ಜಿಲ್ಲೆಗಳು

ಉದ್ಯಾನವನದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ : ಆಯುಕ್ತರ ನೇತೃತ್ವದಲ್ಲಿ ತೆರವು ಕಾರ್ಯ ಯಶಸ್ವಿ

ಮೈಸೂರು: ಸಾರ್ವಜನಿಕರ ವಿರೋಧದ ನಡುವೆ ಉದ್ಯಾನವನದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ಮುಡಾ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.

ಮೈಸೂರಿನ ಬೋಗಾದಿ ಎಸ್‌ಬಿಎಂ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿದ್ದ ಉದ್ಯಾನವನದಲ್ಲಿ ನಾಲ್ಕೈದು ಮಂದಿ ಸೇರಿಕೊಂಡು ಕಟ್ಟಡವನ್ನು ನಿರ್ಮಾಣ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರಿಂದ ವಲಯ ಆಯುಕ್ತರು ಪರಿಶೀಲಿಸಿ ಮಾಹಿತಿ ಕೊಟ್ಟಿದ್ದರು. ಅದರಂತೆ, ಗುರುವಾರ ಜೆಸಿಬಿ ಯಂತ್ರ,ಲಾರಿ,ಟಿಪ್ಪರ್‌ಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಕಾರ್ಯಾಚರಣೆ ನಡೆಸುವ ಮೂಲಕ ತೆರವುಗೊಳಿಸಿದರು.

ಬಳಿಕ,ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿದವರ ವಿರುದ್ಧ ಕ್ರಮಕ್ಕೆ ನೋಟಿಸ್‌ಜಾರಿಗೊಳಿಸುವಂತೆ ಸೂಚಿಸಿದರು. ಮತ್ತೊಂದೆಡೆ ದಟ್ಟಗಳ್ಳಿ ಮೂರನೇ ಹಂತ ಮಹಾಮನೆ ಸರ್ಕಲ್ ರಸ್ತೆಯಲ್ಲಿ ಮನೆ ನಿರ್ಮಾಣಕ್ಕಾಗಿ ರಸ್ತೆ ಬದಿಯಲ್ಲಿ ಕಟ್ಟಿದ್ದ ಶೆಡ್‌ಗಳನ್ನು ತೆರವುಗೊಳಿಸದೆ ಇರುವ ಬಗ್ಗೆ ದೂರು ನೀಡಿದ್ದನ್ನು ಸ್ವೀಕರಿಸಿದ್ದ ಆಯುಕ್ತರು ಶೆಡ್‌ಗಳನ್ನು ತೆರವುಗೊಳಿಸುವಂತೆ ನೋಡಿಕೊಂಡರು. ಮನೆ ನಿರ್ಮಾಣ ಮಾಡಿದ ಮೇಲೆ ಶೆಡ್ ತೆರವುಗೊಳಿಸುವಂತೆ ಮಾಲೀಕರಿಗೆ ಮೂರ್ನಾಲ್ಕು ಬಾರಿ ಹೇಳಿದರೂ ಗಮನಹರಿಸದ ಕಾರಣ ಜೆಸಿಬಿ ಯಂತ್ರದಿಂದ ನೆಲಸಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ಚನ್ನಕೇಶವ, ಕಾರ್ಯಪಾಲಕ ಅಭಿಯಂತರರಾದ ಮೋಹನ್, ಧರ್ಮೇಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಕಿರಣ್ ಇನ್ನಿತರರು ಹಾಜರಿದ್ದರು.

andolanait

Recent Posts

ಮೈಸೂರು | ಹೀಲಿಯಂ ಸ್ಫೋಟ ಪ್ರಕರಣ: ಶವಗಾರದಲ್ಲಿ ಮೃತ ಲಕ್ಷ್ಮಿಯ ಕುಟುಂಬಸ್ಥರ ಆಕ್ರಂದನ

ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…

2 mins ago

ಮಂಡ್ಯ| ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ…

13 mins ago

ಕಥೆಗಾರ್ತಿ, ಖ್ಯಾತ ಅನುವಾದಕಿ ಸರಿತಾ ಜ್ಞಾನಾನಂದ ನಿಧನ

ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್‌.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…

45 mins ago

ಹಿರಿಯೂರು ಬಸ್‌ ದುರಂತ ಪ್ರಕರಣ: ರಾಜ್ಯ ಸರ್ಕಾರ ಫುಲ್‌ ಅಲರ್ಟ್‌

ಬೆಂಗಳೂರು: ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಸಂಭ್ರಮದ ಮಧ್ಯೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಸಂಭವಿಸಿದ ಬಸ್‌ ಅಪಘಾತ ಇಡೀ…

50 mins ago

ಅರಮನೆ ಬಳಿ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಪ್ರಕರಣ: ತಂಗಿ ಅಂತ್ಯಸಂಸ್ಕಾರ ಆಗುತ್ತಿದ್ದಂತೆ ಅಣ್ಣ ಸಾವು

ನಂಜನಗೂಡು: ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್‌ ಬ್ಲಾಸ್ಟ್‌ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನ ಚಾಮಲಾಪುರದ ನಿವಾಸಿ ಮಂಜುಳ ಸಾವನ್ನಪ್ಪಿರುವ…

1 hour ago

ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಸೆರೆ

ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…

2 hours ago