A Chikkathirupathi in Chamarajanagar: Famous as Huligina muradi
ಪ್ರಕೃತಿಯ ಮಡಿಲಿನಲ್ಲಿ ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಪುಟ್ಟ ಬೆಟ್ಟದ ಮೇಲೆ ಜನಾಕರ್ಷಣೆಯ ಕೇಂದ್ರವಾಗಿ ತಲೆಯತ್ತಿ ನಿಂತಿದೆ ಶ್ರೀ ಹುಲಿಗಿನ ಮುರಡಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ.
ಚಿಕ್ಕ ತಿರುಪತಿ ಎಂದು ಕರೆಯಲ್ಪಡುವ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ದೇವ ಸ್ಥಾನವು ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆ ತಾಲ್ಲೂಕಿನಲ್ಲಿದೆ. ಇದು ವ್ಯಾಘ್ರಾಚಲ ಎಂದೇ ಪ್ರಸಿದ್ಧವಾಗಿದೆ.
೩೦೦ ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಪೂರ್ವಾಭಿಮುಖ ವಾಗಿ ಪ್ರಸನ್ನ ವದನನಾಗಿರುವ ಶ್ರೀನಿವಾಸ ವಿಗ್ರಹದ ಕೈಯಲ್ಲಿ ಶಂಖ, ಚಕ್ರಗಳನ್ನು ಕೆತ್ತನೆ ಮಾಡಲಾಗಿದೆ. ಮೂರ್ತಿಯ ಎಡಪಾರ್ಶ್ವದಲ್ಲಿ ಆಂಡಾಳ್ ಅಥವಾ ನೀಳಾದೇವಿ, ಒಳಭಾಗದಲ್ಲಿ ಶ್ರೀ ವೈಕುಂಠನಾಥ ಸ್ವಾಮಿಯೂ ಶ್ರೀದೇವಿ ಮತ್ತು ಭೂದೇವಿ ಸಹಿತನಾಗಿದ್ದು, ಮೂರು ದ್ವಾರಗಳಲ್ಲೂ ದ್ವಾರಪಾಲಕರಿದ್ದಾರೆ.
ವರಾಹ ಪುರಾಣದ ಉತ್ತರಖಂಡದಲ್ಲಿ ಈ ಬೆಟ್ಟಕ್ಕೆ ಕೃತಯುಗದಲ್ಲಿ ಶೇಷಾದ್ರಿ, ತ್ರೇತಾಯುಗ ದಲ್ಲಿ ಕನಕಾದ್ರಿ, ದ್ವಾಪರಯುಗದಲ್ಲಿ ವೆಂಕಟಾದ್ರಿ ಹಾಗೂ ಕಲಿಯುಗದಲ್ಲಿ ವ್ಯಾಘ್ರಾದ್ರಿ (ಹುಲಿಗಿನ ಮುರಡಿ) ಅಂತಲೂ ಕರೆಯಲಾಗಿದೆ.
ಪೌರಾಣಿಕ ಹಿನ್ನೆಲೆ: ಹಿಂದೆ ವಾಯು ಹಾಗೂ ಆದಿಶೇಷ ಯಾರು ಶಕ್ತಿಶಾಲಿಗಳು ಎಂದು ಪರೀಕ್ಷಿಸುವ ಜಿದ್ದಿಗೆ ಬಿದ್ದು ಆದಿಶೇಷನು ಮೇರು ಪರ್ವತದ ಶಿಖರವನ್ನು ಸುತ್ತಿಕೊಂಡನು. ಜೋರಾಗಿ ಗಾಳಿ ಬೀಸಿ ಆದಿಶೇಷನ ಬಂಧನ ಬಿಡಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಮೇರು ಶಿಖರವೇ ಎರಡು ಭಾಗವಾಗಿ ಮುರಿದು ಬಿದ್ದಿತಂತೆ. ಇದರಲ್ಲಿ ಒಂದು ಹೋಳು ವೃಷ ಭಾದ್ರಿ, ಮತ್ತೊಂದು ಹೋಳು ದಕ್ಷಿಣ ಶೇಷಾದ್ರಿ (ಹುಲಿಗಿನ ಮುರಡಿ) ಎಂದು ಹೆಸರಾಯಿತು.
