ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಮುಕ್ತ; ಅಪಘಾತ ತಡೆಗೆ ಕ್ರಮ
ಮೈಸೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಪೂರ್ಣವಾದ ಬಳಿಕ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸಂಚಾರ ನಿಷೇಧ ಜಾರಿಯಾಗಲಿದೆ. ಆದರೆ ಸರ್ವೀಸ್ ರಸ್ತೆಯಲ್ಲಿ ವಾಹನ ಚಲಾಯಿಸಬಹುದು.
ಮೈಸೂರಿನ ಕೆಆರ್‌ಎಸ್, ಬನ್ನೂರು ವರ್ತುಲ ರಸ್ತೆ ಜಂಕ್ಷನ್ (ಮಣಿಪಾಲ್ ಹಾಸ್ಪಿಟಲ್) ಸಿಗ್ನಲ್ ಬಳಿಯೇ ವಾಹನಗಳ ವರ್ಗೀಕರಣ ನಡೆಯಲಿದೆ.
ಈ ದಶಪಥ ಹೈವೇ ಜತೆಗಿರುವ ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಸಿಗಲಿದೆ. ಎಡ- ಬಲದಲ್ಲಿ ಒಟ್ಟು ನಾಲ್ಕು ಪಥದ ಸರ್ವೀಸ್ ರಸ್ತೆ ಇರಲಿದೆ. ಅಪಘಾತಗಳನ್ನು ತಡೆಯುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ.
ನಾಲ್ಕು ಚಕ್ರ ಹಾಗೂ ಮೇಲ್ಪಟ್ಟ ವಾಹನಗಳಿಗೆ ಮಾತ್ರ 6 ಪಥದ ಎಕ್ಸ್‌ಪ್ರೆಸ್ ಹೈವೇಗೆ ಪ್ರವೇಶ ಸಿಗಲಿದೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ನಿಗದಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ಹೋದರೆ ದಂಡ ಕಟ್ಟಬೇಕು. ಈ ನಿಯಮ ಆಗ್ರಾ-ದಿಲ್ಲಿ, ಮುಂಬಯಿ- ಪುಣೆ ಎಕ್ಸ್‌ಪ್ರೆಸ್ ಹೈವೇಗಳಲ್ಲಿ ಜಾರಿಯಾಗಿದೆ.
ಸ್ಥಳೀಯರ ವಿರೋಧ: ಬೆಂಗಳೂರು ಮೈಸೂರು ದಶಪಥದ ಹೆದ್ದಾರಿುಂಲ್ಲಿ ಬೈಕ್, ಆಟೋಗಳ ಓಡಾಟಕ್ಕೆ ಹೆದ್ದಾರಿ ಪ್ರಾಧಿಕಾರ ನಿರ್ಬಂಧ ವಿಧಿಸಿರುವುದಕ್ಕೆ ಸ್ಥಳೀಯರು ವಿರೋಧಿಸಿದ್ದಾರೆ. ಹೆದ್ದಾರಿಗಾಗಿ ನಾವು ಭೂಮಿ ಕಳೆದುಕೊಂಡಿದ್ದೇವೆ. ನಮ್ಮ ವಾಹನಗಳ ಓಡಾಡ ಬೇಡ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಆಟೋಗಳ ಚಾಲನೆಗೆ ಹೆದ್ದಾರಿಯ ಒಂದು ಬದಿಉಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಮೈಸೂರು: ಪಂಚ ಗ್ಯಾರಂಟಿಗಳನ್ನು ನೀಡಿದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಸಮೀಕ್ಷೆ ನಡೆಸಲು ತಜ್ಞರ ಸಮಿತಿ…
ಹಾಸನ: ಎಟಿಎಂಗೆ ಹಣ ಹಾಕದೇ ವಂಚನೆ ಮಾಡಿದ್ದ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಡಾವಣೆ ಪೊಲೀಸ್…
ಕಲಬುರ್ಗಿ: ಸಿಸಿಬಿಯಿಂದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಂಧನದ ಹಿಂದೆ ಸಿಎಂ ದೊಡ್ಡ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್…
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ದೇಶಗಳ ಆಮದುಗಳ ಮೇಲೆ ತಾತ್ಕಾಲಿಕವಾಗಿ 10% ಸುಂಕವನ್ನು ಘೋಷಿಸಿದ್ದಾರೆ. ಸುಪ್ರೀಂಕೋರ್ಟ್ ರದ್ದುಗೊಳಿಸಿದ…
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಬಿಸಿಲಿನ ಅಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ಬೆಂಗಳೂರು: ರಾಜ್ಯದಲ್ಲಿ ಒಣಹವೆ ಮುಂದುವರಿದಿದ್ದು, ಕೆಲವು ಭಾಗದಲ್ಲಿ ಇಂದು ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ…