ಗಂಡನ ಜತೆ ಸೇರಿ ತಾಯಿಯನ್ನೇ ಕೊಲೆ ಮಾಡಿ ರಾತ್ರೋರಾತ್ರಿ ಶವ ಹೂತಿಟ್ಟ ಘಟನೆ ಮಂಡ್ಯ ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಾರದಮ್ಮ(50) ಮೃತ ಮಹಿಳೆ. ಶಾರದಮ್ಮ ತಮ್ಮ ಮಗಳು ಅನುಷಾಳನ್ನು ಮೈಸೂರಿನ ಹಾರೋಹಳ್ಳಿಯ ದೇವರಾಜ್ ಎಂಬಾತನಿಗೆ ಮದುವೆ ಮಾಡಿದ್ದರು.
ಒಬ್ಬಳೇ ಮಗಳಾದ ಕಾರಣ ಶಾರದಮ್ಮ ಆಗಾಗ ಅಳಿಯನ ಮನೆಗೆ ತೆರಳಿ ಮಗಳ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದರು. ಹೀಗೆ ನವೆಂಬರ್ 2022ರಲ್ಲಿ ಮಗಳ ಮನೆಗೆ ತೆರಳಿದ್ದ ಶಾರದಮ್ಮ ಜಗಳದಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಹಾಗೂ ಮಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೀಗೆ ಹಾರೋಹಳ್ಳಿಯಲ್ಲಿ ಸತ್ತ ತಾಯಿಯನ್ನು ಅನುಷಾ ಹಾಗೂ ದೇವರಾಜ್ ಹಾರೋಹಳ್ಳಿಯಿಂದ ಹೆಬ್ಬಕವಾಡಿಗೆ ತಂದು ಗುಟ್ಟಾಗಿ ಹೂತುಹಾಕಿದ್ದಾರೆ.
ಬಳಿಕ ಆರೇಳು ತಿಂಗಳು ಸುಮ್ಮನಿದ್ದ ಮಗಳು 2023ರ ಜೂನ್ ತಿಂಗಳಿನಲ್ಲಿ ತನ್ನ ತಾಯಿ ಕಾಣೆಯಾಗಿರುವುದರ ಬಗ್ಗೆ ವರುಣಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ಇಷ್ಟು ದಿನಗಳ ಕಾಲ ಹುಡುಕಿದರೂ ಪ್ರಯೋಜನೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡು ಮಗಳು ಹಾಗೂ ಅಳಿಯನನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ. ನಂತರ ಪ್ರಕರಣವನ್ನು ಮಂಡ್ಯ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿದ್ದು, ಆರೋಪಿಗಳು ಶವ ಹೂತಿಟ್ಟ ಜಾಗವನ್ನು ತೋರಿಸಿದ್ದು ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಗೊಂಡಿದೆ.
ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…
ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…
ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು…
ಡಾ. ಮಾನಸ ಎಸ್.ಡಿ. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ ಆರೋಗ್ಯವೆಂದರೆ ಕೇವಲ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಧಿಕಾರದ ಶಕ್ತಿಯಿಂದಲ್ಲ, ಆದರ್ಶದ ನಡವಳಿಕೆಯಿಂದ ಮುನ್ನಡೆಸುವುದೇ ನಿಜವಾದ ನಾಯಕತ ಕೆಲವೊಮ್ಮೆ…
ನವೀನ್ ಡಿಸೋಜ ೨,೪೫೯ ನಿರುದ್ಯೋಗಿ ಯುವಕ-ಯುವತಿಯರಿಂದ ನೋಂದಣಿ; ಶೇ.೮೮.೦೬ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಡಿಕೇರಿ: ಉದ್ಯೋಗದ ನಿರೀಕ್ಷೆಯಲ್ಲಿರುವ…