ಪುಣ್ಯತೀರ್ಥಗಳು: ದಕ್ಷಿಣ ಶೇಷಾದ್ರಿಗೆ ವ್ಯಾಘ್ರಾಚಲ, ಹುಲಿಗಿನ ಮುರಡಿ, ವೆಂಕಟಾಚಲಗಿರಿ ಎಂದು ಕರೆಯುತ್ತಾರೆ. ತನ್ನ ಹೆಸರಿನ ಬಗ್ಗೆ ವಿವಿಧ ಐತಿಹ್ಯವನ್ನು ಹೊಂದಿರುವ ಈ ದೇವಾಲಯದ ಆವರಣದಲ್ಲಿ ಪುರಾಣ ಪ್ರಸಿದ್ಧ ಧನುಷ್ಕೋಟಿ ತೀರ್ಥ, ವೇದ ಪುಷ್ಕರಣಿ ತೀರ್ಥ ಮತ್ತು ವೈಕುಂಠ ತೀರ್ಥಗಳೆಂಬ ಕೊಳಗಳಿವೆ. ಶ್ರೀರಾಮನು ಲಂಕೆಗೆ ಹೊರಟ ಸಂದರ್ಭದಲ್ಲಿ ದೇವರ ಅನುಗ್ರಹ ಪಡೆಯಲು ತನ್ನ ಸ್ನಾನಕ್ಕಾಗಿ ಧನುಸ್ಸಿನ ತುದಿಯಿಂದ ಚುಚ್ಚಿಕಲ್ಲು ಬಂಡೆಯಿಂದ ನೀರು ತೆಗೆದ ಸ್ಥಳವೇ ಧನುಷ್ಕೋಟಿ ತೀರ್ಥ ಎಂಬ ಪ್ರತೀತಿ ಇದೆ.
ರಾಕ್ಷಸರಿಂದ ವೇದಗಳನ್ನು ರಕ್ಷಿಸಿದ ಸಂದರ್ಭದಲ್ಲಿ ಪರಮ ಪುರುಷನ ಶರೀರದಿಂದ ತೊಟ್ಟಿಕ್ಕಿದ ಬೆವರು ಬಿದ್ದ ಸ್ಥಳವೇ ವೇದ ಪುಷ್ಕರಿಣಿ ತೀರ್ಥ ಎಂಬ ನಂಬಿಕೆ ಇದೆ. ವೈಕುಂಠದಿಂದ ಬಂದ ಪರಮ ಪುರುಷನಿಂದಲೇ ನಿರ್ಮಿತವಾದ ವೈಕುಂಠ ತೀರ್ಥ ಎಂಬುದು ಸ್ಥಳೀಯರ ವಿಶ್ಲೇಷಣೆಯಾಗಿದೆ.
ದೇಗುಲ ಎಲ್ಲಿದೆ?: ಹುಲಿಗಿನ ಮುರಡಿ ವೆಂಕಟರಮಣ ದೇವಾಲಯವು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದಿಂದ ೮ ಕಿ. ಮೀ. ದೂರ, ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ೨೦ ಕಿ.ಮೀ., ಚಾಮರಾಜನಗರ ದಿಂದ ೩೦ ಕಿ.ಮೀ. ದೂರದಲ್ಲಿದೆ. ದೇವಾಲಯಕ್ಕೆ ಬರುವವರು ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ತೆರಕಣಾಂಬಿಗೆ ತೆರಳಿದರೆ ಅಲ್ಲಿಂದ ಶೇರ್ ಆಟೋ ಸೌಲಭ್ಯವಿದೆ.
‘ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿ’: ಹುಲಿಗಿನ ಮುರಡಿ ದೇವಾಲಯ ಇರುವ ಬೆಟ್ಟವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಬಹುದು. ಬಂಡೀಪುರ ಅರಣ್ಯ ವಲಯಕ್ಕೂ ಇದು ಹತ್ತಿರವಾಗಿದೆ. ಈಗಾಗಲೇ ಬಂಡೀಪುರಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಈ ಬೆಟ್ಟವನ್ನೂ ಅಭಿವೃದ್ಧಿಪಡಿಸಿದರೆ ಇನ್ನೂ ಹೆಚ್ಚಿನ ಜನರು ಇತ್ತ ಬರುವುದರಿಂದ ರಾಜ್ಯ ಸರ್ಕಾರದ ವರಮಾನ ಕೂಡ ಅಲ್ಪ ಪ್ರಮಾಣದಲ್ಲಿಯಾ ದರೂ ಹೆಚ್ಚಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವಿಶೇಷ ಪೂಜೆ: ಶನಿವಾರ ವಿಶೇಷ ಪೂಜೆ ನಡೆಯುವುದರಿಂದ ಆಟೋಗಳು ದೇಗುಲದ ವರೆಗೂ ಹೋಗುತ್ತವೆ. ಇತರೆ ದಿನಗಳಲ್ಲಿ ಆಟೋ ಅಥವಾ ಬಸ್‌ನಲ್ಲಿ ಕಿಲಗೆರೆ ಕ್ರಾಸ್‌ನಲ್ಲಿ ಇಳಿದು ದೇಗುಲಕ್ಕೆ ೩ ಕಿ.ಮೀ. ನಡೆದುಕೊಂಡು ಹೋಗಬಹುದು. ಸ್ವಂತ ವಾಹನ ಅಥವಾ ಬಾಡಿಗೆ ಪಡೆದಿದ್ದರೆ ಅನುಕೂಲವಾಗುತ್ತದೆ.
– ಎ.ಆರ್. ಗಿರಿಧರ
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…