸುಲಭದಲ್ಲಿ ಕರೆನ್ಸಿ ನೋಟುಗಳ ಮೌಲ್ಯವನ್ನು ತಿಳಿಯುವ ಒಂದು ಟೆಂಪ್ಲೆಟನ್ನು ರಚಿಸಿ ಕೊಡುತ್ತಾರೆ ಮತ್ತುಅದಕ್ಕೆ ‘ಟಿಫಾನಿ ಟೆಂಪ್ಲೆಟ್’ ಎಂದು ಆಕೆಯ ಹೆಸರನ್ನೇ ಇಡುತ್ತಾರೆ.

ಕ್ರೆಡಿಟ್ ಕಾರ್ಡ್ ಸೈಜಿನಲ್ಲಿರುವ ಟಿಫಾನಿ ಟೆಂಪ್ಲೆಟ್ ಒಂದು ಅತ್ಯಂತ ಸರಳ ಸಾಧನಇದರ ಮೇಲು ಭಾಗ ಮತ್ತು ಬಲ ಭಾಗದಲ್ಲಿ ಚಿಕ್ಕಚಿಕ್ಕ ಮೆಟ್ಟಿಲಿನಂತಹ ರಚನೆಗಳಿವೆಮತ್ತುಅದರ ಮೇಲೆ ಅಂಧರಿಗೆ ಅರ್ಥವಾಗುವ ಕೆಲವು ಬ್ರೈಲ್ ಸಂಕೇತಾಕ್ಷರಗಳಿವೆಬೇರೆ ಬೇರೆ ಮೌಲ್ಯದ ನೋಟುಗಳ ಉದ್ದಗಲಗಳು ಬೇರೆ ಬೇರೆಯಾಗಿರುತ್ತವೆದೊಡ್ಡ ಮೌಲ್ಯಗಳ ನೋಟುಗಳ ಉದ್ದಗಲವು ಕಡಿಮೆ ಮೌಲ್ಯದ ನೋಟುಗಳಿಗಿಂತ ಸಾಮಾನ್ಯವಾಗಿ ಹೆಚ್ಚಿರುತ್ತದೆಅಂಧರು ಒಂದು ನೋಟನ್ನು ಟಿಫಾನಿ ಟೆಂಪ್ಲೆಟ್ ಮೇಲೆ ಮಡಚಿ ಹಿಡಿದಾಗ ಅದರ ಅಗಲ ಮತ್ತು ಉದ್ದ ಯಾವ ಮೆಟ್ಟಿಲಿಗೆ ತಾಗಿಕೊಳ್ಳುತ್ತದೆಯೋ ಅದರ ಆಧಾರದ ಮೇಲೆ ಆ ನೋಟಿನ ಮೌಲ್ಯವನ್ನು ತಿಳಿದುಕೊಳ್ಳಬಹುದು.

ನೋಟುಗಳ ಮೌಲ್ಯವನ್ನು ನಿರ್ಧರಿಸಿ ಅಂಧರಿಗೆ ನೆರವಾಗುವ ಹಲವು ಮೊಬೈಲ್ ಆಪ್‌ಗಳಿದ್ದರೂಪೌಲ್ ಡಿ’ಸೋಜಾರ ಟಿಫಾನಿ ಟೆಂಪ್ಲೆಟ್ ಅಂತಹ ಯಾವುದೇ ಆಪ್‌ಗಿಂತ ಸರಳವಾದುದುಮಾತ್ರವಲ್ಲದೆ ಆ ಆಪ್‌ಗಳಿಗಿಂತ ಹೆಚ್ಚು ಸುಲಭ ಹಾಗೂ ಶೀಘ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತದೆಜ್ಯೋತಿರ್ಗಮಯ ಫೌಂಡೇಷನ್ ಎಂಬ ಒಂದು ಸರ್ಕಾರೇತರ ಸಂಸ್ಥೆ ಕ್ರೌಡ್ ಫಂಡಿಂಗ್ ಮೂಲಕ ಇದನ್ನು ಮುದ್ರಿಸಿಕೇವಲ ಎರಡು ರೂಪಾಯಿಗಳಿಗೆ ಪೌಲ್ ಡಿ’ಸೊಜಾರಿಗೆ ಒದಗಿಸುತ್ತದೆಪೌಲ್ ಡಿ’ಸೋಜಾ ಅವುಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ಹಂಚುತ್ತಾರೆದೇಶದಲ್ಲಿರುವ ಎಲ್ಲ 15 ಮಿಲಿಯನ್ ಅಂಧರಿಗೂ ಟಿಫಾನಿ ಟೆಂಪ್ಲೆಟ್‌ನ್ನು ಉಚಿತವಾಗಿ ನೀಡುವ ಉದ್ದೇಶ ಪೌಲ್ ಡಿ’ಸೋಜಾರದ್ದುಪೌಲ್ ಡಿ’ಸೋಜಾರು ತಮ್ಮ ಬೇರೆಲ್ಲ ಆವಿಷ್ಕಾರಗಳಿಗೆ ಪೇಟೆಂಟ್ ಪಡೆದಿದ್ದರೂಅಗತ್ಯವಿರುವವರಿಗೆ ಅಗ್ಗದಲ್ಲಿ ಸಿಗಲಿ ಎಂಬ ಉದ್ದೇಶದಿಂದ ಟಿಫಾನಿ ಟೆಂಪ್ಲೆಟ್‌ಗೆ ಮಾತ್ರ ಯಾವುದೇ ಪೇಟೆಂಟನ್ನು ಪಡೆದಿಲ್ಲ.

