ಹನೂರು: ತಾಲೂಕಿನ ಒಡೆಯರಪಾಳ್ಯ ಟಿಬಿಟಿಯನ್ ಕ್ಯಾಂಪ್ ಟಿಬೆಟಿಯನ್ ಪ್ರಜೆಗಳು
ಈ ನಾಡು ಕಂಡ ಅಪರೂಪದ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
ಈ ಮೂಲಕ ಶ್ರೇಷ್ಠ ನಟನಿಗೆ ಯಾವುದೇ ಜಾತಿ ಧರ್ಮ ಭಾಷೆಯ ಹಂಗಿಲ್ಲ ಎಂಬುದನ್ನು ಇಲ್ಲಿನ ಟಿಬೆಟಿಯನ್ ಪ್ರಜೆಗಳು ತೋರಿಸಿಕೊಟ್ಟಿದ್ದಾರೆ.
ಪುನೀತ್ ರಾಜಕುಮಾರ್ ಅವರ ಪ್ರಸಿದ್ಧ ಗೀತೆಗಳಲ್ಲೊಂದಾದ ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ’ ಎಂಬ ಹಾಡನ್ನು ತಮ್ಮ ಸುಮಧುರ ಕಂಠದ ಮೂಲಕ ಮನಮೋಹಕವಾಗಿ ಹಾಡಿದ್ದಾರೆ.
ಟಿಬೆಟಿಯನ್ನರ ಸಾಂಪ್ರದಾಯಿಕ ಉಡುಗೆ ತೊಡೆಗೆ ಜೊತೆಗೆ ಕನ್ನಡದ ಶಾಲನ್ನು ಹಾಕಿಕೊಂಡು ಈ ನಾಡು ನುಡಿ ಜಲ ಹಾಗೂ ನಟನಿಗೆ ಗೌರವ ಸಲ್ಲಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಅಪ್ಪು ನೆನೆದು ಕಣ್ಣೀರಿಟ್ಟ ಮಕ್ಕಳು : ಪುನೀತ್ ರಾಜಕುಮಾರ್ ಅವರ ಹಾಡುಗಳನ್ನು ಹೇಳುತ್ತಿದ್ದಂತೆ ಅಲ್ಲಿನ ಮಕ್ಕಳು ಪುನೀತ್ ರಾಜ್ ಅವರನ್ನು ನೆನೆದು ಬಾವುಕರಾಗಿ ಕಣ್ಣೀರಿಟ್ಟದ್ದು ಕಂಡು ಬಂದಿತು. ಪುನೀತ್ ರಾಜಕುಮಾರ್ ಸೇರಿದಂತೆ ಕನ್ನಡ ಚಲನಚಿತ್ರ ಗೀತೆಗಳನ್ನು ಸುಮಧುರ ಗೀತೆಗಳನ್ನು ಹಾಡಿದ್ದು ವಿಶೇಷವಾಗಿತ್ತು.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…