ಜಿಲ್ಲೆಗಳು

‘ಯುಜಿ ಕೇಬಲ್ ಅಳವಡಿಕೆ: ಪ್ರತಿ ಕಿ.ಮೀ 60 ಸಾವಿರ ರೂ. ನಿಗದಿ’

ಕಾನೂನು ಅಭಿಪ್ರಾಯ ಪಡೆದು ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳಿಗೆ ಖಾತೆ ಮಾಡಲು ನಿರ್ಧಾರ

ಮೈಸೂರು: ನಗರಪಾಲಿಕೆ ವ್ಯಾಪ್ತಿುಂಲ್ಲಿ ಬೇಕಾಬಿಟ್ಟಿ ಓವರ್ ಹೆಡ್ ಕೇಬಲ್ ಅಳವಡಿಸಿರುವುದನ್ನು ಒಂದು ತಿಂಗಳಿನಲ್ಲಿ ತೆರವುಗೊಳಿಸುವ ಜತೆಗೆ ಪ್ರತಿ ಕಿ.ಮೀ.ಗೆ ಸುಮಾರು 6 ಓಪನ್ ಟ್ರಂಚ್ ಬಳಸಿ ಕೇಬಲ್ ಅಳವಡಿಸಲಾಗುತ್ತಿದ್ದು, ಪ್ರತಿ ಟ್ರಂಚ್‌ಗೆ 10 ಸಾವಿರ ರೂ.ನಂತೆ 1 ಕಿ.ಮೀ.ಗೆ 60 ಸಾವಿರ ರೂ. ದರ ನಿಗದಿಪಡಿಸಲು ಗುರುವಾರ ನಡೆದ ನಗರಪಾಲಿಕೆ ಕೌನ್ಸಿಲ್ ಸಭೆ ಅನುಮೋದನೆ ನೀಡಿತು.
ಎಚ್‌ಡಿಡಿ ಮೂಲಕ ಕೇಬಲ್ ಅಳವಡಿಸಲು ನಗರಪಾಲಿಕೆಯಲ್ಲಿ ದರ ನಿಗದಿಯಾಗಿತ್ತು. ಆದರೆ, ಎಚ್‌ಡಿಡಿ ಮೂಲಕ ಯುಜಿ ಕೇಬಲ್ ಅಳವಡಿಸುವಾಗ ಪ್ರತಿ ಕಿ.ಮೀ.ಗೆ ಸುಮಾರು ೬ ಓಪನ್ ಟ್ರಂಚ್‌ಗಳನ್ನು ತೆಗೆಯಲಾಗುತ್ತಿದೆ. ಆದ್ದರಿಂದ ಪ್ರತಿ ಟ್ರಂಚ್‌ಗೆ ೧೦ ಸಾವಿರ ರೂ.ನಂತೆ ಪ್ರತಿ ಕಿ.ಮೀ.ಗೆ ೬೦ ಸಾವಿರ ರೂ. ದರ ನಿಗದಿಪಡಿಸಲು ತೀರ್ಮಾನಿಸಲಾಯಿತು.
ಕೇಬಲ್ ಅಳವಡಿಕೆ ಸಕ್ರಮಕ್ಕೆ ಜ.೧೫ರ ಗಡುವು: ನಗರದಲ್ಲಿ ಕೇಬಲ್ ಅಳವಡಿಕೆ ಸಂಬಂಧ ನಗರಪಾಲಿಕೆಯಿಂದ ಅನುಮತಿ ಪಡೆಯಲು ಜ.೧೫ರ ಗಡುವು ನೀಡಲಾಗಿದೆ. ಇಂದಿನಿಂದ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ತಿಂಗಳಲ್ಲಿ ಯು.ಜಿ.ಕೇಬಲ್ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾನೂನು ಅಭಿಪ್ರಾಯನಂತರ ಅನುಷ್ಠಾನ: ನಗರಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ನಗರಪಾಲಿಕೆಯಿಂದ ಪ್ರತಿ ಫ್ಲಾಟ್‌ಗಳಿಗೆ ಉಪ ನಂಬರ್ ಪಡೆದು ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸಲು ಸಾಧ್ಯವಾಗದ ಕಾರಣ ಕಾನೂನು ಅಭಿಪ್ರಾಯಪಡೆದು ಸ್ವತ್ತುಗಳಿಗೆ ಖಾತೆ ಮಾಡಿಕೊಡಲು ನಿರ್ಧರಿಸಲಾಯಿತು. .ಸಭೆಯಲ್ಲಿ ಉಪ ಮಹಾಪೌರ ಡಾ.ಜಿ. ರೂಪಾ,ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ ಹಾಜರಿದ್ದರು.

