ಮೈಸೂರು: ಗುರುಗಳು ಕೋಲು ತರಲು ಹೇಳುತ್ತಿದ್ದರು. ಯಾರಿಗೋ ಹೊಡೆಯಲು ಬೇಕೆಂದು ಕೇಳುತ್ತಿದ್ದರು. ಅದು ನಾನೇ ಆಗಿದ್ದೆ. ನಾನೇ ಕೋಲು ಕೊಟ್ಟು ಹೊಡೆಸಿಕೊಳ್ಳುತ್ತಿದ್ದ ಭಾಗ್ಯ ನನ್ನದಾಗಿತ್ತು..
ಹೀಗೆಂದು ತಮ್ಮ ನಾಟಕ ಕಲಿಕೆಯ ದಿನಗಳನ್ನು ಸ್ಮರಿಸಿದ ಹಿರಿಯ ನಟ ದೊಡ್ಡಣ್ಣ ಅವರು, ಅಂದು ಗುರುಗಳು ಕಲಿಸಿದ ಭಾಷೆ ಮತ್ತು ನಟನೆಯ ಆರಂಭಿಕ ಕಲಿಕೆ ಇಂದು ತಮ್ಮನ್ನು ರೂಪಿಸಿವೆ ಎಂದು ನೆನಪುಗಳನ್ನು ಮೆಲುಕು ಹಾಕಿದರು.
ರಂಗಾಯಣದ ಭೂಮಿಗೀತದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಗಂಧದಗುಡಿ ಚಿತ್ರದ ಪ್ರದರ್ಶನದ ಮೂಲಕ ಬಹುರೂಪಿ ಚಲನಚಿತ್ರೋತ್ಸವಕ್ಕೆ ಶುಕ್ರವಾರ ಅವರು ಚಾಲನೆ ನೀಡಿ ಮಾತನಾಡಿದರು.
ಮಾತಿನ ಮಧ್ಯೆ ಪೌರಾಣಿಕ ನಾಟಕಗಳ ಡೈಲಾಗ್‌ಗಳನ್ನು ಹೊಡೆಯುತ್ತಾ, ಹಾಸ್ಯಮಯವಾಗಿ ಮಾತಾಡುತ್ತಾ ನೆರೆದಿದ್ದವರನ್ನು ತನ್ನತ್ತ ಸೆಳೆದು ನಗಿಸಿ-ನಲಿಸಿದ ದೊಡ್ಡಣ್ಣ ತಾವು ರಂಗಭೂಮಿಯಲ್ಲಿ ಬೆಳೆದ ಬಗೆಯನ್ನು ವಿವರಿಸಿದರು.
ಪ್ರತಿ ಜಿಲ್ಲೆಯಲ್ಲಿಯೂ ರಂಗಾಯಣದಂತಹ ಸಂಸ್ಥೆಗಳು ಆಗಬೇಕು. ಇದಕ್ಕೆ ಜಾಗ ಸೇರಿದಂತೆ ಅಗತ್ಯ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ನಟನಿಗೆ ವೀಕ್ಷಕರ ಹೃದಯ ತಟ್ಟುವ ಗುಣವಿರಬೇಕು. ನಾಟಕದಲ್ಲಿ ಸಾಧನೆ ಮಾಡಿದವರು ಎಲ್ಲಿ ಹೋದರೂ ಬದುಕುತ್ತಾರೆ ಎಂದು ದೊಡ್ಡಣ್ಣ ಹೇಳಿದರು.
ಭಾರತೀಯ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಅವರಿಗೆ ಸಿಕ್ಕಷ್ಟು ಮತ್ತು ಒಪ್ಪುವಷ್ಟು ವೈವಿಧ್ಯಮಯ ಪಾತ್ರಗಳು ಬೇರೆ ಯಾರಿಗೂ ಸಲ್ಲಲಿಲ್ಲ. ಹಾಗಾಗಿಯೇ ಭಾರತದ ಎಲ್ಲ ಚಿತ್ರರಂಗದವರ ಗೌರವಕ್ಕೆ ಅವರು ಪ್ರೀತಿಗೆ ಪಾತ್ರರಾದರು. ಈ ನಮ್ಮ ಮಣ್ಣಿನಲ್ಲಿ ಧಮ್ ಇದೆ, ತ್ಯಾಗದ ಗುಣವಿದೆ. ಈ ಮಣ್ಣಿನಲ್ಲಿ ಇದ್ದರು ಎನ್ನಲಾದ ರಾಕ್ಷಸರಿಗೂ ತ್ಯಾಗದ ಗುಣವಿತ್ತು ಎಂದು ರಾವಣನನ್ನು ಉದಾಹರಿಸಿ ಹೇಳಿದರು. ಇಂತಹ ಮಣ್ಣಿನಲ್ಲಿ ಹುಟ್ಟಿರುವ ನಾವೆಲ್ಲರೂ ಶುದ್ಧ ಭಾರತೀಯರು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಆರೋಗ್ಯವಾಗಿರಬೇಕು ಎಂದರೆ ದೇಹಕ್ಕೆ ಕೆಲಸ ಎಷ್ಟು ಮುಖ್ಯವೋ, ಜ್ಞಾನ ಹೆಚ್ಚಾಗಬೇಕು ಎಂದರೆ ತಲೆಗೆ ಕೆಲಸ ಕೊಡಬೇಕು. ಹಾಗಾಗಿ, ಎಲ್ಲರೂ ಹೆಚ್ಚು ಹೆಚ್ಚು ಓದಬೇಕು. ಕನ್ನಡ ಭಾಷೆಯಲ್ಲಿ ಪ್ರತಿ ಪದಕ್ಕೂ 30ಕ್ಕೂ ಹೆಚ್ಚು ಪಾರಿಭಾಷಿಕ ಪದಗಳು ಸಿಗುತ್ತವೆ. ನಮ್ಮ ಭಾಷೆ ಸಮೃದ್ಧವಾಗಿದೆ. ಹಾಗಾಗಿ, ಕೇವಲ ಇಂಗ್ಲಿಷ್‌ಗೆ ಮಾತ್ರ ಆದ್ಯತೆ ನೀಡಬೇಡಿ. ತಮ್ಮ ಮಕ್ಕಳಿಗೆ ಕನ್ನಡವನ್ನೂ ಕಲಿಸಿ. ತಮ್ಮ ಮಕ್ಕಳಿಗೆ ಕನ್ನಡ ಸಾಹಿತ್ಯ-ಕಲೆಯ ಬಗ್ಗೆ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಂಚಾಲಕರಾದ ಕೆ.ಮನು, ಬಿ.ಎನ್.ಶಶಿಕಲಾ ಹಾಜರಿದ್ದರು.
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…
ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…
ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…
ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…
ಪಂಜುಗಂಗೊಳ್ಳಿ ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ…
ಪುನೀತ್ ಮಡಿಕೇರಿ ಹೊಸ ವರ್ಷಾಚರಣೆಗೆ ಕೊಡಗಿನತ್ತ ಮುಖ ಮಾಡಿದ ಜನರು; ಜಿಲ್ಲೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ ಮಡಿಕೇರಿ: ಹೊಸ ವರ್ಷವನ್ನು…