ಮೈಸೂರು: ycc (ಯಂಗ್ ಕಮ್ಯೂನಿಕೆಟರ್ ಕ್ಲಬ್) ಹಾಗೂ ವಿ-ಲೀಡ್ ಆರ್ಗನೈಜೇಷನ್ ಇವರ ವತಿಯಿಂದ ನಗರದ ಶೇಷಾದ್ರಿಪುರಂ ಪದವಿ ಕಾಲೇಜ್ ರವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಲು ವಿಶೇಷ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಗಾರದ ಮುಖ್ಯ ಭಾಷಣಕಾರರಾಗಿ ಡಾ ಸೀತಾರಾಮ್ ಹಾಗೂ ರಮೇಶ್ ವೆಂಕಟನಮ್ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೊಂದಿಗೆ ಇಂಟರಾಕ್ಷನ್ ನಡೆಸುವ ಮೂಲಕ ಒಂದು ಮತದ ಮೌಲ್ಯವೆಷ್ಟು, ಎಷ್ಟು ಮುಖ್ಯವಾಗುತ್ತದೆ ಮತ್ತು ಒಂದು ಮತದಿಂದ ಸರ್ಕಾರವನ್ನು ಕಟ್ಟಲುಬಹುದು ಹಾಗೂ ಕೆಡವಲುಬಹುದು. ಪ್ರತಿಯೊಬ್ಬರೂ ಮತದಾನ ಮಾಡುವುದು ಅವರ ಹಕ್ಕು. 2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎ ಆರ್ ಕೃಷ್ಣಮೂರ್ತಿಯವರು ಸಂತೆಮಾರಹಳ್ಳಿ, ಚಾಮರಾಜನಗರದಿಂದ ಸ್ಪರ್ಧಿಸುವಾಗ ಅವರ ವಿರುದ್ಧ ನಿಂತಿದ್ದ ಅಭ್ಯರ್ಥಿಯಿಂದ ಒಂದು ಮತದಿಂದ ಸೋಲನ್ನು ಅನುಭವಿಸುತ್ತಾರೆ. ಆ ಒಂದು ಮತ ಬೇರೆ ಯಾರದ್ದು ಅಲ್ಲ ಅವರ ಕಾರ್ ಡ್ರೈವರ್ ನಾದು. ಡ್ರೈವರ್ ಬೆಳಗ್ಗೆಯಿಂದ ಸರ್ ಮತದಾನ ಮಾಡಲು ಹೋಗಬೇಕು ಎಂದು ಕೇಳಿದಾಗ ಮತದಾನ ಮಾಡುವಂತೆ ಬಿಡು ಎಂದು ಹೇಳಿದರು, ಆದರೆ ಕಾಲ ಮಿಂಚಿ ಹೋಯಿತು. ಈ ಒಂದೇ ಒಂದು ಕಾರಣದಿಂದಾಗಿ ಸೋಲನ್ನು ಎದುರಿಸಬೇಕಾಯಿತು. ಇದನ್ನು ಉದಾಹರಣೆಯಾಗಿ ಹೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಒಂದು ಮತದ ಬೆಲೆ ಎಷ್ಟರಮಟ್ಟಿಗೆ ಎಂಬುದನ್ನು ತಿಳಿಸಿದರು.
ಪ್ರತಿಯೊಬ್ಬರೂ 18 ವರ್ಷ ತುಂಬಿದ ನಂತರ ಮತದಾರರ ಚೀಟಿಯನ್ನು ಪಡೆದುಕೊಳ್ಳಬೇಕು ಮತ್ತು ತಪ್ಪದೇ ತಮ್ಮ ಕ್ಷೇತ್ರಕ್ಕೆ ಬರುವ ಪ್ರತಿಯೊಂದು ಚುನಾವಣೆಯಲ್ಲಿ ಕೂಡ ಮತದಾನ ಮಾಡಬೇಕು. ಸರ್ಕಾರವನ್ನು ತಪ್ಪು ಎಂದು ದೋಷಿಸುವುದು ಬಹಳ ಸುಲಭ ಆದರೆ ಆ ದೋಷದಲ್ಲಿ ನಮ್ಮ ಪಾಲು ಕೂಡ ಅಷ್ಟೇ ಇರುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಇರುವುದು, ನಮ್ಮ ನಾಯಕರನ್ನು ನಾವೇ ಆರಿಸಿಕೊಳ್ಳಲು ಅವಕಾಶ ಇರುವಾಗ ಅದನ್ನು ತಪ್ಪಿ ಹೋಗಲು ಬಿಡಬಾರದು.ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಲು ಅವರ ತರಗತಿಯ ಲೀಡರ್ಗಳನ್ನು ವೇದಿಕೆ ಮೇಲೆ ಕರೆಸಿ ಅವರು ಯಾವ ರೀತಿ ಚುನಾವಣೆಯನ್ನು ಎದುರಿಸಿದರು ಹಾಗೂ ಅವರು ಚುನಾವಣೆಯನ್ನು ಗೆದ್ದ ನಂತರ ಯಾವ ರೀತಿ ತರಗತಿಯ ಹಾಗೂ ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಕೇಳಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಮಾಡಿದರು.
ಅಭ್ಯರ್ಥಿಗಳು ಯಾರು ನಮಗೆ ಇಷ್ಟ ಇಲ್ಲ ಎಂದಾಗ ಅದನ್ನು ಕೂಡ ತೋರಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಅದೇನೆಂದರೆ ನೋಟ, ನೋಟವನ್ನು ಹಾಕುವುದರ ಮೂಲಕ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಮತ ಹಾಕದೆ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ವೈ ಸಿ ಸಿ ಮೈಸೂರು ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮೈಸೂರು ವಿಶ್ವವಿದ್ಯಾನಿಯ ಡಾ ಎಂ ಎಸ್ ಸಪ್ನ, ಪ್ರೊ ಸೌಮ್ಯ ಇರಪ್ಪ ಪ್ರಾಂಶುಪಾಲರು, ಶೇಷಾದ್ರಿಪುರಂ ಕಾಲೇಜ್, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಾಸನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ತವರು ಜಿಲ್ಲೆಗೆ ಆಗಮಿಸಿದ್ದು, ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.…
ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ…
ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…