ಜಿಲ್ಲೆಗಳು

ಬುದ್ದಿ ಹೇಳಿದ್ದಕ್ಕೆ ಮೂವರ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ

ಮೈಸೂರಿನಲ್ಲಿ ಮತ್ತೊಂದು ಅಮಾನುಷ ಘಟನೆ: ಮೂವರ ಸ್ಥಿತಿ ಗಂಭೀರ, ಚಾಲಕ ಬಂಧನ

ಮೈಸೂರು: ನಿಯಮಬಾಹಿರವಾಗಿ ಕಟ್ಟಡ ಕಟ್ಟುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ದ್ವೇಷ ಸಾಧಿಸಿ ಇ.ಡಿ. ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರನ್ನು ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ, ಬೇಕಾಬಿಟ್ಟಿ ಕಾರು ಚಾಲನೆ ಸಂಬಂಧ ಬುದ್ಧಿ ಹೇಳಿದ ಮೂವರ ಮೇಲೆ ಕಾರು ಹರಿಸಿ, ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ತಡರಾತ್ರಿ ನಗರದಲ್ಲಿ ನಡೆದಿದೆ.

ಪೋಷಕರು ಕಾರಿನಲ್ಲಿದ್ದಾಗಲೇ ಈ ಕೃತ್ಯ ಎಸಗಿದ ಟಿ.ಕೆ.ಲೇಔಟ್ ನಿವಾಸಿ ವಾಸುದೇವ್ ಎಂಬವರ ಮಗ ದರ್ಶನ್ (೨೪) ಎಂಬಾತನನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ಧಾರೆ. ಘಟನೆಯಲ್ಲಿ ಬೆಮೆಲ್ ಲೇಔಟ್ ನಿವಾಸಿ ಪ್ರಜ್ವಲ್(೨೪), ಶಾರದಾದೇವಿ ನಗರ ನಿವಾಸಿ ರಾಹುಲ್(೨೬), ಬೋಗಾದಿ ೨ನೇ ಹಂತದ ನಿವಾಸಿ ಆನಂದ್(೨೪) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.

ಘಟನೆಯ ವಿವರ: ಭಾನುವಾರ ರಾತ್ರಿ ಪ್ರಜ್ವಲ್ ಮತ್ತು ರಾಹುಲ್ ಎಂಬವರು ಟೀ ಕುಡಿಯುವ ಸಲುವಾಗಿ ಕಾರಿನಲ್ಲಿ ರೈಲ್ವೆ ನಿಲ್ದಾಣದ ಬಳಿ ಹೊರಟಿದ್ದರು. ಶಾರದಾದೇವಿ ನಗರದ ಸ್ಟೋನ್ ಬಿಲ್ಡಿಂಗ್ ಬಳಿಯಿಂದ ಜನತಾನಗರ ಟೆಂಟ್ ಸರ್ಕಲ್ ಕಡೆ ತೆರಳಿ ಅಲ್ಲಿಂದ ಸುಮಾರು ೧೨.೩೦ಕ್ಕೆ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿದಾಗ ಅದೇ ಮಾರ್ಗವಾಗಿ ಬಂದ ಅವರ ಸ್ನೇಹಿತ ಆನಂದ ಮತ್ತು ಅವನ ಸ್ನೇಹಿತರು ಕಾರಿನ ಬಳಿ ಬಂದು ಮಾತನಾಡಿಸುತ್ತಿದ್ದು, ಈ ವೇಳೆ ಫಾರ್ಚುನರ್ ಬಿಳಿ ಬಣ್ಣದ ಕಾರಿನಲ್ಲಿ ಎದುರಿನಿಂದ ಬಂದ ದರ್ಶನ್ ಅತೀ ವೇಗವಾಗಿ ಭಾರೀ ಶಬ್ಧ ಮಾಡುತ್ತಾ, ನಮ್ಮ ಕಾರಿಗೆ ತಾಕುವಂತೆ ಹತ್ತಿರ ಬಂದಿದ್ದಾನೆ. ಇವರುಗಳು ಹತ್ತಿರ ಹೋಗಿ ‘ಯಾಕೆ ಬ್ರೋ, ಏಕೆ ಹೀಗೆ ನಮ್ಮ ಮೇಲೆ ಕಾರು ಹತ್ತಿಸುವಂತೆ ಬಂದಿದ್ದೀಯಾ’ ಎಂದಾಗ ಡ್ರೈವರ್ ಸೀಟಿನಿಂದ ಎದ್ದು ಬಂದ ದರ್ಶನ್ ರಾಹುಲ್ ಮೇಲೆ ಹಲ್ಲೆ ಮಾಡಲು ಬಂದಿದ್ದು, ಆತನ ಕಾರಿನಿಂದ ಇಳಿದ ಅವರ ತಂದೆ-ತಾಯಿ ನಮ್ಮದೇ ತಪ್ಪಾಗಿದೆ ಕ್ಷಮಿಸಿ ಎಂದು ಎಲ್ಲರನ್ನೂ ಸಮಾಧಾನ ಮಾಡಿದ್ದು, ಬಳಿಕ ದರ್ಶನ ಮತ್ತು ತಂದೆ-ತಾಯಿ ಕಾರಿನ ಒಳಗೆ ಕುಳಿತಿದ್ದಾರೆ.

ಬಳಿಕ ಪ್ರಜ್ವಲ್, ರಾಹುಲ್, ಆನಂದ ಅವರು ತಮ್ಮ ಕಾರಿನ ಬಳಿಗೆ ಹೋಗುವಾಗ ದರ್ಶನ್ ಅವಾಚ್ಯವಾಗಿ ನಿಂದಿಸುತ್ತಾ, ಏಕಾಏಕಿ ಕಾರು ಚಾಲನೆ ಮಾಡಿಕೊಂಡು ಬಂದು ಅವರನ್ನು ಬೀಳಿಸಿ, ಅವರ ಮೇಲೆ ಹಿಂದೆ-ಮುಂದೆ ಕಾರು ಚಲಾಯಿಸಿದ್ದಾರೆ. ಇದರಿಂದಾಗಿ, ಪ್ರಜ್ವಲ್‌ನ ಎಡ ತೊಡೆ, ಎಡ ತಲೆ, ಎಡ ಕೆನ್ನೆ, ಹೊಟ್ಟೆ, ಬಲ ಭುಜದ ಭಾಗಗಳು, ರಾಹುಲ್ ಎಂಬುವರಿಗೆ ತಲೆ, ಬಲ ಭುಜ, ಎಡ ಕಾಲಿನ ಭಾಗಗಳು ಪೆಟ್ಟಾಗಿದ್ದು, ಆನಂದನಿಗೂ ಸಹ ತೀವ್ರ ಗಾಯವಾಗಿದೆ. ಮೂವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಗರದ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಡ್ಡಾಗಳ ಮೇಲೆ ಪೊಲೀಸರು ನಿಗಾ ವಹಿಸಲಿ

ನಗರದ ಹಲವೆಡೆ ರಾತ್ರಿ ೧೧ರ ನಂತರವೂ ಸಣ್ಣ ಚಹಾ, ಸಿಗರೇಟ್ ಅಂಗಡಿಗಳು ಕಾರ‌್ಯನಿರ್ವಹಿಸುತ್ತಿವೆ. ಇವುಗಳನ್ನು ವಿದ್ಯಾರ್ಥಿಗಳು, ಯುವ ಸಮೂಹ ಅಡ್ಡಾ ಮಾಡಿಕೊಂಡಿದ್ದು, ಆಗಾಗ ಗಲಾಟೆ ನಡೆಯುತ್ತಲೇ ಇದೆ. ಕೆಲವಷ್ಟು ಬೆಳಕಿಗೆ ಬಂದರೆ ಇನ್ನಷ್ಟು ಪೊಲೀಸರಿಗೆ ತಿಳಿಯುತ್ತದೆ. ಪೊಲೀಸ್ ಗಸ್ತು ಹೆಚ್ಚಿಸಿ ಇಂತಹ ಅಡ್ಡಾಗಳನ್ನು ನಿಯಂತ್ರಿಸಿ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎನ್ನುವುದು ನಾಗರೀಕರ ಸಲಹೆಯಾಗಿದೆ.

ಕಾರು ರಸ್ತೆಯಲ್ಲಿ ನಿಲ್ಲಿಸಿದ್ದರೆಂದು ಶುರುವಾದ ಜಗಳ ಈ ರೀತಿ ಆಗಿದೆ. ಇದರ ಹಿಂದೆ ಬೇರೆ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಆದರೂ ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನಡೆದಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ಧಾರೆ . -ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ.

ಮೂವರಿಗೂ ತೀವ್ರವಾಗಿ ಗಾಯಗಳಾಗಿವೆ. ರಾಹುಲ್ ಮತ್ತು ಆನಂದ್ ಇಬ್ಬರಿಗೂ ಸರ್ಜರಿಯಾಗಿ ಐಸಿಯುನಲ್ಲಿ ಇದ್ದಾರೆ. ಪ್ರಜ್ವಲ್‌ಗೆ ಹಾರ್ಟ್ ಬೀಟ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ, ಇನ್ನು ಸರ್ಜರಿಯಾಗಿಲ್ಲ. ಐಸಿಯುನಲ್ಲಿಯೇ ಇದ್ದಾರೆ. – ನಾಗರಾಜ್, (ಗಾಯಾಳು ಪ್ರಜ್ವಲ್ ತಂದೆ)

 

 

 

 

 

 

 

 

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

17 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

20 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

21 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

21 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

21 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

21 hours ago