ಮೈಸೂರು: ಹುತಾತ್ಮ ಟಿಪ್ಪು ಸುಲ್ತಾನರ ವ್ಯಕ್ತಿತ್ವದ ಬಗ್ಗೆ ಕಾಲ್ಪನಿಕವಾಗಿ ಊಹಿಸಿ ದ್ವೇಷಭರಿತವಾದ ಪುಸ್ತಕ ಮತ್ತು ನಾಟಕ ಮುಟ್ಟುಗೋಲು ಹಾಕಿಕೊಂಡು ಪ್ರದರ್ಶನವನ್ನು ತಡೆಹಿಡಿಬೇಕು ಎಂದು ಫೆಡರೇಷನ್ ಆಫ್ ಮೈಸೂರು ಮುಸ್ಲಿಂ ಆರ್ಗನೈಜೇಷನ್ಸ್ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರಿಗೆ ಮನವಿ ಸಲ್ಲಿಸಿದೆ.
ನಗರದ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರ್ಗನೈಜೇಷನ್ಸ್ ಮತ್ತು ಪ್ರಗತಿಪರರ ಸಂಘಟನೆಯ ಮುಖಂಡರು ಸಭೆ ನಡೆಸಿ ನಾಟಕದ ಪ್ರದರ್ಶನವನ್ನು ನಿಷೇಧಿಸುವಂತೆ ಮನವಿ ಮಾಡಿದರು.
ಪಕ್ಷಾತೀತವಾಗಿ ಧರ್ಮಾತೀತವಾಗಿ ಎಲ್ಲಾ ಜಾತಿ – ಮತಗಳ ಜನರನ್ನು ಈ ಸಾಂಸ್ಕ ತಿಕ ವೇದಿಕೆಯಿಂದ ಸೌಹಾರ್ದತೆ, ಜಾತ್ಯತೀತತೆ ಮತ್ತು ಮಾನವೀಂತೆಂನ್ನು ಬೆಳೆಸುವ ಉzಶದಿಂದ ರಂಗಾಂಣವನ್ನು ಸ್ಥಾಪಿಸಿ ಇಲ್ಲಿಂದ ಜನರಿಗೆ ಈ ಎಲ್ಲಾ ಉzಶಗಳು ತಲುಪುವಂತೆ ಮಾಡಬೇಕಾದ ವೇದಿಕೆಂಗಿದೆ. ಆದರೆ ಈಗಿನ ನಿರ್ದೇಶಕರು ಜನರನ್ನು ಜಾತಿಂ ಆಧಾರದ ಮೇಲೆ ವಿಭಜಿಸಲು ಪರಸ್ಪರ ಸಮುದಾಂಗಳ ನಡುವೆ ದ್ವೇಷ – ವೈಮನಸ್ಸು ಮತ್ತು ತಮ್ಮ ಸ್ವಾರ್ಥ ತತ್ವ ಸಿದ್ಧಾಂತಗಳನ್ನು ಹೇರಲು ಈ ವೇದಿಕೆ ಬಳಸುತ್ತಿರುವುದು ಖಂಡನೀಂ.
ಅನೇಕ ವಿವಾದಗಳಲ್ಲೇ ಇರುವ ಈ ನಿರ್ದೇಶಕರು ಈಗ ತಮ್ಮದೇ ಆದ ಲೇಖನವೆಂದು ಹೇಳಿ ‘ಟಿಪ್ತ್ಯ್ಪುವಿನ ನಿಜ ಕನಸುಗಳು‘ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನಾಟಕವಿದ್ದು ಆ ನಾಟಕವನ್ನು ನ.೨೦ ರಿಂದ ರಂಗಾಂಣದಲ್ಲೇ ಪ್ರದರ್ಶಿಸುತ್ತಿದ್ದು, ಜಾತ್ಯತೀತ ಮನೋಭಾವವುಳ್ಳ ಸ್ವಾತಂತ್ರ್ಯ ಹೋರಾಟಗಾರ, ಚರಿತ್ರೆಂಲ್ಲಿ ಉಲ್ಲೇಖಿತವಾದ ವ್ಯಕ್ತಿ ಟಿಪ್ತ್ಯ್ಪು ಸುಲ್ತಾನ ಅವರ ಬಗ್ಗೆ ಮತಾಂಧ, ಧರ್ಮ ಪರಿವರ್ತನೆ ಮಾಡಿದ ಎಂಬ ಸುಳ್ಳನ್ನು ಹೇಳಲಾಗಿದೆ.
