ಚಾಮರಾಜನಗರ: ತಾಲ್ಲೂಕಿನ ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ರಥದ ಚಕ್ರ ಮುರಿದು ಬಿದ್ದು, ರಥ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ.
ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ನಾಲ್ಕು ವರ್ಷಗಳ ಬಳಿಕ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಹಾಗೂ ಬೆಳ್ಳಿ ಕವಚಧಾರಣಾ ಮಹೋತ್ಸವ ನಡೆದಿತ್ತು.
ಮಂಗಳವಾರ ಮಧ್ಯಾಹ್ನ 12ಕ್ಕೆ ದೇವಾಲಯದ ಹೊರಾವರಣದಲ್ಲಿ ರಥೋತ್ಸವ ಆರಂಭವಾಯಿತು. ರಥ ಸಾಗಿ ದೇವಾಲಯದ ಗರ್ಭ ಗುಡಿಯ ಹಿಂಭಾಗ ಬಂದಾಗ ಮಧ್ಯಾಹ್ನ 12.30ರಲ್ಲಿ ಚಕ್ರದ ದೂರಿ ಹಾಗೂ ಬಲಗಡೆಯ ಚಕ್ರ ಮುರಿದು ರಥ ವಾಲಿಕೊಂಡಿತು.
ಆ ಸಂದರ್ಭದಲ್ಲಿ ಪೊಲೀಸರು ರಥದ ಅಕ್ಕಪಕ್ಕ ಇದ್ದ ನೂರಾರು ಜನರನ್ನು ಚದುರಿಸಿದರು. ರಥದ ಗೋಪುರವನ್ನು ಹಗ್ಗದ ಸಹಾಯದಿಂದ ಹಿಡಿದುಕೊಳ್ಳಲಾಗಿತ್ತು.
ಹಗ್ಗದ ಆಧಾರದಿಂದ ನಿಂತಿದ್ದ ರಥ, ಹಗ್ಗವನ್ನು ನಿಧಾನವಾಗಿ ಸಡಿಲ ಬಿಟ್ಟಾಗ ಕೆಳಕ್ಕೆ ಉರುಳಿತು.
ಪೊಲೀಸರು ಜನರನ್ನು ದೂರ ಚದುರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ.ರಥೋತ್ಸವ ಅಪೂರ್ಣಗೊಂಡರೂ, ಬೆಳ್ಳಿ ಕವಚಧಾರಣೆ, ಸ್ವಾಮಿಯ ದರ್ಶನ ನಡೆದವು. ವಿವಿಧೆಡೆಗಳಿಂದ ಸಾವಿರಾರು ಜನರು ಪಾಲ್ಗೊಂಡಿದ್ದರು.
ಒಂದೆರಡು ತಿಂಗಳ ಹಿಂದೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ದೇವಾಲಯದ ರಥೋತ್ಸವದ ಸಂದರ್ಭದಲ್ಲೂ ರಥ ವೇಗವಾಗಿ ಚಲಿಸಿ, ಅವಘಡ ಸಂಭವಿಸಿತ್ತು.
ಇದಕ್ಕೂ ಮೊದಲು, ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ನವೀನ್ ಡಿಸೋಜ ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೬ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ಕೊಡಗು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು,…
ಮಹೇಂದ್ರ ಹಸಗೂಲಿ ಸೂರ್ಯಕಾಂತಿ, ಬಾಳೆ, ಆಲೂಗಡ್ಡೆ ಅರಿಶಿನ, ಈರುಳ್ಳಿ ಬೆಳೆದು ಸೂರ್ತಿಯಾದ ಎಚ್.ಎಂ.ನಂದೀಶ್ ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಎಚ್.…
ಪ್ರಸಾದ್ ಲಕ್ಕೂರು ಚಾ.ನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ, ಎಂಸಿಡಿಸಿಸಿ ಬ್ಯಾಂಕ್ ರಚನೆ ಸೇರಿ ಹಲವು ಆಶಾಭಾವನೆ ಚಾಮರಾಜನಗರ: ರಾಜ್ಯ…
ಜಾಗದ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ರೈತರು, ಮುಖಂಡರು ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ಕೆಎಸ್‌ಐಸಿಗೆ ಸೇರಿದ ಜಾಗದಲ್ಲಿ…
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾಗಿದ್ದಾರೆ. ಶನಿವಾರ ನಡೆದ ದಾಳಿಯಲ್ಲಿ ಎಂಬತ್ತಾರು ವರ್ಷದ…
ಮಾಧ್ಯಮ ತಜ್ಞ ಶೇಷಾದ್ರಿ ಗಂಜೂರು ವಿಶ್ಲೇಷಣೆ ಇತ್ತೀಚೆಗೆ ನ್ಯೂಸ್ ಚಾನಲ್‌ಗಳನ್ನು ನೋಡುತ್ತಿದ್ದರೆ ಮಿಡ್ಲ್ ಈಸ್ಟ್ ಅಂದರೆ ಮಧ್ಯ ಪ್ರಾಚ್ಯದ ಗಲಾಟೆಗಳೇ ಕಾಣ್ತಿವೆ.…