ಜಿಲ್ಲೆಗಳು

ಟ್ರಿನಿಟಿ ಕಾಲೇಜು ವತಿಯಿಂದ ‘ರೈಡ್ ಫಾರ್ ಲೈಫ್’ ರ್ಯಾಲಿ

ಮೈಸೂರು: ರಸ್ತೆ ಅಪಘಾತ ಹಾಗೂ ಸುರಕ್ಷತಾ ಚಾಲನೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಟ್ರಿನಿಟಿ ಕಾಲೇಜು ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ರೈಡ್ ಫಾರ್ ಲೈಫ್’ ರ್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಭಾನುವಾರ ಬೆಳಿಗ್ಗೆ ನಗರದ ಅರಮನೆ ಮುಂಭಾಗವಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಆರಂಭಗೊಂಡ ರ್ಯಾಲಿಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಅವರಿಗೆ ಟ್ರಿನಿಟಿ ಸಂಸ್ಥೆಯ ಅಧ್ಯಕ್ಷ ಎಲೈಜರ್ ಮಿಲ್ಟನ್ ಸಾಥ್ ನೀಡಿದರು. ರೋಟರಿ ಮೈಸೂರು ಮಿಡ್‌ಟೌನ್, ‘ಆಂದೋಲನ’ ದಿನಪತ್ರಿಕೆ, ಸೈಕ್ಲಿಂಗ್ ಸೂರು ಟ್ರೈನಿಂಗ್ ಅಕಾಡೆಮಿ, ಮೋಟೋ ರೋಡ್ ಸಂಸ್ಥೆಗಳು ಸಹಭಾಗಿತ್ವ ವಹಿಸಿದ್ದವು.ಈ ವೇಳೆ ಮಾತನಾಡಿದ ಮರಿತಿಬ್ಬೇಗೌಡ ಅವರು, ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಇದು ಆತಂಕದ ವಿಚಾರ. ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಬಗ್ಗೆ ಯುವ ಜನತೆಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.
ಪೊಲೀಸ್ ಇಲಾಖೆ ಕೂಡ ಆಗಿಂದಾಗ್ಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಅದರ ಜೊತೆಗೆ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಚಾಲನೆ ಬಗ್ಗೆ ಶಾಲಾ, ಕಾಲೇಜು ಹಂತದಲ್ಲಿೆುೀಂ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಟ್ರಿನಿಟಿ ಕಾಲೇಜು ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಅರಮನೆ ಮುಂಭಾಗದಿಂದ ಆರಂಭವಾದ ರ್ಯಾಲಿ, ಹಾರ್ಡಿಂಜ್ ವೃತ್ತ, ಗನ್‌ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಮೆಟ್ರೋಪೂಲ್ ವೃತ್ತ, ಕಾಳಿದಾಸ ರಸ್ತೆ ಮೂಲಕ ಸಾಗಿ ಟ್ರಿನಿಟಿ ಕಾಲೇಜು ಆವರಣದಲ್ಲಿ ಅಂತ್ಯಗೊಂಡಿತು.
ರ್ಯಾಲಿಯಲ್ಲಿ ೨೦೦ ಮಂದಿ ಸೈಕ್ಲಿಸ್ಟ್, ೧೦೦ ಮಂದಿ ಸಾರ್ವಜನಿಕರು, ೨೦೦ಕ್ಕೂ ಹೆಚ್ಚು ಮಂದಿ ಟ್ರನಿಟಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಕಾಲೇಜಿನ ಉಪ ಪ್ರಾಂಶುಪಾಲ ಎಂ.ಪ್ರವೀಣ್‌ಕುಮಾರ್ ವಹಿಸಿದ್ದರು.

andolanait

Recent Posts

ಚಾಮರಾಜನಗರ| ಒಟ್ಟಿಗೆ ಕಾಣಿಸಿಕೊಂಡ ಐದು ಹುಲಿಗಳು: ಭಯಭೀತರಾದ ಗ್ರಾಮಸ್ಥರು

ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…

20 mins ago

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…

41 mins ago

ಅಸ್ಸಾಂನಲ್ಲಿ ಘೋರ ದುರಂತ: ರೈಲು ಡಿಕ್ಕಿಯಾಗಿ 7 ಆನೆಗಳು ಸಾವು

ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…

2 hours ago

ಬುರುಡೆ ಗ್ಯಾಂಗ್‌ನಲ್ಲಿ ಬಿರುಕು: ಏನಾಗಿದೆ ಗೊತ್ತಾ?

ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…

2 hours ago

ದ್ವೇಷ ಭಾಷಣ ಪ್ರತಿಬಂಧನ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…

2 hours ago

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

3 hours ago