ನಗರದ ವಿವಿಧೆಡೆ ‘ಮೈಸೂರು ಗ್ರಾಹಕರ ಪರಿಷತ್’ ಬೆಂಬಲಿತರ ಮೌನ ಪ್ರತಿಭಟನೆ
ಮೈಸೂರು: ಉತ್ತಮ ಆಡಳಿತಕ್ಕಾಗಿ ಸಾರ್ವಜನಿಕರನ್ನು ‘ಯಜಮಾನರು’ ಎಂದು ಪರಿಗಣಿಸಬೇಕು ಎಂಬುದೂ ಸೇರಿದಂತೆ ನಗರದ ನಾಗರಿಕ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ‘ಮೈಸೂರು ಗ್ರಾಹಕರ ಪರಿಷತ್’ ವತಿಯಿಂದ ಉತ್ತಮ ಆಡಳಿತಕ್ಕಾಗಿ ಕರೆ ನೀಡಿದ ಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು.
ಭಾನುವಾರ ನಗರದ ಚೆಲುವಾಂಬ ಪಾರ್ಕ್‌ನಲ್ಲಿ ಹೋರಾಟಗಾರ ಭಾಮಿನಿ ವಿ.ಶೆಣೈ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು. ಜತೆಗೆ ವಿವಿಧ ಬಡಾವಣೆಗಳಾದ ಯಾದವಗಿರಿ, ಒಂಟಿಕೊಪ್ಪಲು, ಜಯಲಕ್ಷ್ಮೀಪುರಂ, ವಿಜಯನಗರ 4ನೇ ಬ್ಲಾಕ್ ಪಾರ್ಕ್‌ನಲ್ಲಿ, ವಿಜಯನಗರ 3ನೇ ಹಂತದ ಪಾರ್ಕ್, ಮಧುವನ ಪಾರ್ಕ್, ಜಯನಗರ ಪಾರ್ಕ್, ಎನ್.ಆರ್ ಮೊಹಲ್ಲಾದ ಶಿವಾಜಿ ಪಾರ್ಕ್‌ನಲ್ಲಿ, ಸಾತಗಳ್ಳಿಯ ಲರ್ನರ್ ಪಿಯು ಕಾಲೇಜು, ನ್ಯಾಯಾಲಯದ ಮುಂಭಾಗ ಸೇರಿದಂತೆ 9ಕಡೆಗಳಲ್ಲಿ ತಮ್ಮ ಹೊಣೆಗಾರಿಕೆಯನ್ನು ಅರಿತು ನಾಗರಿಕರು ಸತ್ಯಾಗ್ರಹ ನಡೆಸಿದರು.
ಚಾಮುಂಡಿಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳ ಹಿತ ದೃಷ್ಟಿಯಿಂದ ಅವೈಜ್ಞಾನಿಕವಾದ ವಾಣಿಜ್ಯೀಕರಣದ ಕಾಮಗಾರಿ ಮಾಡುವುದು ಬೇಡ. ಕೂಡಲೇ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಬೇಕು. ಉದ್ಯಾನವನ ಕಾಯಿದೆ ಮತ್ತು ಕಾನೂನಿನ ಆದೇಶವನ್ನು ಮೀರಿ ಕಟ್ಟಡ ಕಾಮಗಾರಿ ಮಾಡುತ್ತಿದ್ದು, ಕೂಡಲೇ ನಿಲ್ಲಿಸಿ ಇಲ್ಲವಾದರೆ ಪರಿಸರ ವಾದಿಗಳು ಎಲ್ಲ ಅಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಪಿಐಎಲ್ ಹೂಡಬೇಕಾಗುತ್ತದೆ ಎಂದು ಪರಿಸರವಾದಿ ಭಾನು ಮೋಹನ್ ನಗರದ ನ್ಯಾಯಾಲಯದ ಮುಂಭಾಗ ಪ್ಲೇ ಕಾರ್ಡ್ ಹಿಡಿದು ಸತ್ಯಾಗ್ರಹ ನಡೆಸಿದರು.
ಮೈಸೂರು ಗ್ರಾಹಕರ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಭಾಮಿ ಶೆಣೈ, ಪರಿಷತ್ ಅಧ್ಯಕ್ಷರಾದ ಶ್ರೀಶೈಲ ರಾಮಣ್ಣನವರ್, ಶಂಕರ್, ಶೋಭಾನಾ, ಮೇಜರ್ ಜನರಲ್ ಸುಧೀರ್ ಓಂಭತ್ಕೇರೆ, ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್, ಪ್ಲಾಸ್ಟಿಕ್ ಸರ್ಜನ್ ಡಾ.ಜಯರಾಮ್, ಡಾ.ನಂಜಪೂರ್ ಯದುರಾಜ್, ಗೀತಾ ಮೇಲುಮನಿ, ಪ್ರೊ.ದ್ವಾರಕಿ, ಅರುಣ್ ಕುಮಾರ್ ಶೆಟ್ಟರ , ರಾಕೇಶ್ , ಮುನಿರ್, ಮುರುಳಿ ಮೋಹನ್, ಕೊ.ಸು.ನರಸಿಂಹಮೂರ್ತಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅನೇಕರು ಪರೋಕ್ಷವಾಗಿ ಬೆಂಬಲ ನೀಡಿದರು.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…