ಚರಿತ್ರೆಂಲ್ಲಿ ಮಠಮಾನ್ಯ ಮತ್ತು ದೇವಾಲಂಗಳನ್ನು ಜೀರ್ಣೋದ್ಧಾರ ಮಾಡಿದರು ಎಂದಿದ್ದರೆ ಅದರ ವಿರುದ್ಧವಾಗಿ ದೇವಾಲಂಗಳನ್ನು ಹೊಡೆದು ಮಸೀದಿ ಕಟ್ಟಿದ ಎಂಬ ಹಸಿ ಸುಳ್ಳುಗಳನ್ನು ಬರೆದಿದ್ದಾರೆ. ಚರಿತ್ರೆಂಲ್ಲಿ ಂದ್ಧ ರಂಗದಲ್ಲಿ ಮಡಿದದ್ದು ಅದು ವಿರೋಧಿಗಳ ಬಂದೂಕಿನಿಂದ ಎಂದಿದ್ದರೆ ಇವರು ಒಕ್ಕಲಿಗ ಸಮುದಾಂದವರು ಹೊಡೆದರೆಂದು ಅವರ ಹೆಸರುಗಳನ್ನು ಗೌಡ ಎಂದು ನಾಮವಿರುವುದು ಪ್ರಸ್ತಾಪಿಸಿ ಜನರ ಮಧ್ಯೆ ಘರ್ಷಣೆ, ಗಲಭೆ ಮತ್ತು ಅಶಾಂತಿ ಉಂಟಾಗಬೇಕೆನ್ನುವ ಎಲ್ಲಾ ತರದ ಪ್ರಂತ್ನ ಈ ಪುಸ್ತಕದ್ದಾಗಿದೆ. ಹೀಗಾಗಿ ಈ ಪುಸ್ತಕ ಮತ್ತು ನಾಟಕವನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು, ನಾಟಕವನ್ನು ತಡೆಹಿಡಿಂಬೇಕು ಎಂದು ಫೆಡರೇಷನ್‌ನ ಪದಾಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದರು.
ಮೌಲನ್ ಆಶ್ರದ್, ಮಾಜಿ ಮಹಾಪೌರ ಅಯೂಬ್ ಖಾನ್, ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ದಲಿತ ವೆಲ್ತ್‌ಫೇರ್ ಟ್ರಸ್ಟ್‌ನ ಶಾಂತರಾಜು, ಆರ್ಗನೈಜೇಷನ್‌ನ ಎಂ.ಎಫ್.ಕಲೀಮ್, ಖವಾಜ ಅಜ್ಹೀಮ್, ಅಜೀಜ್ ಉಲ್ಲಾ, ಮಕ್ಸೂದ್ ಮುಂತಾದವರು ಹಾಜರಿದ್ದರು.
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…
ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…
ಗುಂಡ್ಲುಪೇಟೆ: ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಕಾಣಿಸಿಕೊಂಡಿ ಕಾಡುಬೆಕ್ಕನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ತಾಲ್ಲೂಕಿನ ಬರಗಿ ಗ್ರಾಮದಲ್ಲಿ…
ಗುಂಡ್ಲುಪೇಟೆ: ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲ್ಲೂಕಿನ ಬೆಟ್ಟದಮಾದಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಂಕರ್ ಎಂಬುವವರು ತಮಗೆ ಸೇರಿದ…
ಬೆಂಗಳೂರು: ಹೊಸ ವರ್ಷಾಚರಣೆ ನಡುವೆಯೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಚಿತ್ರದುರ್ಗ: ಚಿತ್ರದುರ್ಗ ಬಸ್ ದುರಂತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೇ ಏರಿಕೆಯಾಗಿದೆ. ಮೃತರನ್ನು…