ಪೌಲ್ ಡಿ’ಸೋಜಾ ಚಿಕ್ಕಂದಿನಿಂದಲೂ ಒಂದಲ್ಲ ಒಂದು ಹವ್ಯಾಸದ ಬೆನ್ನು ಹತ್ತುವ ಗುಣವುಳ್ಳವರುಇದೇ ಕಾರಣದಿಂದಾಗಿ ಅವರು ಪ್ಲಂಬಿಂಗ್ಕಾರ್ಪೆಂಟರಿ ಮೊದಲಾದ ಕೆಲಸಗಳನ್ನು ಕಲಿತುಕೊಂಡಿದ್ದರುಪೌಲ್ ಡಿ’ಸೋಜಾರ ಇನ್ನೊಂದು ಹವ್ಯಾಸವೆಂದರೆಮೆಕಾನಿಕಲ್ ಆಗಿ ಕೆಲಸ ಮಾಡುವ ಪುರಾತನ ಕಾಲದ ದಿನಬಳಕೆ ವಸ್ತುಗಳ ಸಂಗ್ರಹಅವರ ಸಂಗ್ರಹದಲ್ಲಿ ನೂರಾರು ಪುರಾತನ ವಾಚುಗಡಿಯಾರಗಳಿವೆಸಮಯ ಸಿಕ್ಕಾಗಲೆಲ್ಲ ಪೌಲ್ ಡಿ’ಸೋಜಾ ಅವುಗಳನ್ನು ದುರಸ್ತಿ ಮಾಡಿಕೆಲಸ ಮಾಡುವ ಸ್ಥಿತಿಗೆ ತರುತ್ತಾರೆಪೌಲ್ ಡಿ’ಸೋಜಾರ ಹವ್ಯಾಸಗಳ ಬೆನ್ನು ಹತ್ತುವ ಸ್ವಭಾವಕ್ಕೆ ಅವರ ತಾಯಿಯ ಬೆಂಬಲವೂ ಇತ್ತುಅದೇ ಮುಂದೆಅವರು ಹಲವು ರೀತಿಯ ದಿನನಿತ್ಯದ ಕೆಲಸಗಳನ್ನು ಸುಲಭಗೊಳಿಸುವ ಆವಿಷ್ಕಾರಗಳನ್ನು ಮಾಡಲು ಕಾರಣವಾಯಿತು.

