ಜಿಲ್ಲೆಗಳು

ವೆಂಕಟೇಶ್ ಬಣದಲ್ಲಿರುವ ಯುವಕರು ನಿಶಾಂತ್ ಜೊತೆಯಲ್ಲಿಯೇ ಇದ್ದಾರೆ : ವೀರಶೈವ ಲಿಂಗಾಯತ ಮಹಾಸಭಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್

ಹನೂರು: ನಿಶಾಂತ್ ಬಳಗದಿಂದಲೇ ಪ್ರವಾಸಕ್ಕೆ ಹೋಗುತ್ತಿರುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದೇವೆ. ಆದರೆ ನಮ್ಮನ್ನು ಪ್ರವಾಸಕ್ಕೆ ಎಂದು ಕರೆದುಕೊಂಡು ಹೋಗಿ ನಿಶಾಂತ್ ಬಣಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹೇಳಿರುವ ಮದುವನಹಳ್ಳಿ ಮಹೇಂದ್ರ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಒಡೆಯರ್ ಪಾಳ್ಯ ಗ್ರಾಮದ ವೀರಶೈವ ಲಿಂಗಾಯಿತ ಮಹಾಸಭಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಹೇಳಿದರು.

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಕಳೆದ ಎರಡು ತಿಂಗಳಿಂದ ಸಮಾಜ ಸೇವಕ ನಿಶಾಂತ್ ಮಾರ್ಗದರ್ಶನದಲ್ಲಿ ಪವರ್ ಆಫ್ ಯೂತ್ ಎಂಬ ಸಂಘಟನೆ ರಚಿಸಿಕೊಂಡು ಸಮಾಜ ಸೇವೆಯಲ್ಲಿ ತೊಡೆಸಿಕೊಂಡಿದ್ದೇವೆ. ಈ ಸಂಘಟನೆಯಿಂದ ಎಲ್ಲಾ ಕಾರ್ಯಕರ್ತರಿಗೂ ಪ್ರವಾಸವನ್ನು ಕೈಗೊಳ್ಳಲಾಗಿತ್ತು. ಅದರಲ್ಲಿ ಮಹೇಂದ್ರ ಮತ್ತು ಆತನ ಸ್ನೇಹಿತರಲ್ಲರೂ ಬಂದಿದ್ದರು. ಆದರೆ ಯಾರದೋ ಒತ್ತಡಕ್ಕೆ ಮಣಿದು, ನಮಗೆ ಮಾಹಿತಿ ನೀಡದೆ ನಿಶಾಂತ್ ಬೆಂಬಲಿಗರು ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿಕೆ ನೀಡಿರುವುದು ಹಾಸ್ಯಸ್ಪದ ಎಂದು ತಿಳಿಸಿದರು.

ನಾವು ಈಗಲೂ ವೆಂಕಟೇಶ್ ಬೆಂಬಲಿಗರಾಗಿಯೇ ಇದ್ದೇವೆ ಎಂದು ಹೇಳುತ್ತಿರುವ ಮಧುವನಳ್ಳಿ ಯುವಕರು ಈಗಲೂ ನಮ್ಮ ಸಂಪರ್ಕದಲ್ಲಿದ್ದಾರೆ. ಅವರನ್ನು ವಿಚಾರಿಸಿದಾಗ ನಾವು ಈಗಲೂ ನಿಶಾಂತ್ ಬಣದಲ್ಲಿಯೇ ಇದ್ದೇವೆ, ಯಾರದೋ ಒತ್ತಾಯಕ್ಕೆ ಮಾಡಿದ್ದು ಈ ಹೇಳಿಕೆ ನೀಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಜನ ಧ್ವನಿ ಬಿ.ವೆಂಕಟೇಶ್ ಅವರು ಕ್ಷೇತ್ರಕ್ಕೆ ಬಂದ ಪ್ರಾರಂಭದಲ್ಲಿ ನಾವು ಅವರೊಂದಿಗೆ ಗುರುತಿಸಿಕೊಂಡಿದ್ದೆವು. ಅವರಿಂದ ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ನಾವು ಜನರಿಗೆ ಸಾಕಷ್ಟು ಭರವಸೆಯನ್ನು ನೀಡಿದ್ದೆವು. ಆದರೆ ಅವರು ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇದ್ದಿದ್ದರಿಂದ ನಾವು ಬೇಸೆತ್ತು ನಿಶಾಂತ್ ಅವರನ್ನು ಬೆಂಬಲಿಸುತ್ತಿದ್ದೇವೆ. ನಿಶಾಂತ್ ಅವರು ನಮ್ಮ ಪ್ರತಿಯೊಂದು ಅಹವಾಲನ್ನು ಸ್ವೀಕರಿಸಿ ಜನರಿಗೆ ಅನುಕೂಲ ಕಲ್ಪಿಸುತ್ತ ಬಂದಿದ್ದಾರೆ.
ಮುಂದಿನ ದಿನಗಳಲ್ಲಿ ಜನ ಧ್ವನಿ ವೆಂಕಟೇಶ್ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಶೇಕಡ 70% ಕಾರ್ಯಕರ್ತರು ನಿಶಾಂತ್ ಅವರೊಂದಿಗೆ ಬರಲಿದ್ದಾರೆ ಎಂದು ತಿಳಿಸಿದರು. ವೆಂಕಟೇಶ್ ಬಣದಲ್ಲಿರುವ ಯುವಕರು ನಿಶಾಂತ್ ಜೊತೆಯಲ್ಲಿಯೇ ಇದ್ದರು

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

11 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

39 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago