ಮೈಸೂರಿನಲ್ಲಿ ಮತ್ತೊಂದು ಅಮಾನುಷ ಘಟನೆ: ಮೂವರ ಸ್ಥಿತಿ ಗಂಭೀರ, ಚಾಲಕ ಬಂಧನ
ಮೈಸೂರು: ನಿಯಮಬಾಹಿರವಾಗಿ ಕಟ್ಟಡ ಕಟ್ಟುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ದ್ವೇಷ ಸಾಧಿಸಿ ಇ.ಡಿ. ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರನ್ನು ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ, ಬೇಕಾಬಿಟ್ಟಿ ಕಾರು ಚಾಲನೆ ಸಂಬಂಧ ಬುದ್ಧಿ ಹೇಳಿದ ಮೂವರ ಮೇಲೆ ಕಾರು ಹರಿಸಿ, ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ತಡರಾತ್ರಿ ನಗರದಲ್ಲಿ ನಡೆದಿದೆ.
ಪೋಷಕರು ಕಾರಿನಲ್ಲಿದ್ದಾಗಲೇ ಈ ಕೃತ್ಯ ಎಸಗಿದ ಟಿ.ಕೆ.ಲೇಔಟ್ ನಿವಾಸಿ ವಾಸುದೇವ್ ಎಂಬವರ ಮಗ ದರ್ಶನ್ (೨೪) ಎಂಬಾತನನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ಧಾರೆ. ಘಟನೆಯಲ್ಲಿ ಬೆಮೆಲ್ ಲೇಔಟ್ ನಿವಾಸಿ ಪ್ರಜ್ವಲ್(೨೪), ಶಾರದಾದೇವಿ ನಗರ ನಿವಾಸಿ ರಾಹುಲ್(೨೬), ಬೋಗಾದಿ ೨ನೇ ಹಂತದ ನಿವಾಸಿ ಆನಂದ್(೨೪) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ: ಭಾನುವಾರ ರಾತ್ರಿ ಪ್ರಜ್ವಲ್ ಮತ್ತು ರಾಹುಲ್ ಎಂಬವರು ಟೀ ಕುಡಿಯುವ ಸಲುವಾಗಿ ಕಾರಿನಲ್ಲಿ ರೈಲ್ವೆ ನಿಲ್ದಾಣದ ಬಳಿ ಹೊರಟಿದ್ದರು. ಶಾರದಾದೇವಿ ನಗರದ ಸ್ಟೋನ್ ಬಿಲ್ಡಿಂಗ್ ಬಳಿಯಿಂದ ಜನತಾನಗರ ಟೆಂಟ್ ಸರ್ಕಲ್ ಕಡೆ ತೆರಳಿ ಅಲ್ಲಿಂದ ಸುಮಾರು ೧೨.೩೦ಕ್ಕೆ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿದಾಗ ಅದೇ ಮಾರ್ಗವಾಗಿ ಬಂದ ಅವರ ಸ್ನೇಹಿತ ಆನಂದ ಮತ್ತು ಅವನ ಸ್ನೇಹಿತರು ಕಾರಿನ ಬಳಿ ಬಂದು ಮಾತನಾಡಿಸುತ್ತಿದ್ದು, ಈ ವೇಳೆ ಫಾರ್ಚುನರ್ ಬಿಳಿ ಬಣ್ಣದ ಕಾರಿನಲ್ಲಿ ಎದುರಿನಿಂದ ಬಂದ ದರ್ಶನ್ ಅತೀ ವೇಗವಾಗಿ ಭಾರೀ ಶಬ್ಧ ಮಾಡುತ್ತಾ, ನಮ್ಮ ಕಾರಿಗೆ ತಾಕುವಂತೆ ಹತ್ತಿರ ಬಂದಿದ್ದಾನೆ. ಇವರುಗಳು ಹತ್ತಿರ ಹೋಗಿ ‘ಯಾಕೆ ಬ್ರೋ, ಏಕೆ ಹೀಗೆ ನಮ್ಮ ಮೇಲೆ ಕಾರು ಹತ್ತಿಸುವಂತೆ ಬಂದಿದ್ದೀಯಾ’ ಎಂದಾಗ ಡ್ರೈವರ್ ಸೀಟಿನಿಂದ ಎದ್ದು ಬಂದ ದರ್ಶನ್ ರಾಹುಲ್ ಮೇಲೆ ಹಲ್ಲೆ ಮಾಡಲು ಬಂದಿದ್ದು, ಆತನ ಕಾರಿನಿಂದ ಇಳಿದ ಅವರ ತಂದೆ-ತಾಯಿ ನಮ್ಮದೇ ತಪ್ಪಾಗಿದೆ ಕ್ಷಮಿಸಿ ಎಂದು ಎಲ್ಲರನ್ನೂ ಸಮಾಧಾನ ಮಾಡಿದ್ದು, ಬಳಿಕ ದರ್ಶನ ಮತ್ತು ತಂದೆ-ತಾಯಿ ಕಾರಿನ ಒಳಗೆ ಕುಳಿತಿದ್ದಾರೆ.
ಬಳಿಕ ಪ್ರಜ್ವಲ್, ರಾಹುಲ್, ಆನಂದ ಅವರು ತಮ್ಮ ಕಾರಿನ ಬಳಿಗೆ ಹೋಗುವಾಗ ದರ್ಶನ್ ಅವಾಚ್ಯವಾಗಿ ನಿಂದಿಸುತ್ತಾ, ಏಕಾಏಕಿ ಕಾರು ಚಾಲನೆ ಮಾಡಿಕೊಂಡು ಬಂದು ಅವರನ್ನು ಬೀಳಿಸಿ, ಅವರ ಮೇಲೆ ಹಿಂದೆ-ಮುಂದೆ ಕಾರು ಚಲಾಯಿಸಿದ್ದಾರೆ. ಇದರಿಂದಾಗಿ, ಪ್ರಜ್ವಲ್‌ನ ಎಡ ತೊಡೆ, ಎಡ ತಲೆ, ಎಡ ಕೆನ್ನೆ, ಹೊಟ್ಟೆ, ಬಲ ಭುಜದ ಭಾಗಗಳು, ರಾಹುಲ್ ಎಂಬುವರಿಗೆ ತಲೆ, ಬಲ ಭುಜ, ಎಡ ಕಾಲಿನ ಭಾಗಗಳು ಪೆಟ್ಟಾಗಿದ್ದು, ಆನಂದನಿಗೂ ಸಹ ತೀವ್ರ ಗಾಯವಾಗಿದೆ. ಮೂವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಗರದ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಡ್ಡಾಗಳ ಮೇಲೆ ಪೊಲೀಸರು ನಿಗಾ ವಹಿಸಲಿ
ನಗರದ ಹಲವೆಡೆ ರಾತ್ರಿ ೧೧ರ ನಂತರವೂ ಸಣ್ಣ ಚಹಾ, ಸಿಗರೇಟ್ ಅಂಗಡಿಗಳು ಕಾರ‌್ಯನಿರ್ವಹಿಸುತ್ತಿವೆ. ಇವುಗಳನ್ನು ವಿದ್ಯಾರ್ಥಿಗಳು, ಯುವ ಸಮೂಹ ಅಡ್ಡಾ ಮಾಡಿಕೊಂಡಿದ್ದು, ಆಗಾಗ ಗಲಾಟೆ ನಡೆಯುತ್ತಲೇ ಇದೆ. ಕೆಲವಷ್ಟು ಬೆಳಕಿಗೆ ಬಂದರೆ ಇನ್ನಷ್ಟು ಪೊಲೀಸರಿಗೆ ತಿಳಿಯುತ್ತದೆ. ಪೊಲೀಸ್ ಗಸ್ತು ಹೆಚ್ಚಿಸಿ ಇಂತಹ ಅಡ್ಡಾಗಳನ್ನು ನಿಯಂತ್ರಿಸಿ ಈ ರೀತಿಯ ಘಟನೆಗಳು ನಡೆಯುವುದಿಲ್ಲ ಎನ್ನುವುದು ನಾಗರೀಕರ ಸಲಹೆಯಾಗಿದೆ.
ಕಾರು ರಸ್ತೆಯಲ್ಲಿ ನಿಲ್ಲಿಸಿದ್ದರೆಂದು ಶುರುವಾದ ಜಗಳ ಈ ರೀತಿ ಆಗಿದೆ. ಇದರ ಹಿಂದೆ ಬೇರೆ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಆದರೂ ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನಡೆದಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ಧಾರೆ . -ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ.
ಮೂವರಿಗೂ ತೀವ್ರವಾಗಿ ಗಾಯಗಳಾಗಿವೆ. ರಾಹುಲ್ ಮತ್ತು ಆನಂದ್ ಇಬ್ಬರಿಗೂ ಸರ್ಜರಿಯಾಗಿ ಐಸಿಯುನಲ್ಲಿ ಇದ್ದಾರೆ. ಪ್ರಜ್ವಲ್‌ಗೆ ಹಾರ್ಟ್ ಬೀಟ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ, ಇನ್ನು ಸರ್ಜರಿಯಾಗಿಲ್ಲ. ಐಸಿಯುನಲ್ಲಿಯೇ ಇದ್ದಾರೆ. – ನಾಗರಾಜ್, (ಗಾಯಾಳು ಪ್ರಜ್ವಲ್ ತಂದೆ)
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…