2009ರ ಒಂದು ದಿನ ಪೌಲ್ ಡಿ’ಸೊಜಾ ಪಾಶ್ಚಾತ್ಯ ಸಂಗೀತ ಕೇಳುತ್ತಿದ್ದಾಗಉದ್ದನೆಯ ಗೆರೆಗಳ ಸಾಲುಗಳ ಮೇಲಿನ ಚುಕ್ಕಿಗಳತ್ತ ಅವರ ಗಮನ ಹರಿಯಿತುಆ ಚುಕ್ಕಿಗಳನ್ನು ಉಬ್ಬು ಚುಕ್ಕಿಗಳನ್ನಾಗಿ ಪರಿವರ್ತಿಸಿದರೆ ಅಂಧರೂ ಸಂಗೀತ ಕಲಿಯಬಹುದಲ್ಲವೇ ಎಂದು ಆಲೋಚಿಸಿದ ಪೌಲ್ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿಒಂದು ‘ಬ್ರೆ ಲ್ ಡಿಸ್‌ಪ್ಲೇ’ ನ್ನು ಆವಿಷ್ಕರಿಸಿದರುಅದರ ಸಹಾಯದಿಂದ ಕಣ್ಣು ದೃಷ್ಟಿಯಿಲ್ಲದವರೂ ಸಂಗೀತ ಕಲಿಯಬಹುದುಅದು ಅವರ ಪ್ರಪ್ರಥಮ ಬ್ರೆ ಲ್ ಆವಿಷ್ಕಾರಆ ಆವಿಷ್ಕಾರಕ್ಕೆ ಅವರಿಗೆ ಒಂದು ಪ್ರಶಸ್ತಿಯೂ ಬಂದಿತು ಮತ್ತು ಸರ್ಕಾರದ ಗ್ರಾಂಟ್ ಸಿಕ್ಕಿಅದನ್ನು ಮತ್ತಷ್ಟು ಆಧುನಿಕಗೊಳಿಸಿದರುಹಾಗೆಮುಂದಿನ ಹತ್ತು ವರ್ಷಗಳಲ್ಲಿ ಅಂತಹ ಹತ್ತು ಡಿಸ್‌ಪ್ಲೇಗಳನ್ನು ಆವಿಷ್ಕರಿಸಿದರು.

 

ಪೌಲ್ ಡಿ’ಸೋಜಾರ ಆವಿಷ್ಕಾರಗಳೆಲ್ಲಟಿಫಾನಿ ಟೆಂಪ್ಲೆಟ್‌ನಂತೆಸಾಂದರ್ಭಿಕ ಅಗತ್ಯಗನುಗುಣವಾಗಿ ಹುಟ್ಟಿಕೊಂಡವುಗಳುಉದಾಹರಣೆಗೆಒಂದು ಶಾಲೆಯ ಅಂಧ ಬಾಲಕಿಯರು ಟೈಪ್ ಮಾಡುವಾಗ ತಾವು ಎದುರಿಸುವ ಅಡಚಣೆಗಳನ್ನು ಅವರ ಬಳಿ ಹೇಳಿಕೊಂಡಾಗಅವರಿಗಾಗಿ ಒಂದು ಬ್ರೆಲ್ ಟೈಪ್ ರೈಟರನ್ನು ರಚಿಸಿಕೊಟ್ಟರುಇನ್ನೊಂದು ಉದಾಹರಣೆಯಲ್ಲಿಕೆಲವು ಅಂಧ ಮಕ್ಕಳು ತಮಗೆ ಚಿತ್ರ ಬರೆಯುವ ಆಸೆಆದರೆ ಕಣ್ಣು ಕಾಣಿಸದಿರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ಹೇಳಿಕೊಂಡಾಗ ಪೌಲ್ಅವರಿಗಾಗಿ ‘ರೌಲೆಟ್’ ಸಾಧನವನ್ನು ಮಾಡಿಕೊಟ್ಟರುಅದರ ಸಹಾಯದಿಂದ ಅಂಧರೂ ಕಾಗದದ ಮೇಲೆ ಚಿತ್ರ ಬರೆಯಬಹುದುಪೌಲ್ ಡಿ’ಸೋಜಾ ‘ಟಚ್ ಟೆಕ್ ಲ್ಯಾಬ್ಸ್ ಪ್ರೆ ಲಿ.’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ತಮ್ಮೆಲ್ಲ ಆವಿಷ್ಕಾರಗಳನ್ನು ನಡೆಸಿಅಂಧರ ಬಾಳಿಗೆ ಬೆಳಕಾಗುತ್ತಿದ್ದಾರೆ.

andolanait

Share
Published by
andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

7 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

7 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

8 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

8 hours ago