ನೀರಿನ ಶುಲ್ಕ ಏರಿಕೆಗೆ ಸರ್ವಾನುಮತದಿಂದ ಒಪ್ಪಿಗೆ
ನಾಲ್ಕು ಯೂನಿಟ್‌ಗಳು ಇರುವಂತಹ ಬಹುಮಹಡಿ ವಸತಿ ಸಮುಚ್ಛಯ ವಾಣಿಜ್ಯ, ಕೈಗಾರಿಕೆ ಕಟ್ಟಡಗಳಿಗೆ ಕುಡಿಯುವ ನೀರು ಸರಬರಾಜು ಬೇಡಿಕೆಯನ್ನು ಪೂರೈಸಲು ಮತ್ತು ಒಳಚರಂಡಿ ಸಂಪರ್ಕ ನೀಡಲು ಆಗುತ್ತಿರುವ ಹೊರೆಯನ್ನು ಪಾಲಿಕೆ ಭರಿಸುವುದು ಕಷ್ಟಕರವಾಗಿರುವ ಕಾರಣ ಆಯಾ ಕಟ್ಟಡಗಳ ಮಾಲೀಕರಿಂದ ಪ್ರತಿ ಯೂನಿಟ್‌ಗೆ ೫ ವ್ಯಕ್ತಿಗಳಂತೆ ಲೆಕ್ಕಚಾರ ಮಾಡಿ ಪ್ರೋರೇಟಾ ವೆಚ್ಚವನ್ನು ಹೆಚ್ಚಿಸಲು ತೀರ್ಮಾನಿಸಲಾಯಿತು.


ಕ್ಷೃಮೆಯಾಚನೆ ಪ್ರಹಸನ
ಮೈಸೂರು: ಕಳೆದ ಸಭೆಯಲ್ಲಿ ಮಾಜಿ ಮಹಾಪೌರ ಉಯೂಬ್‌ಖಾನ್ ಅವರು ನಿಮಗೆ ನಾಚಿಕೆ ಆಗಬೇಕು ಎಂದು ನೀಡಿದ್ದ ಹೇಳಿಕೆಗೆ ಕ್ಷೃಮೆ ಕೋರುವಂತೆ ಆಗ್ರಹಿಸಿ ಜಾ.ದಳ ಸದಸ್ಯರು ಗುರುವಾರದ ಸಭೆಯಲ್ಲಿ ಪಟ್ಟುಹಿಡಿದರು. ಅಲ್ಲದೆ ಎಂ.ಶ್ರೀನಿವಾಸ್ ಅವರು ಜಾ.ದಳ ಸದಸ್ಯರನ್ನು ಟೀಕಿಸಿದ್ದನ್ನು ಖಂಡಿಸಿದರು. ಈ ವೇಳೆ ಗದ್ದಲ ಉಂಟಾದ್ದರಿದ ಅರ್ಧ ಗಂಟೆ ಸಭೆ ಮುಂದೂಡಲಾಯಿತು.
ಸಭೆುಂ ಬಳಿಕ ಎಂ.ಶಿವಕುಮಾರ್ ಅವರು, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಬಳಸಿದ ಪದವನ್ನು ಹಿಂಪಡೆಯುವುದಾಗಿ ಹೇಳಿದರು. ಆದರೆ, ಉಯೂಬ್‌ಖಾನ್ ನಾನು ಅಸಂವಿಧಾನಿಕ ಪದ ಬಳಸಿಲ್ಲವಾದ್ದರಿಂದ ಕ್ಷಮೆ ಕೋರುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಧ್ಯಪ್ರವೇಶಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಎಸ್‌ಬಿಎಂ ಮಂಜು, ಕಾಂಗ್ರೆಸ್‌ನವರು ಬರೀ ಸುಳ್ಳು ಹೇಳುತ್ತಾರೆ ಎಂದು ಟೀಕಿಸುವ ಮೂಲಕ ಸೇಡು ತೀರಿಸಿಕೊಂಡರು. ಆಗ ಇಬ್ಬರು ಕ್ಷೃಮೆ ಕೋರದೆ ಸಭೆ ಮುಂದುವರಿಸಿದರು.

 

andolanait

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

5 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

7 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

8 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

10 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

11 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

12 hours ago