ಜಿಲ್ಲೆಗಳು

ಜಿ.ಟಿ.ದೇವೇಗೌಡರಿಗೆ ಜ್ವರ, ವಿಶ್ರಾಂತಿ ಪಡೆಯಲು ವೈದ್ಯರ ಸಲಹೆ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಜಾ.ದಳದ ಮುಖಂಡ ಜಿ.ಟಿ.ದೇವೇಗೌಡರು ಜ್ವರದಿಂದ ಬಳಲುತ್ತಿರುವ ಕಾರಣ ನ.೧೦ ಮತ್ತು ೧೧ರಂದು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗುವುದಿಲ್ಲ. ಬೆಂಗಳೂರಿನಲ್ಲಿರುವ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು ಎರಡು ದಿನಗಳ ಕಾಲ ಸರ್ಕಾರಿ,ಖಾಸಗಿ ಸಭೆ,ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ. ಇದಲ್ಲದೆ, ಒಂಟಿಕೊಪ್ಪಲಿನಲ್ಲಿರುವ ನಿವಾಸ ಮತ್ತು ಜಲದರ್ಶಿನಿ ಅತಿಥಿಗೃಹದಲ್ಲಿ ಸಾರ್ವಜನಿಕರ ಸಂಪರ್ಕಕ್ಕೆ ಇರುವುದಿಲ್ಲ. ಮುಖಂಡರು,ಕಾರ್ಯಕರ್ತರು ಕಚೇರಿಗೆ ಬಂದು ಅಲೆದಾಡಬಾರದೆಂದು ಶಾಸಕರ ಅಪ್ತಸಹಾಯಕರು ಹೇಳಿದ್ದಾರೆ.ಜ್ವರದಿಂದ ಬಳಲುತ್ತಿರುವ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿರುವುದರಿಂದ ಯಾರನ್ನು ಭೇಟಿ ಮಾಡುತ್ತಿಲ್ಲವೆಂದು ತಿಳಿಸಿದ್ದಾರೆ.

andolanait

Recent Posts

ಮೈಸೂರು ವಿ.ವಿ 106ನೇ ಘಟಿಕೋತ್ಸವ : 30,966 ಅಭ್ಯರ್ಥಿಗಳಿಗೆ ಪದವಿ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವವು ಜ.5ರಂದು ಬೆಳಿಗ್ಗೆ 11:30ಕ್ಕೆ ಕ್ರಾಫರ್ಡ್‌ ಭವನದಲ್ಲಿ ನಡೆಯಲಿದೆ. ಒಟ್ಟು 30,966 ವಿದ್ಯಾರ್ಥಿಗಳಿಗೆ…

4 hours ago

ಬಳ್ಳಾರಿ ಘರ್ಷಣೆ | ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದ ಜಮೀರ್‌ ; ಮನೆ ಕಟ್ಟಿಸಿ ಕೊಡುವ ಭರವಸೆ

ಬಳ್ಳಾರಿ : ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರವಾಗಿ ಗುಂಪುಗಳ ನಡುವೆ ನಡೆದ ಮಾರಮಾರಿಯಲ್ಲಿ ವೇಳೆ ಗುಂಡು ತಗುಲಿ ಮೃತಪಟ್ಟಿದ್ದ…

4 hours ago

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ

ಕೊಳ್ಳೇಗಾಲ : ಸುಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಮೊದಲನೇ ದಿನವಾದ ಶನಿವಾರ ತಡರಾತ್ರಿ ಚಂದ್ರ ಮಂಡಲೋತ್ಸವದ ಮೂಲಕ ವಿದ್ಯುಕ್ತ ಚಾಲನೆ…

5 hours ago

ವಂದೇ ಭಾರತ್‌ ಸ್ಲೀಪರ್‌ ರೈಲು ಶೀಘ್ರ ಚಾಲನೆ

ಹೊಸದಿಲ್ಲಿ : ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ. ಪ್ರಯಾಣಿಕರ…

6 hours ago

ಮಹಾತ್ಮಗಾಂಧಿ ನರೇಗಾ ಕಾಯ್ದೆ ಪುನರ್ ಸ್ಥಾಪಿಸಿ: ಸಿ.ಎಂ.ಸಿದ್ದರಾಮಯ್ಯ ಆಗ್ರಹ

ರಾಯಚೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ…

6 hours ago

ಕ್ಯಾರಕಸ್‌ ಮೇಲೆ ಅಮೆರಿಕಾ ವೈಮಾನಿಕ ದಾಳಿ ; ವೆನೆಜುವೆಲಾ ಅಧ್ಯಕ್ಷ ಮಡುರೊ ಪತ್ನಿ ಸೆರೆ

ಕ್ಯಾರಕಾಸ್ : ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು…

6 hours ago