ಗುಂಡ್ಲುಪೇಟೆ: ಬಂಡೀಪುರ ಹುಲಿಯೋಜನೆ, ಗುಂಡ್ಲುಪೇಟೆ ಉಪ ವಿಭಾಗ, ಮದ್ದೂರು ವಲಯ ವ್ಯಾಪ್ತಿಯ ಮದ್ದೂರು ಗಸ್ತು, ಸೀಗನಬೆಟ್ಟ ಸರ್ಕಲ್ ರಸ್ತೆ ಬಳಿ ಸಿಬ್ಬಂದಿಗಳು ಗಸ್ತು ನಡೆಸುತಿದ್ದ ಸಮಯ ಹುಲಿ ಕಳೆಬರ ಪತ್ತೆಯಾಗಿದೆ.
ಸಿಬ್ಬಂಧಿಗಳು ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಹುಲಿ ಮೃತಪಟ್ಟಿರುವುದನ್ನು ಗಮನಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಡಾ. ಪಿ ರಮೇಶ್‌ಕುಮಾರ್,ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಜಿ. ರವೀಂದ್ರ, ಮದ್ದೂರು ವಲಯದ ವಲಯ ಅರಣ್ಯಾಧಿಕಾರಿ ಶ್ರೀ ಬಿ.ಎಂ ಮಲ್ಲೇಶ್, ಇಲಾಖಾ ಪಶುವೈಧ್ಯಾಧಿಕಾರಿ ಡಾ. ಮಿರ್ಜಾ ವಾಸೀಂ ಹಾಗೂ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮೃತ ಹುಲಿಯು 3 ರಿಂದ 4 ವರ್ಷ ವರ್ಷ ಪ್ರಾಯದ ಗಂಡು ಹುಲಿಯಾಗಿದ್ದು, ಕಾಡಿನೊಳಗೆ ಮತ್ತೊಂದು ಹುಲಿಯ ಜೊತೆ ಕಾದಾಟ ನಡೆಸುವಾಗ ದೇಹಕ್ಕೆ ಬಲವಾದ ಪೆಟ್ಟುಬಿದ್ದಿರುವುದು ಕಂಡುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಹುಲಿಯ ಹೊಟ್ಟೆಯಒಳಭಾಗದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಕಂಡುಬಂದಿದ್ದು ಹೊಟ್ಟೆಯ ಒಳ ಭಾಗದಲ್ಲಿ ಮುಳ್ಳುಗಳು ಚುಚ್ಚಿ ರಕ್ತ ಸ್ರಾವವಾಗಿ ಹುಲಿಯು ಮೃತಪಟ್ಟಿರುತ್ತದೆ ಎಂದು ಇಲಾಖಾ ಪಶುವೈಧ್ಯಾಧಿಕಾರಿ ತಿಳಿಸಿದ್ದಾರೆ.
ಬಂಡೀಪುರ ಹುಲಿಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ. ಪಿ ರಮೇಶ್‌ಕುಮಾರ್,ಮಾರ್ಗದರ್ಶನದಂತೆ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯಾ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾನುಸಾರ ಸುಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, ಡಾ.ರಮೇಶ್‌ಕುಮಾರ್ ಪಿ, , ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಬಂಡೀಪುರ ಹುಲಿಯೋಜನೆ, ರವೀಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಗುಂಡ್ಲುಪೇಟೆ ಉಪ ವಿಭಾಗ, ಶ್ರೀ ಬಿ.ಎಂ ಮಲ್ಲೇಶ್, ವಲಯ ಅರಣ್ಯಾಧಿಕಾರಿ, ಮದ್ದೂರು ವಲಯ, ಡಾ. ಮಿರ್ಜಾ ವಾಸೀಂ, ಇಲಾಖಾ ಪಶುವೈಧ್ಯಾಧಿಕಾರಿಗಳು, ಕೃತಿಕಾ ಆಲನಹಳ್ಳಿ, ಎನ್.ಟಿ.ಸಿ.ಎ ಪ್ರತಿನಿಧಿ, ಶ್ರೀ ರಘುರಾಂ, ಎನ್.ಜಿ.ಓ, ಹಿಮಗಿರಿ ವನ್ಯಜೀವಿ ಸಂರಕ್ಷಣಾ ಸಂಸ್ಥೆ, ಗುಂಡ್ಲುಪೇಟೆ, ಶ್ರೀ ರವಿ ಸಂಗೂರ್, ಉಪ ವಲಯ ಅರಣ್ಯಾಧಿಕಾರಿ, ಶ್ರೀ ಸಂಜಯ್ ಹಾಗೂ ಶ್ರೀ ನವೀನ್, ಗಸ್ತು ವನಪಾಲಕರು ಹಾಗೂ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…