ಮೈಸೂರು: ಮುಂದಿನ ವರ್ಷ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬವನ್ನು ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್ ತಿಳಿಸಿದರು.
ರಂಗಾಯಣದ ಈ ರಂಗೋತ್ಸವ ಕಾರ್ಯಕ್ರಮದಲ್ಲಿ ಸಿನಿಮಾಗೂ ಆದ್ಯತೆ ನೀಡುವ ಮೂಲಕ ಸಿನಿಮಾ ಕಲೆ, ಜ್ಞಾನವನ್ನು ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರೇ ಅದಕ್ಕೆ ಒಂದು ಸಂಸ್ಥೆ ಇರಬೇಕು. ಕಲೆಯನ್ನು ಕಲಿಸುವ ಮತ್ತು ಬೆಳೆಸುವ ಕೆಲಸವನ್ನು ಈ ರಂಗಾಯಣ ಮಾಡುತ್ತಿದೆ. ನನಗೂ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ ಆಚರಿಸುವ ಮನಸ್ಸಿದ್ದು, ಇದನ್ನು ಸರ್ಕಾರದ ಮುಂದಿಡುವೆ ಎಂದರು.
ಪ್ರಕೃತಿ ಪ್ರಿಯವಾಗಲಿ: ಪ್ರಕೃತಿ ನನಗೆ ಬದುಕಿನ ಭರವಸೆ ನೀಡಿದೆ.ಅವರ ಮುಂದೆ ನಾವೆಲ್ಲ ಸಣ್ಣವರು. ನನಗೆ ಕ್ಯಾನ್ಸರ್ ಇತ್ತು. ವೈದ್ಯರು ಎರಡು ವರ್ಷ ಇರುತ್ತೀರಾ. ಪ್ರಕೃತಿ ಮಡಿಲಿನಲ್ಲಿ ಸಮಯ ಕಳೆಯಿರಿ ಎಂದರು. ನಾನು ತೀರ್ಥಹಳ್ಳಿ ಕಡೆ ಹೋಗಿ ಮನೆ ಮಾಡಿದೆ. ಈಗ ಹದಿನೇಳು ವರ್ಷ ಬದುಕಿದ್ದೀನಿ. ಪ್ರಕೃತಿ, ಹಸಿರನ್ನು ಎಲ್ಲರೂ ಅಪ್ಪಿಕೊಳ್ಳಬೇಕು, ಅದನ್ನು ಕಾಪಾಡಿಕೊಳ್ಳಬೇಕು ಎಂದರು.
ಸಿನಿಮಾ ಪ್ರದರ್ಶನ
ಬಹುರೂಪಿ ಚಲನಚಿತ್ರೋತ್ಸವದ ಮೊದಲ ದಿನವಾದ ಶುಕ್ರವಾರ ಉಮೇಶ್ ಅಗರ್‌ವಾಲ್ ನಿರ್ದೇಶನದ ಜೈ ಹೋ-ಎ ಫಿಲ್ಮ್ ಎ.ಆರ್.ರೆಹಮಾನ್ ಹಿಂದಿ ಚಿತ್ರ ಮತ್ತು ಟ್ರೆಸಿಂಗ್ ರೈತರ್ ಶೆರ್ಪಾ ಅವರ ನಿರ್ದೇಶನದ ಕರ್ಮ ಎಂಬ ನೇಪಾಳಿ ಚಿತ್ರಗಳನ್ನು ಪುನೀತ್ ರಾಜ್ ಕುಮಾರ್ (ಶ್ರೀರಂಗ ರಂಗಮಂದಿರ) ಅವರ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು. ಜೈ ಹೋ-ಎ ಫಿಲ್ಮ್ ಎ.ಆರ್.ರೆಹಮಾನ್ ಚಿತ್ರ ವೀಕ್ಷಣೆಗೆ ಇದ್ದಷ್ಟು ಪ್ರೇಕ್ಷಕರು ಮಧ್ಯಾಹ್ನದ ಕರ್ಮ ಚಿತ್ರ ನೋಡಲು ಇರಲಿಲ್ಲ. ಹೀಗಾಗಿ, ಮಧ್ಯಾಹ್ನ ಬಹುತೇಕ ಸೀಟುಗಳು ಖಾಲಿಯಿದ್ದವು.
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…
ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…
ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…
ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…